BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ
  • ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ
  • ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ
  • ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ
  • ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ
  • ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ
  • ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ೨ ದಿನಗಳಿಂದ ಕಾದು ಕುಳಿತ ಗ್ರಾಹಕರು
  • ಈ ಬಾರಿ ಹಬ್ಬ ಬಲು ದುಬಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ಪದವಿ ಸ್ವೀಕಾರ ಸಮಾರಂಭ
news

ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ಪದವಿ ಸ್ವೀಕಾರ ಸಮಾರಂಭ

By News Desk BenkiyabaleUpdated:July 07, 2026 5:09 pm

ತುಮಕೂರು: ನಗರದ ಎಸ್‌ಎಸ್‌ಐಟಿಯ ಎಂಬಿಎ ಆಡಿಟೋರಿಯಂನಲ್ಲಿ ಜು.೫ರಂದು ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರೊ. ರಘು ಎಸ್. ರವರ ಮತ್ತು ಕಾರ್ಯದರ್ಶಿ ರೊ. ಶ್ರೀನಿವಾಸ ಮೂರ್ತಿ ಜಿ. ರವರ ಹೊಸ ತಂಡ ಪದವಿ ಸ್ವೀಕಾರ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರು, ಕಾರ್ಯದರ್ಶಿ ಹಾಗು ನೂತನ ಸದಸ್ಯರುಗಳಿಗೆ ಮಾಜಿ ಜಿಲ್ಲಾ ಪಾಲಕರಾದ ರೊ. ಕೆ.ಎಸ್. ನಾಗೇಂದ್ರ ರವರು ಎಲ್ಲರಿಗೂ ರೋಟರಿ ಪಿನ್ ಹಾಕಿ ರೋಟರಿಯ ಧ್ಯೇಯೋದ್ದೇಶಗಳ ಪ್ರತಿಜ್ಞಾ ವಿಧಿ ಭೋದಿಸಿದರು, ಇವರು ಮಾತನಾಡುತ್ತಾ ಸೇವೆಯನ್ನು ಮಾಡುವಾಗ ಎಷ್ಟು ಕೊಟ್ಟೆ ಎಂಬುದು ಮುಖ್ಯವಲ್ಲ ಯಾರಿಗೆ ಕೊಟ್ಟೆ, ಯಾವ ಸಂದರ್ಭದಲ್ಲಿ ನೀಡಿದೆ ಎಂಬುದು ಮುಖ್ಯ, ಸೇವೆಯ ಸಾರ್ಥಕತೆ ದೊರಕುವುದು ಆಗ ಮಾತ್ರ, ನಾನು ಜಿಲ್ಲಾ ಪಾಲಕನಾದ ಸಂಧರ್ಭದಲ್ಲಿ ಒಂದು ಡಯಾಲಿಸಿಸ್ ಸೆಂಟರ್ ಸ್ವಾಪನೆ ಮಾಡಿದ್ದು ಅದರ ಲಾಭವನ್ನು ಒಂದು ಲಕ್ಷ ಮುವತ್ತೂ ಸಾವಿರ ಜನ ಪಡೆದಿದ್ದರು ಅವರೆಲ್ಲರು ರೋಟರಿ ಸಂಸ್ಥೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ ಅದು ಸಂತೋಷ ತಂದಿತ್ತು ಎಂದರು.
ರೋಟರಿ ಸಂಸ್ಥೆ ಒಂದು ಅಂತರಾಷ್ಟಿಯ ಸಂಸ್ಥೆಯಾಗಿದ್ದು, ಶಿಕ್ಷಣ, ಸಾಕ್ಷರತೆ, ಹೆಣ್ಣುಮಕ್ಕಳ ಸ್ವಾವಲಂಭನೆ, ಪರಿಸರ, ವೈಧ್ಯಕೀಯ ಉದ್ಯೋಗಾದಾರಿತ ತರಬೇತಿಗಳಿಗೆ ಹೆಚ್ಚು ಹೆಚ್ಚು ಗಮನ ನೀಡಿ ಪ್ರಪಂಚದಾದ್ಯ0ತ ಸೇವಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ, ರೋಟರಿ ಸಂಸ್ಥೆ ಪ್ರಪಂಚದ ಅತಿದೊಡ್ಡ ಸೇವಾಕಾರ್ಯಗಳನ್ನು ಮಾಡುವ ಸರ್ಕಾರೇತರ ಸಂಸ್ಥೇಯಾಗಿರುವುದು ನಮ್ಮ ಹೆಮ್ಮೆ ಎಂದರು, ನಾವುಗಳು ಅದರ ಭಾಗವಾಗಿರುವುದು ನಮ್ಮ ಅದೃಷ್ಠ ಎಂದರು, ಯುವಜನರು ಸೇವೆಯ ಕಡೆ ಹೆಚ್ಚು ಆಸಕ್ತಿ ತೋರಬೇಕು ಎಂದರು ರೋಟರಿ ತುಮಕೂರು ಪ್ರೇರಣಾ ಕ್ಲಬ್ ನಲ್ಲಿ ಹೆಚ್ಚು ಯುವಕರು ಪಾಲ್ಗೊಂಡಿರುವುದು ಖುಷಿ ತಂದಿದೆ ಎಂದರು ನುಡಿದರು,
