BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸರ್ವೆ ನೆಪದಲ್ಲಿ ಬಂದು ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ
  • ನ್ಯಾಯಾಲಯ ಕಲಾಪದಿಂದ ಹೊರಗುಳಿದ ವಕೀಲರು
  • ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಅಕ್ರಮ ಬೀಜ ದಾಸ್ತಾನು ಜಪ್ತಿ
  • ಪೆಟ್ರೋಲ್, ಡಿಸೆಲ್‌ಗಾಗಿ ವಾಹನ ಮಾಲೀಕರ ಪರದಾಟ
  • ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ಪದವಿ ಸ್ವೀಕಾರ ಸಮಾರಂಭ
  • ಡಾ. ಬಾಬು ಜಗಜೀವನ ರಾಂ ೪೦ನೇ ಪುಣ್ಯಸ್ಮರಣೆ
  • ಬೋಟಿಂಗ್ ಟೆಂಡರ್ ಸ್ಥಳೀಯರಿಗೆ ನೀಡುವಂತೆ ಆಗ್ರಹ
  • ಮಕ್ಕಳೊಂದಿಗೆ ಬಿಸಿ ಊಟ ಸವಿದ ಜಿ.ಪಂ ಸಿಇಒ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪೆಟ್ರೋಲ್, ಡಿಸೆಲ್‌ಗಾಗಿ ವಾಹನ ಮಾಲೀಕರ ಪರದಾಟ
news

ಪೆಟ್ರೋಲ್, ಡಿಸೆಲ್‌ಗಾಗಿ ವಾಹನ ಮಾಲೀಕರ ಪರದಾಟ

ಹುಳಿಯಾರು ಪಟ್ಟಣದ ಪೆಟ್ರೋಲ್ ಬಂಕ್‌ಗಳಿಗೆ ಬೀಗ: ಅನಿವಾರ್ಯವಾಗಿ ಗೂಡಂಗಡಿಯಲ್ಲಿ ಇಂಧನ ಖರೀದಿ
By News Desk BenkiyabaleUpdated:July 07, 2026 5:12 pm

