
ಹುಳಿಯಾರು: ಶತಮಾನಗಳ ಇತಿಹಾಸ ಹೊಂದಿರುವ ಪಟ್ಟಣದ ಎಂ.ಪಿ.ಎಸ್. (ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲಾ ಮೈದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅವೈಜ್ಞಾನಿಕ ಕಟ್ಟಡ ನಿರ್ಮಾಣ ಕಾಮಗಾರಿಗಳ ವಿರುದ್ಧ ಕ್ರೀಡಾಭಿಮಾನಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೈದಾನದ ಉಳಿವಿಗಾಗಿ ಶನಿವಾರ ಶಾಲೆಯ ಪ್ರಾಂಶುಪಾಲರು ಹಾಗೂ ಮುಖ್ಯೋಪಾಧ್ಯಾಯರಿಗೆ ಮನವಿ ಪತ್ರ ಸಲ್ಲಿಸಿದರು.
ಹುಳಿಯಾರು ಪಟ್ಟಣದ ಹೃದಯಭಾಗದಂತಿರುವ ಈ ಕೆ.ಪಿ.ಎಸ್. ಶಾಲಾ ಮೈದಾನ ಕೇವಲ ಒಂದು ಖಾಲಿ ಜಾಗವಲ್ಲ. ಇದು ಈ ಭಾಗದ ಮಕ್ಕಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿರುವ ಅಮೂಲ್ಯ ಸಾರ್ವಜನಿಕ ಆಸ್ತಿಯಾಗಿದೆ. ದಶಕಗಳಿಂದಲೂ ಮಕ್ಕಳ ಕ್ರೀಡಾ ಚಟುವಟಿಕೆಗಳು, ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಅಥ್ಲೆಟಿಕ್ಸ್ ಪಂದ್ಯಾವಳಿಗಳು, ಎನ್ಸಿಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಗಳು ಇಲ್ಲಿಯೇ ನಡೆಯುತ್ತಾ ಬಂದಿವೆ. ಇದರೊಂದಿಗೆ ತಾಲೂಕು ಮಟ್ಟದ ಸಾಂಸ್ಕöÈತಿಕ ಕಾರ್ಯಕ್ರಮಗಳು, ಸ್ವಾತಂತ್ರ÷್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ, ರಾಮಕೃಷ್ಣ ಹೆಗ್ಗಡೆ, ಸಿದ್ದರಾಮಯ್ಯ ಅವರಂತಹ ಪ್ರಮುಖ ರಾಜಕೀಯ ಮುಖಂಡರ ಭಾಷಣಗಳಿಗೆ ಸಾಕ್ಷಿಯಾಗುತ್ತಾ ಬಂದಿರುವ ಹುಳಿಯಾರಿನ ಏಕೈಕ ಸಾರ್ವಜನಿಕ ಮೈದಾನ ಇದಾಗಿದೆ ಎಂದು ವಿವರಿಸಿದ್ದಾರೆ.
ಇಂತಹ ಐತಿಹಾಸಿಕ ಮೈದಾನದಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಶಾಲೆಗೆ ಸಂಬAಧಿಸಿದ ಕಟ್ಟಡಗಳು ತಲೆ ಎತ್ತುತ್ತಿದ್ದು, ಕ್ರೀಡಾಂಗಣದ ವಿಸ್ತೀರ್ಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಪ್ರಸ್ತುತ ಶಾಲಾ ಆವರಣದಲ್ಲಿ ಈಗಾಗಲೇ ಸುಮಾರು ೫ ರಿಂದ ೬ ಶೌಚಾಲಯಗಳಿವೆ. ಆದರೆ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಳಿಸುವ ಬದಲು, ಅಧಿಕಾರಿಗಳು ಮತ್ತೊಂದು ಹೊಸ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದೂ ಕೂಡ ಶಾಲಾ ಮುಖ್ಯ ಕಟ್ಟಡದ ಮುಂಭಾಗದಲ್ಲೇ, ಆಟದ ಮೈದಾನಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲು ಹೊರಟಿದ್ದಾರೆ ಎಂದು ದೂರಿದ್ದಾರೆ.
