BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ
  • ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು
  • ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ
  • ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ
  • ವಿಶೇಷ ರೋಜ್ಗಾರ್ ದಿನಾಚರಣೆಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಸಮಗ್ರ ಮಾಹಿತಿ
  • ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ
  • ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
  • ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು
news

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

By News Desk BenkiyabaleUpdated:August 08, 2026 5:09 pm

ತುಮಕೂರು: ಜಿಲ್ಲೆಯ ಶಿರಾ ನಗರಕ್ಕೆ ಸಮೀಪದಲ್ಲಿರುವ ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗವನ್ನು ಅಲ್ಲಿನ ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಬೇರೊಂದು ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ನೀಡುವ ಮೂಲಕ ಎರಡು ಸಮುದಾಯಗಳು ನಡುವೆ ವೈಮನಸ್ಸು ತಂದಿಟ್ಟಿದ್ದು, ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮದ್ಯ ಪ್ರವೇಶಿಸಿ, ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸುವ ಮೂಲಕ ವಿವಾಧಿತ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿಕೊಡುವಂತೆ ದಲಿತ ಹೋರಾಟಗಾರ ಪ್ರೊ.ಹರಿರಾಮ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಶಿರಾ ನಗರಕ್ಕೆ ಕೂಗಳತೆಯ ದೂರದಲ್ಲಿರುವ ಯಲಿಯೂರಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಾದಿಗ ಜನಾಂಗ,ಹಾಗೆಯೇ ಹಿಂದುಳಿದ ವರ್ಗಕ್ಕೆ ಸೇರಿದ ತಿಗಳ ಸಮುದಾಯ ಹಾಗೂ ಇನ್ನಿತರ ಜನಾಂಗದವರು ವಾಸವಿದ್ದು,೧೯೯೩ರಲ್ಲಿ ಯಲಿಯೂರು ಗ್ರಾಮಪಂಚಾಯಿತಿ ವತಿಯಿಂದ ಸರ್ವೆ ನಂ ೧೬೧ ರಲ್ಲಿದ್ದ ೨೫ ಜಮೀನಿನಲ್ಲಿ ೩೫೦ಕ್ಕೂ ಹೆಚ್ಚು ಸೈಟುಗಳನ್ನು ವಿಂಗಡಿಸಿ, ಹಂಚಿಕೆ ಮಾಡಿ ಹಕ್ಕುಪತ್ರಗಳನ್ನು ನೀಡಲಾಗಿದೆ.೨೦೦೩-೦೪ರಲ್ಲಿ ಗ್ರಾಮಪಂಚಾಯಿತಿ ಪಕ್ಕದಲ್ಲಿದ್ದ ಸುಮಾರು ೧೨೮*೧೯೫ ಅಡಿ ಭೂಮಿಯನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುರುತಿಸಿ, ಭವನದ ಹೆಸರಿನಲ್ಲಿ ಖಾತೆ, ಪಹಣಿ ಮಾಡಿಕೊಟ್ಟಿದೆ.ಆದರೆ ಗ್ರಾಮದ ಯಾರ ಗಮನಕ್ಕೂ ತಾರದೆ ೨೦೦೭ರಲ್ಲಿ ಯಾರ ಗಮನಕ್ಕೂ ತಾರದೆ, ಗ್ರಾಮದಲ್ಲಿ ತಿಗಳ ಸಮುದಾಯದ ಕೊಲ್ಲಾಪುರದಮ್ಮ ದೇವಾಲಯ, ಸಮುದಾಯ ಭವನ ಇದ್ದಾಗ್ಯೂ, ಮತ್ತೆ ಅದೇ ಜನಾಂಗದ ಸಮುದಾಯಭವನಕ್ಕೆ ಸದರಿ ಜಾಗವನ್ನು ಗ್ರಾಮಪಂಚಾಯಿತಿ ಅಧಿಕಾರಿಗಳು ಖಾತೆ ಮಾಡಿಕೊಟ್ಟಿ ದ್ದಾರೆ.ಇದು ಅತ್ಯಂತ ಖಂಡನೀಯವಾಗಿದ್ದು,ಕೂಡಲೇ ತಿಗಳ ಜನಾಂಗಕ್ಕೆ ಮಾಡಿರುವ ಖಾತೆಯನ್ನು ರದ್ದು ಮಾಡಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮರು ಮಂಜೂರು ಮಾಡಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.