ಹುಳಿಯಾರು: ಸರ್ಕಾರದ ಮಹತ್ವಾಕಾಂಕ್ಷೆಯ ‘ಇಂಧನ ಉಳಿತಾಯ’ದ ಘೋಷಣೆಗಳು ಒಂದು ಕಡೆಯಾದರೆ, ಹುಳಿಯಾರು ಪಟ್ಟಣದ ನಿವಾಸಿಗಳು ಇಂಧನ ಖರೀಧಿಗೆ ಇಂಧನ ಸುಡಬೇಕಾದ ಅನಿವಾರ್ಯ ಸ್ಥಿತಿ ಎದುರಿಸುತ್ತಿದ್ದಾರೆ. ಪಟ್ಟಣದ ಕನಕ ಸರ್ಕಲ್ ಪೆಟ್ರೋಲ್ ಬಂಕ್ ಕಳೆದ ಆರು-ಏಳು ತಿಂಗಳುಗಳಿAದ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು, ಎಪಿಎಂಸಿ ಬಂಕ್‌ನಲ್ಲಿ ಸದಾಕಾಲ ನೋ ಸ್ಟಾಕ್ ಬೋರ್ಡ್ ಹಾಕಿರುವುದು ಈ ಸಮಸ್ಯೆಗೆ ಕಾರಣವಾಗಿದೆ.
ಪೆಟ್ರೋಲ್ ಖರೀಧಿಗೆ ಮರ‍್ನಲ್ಕು ಕಿ.ಮೀ ಹೋಗಬೇಕು: ಪಟ್ಟಣದಲ್ಲಿ ಪೆಟ್ರೋಲ್ ಇಲ್ಲದ ಕಾರಣ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಮತ್ತು ದಿನನಿತ್ಯದ ಉದ್ಯೋಗಿಗಳಿಗೆ ಇಂಧನ ತುಂಬಿಸಿಕೊಳ್ಳಲು ಕನಿಷ್ಠ ೩ ರಿಂದ ೪ ಕಿಲೋಮೀಟರ್ ದೂರದವರೆಗೆ ತೆರಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅಷ್ಟೊಂದು ದೂರ ಪ್ರಯಾಣಿಸಿ ಹೋದರೂ, ಇಂಧನವಿಲ್ಲದಿದ್ದರೆ ಸವಾರರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಟೌನ್‌ನಲ್ಲಿ ಓಡಾಡುವವರಿಗೆ ಆರ್ಥಿಕ ಹೊರೆ: ಹೊಸದುರ್ಗ, ತಿಪಟೂರು, ಚಿಕ್ಕನಾಯಕನಹಳ್ಳಿ, ಶಿರಾ, ಹಿರಿಯೂರು ಮಾರ್ಗದ ಕಡೆ ಓಡಾಡುವವರು ಆ ಭಾಗದಲ್ಲಿ ಸಿಗುವ ಬಂಕ್‌ಗಳಲ್ಲಿ ಇಂಧನ ಹಾಕಿಸಿಕೊಂಡು ಹೋಗಬಹುದು. ಆದರೆ ನಂದಿಹಳ್ಳಿ ಮಾರ್ಗವಾಗಿ ಅಣೆಕಟ್ಟೆ ಕಡೆ ಓಡಾಡುವವರು ಅನಿವಾರ್ಯವಾಗಿ ಮತ್ತೊಂದು ದಿಕ್ಕಿಗೆ ಹೋಗಿ ಇಂಧನ ಹಾಕಿಸಿಕೊಳ್ಳಬೇಕು. ಇನ್ನು ಪಟ್ಟಣದಲ್ಲಿ ಓಡಾಡುವವರು ಊರಿಂದ ಹೊರಗೆ ಹೋಗಿ ಹಾಕಿಸಿಕೊಳ್ಳಬೇಕು. ಪೇಪರ್, ಹಾಲು, ಸೊಪ್ಪು ಸೇರಿದಂತೆ ಇತರೆ ವ್ಯಾಪಾರಿಗಳಿಗೆ ಇದು ಆರ್ಥಿಕ ಹೊರೆಯಾಗಿದೆ.
ಪಟ್ಟಣದ ಗೂಡಂಗಡಿಗಳಿಗೆ ಮೊರೆ: ಹುಳಿಯಾರಿನಿಂದ ಯಾವ ದಿಕ್ಕಿಗೆ ಹೋದರೂ ಮರ‍್ನಲ್ಕು ಕಿ.ಮೀ ಹೋಗಿ ಬರಲೇಬೇಕು. ಅದರ ಬದಲು ಪಟ್ಟಣದ ಗೂಡಂಗಡಿಗಳಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವುದೇ ಒಳಿತು ಎಂದು ಹೆಚ್ಚಿನ ಬೆಲೆ ನೀಡಿ ಪೆಟ್ರೋಲ್ ಖರೀದಿಸುತ್ತಿದ್ದಾರೆ. ಆದರೆ ಡಿಸೆಲ್ ಬೇಕಿರುವವರು ಬೈಕ್, ಕಾರಿನಲ್ಲಿ ಮರ‍್ನಲ್ಕು ಕಿಮೀ ಹೋಗಿ ಡಿಸೆಲ್ ಖರೀದಿಸುವುದು ಅನಿವಾರ್ಯವಾಗಿದೆ. ಇಂಧನ ಬೆಲೆ ಏರಿಕೆಯ ನಡುವೆ, ದೂರದ ಬಂಕ್‌ಗಳಿಗೆ ಅಲೆದಾಡುವುದು ಮತ್ತು ಗೂಡಂಗಡಿಯಲ್ಲಿ ದುಬಾರಿ ಬೆಲೆಗೆ ಪೆಟ್ರೋಲ್ ಖರೀದಿಸುವುದು ಬಡ ಹಾಗೂ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕುತ್ತಿದೆ.
ಇಂಧನ ಉಳಿತಾಯಕ್ಕೆ ತಾನೇ ಅಡ್ಡಿಯಾದ ವ್ಯವಸ್ಥೆ: ಪ್ರಧಾನಿ ನರೇಂದ್ರ ಮೋದಿಯವರ ಇಂಧನ ಉಳಿತಾಯದ ಕರೆಯು ದೇಶದ ಸಂಪನ್ಮೂಲವನ್ನು ಕಾಪಾಡುವ ಉದ್ದೇಶ ಹೊಂದಿದೆ. ಆದರೆ, ಹುಳಿಯಾರಿನಲ್ಲಿನ ಈ ವ್ಯವಸ್ಥೆಯ ವೈಫಲ್ಯದಿಂದಾಗಿ, ನಾಗರಿಕರು ಇಂಧನ ಪಡೆಯಲು ವಾಹನಗಳನ್ನು ಅನಗತ್ಯವಾಗಿ ದೂರದವರೆಗೆ ಓಡಿಸಿ, ಇಂಧನವನ್ನು ವ್ಯರ್ಥ ಮಾಡುವಂತಾಗಿದೆ. ಇದು ಒಂದು ವಿಪರ್ಯಾಸವೇ ಸರಿ. ಸ್ಥಗಿತಗೊಂಡಿರುವ ಪೆಟ್ರೋಲ್ ಬಂಕ್‌ಗಳ ಮರುಪ್ರಾರಂಭಕ್ಕೆ ಹಾಗೂ ಸದಾಕಾಲ ಇಂಧನ ಸ್ಟಾಕ್ ಇಡುವಂತೆ ಸಂಬ0ಧಪಟ್ಟ ಅಧಿಕಾರಿಗಳು ಅಥವಾ ಮಾಲೀಕರು ಏಕೆ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