ಕ್ರೀಡಾಂಗಣ ಉಳಿಸಿ ಅಭಿಯಾನದ ನೇತೃತ್ವ ವಹಿಸಿ ಮಾತನಾಡಿದ ಪ್ರಮುಖರಾದ ಬಾಳೆಕಾಯಿ ರಾಘು, ಹುಳಿಯಾರಿನ ಸಾವಿರಾರು ಕ್ರೀಡಾಭಿಮಾನಿಗಳು ಮತ್ತು ಕ್ರೀಡಾಪಟುಗಳು ನೆರೆಯಲು ಇರುವ ಒಂದೇ ಒಂದು ಏಕೈಕ ಆಸರೆ ಎಂದರೆ ಅದು ಈ ಕೆ.ಪಿ.ಎಸ್. ಶಾಲಾ ಮೈದಾನ ಮಾತ್ರ. ಪ್ರಸ್ತುತ ಇಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಟ್ಟಡ ಕಾಮಗಾರಿಗಳ ವಿರುದ್ಧ ನಾವು ಶಾಸಕರಿಗೆ ಹಾಗೂ ಬಿಇಒ ಅವರಿಗೆ ಮನವಿಯನ್ನು ಸಲ್ಲಿಸುತ್ತಿದ್ದೇವೆ. ನಾಗರಿಕರ ಮತ್ತು ಮಕ್ಕಳ ಹಿತಾಸಕ್ತಿಯನ್ನು ಪರಿಗಣಿಸಿ, ದಯವಿಟ್ಟು ಈ ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಶೌಚಾಲಯ ಅಥವಾ ಇನ್ಯಾವುದೇ ನಿರ್ಮಾಣಕ್ಕೆ ಮೈದಾನವನ್ನು ಹಾಳುಗೆಡಹುವ ಬದಲು ಸೂಕ್ತವಾದ ಪರ್ಯಾಯ ಸ್ಥಳವನ್ನು ಒದಗಿಸಿಕೊಡಬೇಕು. ಒಂದು ವೇಳೆ ಈ ಮೈದಾನವನ್ನು ನಾವು ಇಂದು ಕಳೆದುಕೊಂಡರೆ, ನಮ್ಮ ಮಕ್ಕಳ ಮುಂದಿನ ಭವಿಷ್ಯ ತುಂಬಾ ಚಿಂತಾಜನಕವಾಗಲಿದೆ. ಆದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ಒಕ್ಕೊರಲ ಮನವಿಯನ್ನು ಪುರಸ್ಕರಿಸಿ, ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ತೀವ್ರ ಕಳಕಳಿ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಕೌನ್ಸಿಲರ್ ಎಸ್.ಆರ್.ಎಸ್. ದಯಾನಂದ್ ಅವರು, ಈ ಕೆ.ಪಿ.ಎಸ್. ಮೈದಾನವು ಹುಳಿಯಾರಿನ ಎಲ್ಲಾ ಸಾಂಸ್ಕöÈತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಏಕೈಕ ತಾಣವಾಗಿದೆ. ಈಗಾಗಲೇ ಆವರಣದಲ್ಲಿ ಐದಾರು ಶೌಚಾಲಯಗಳಿದ್ದು, ಅದರಲ್ಲಿ ನಾಲ್ಕೆöÊದು ಶೌಚಾಲಯಗಳು ದುರಸ್ತಿಯಿಲ್ಲದೆ ಸ್ಥಗಿತಗೊಂಡಿವೆ. ಸಂಬAಧಪಟ್ಟ ಅಧಿಕಾರಿಗಳು ಹಳೆಯ ಶೌಚಾಲಯಗಳನ್ನು ದುರಸ್ತಿಪಡಿಸಿ ಉನ್ನತೀಕರಿಸುವ ಬದಲು, ಇರುವ ಜಾಗದಲ್ಲೇ ಮತ್ತೆ ಹೊಸದಾಗಿ ಶೌಚಾಲಯ ನಿರ್ಮಿಸಲು ಹೊರಟಿರುವುದು ಸರಿಯಲ್ಲ. ಹಿಂದೆ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮಕ್ಕಳ ಓದಿನ ಹಿತದೃಷ್ಟಿಯಿಂದ ನಾವು ಸಮ್ಮತಿಸಿದ್ದೆವು. ಆದರೆ ಈಗ ಕ್ರೀಡಾಂಗಣವನ್ನೇ ನುಂಗುವAತೆ ಕೈಗೆತ್ತಿಕೊಂಡಿರುವ ಈ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದರು.
ವಿಷಯದ ಗಂಭೀರತೆಯನ್ನು ಅರಿತ ಕ್ರೀಡಾಭಿಮಾನಿಗಳು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾದ ಸಿ.ಬಿ.ಸುರೇಶ್ ಬಾಬು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚಿಸಿದರು. ಸಾರ್ವಜನಿಕರ ಅಹವಾಲಿಗೆ ತಕ್ಷಣವೇ ಸ್ಪಂದಿಸಿದ ಶಾಸಕರು, ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಮಾತನಾಡಿ, ಮುಂದಿನ ಎರಡು-ಮೂರು ದಿನಗಳ ಮಟ್ಟಿಗೆ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಮುಂಬರುವ ಮಂಗಳವಾರ ಅಥವಾ ಬುಧವಾರದೊಳಗೆ ತಾವು ಸ್ವತಃ ಹುಳಿಯಾರಿನ ಶಾಲಾ ಮೈದಾನಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರು ಹಾಗೂ ಮಕ್ಕಳ ಹಿತ ಕಾಯುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪಟ್ಟಣ ಪಂಚಾಯಿತಿ ಕೌನ್ಸಿಲರ್ ಬಡಗಿ ರಾಜು, ಕ್ರೀಡಾಪಟು ರೇಣುಕಾ ಪ್ರಸಾದ್, ಪ್ರಮುಖರಾದ ಬಾಳೆಕಾಯಿ ರಾಘು, ವಿನಯ್, ಇಮ್ರಾನ್ ಪಾಷಾ, ಇಮ್ರಾಜ್, ಬಾಲಾಜಿ ಸಿಂಗ್, ಎಚ್.ಡಿ. ರಾಘವೇಂದ್ರ ಸೇರಿದಂತೆ ನೂರಾರು ಹಳೆಯ ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಇದ್ದರು.