ಈ ಪದಗ್ರಹಣ ಸಮಾರಂಭದಲ್ಲಿ ರೊ. ರಘು ಎಸ್, ರವರು ಅಧ್ಯಕ್ಷ ಪದವಿ ಸ್ವೀಕಾರವನ್ನು ಪಡೆದು ೨೦೨೬-೨೭ನೇ ಸಾಲಿಗೆ ನನ್ನನ್ನು ರೋಟರಿ ಪ್ರೇರಣಾ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ, ನಾನು ನನ್ನ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ದಿ, ಪರಿಸರದ ಬಗ್ಗೆ ಹೆಚ್ಚು ಹೊತ್ತು ನೀಡಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತೇನೆ. ಪ್ರತಿಯೊಬ್ಬ ಸದಸ್ಯರ ಅಭಿಪ್ರಾಯಕ್ಕೆ ಗೌರವನ್ನು ಕೊಡುತ್ತಾ ಎಲ್ಲರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನು ಜೊತೆಗೂಡಿಸಿಕೊಂಡು ಪ್ರತಿಯೊಬ್ಬ ಸದಸ್ಯರಿಗೂ ಸೇವೆ ಮಾಡುವ ಅವಕಾಶವನ್ನು ನೀಡುತ್ತೇನೆ. ನಿಮ್ಮೆಲ್ಲರ ಸೇವಕನಾಗಿ ಕೆಲಸ ಮಾಡುತ್ತೇನೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದರು. ನನ್ನನ್ನು ರೋಟರಿಗೆ ಪರಿಚಯಿಸಿದ ರೊ. ಮಲ್ಲಿಕಾರ್ಜುನ ಮೆಳೇಹಳ್ಳಿ, ಮತ್ತು ರೊ. ರಾಜಶೇಖರ್ ರವರಿಗೆ ಧನ್ಯವಾದ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತುಮಕೂರಿನ ಉದ್ಶಮಿ, ರೋಟರಿಯ ಮಾಜಿ ಜಿಲ್ಲಾ ಪಾಲಕರಾದ ರೊ. ಆಶಾ ಪ್ರಸನ್ನ ಕುಮಾರ್ ರವರಿಗೆ ರೋಟರಿ ತುಮಕೂರು ಪ್ರೇರಣಾದ ವತಿಯಿಂದ “ಅತ್ಯುನ್ನತ ಸೇವಾ ನಾಗರೀಕ ಪ್ರಶಸ್ತಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು, ಪ್ರಶಸ್ತಿ ಸ್ವೀಕರಿಸಿ ಇಂದು ಪ್ರೇರಾಣಾ ತಂಡ ನನ್ನನ್ನು ಕರೆಯಿಸಿ ಬಹುದೊಡ್ಡ ಪ್ರಶ್ತಿಯನ್ನು ನೀಡಿ ಇನ್ನು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಸೇವೆ ಯಾವುಧೇ ಪ್ರತಿಪಲಾಕ್ಷೇ ಇಲ್ಲದೆ ಮಾಡಬೇಕು ತನ್ನ ಯಾವುದೇ ಬೇಕುಗಳಿಗೆ ಸೇವೆ ಇರಬಾರದು ಅದು ಬೆರೆಯವರಿಗೂ ಮಾದರಿಯಾಗಿರಬೇಕು ಎಂದು ತಿಳಿಸಿದರು. ಮತ್ತು ರೋಟರಿ ತುಮಕೂರು ಪ್ರೇರಣಾ ಒಂದು ಯುವ ತಂಡವಾಗಿ ಜಿಲ್ಲೆಯಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ವಿಶಿಷ್ಟ ಹೆಸರನ್ನು ಪಡೆದುಕೊಂಡಿದೆ ಅದನ್ನು ಹಾಗೇಯೇ ಉಳಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಭೆಯನ್ನು ಉದ್ದೇಶಿಸಿ ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಶ್ರೀ ಯೋಗಿ ಅನೀಷ್ ಮಾತನಾಡುತ್ತಾ ನಾವೆಲ್ಲರು ಜೀವನದಲ್ಲಿ ಕುಳಿತುಕೊಳ್ಳುವುದನ್ನು ಕಲಿತಿದ್ದೇವೆ, ಆದರೆ ಸಾಧಿಸುವ ಕಾರ್ಯಗಳಿಗೆ ಎದ್ದು ನಿಲ್ಲುವುದನ್ನು ಕಲಿಯಬೇಕು, ಸಾಕಷ್ಟು ಹೃದಯ ಮುಟ್ಟುವಂತ ಸೇವಾ ಕಾರ್ಯಗಳನ್ನು ಮಾಡುವುದು ಒಳಿತು. ರೋಟರಿ ಅನೇಕ ಜನರನ್ನು ಗುರುತಿಸಿದೆ ಅದರಲ್ಲಿ ನಾನು ಒಬ್ಬ, ನಾನು ಕೂಡ ರೋಟರಿ ಮಾಜಿ ಸದಸ್ಯ, ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಘು ರವರನ್ನು ಅಭಿನಂದಿಸಿದರು.
ಸಮಾರAಭದಲ್ಲಿ ಶಿರಾ ತಾಲ್ಲೂಕಿನ ಮುದಿಮಡು ಸರ್ಕಾರಿ ಶಾಲೆಗೆ ೩೦೦೦ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ವಿತರಿಸಲಾಯಿತು, ಹಾಗೆ ಸಿದ್ದಾರ್ಥ ಪತ್ರಿಕೋಧ್ಯಮ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಯಿತು, ಪ್ರೆಸ್ ಕ್ಲಬ್ ಗೆ ೨೦ ಲೀಟರ್ ಸಾಮರ್ಥ್ಯದ ವಾಟರ್ ಫಿಲ್ಟರ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ೯ ಜನ ರೋಟರಿ ತುಮಕೂರು ಪ್ರೇರಣಾಕ್ಕೆ ಹೊಸ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ. ಒಟ್ಟು ೩೬ ಜನ ನಿರ್ದೆಶಕರಾಗಿ ಪದವಿ ಸ್ವಿಕಾರ ಪಡೆದರು,
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್, ವಲಯ ಪಾಲಕಾರಾದ ರೊ. ಪ್ರಮೀಳ ಶಿವಕುಮಾರ್, ಸಹಾಯಕ ಪಾಲಕರಾದ ರೊ. ಸರೋಜಮ್ಮ, ಪ್ರೇರಣಾ ಸಂಸ್ಥಾಪಕ ಅದ್ಯಕ್ಷ ರೊ. ರಾಜಶೇಖರ್, ರೊ. ಶಿವಕುಮಾರ್ ಕೆ.ಜಿ., ಮಾಜಿ ವಲಯಪಾಲಕರಾದ ರೊ. ಪ್ರಕಾಶ್ ಎಂ.ಎಸ್., ಪ್ರೇರಣಾ ಛಾರಿಟೇಬಲ್ ಅಧ್ಯಕ್ಷ ರೊ. ಮಲ್ಲಿಕಾರ್ಜುನ ಮೆಳೇಹಳ್ಳಿ, ರೊ. ಜನಾರ್ದನ್, ರೋಟರಿ ಪ್ರೇರಣಾ ಎಲ್ಲಾ ಸದಸ್ಯರುಗಳು ಭಾಗಿಯಾಗಿದ್ದರು.

