ಹುಳಿಯಾರು: ಯಾವುದೇ ಒಂದು ಪಟ್ಟಣದ ಪ್ರಗತಿಗೆ ಮತ್ತು ದೈನಂದಿನ ಚಟುವಟಿಕೆಗೆ ಇಂಧನ ಎಂಬುದು ರಕ್ತಸಂಚಲನದAತೆ. ಆದರೆ ಹುಳಿಯಾರು ಪಟ್ಟಣದಲ್ಲಿ ಕಳೆದ ಆರು-ಏಳು ತಿಂಗಳುಗಳಿAದ ಈ ಸಂಚಲನವೇ ಸ್ಥಗಿತಗೊಂಡAತಿತ್ತು. ಪಟ್ಟಣದ ಪ್ರಮುಖ ಕೇಂದ್ರವಾದ ಕನಕ ಸರ್ಕಲ್‌ನಲ್ಲಿದ್ದ ಯೂಸುಫ್ ಖಾನ್ ಪೆಟ್ರೋಲ್ ಬಂಕ್ ದಿಢೀರನೆ ಬಂದ್ ಆಗಿದ್ದರಿಂದ, ಇಡೀ ಪಟ್ಟಣದ ಜನತೆ ಪೆಟ್ರೋಲ್‌ಗಾಗಿ ಪೆಟ್ರೋಲ್ ಸುಡುವ ಅನಿವಾರ್ಯತೆ ಸೃಷ್ಠಿಯಾಗಿತ್ತು. ಈಗ ಆ ಕರಾಳ ದಿನಗಳು ಮುಗಿದಿದ್ದು, ಸಾರ್ವಜನಿಕರ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದ ಅರ್ಧ ವರ್ಷದಿಂದ ಹುಳಿಯಾರಿನ ವಾಹನ ಸವಾರರ ಸ್ಥಿತಿ ನಿಜಕ್ಕೂ ಶೋಚನೀಯವಾಗಿತ್ತು. ಕೇವಲ ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಬೇಕಿದ್ದರೂ ಮೂರು-ನಾಲ್ಕು ಕಿಲೋಮೀಟರ್ ದೂರದ ಬಂಕ್‌ಗಳಿಗೆ ಅಲೆಯಬೇಕಾದ ದುಸ್ಥಿತಿ ಇತ್ತು. ಇದು ಅನಗತ್ಯವಾಗಿ ಗ್ರಾಹಕರಿಗೆ ಜೇಬಿಗೆ ಕತ್ತರಿ ಬೀಳುವ ಜೊತೆಗೆ ಸಮಯ ವ್ಯರ್ಥವಾಗುತ್ತಿತ್ತು.
ಹರಸಾಹಸ ಪಟ್ಟು ದೂರದ ಬಂಕ್‌ಗಳಿಗೆ ತಲುಪಿದರೆ ಅಲ್ಲಿಯೂ ಇಂಧನ ಖಾಲಿಯಾಗಿರುತ್ತಿದ್ದ ಸಂದರ್ಭಗಳಿದ್ದವು. ಇದರಿಂದಾಗಿ ವಾಹನಗಳನ್ನು ತಳ್ಳಿಕೊಂಡು ಬರುವ ಸವಾರರು, ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜು ತಲುಪಲಾಗದ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಗಳನ್ನು ಕಳೆದುಕೊಂಡ ನೌಕರರ ಸಂಕಷ್ಟ ಅಷ್ಟಿಷ್ಟಲ್ಲ.
ದೇಶದ ಪ್ರಧಾನಿ ಇಂಧನ ಉಳಿತಾಯದ ಮಾತಾಡುತ್ತಿದ್ದರೆ, ಇಲ್ಲಿ ಮಾತ್ರ ಅನಿವಾರ್ಯವಾಗಿ ಪ್ರತಿದಿನ ಲೀಟರ್‌ಗಟ್ಟಲೆ ಇಂಧನ ಪೋಲಾಗುತ್ತಿತ್ತು. ಈ ಬಗ್ಗೆ ಪತ್ರಿಕೆ ವಿಶೇಷ ವರದಿ ಪ್ರಕಟಿಸಿತ್ತು. ಪತ್ರಿಕೆಯ ಆಶಯದ ಫಲವಾಗಿ ಕೊನೆಗೂ ಕನಕ ಸರ್ಕಲ್‌ನ ಯೂಸುಫ್ ಖಾನ್ ಪೆಟ್ರೋಲ್ ಬಂಕ್ ಮರುಪ್ರಾರಂಭಗೊAಡಿದೆ. ಇದು ಕೇವಲ ಬಂಕ್ ಆರಂಭವಲ್ಲ, ಹುಳಿಯಾರಿನ ಜನತೆಗೆ ಸಿಕ್ಕ ನಿಟ್ಟುಸಿರು.
ಪಟ್ಟಣದ ಹೃದಯಭಾಗದಲ್ಲೇ ಇಂಧನ ಲಭ್ಯವಾಗುತ್ತಿರುವುದರಿಂದ ಸವಾರರ ಅನಗತ್ಯ ಓಡಾಟ ನಿಂತಿದೆ. ಇಂಧನಕ್ಕಾಗಿ ಹಣ ಹಾಗೂ ಸಮಯ ವ್ಯಯಿಸುತ್ತಿದ್ದ ಜನರಿಗೆ ಈಗ ದೊಡ್ಡ ಆರ್ಥಿಕ ನೆಮ್ಮದಿ ಸಿಕ್ಕಿದೆ. ಸಾರ್ವಜನಿಕರ ಮತ್ತು ರೈತಾಪಿ ವರ್ಗದ ಅನುಕೂಲಕ್ಕಾಗಿ ಬಂಕ್ ಮುಂಜಾನೆ ೬ ಗಂಟೆಯಿAದಲೇ ಆರಂಭಗೊAಡು ರಾತ್ರಿ ೧೦ ರವರೆಗೆ ತೆರೆದಿರುತ್ತದೆ.
ಒಟ್ಟಿನಲ್ಲಿ, ಆರು ತಿಂಗಳ ಕಾಲ ಹುಳಿಯಾರು ನಾಗರಿಕರನ್ನು ಕಾಡಿದ್ದ ಇಂಧನ ಬವಣೆಗೆ ಈಗ ಶಾಶ್ವತ ಮುಕ್ತಿ ಸಿಕ್ಕಿದೆ. ಪತ್ರಿಕೆಯ ಆಶಯದಂತೆ ಸಾರ್ವಜನಿಕರ ಧ್ವನಿಗೆ ಮಾಲೀಕರು ಹಾಗೂ ಅಧಿಕಾರಿಗಳು ಸ್ಪಂದಿಸಿದ್ದು, ಪಟ್ಟಣದ ಜನತೆ ಇನ್ನು ಮುಂದೆ ಇಂಧನಕ್ಕಾಗಿ ಇಂಧನ ಸುಡುವ ಅನಿವಾರ್ಯತೆ ಇಲ್ಲದಂತಾಗಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ.
(Visited 1 times, 1 visits today)





