ತುಮಕೂರು: ಉತ್ತರಾಖಾಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಚಗೊಳಿಸಿದ ಶ್ರೀರಾಮ ಸೇನೆ ಹಾಗೂ ಬಿಜೆಪಿಯ ಪಕ್ಷದ ಅಂಗ ಸಂಸ್ಥೆಗಳ ಕ್ರಮವನ್ನು ಖಂಡಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಟೌನ್‌ಹಾಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಿAದ ಬಿಜಿಎಸ್ ವೃತ್ತದವರೆಗೆ ಪಾದಯಾತ್ರೆ ನಡೆಸಿ, ಕೆಲ ಕಾಲ ಮಾನವ ಸರಪಳಿ ನಿರ್ಮಿಸಿದ ಕಾಂಗ್ರೆಸ್ ಕಾರ್ಯಕರ್ತರು,ದೇಶದಲ್ಲಿ ಇಂದಿಗೂ ಅಸ್ಪöÈಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಉತ್ತರಾಖಂಡದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ.ಕೇಂದ್ರ ಸರಕಾರ ಮತ್ತು ಉತ್ತರಾಖಂಡದ ಸರಕಾರಗಳು ಮೈದಾನವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಚಗೊಳಿಸಿ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್,ಶ್ರೀರಾಮಸೇನೆಯ ಕಾರ್ಯಕರ್ತರು ಮಾಡಿರುವ ಈ ಘೋರ ಕೃತ್ಯ ಇಡೀ ರಾಷ್ಟçವೇ ತಲೆತಗ್ಗಿಸುವಂತಹ ವಿಚಾರವಾಗಿದೆ.ಭಾರತಕ್ಕೆ ಸ್ವಾತಂತ್ರ ಬಂದು ೮೦ ವರ್ಷ ಕಳೆದರೂ ಇಂದಿಗೂ ಮನುಷ್ಯರನ್ನು ಮನುಷ್ಯರೆಂದು ಒಪ್ಪಿಕೊಳ್ಳದ ಮುನುವಾದಿಗಳ ಈ ನಡೆ,ಭಾರತದಲ್ಲಿ ಅಸ್ಪö?ಯಷತೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.ಈ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ೩೫ರÀಷ್ಟು ದಲಿತ ಸಮುದಾಯವಿದೆ.ಹಿಂದೂ ನಾವೆಲ್ಲ ಒಂದು ಎನ್ನುವವರು ಈಗ ಎಲ್ಲಿದ್ದಾರೆ.ಅವರಿಗೆ ಇದು ತಪುö್ಪ ಎನಿಸುವುದಿಲ್ಲವೇ? ನಿಜಕ್ಕೂ ನಿಮಗೆ ಮನಸಾಕ್ಷಿ ಇದ್ದರೆ ಕೂಡಲೇ ಮೈದಾನವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಚಗೊಳಿಸಿದ ಮತ್ತು ಅದನ್ನು ಮಾಧ್ಯಮದ ಮುಂದೆ ಸಮರ್ಥಿಸಿಕೊಂಡ ಜನರನ್ನು ಕೂಡಲೇ ಬಂಧಿಸಿ, ಮುಂದೆ ಇಂತಹ ಘಟನೆಗಳು ಜರುಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ,ರಾಷ್ಟçಪಿತ ಮಹಾತ್ಮ ಗಾಂಧಿ ಅವರ ಪ್ರಕಾರ ದೇಶದಲ್ಲಿ ಅಸ್ಪöÈಷ್ಯತೆ ತೊಲಗಿದಾಗ ಮಾತ್ರ ನಿಜವಾದ ಸ್ವಾತಂತ್ರ ಎಂದಿದ್ದರು. ಆದರೆ ದೇಶ ಬ್ರಿಟಿಷರಿಂದ ಸ್ವಾತಂತ್ರ ಪಡೆದರು, ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಯಲ್ಲಿಯೇ ಇದೆ ಎಂಬುದಕ್ಕೆ ಆಗಸ್ಟ್ ೦೯ರಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಉತ್ತರಾಖಂಡದ ರಾಮಲೀಲಾ ಮೈದಾನವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಚಗೊಳಿಸಿರುವುದೇ ಸಾಕ್ಷಿಯಾಗಿದೆ. ಇಂತಹ ಘಟನೆ ಮರುಕಳುಹಿಸಿದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ,ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳಾದ ಆರ್.ಎಸ್.ಎಸ್., ಶ್ರೀರಾಮಸೇನೆ, ಬಜರಂಗದಳ ಈ ದೇಶದಲ್ಲಿ ಮನುಸೃತಿಯನ್ನು ಮತ್ತೆ ಚಲಾವಣೆಗೆ ತರಲು ಹೊರಟಿವೆ ಎಂಬುದನ್ನು ಆಗಸ್ಟ ೧೧ ರ ಘಟನೆ ಸಾಕ್ಷಿಯಾಗಿದೆ.ಈ ಹಿಂದೆ ಉಪ ಪ್ರಧಾನಿಯಾಗಿದ್ದ ಬಾಬು ಜಗಜೀವನ್‌ರಾಮ್ ಅವರು ಪುರಿಯ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಉಪ ಪ್ರಧಾನಿ ಎಂಬ ಕಾರಣಕ್ಕೆ ಅವರನ್ನು ದೇವಾಲಯದ ಒಳಗೆ ಬಿಟ್ಟು, ಅವರ ಕುಟುಂಬದವರನ್ನು ತಡೆ ಹಿಡಿದಿದ್ದರು. ಇದನ್ನು ಬಾಬೂಜಿ ಅಂದೇ ಪ್ರತಿಭಟಿಸಿದ್ದರು. ಇಂದಿಗೂ ಕರ್ನಾಟಕದ ಹಲವು ದೇವಾಲಯಗಳಲ್ಲಿ ಎಡೆ ಸ್ನಾನ, ಮಡೆಸ್ನಾನದಂತಹ ಪಂಕ್ತಿ ಭೇಧ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಚಿಕ್ಕವರಿದ್ದಾಗ ಅವರಿಗೆ ಶಾಲೆಯಲ್ಲಿದ್ದ ಮಡಿಕೆಯ ನೀರು ಕುಡಿಯಲು ಬಿಡಲಿಲ್ಲ. ಕೆರೆಯ ನೀರನ್ನು ಮುಟ್ಟಲು ಬಿಡಲಿಲ್ಲ. ಆದರೆ ಅವರು ದೊಡ್ಡವರಾದ ಮೇಲೆ ಇಂತಹ ಅನಿಷ್ಠಗಳಿಗೆ ಇತೀಶ್ರಿ ಹಾಡಲು ಹಲವು ಕಾನೂನುಗಳನ್ನು ಜಾರಿಗೆ ತಂದರು.ಆದರೆ ಪಟ್ಟಭದ್ರ ಹಿತಾಸಕ್ತಿಗಳ ಕುಯುಕ್ತಿಯಿಂದ ಇಂದಿಗೂ ತಳವರ್ಗದ ಜನರು ಅಸ್ಪಷ್ಯತೆಯನ್ನು ಅನುಭವಿಸುತಿದ್ದಾರೆ. ಇದು ತೊಲಗಬೇಕು. ಇನ್ನೊಮ್ಮೆ ಇಂತಹದೇ ಘಟನೆ ಜರುಗಿದರೆ ಇಡೀ ರಾಷ್ಟçದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಚಂದ್ರಶೇಖರಗೌಡ ತಿಳಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಷಣ್ಮುಗಪ್ಪ, ಸೈಯದ್ ದಾದಾಪೀರ್, ನಯಾಜ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫೈಯಾಜ್, ಮಹೇಶ್, ಕವಿತಾ, ಶಿವಾಜಿ, ಜಿಲ್ಲಾವುಲ್ಲಾ, ಇನಾಯತ್,ಇಲಾಹಿ ಸಿಖಂದರ್, ನಟರಾಜಶೆಟ್ಟಿ, ಸುಜಾತ, ಕೆಂಪಣ್ಣ, ವೈ.ಎನ್.ನಾಗರಾಜು, ಇರ್ಫಾನ್ ಅಹಮದ್, ಆದಿಲ್, ಸುಮತಿ, ಮುಬೀನಾ, ರೇವಣ್ಣ ಸಿದ್ದಯ್ಯ, ಸಿದ್ದಲಿಂಗೇಗೌಡ, ಮಂಜುನಾಥ್, ಭೈಲಸ್ವಾಮಿ, ನಿಂಗರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
(Visited 1 times, 1 visits today)