(Visited 1 times, 1 visits today)
Chikkanayakanahalli disel kannada news local news petrol tumkur ಚಿಕ್ಕನಾಯಕನಹಳ್ಳಿ ಹುಳಿಯಾರು
Previous Articleರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ಪದವಿ ಸ್ವೀಕಾರ ಸಮಾರಂಭ
Next Article ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಅಕ್ರಮ ಬೀಜ ದಾಸ್ತಾನು ಜಪ್ತಿ
News Desk Benkiyabale

Related Posts

ಸರ್ವೆ ನೆಪದಲ್ಲಿ ಬಂದು ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ

July 07, 2026 5:18 pm news

ನ್ಯಾಯಾಲಯ ಕಲಾಪದಿಂದ ಹೊರಗುಳಿದ ವಕೀಲರು

July 07, 2026 5:16 pm news

ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಅಕ್ರಮ ಬೀಜ ದಾಸ್ತಾನು ಜಪ್ತಿ

July 07, 2026 5:13 pm news
ತಾಜಾ ಸುದ್ಧಿಗಳು

ಸರ್ವೆ ನೆಪದಲ್ಲಿ ಬಂದು ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ

July 07, 2026 5:18 pm

ನ್ಯಾಯಾಲಯ ಕಲಾಪದಿಂದ ಹೊರಗುಳಿದ ವಕೀಲರು

July 07, 2026 5:16 pm

ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಅಕ್ರಮ ಬೀಜ ದಾಸ್ತಾನು ಜಪ್ತಿ

July 07, 2026 5:13 pm

ಪೆಟ್ರೋಲ್, ಡಿಸೆಲ್‌ಗಾಗಿ ವಾಹನ ಮಾಲೀಕರ ಪರದಾಟ

July 07, 2026 5:12 pm

ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ಪದವಿ ಸ್ವೀಕಾರ ಸಮಾರಂಭ

July 07, 2026 5:09 pm

ಡಾ. ಬಾಬು ಜಗಜೀವನ ರಾಂ ೪೦ನೇ ಪುಣ್ಯಸ್ಮರಣೆ

July 06, 2026 5:50 pm
Our Youtube Channel
Our Picks

ಸರ್ವೆ ನೆಪದಲ್ಲಿ ಬಂದು ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ

July 07, 2026 5:18 pm

ನ್ಯಾಯಾಲಯ ಕಲಾಪದಿಂದ ಹೊರಗುಳಿದ ವಕೀಲರು

July 07, 2026 5:16 pm

ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಅಕ್ರಮ ಬೀಜ ದಾಸ್ತಾನು ಜಪ್ತಿ

July 07, 2026 5:13 pm

ಪೆಟ್ರೋಲ್, ಡಿಸೆಲ್‌ಗಾಗಿ ವಾಹನ ಮಾಲೀಕರ ಪರದಾಟ

July 07, 2026 5:12 pm

ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ಪದವಿ ಸ್ವೀಕಾರ ಸಮಾರಂಭ

July 07, 2026 5:09 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಸರ್ವೆ ನೆಪದಲ್ಲಿ ಬಂದು ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ

By News Desk BenkiyabaleJuly 07, 2026 5:18 pm

ತುಮಕೂರು: ಜಮೀನನ ಸರ್ವೆ ನೆಪದಲ್ಲಿ ಹಾಲಿ ಮಾಲೀಕರಿಗೆ ಯಾವುದೇ ನೋಟಿಷ್ ನೀಡದೆ ದಲಿತರ ಒಡೆತನದಲ್ಲಿರುವ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿ,…

ನ್ಯಾಯಾಲಯ ಕಲಾಪದಿಂದ ಹೊರಗುಳಿದ ವಕೀಲರು

July 07, 2026 5:16 pm

ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಅಕ್ರಮ ಬೀಜ ದಾಸ್ತಾನು ಜಪ್ತಿ

July 07, 2026 5:13 pm

ಪೆಟ್ರೋಲ್, ಡಿಸೆಲ್‌ಗಾಗಿ ವಾಹನ ಮಾಲೀಕರ ಪರದಾಟ

July 07, 2026 5:12 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.