(Visited 1 times, 1 visits today)
kannada news local news tumakur tumkur tumkur news
Previous Articleಡಾ. ಬಾಬು ಜಗಜೀವನ ರಾಂ ೪೦ನೇ ಪುಣ್ಯಸ್ಮರಣೆ
Next Article ಪೆಟ್ರೋಲ್, ಡಿಸೆಲ್‌ಗಾಗಿ ವಾಹನ ಮಾಲೀಕರ ಪರದಾಟ
News Desk Benkiyabale

Related Posts

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm news

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm news

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm news
ತಾಜಾ ಸುದ್ಧಿಗಳು
news

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm
news

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm
news

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm
news

ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ

August 21, 2026 1:49 pm
news

ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ

August 20, 2026 5:51 pm
news

ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ

August 20, 2026 4:59 pm
Our Youtube Channel
Our Picks

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm

ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ

August 21, 2026 1:49 pm

ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ

August 20, 2026 5:51 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

By News Desk BenkiyabaleAugust 21, 2026 7:05 pm

ತುಮಕೂರು: ಭ್ರಷ್ಟಾಚಾರ ಹಾಗೂ ಲಂಚ ಪ್ರಕರಣದಲ್ಲಿ ಸಿಲುಕಿದ್ದ ತುರುವೇಕೆರೆ ತಾಲೂಕಿನ ಮಾಯಸಂದ್ರ ನಾಡಕಚೇರಿ ವ್ಯಾಪ್ತಿಯ ತುಯಲಹಳ್ಳಿ ವೃತ್ತದ ಗ್ರಾಮ ಸಹಾಯಕ…

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm

ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ

August 21, 2026 1:49 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.