ತುಮಕೂರು: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಸಾಧನೆಯ ಹಾದಿಯನ್ನು ತಮ್ಮಲ್ಲಿ ಮೂಡಿಸಿಕೊಳ್ಳಬೇಕು. ಅವರ ಅಚಲವಾದ ಹಾಗೂ ದೃಢವಾದ ಮನಸ್ಥಿಯನ್ನು ಅಳವಡಿಸಿಕೊಂಡು, ತಮ್ಮ ಗುರಿಯನ್ನು ಸಾಧನೆಯತ್ತ ಮಾತ್ರ ಇಟ್ಟುಕೊಳ್ಳಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಹೆಚ್.ಎಸ್. ಮೋಹನ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆ. ೦೩ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ “ಪದವಿ ಶಿಕ್ಷಣ ಉದ್ಯೋಗಕ್ಕಷ್ಟೇ ಅಲ್ಲ, ವ್ಯಕ್ತಿತ್ವ ನಿರ್ಮಾಣಕ್ಕೂ” ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನು ಕೇವಲ ತನಗಾಗಿ ಮಾತ್ರವಲ್ಲದೆ, ಜಗತ್ತಿಗಾಗಿ ಬದುಕುವ ಪರಿಯನ್ನು ಅರಿತುಕೊಳ್ಳಬೇಕು. ಸಮಾಜಕ್ಕೆ ಮತ್ತು ಜಗತ್ತಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಸದಾ ಪ್ರಶ್ನಿಸಿಕೊಳ್ಳಬೇಕು ಎಂದರು.
ಕಾರ್ಯಾಗಾರದ ಅಧ್ಯಕ್ಷರಾದ ಹಿರಿಯ ಪ್ರಾಧ್ಯಾಪಕ ಪ್ರೊ. ಶೇಟ್ ಪ್ರಕಾಶ್ ಮಾತನಾಡಿ ಖಾಸಗಿ ಕಾಲೇಜುಗಳಿಗಿಂತ ತುಮಕೂರು ವಿಶ್ವವಿದ್ಯಾನಿಲಯ ನೂರು ಪಟ್ಟು ಉತ್ತಮವಾಗಿದೆ. ಒಮ್ಮೆ ಕ್ಯಾಂಪಸ್ ಒಳಗೆ ಕಾಲಿಟ್ಟರೆ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದು ಸಂಪೂರ್ಣ ಸಬಲರಾಗಿ ಹೊರಹೋಗಬಹುದು. ಇಲ್ಲಿ ಕೇವಲ ಓದು ಮಾತ್ರವಲ್ಲದೆ, ಸಾಂಸ್ಕöÈತಿಕ ಚಟುವಟಿಕೆಗಳು, ಕ್ರೀಡೆ ಮತ್ತು ಸಂಶೋಧನೆಗೆ ಹೆಚ್ಚಿನ ಅವಕಾಶಗಳಿವೆ. ಇಂದಿನ ಜೆನ್-ಜಿ ಯುವಜನತೆಯ ಶಕ್ತಿ ಏನೆಂಬುದು ದೇಶಕ್ಕೆ ಅರಿವಾಗಿದೆ. ಆ ಶಕ್ತಿಯನ್ನು ಸಕಾರತ್ಮಕ ಮಾರ್ಗದಲ್ಲಿ ಮುನ್ನಡೆಸುವ ಮಾರ್ಗದರ್ಶನವನ್ನು ನಮ್ಮ ವಿವಿಯು ನೀಡುತ್ತದೆ ಎಂದರು.
ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರದೀಪ್ ಕುಮಾರ್ ಪಿ.ಸಿ. ಹಾಗೂ ಬೆಂಗಳೂರಿನ ಪ್ರಜ್ಞಾ ಫೌಂಡೇಷನ್‌ನ ನಿವೃತ್ತ ಪ್ರಾಧ್ಯಾಪಕರು ಹಾಗೂ ಶಿಕ್ಷಣ ತಜ್ಞರಾದ ಡಾ. ಮಹೇಶ್ ಅರವಿಂದ್ ಅವರು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಂಯೋಜಕರಾದ ಡಾ. ಚೇತನ್ ಪ್ರತಾಪ್ ಕೆ.ಎನ್. ಪ್ರಾಸ್ತವಿಕ ನುಡಿಗಳನ್ನಾಡಿದರು. ಪ್ರಾಧ್ಯಾಪಕರಾದ ಪ್ರೊ. ಮಂಗಳಗೌರಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
(Visited 1 times, 1 visits today)