ಯಲಿಯೂರು ಸರ್ವೆ ನಂ ೧೬೧ ರ ಜಮೀನು ಸೆಂದಿವನವಾಗಿದ್ದು, ಇದುವರೆಗೂ ಪಹಣಿಯಲ್ಲಿ ಸೆಂದಿವನ ಎಂದೇ ನಮೂದಾಗಿ ಬರುತ್ತಿದೆ.ಇದರಲ್ಲಿಯೂ ಸುಮಾರು ೨೫ ಎಕರೆ ಜಾಗವನ್ನು ಕಾನೂನು ಬಾಹಿರವಾಗಿಯೇ ಆಶ್ರಯ ನಿವೇಶನ ಮಾಡಿ ಹಂಚಿಕೆ ಮಾಡಲಾಗಿದೆ.ಪ್ರಸ್ತುತ ಸದರಿ ಜಾಗವೂ ಶಿರಾ ನಗರಕ್ಕೆ ಹತ್ತಿರ ಇರುವ ಕಾರಣ ಭೂಮಿಯ ಬಲೆ ಗಗನಕ್ಕೇರಿದೆ.ಐದು ಕೋಟಿ ರೂ ಬೆಲೆ ಬಾಳುವ ೧೨೮*೧೯೫ ಅಡಿ ಜಾಗವನ್ನು ಕೇವಲ ೧೭೪೮೪ ರೂಗಳ ಕಿಮ್ಮಿತ್ತಿಗೆ ಶ್ರೀಕೊಲ್ಲಾಪುರದಮ್ಮ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರು ಮಾಡಿರುವುದರ ಹಿಂದೆ ಅಕ್ರಮ ನಡೆದಿರುವ ಶಂಕೆ ಇದ್ದು, ಸದರಿ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒಳಪಡಿಸಬೇಕು.ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗವನ್ನು ಮತ್ತೊಂದು ಸಮುದಾಯಕ್ಕೆ ಮಂಜೂರು ಮಾಡಿರುವ ಅಧಿಕಾರಿಯ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರೊ.ಹರಿರಾಮ್ ಒತ್ತಾಯಿಸಿದರು.
ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಜಿಲ್ಲೆಯಲ್ಲಿಯೇ ದಲಿತ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದೆ.ಪ್ರಕರಣ ಪೊಲೀಸ್ ಠಾಣೆಯ ಮೇಟಿಲು ಏರಿದ ನಂತರ ಹೂವ ಕಟ್ಟುವ ಕೆಲಸ ಮತ್ತು ಹೂವುಗಳನ್ನು ಕೊಳ್ಳುವ ಕೆಲಸ ವ್ಯವಹಾರಿಕವಾಗಿ ನಡೆಯುತ್ತಿದೆ. ಆದರೆ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ಇದ್ದ ಸೌಹಾರ್ಧತೆ ಮಾಯವಾಗಿದೆ. ಕೆಲವರು ಜಿಲ್ಲೆಯ ಇನ್ನಿತರ ಕಡೆಗಳಲ್ಲಿ ಆಗಿರುವ ಕೊಲೆಗಳನ್ನು ಹೆಸರಿಸಿ, ಯಲಿಯೂರು ಗ್ರಾಮದ ದಲಿತ ಯುವಕರನ್ನು ಕೊಲೆ ಮಾಡುವ ಬೆದರಿಕೆಯನ್ನು ಹಾಕುತ್ತಿದ್ದಾರೆ. ಹಾಗಾಗಿ ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತು,ವಿವಾದಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು, ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮಂಜೂರಾದ ಜಾಗವನ್ನು ಮರು ಮಂಜೂರು ಮಾಡಿ, ಗ್ರಾಮದಲ್ಲಿ ಸೌಹಾರ್ಧ ವಾತಾವರಣ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಯಲಿಯೂರಿನಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಪ್ರೊ,ಹರಿರಾಮ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಎಸ್.ಪಿಯ ಜಿಲ್ಲಾಧ್ಯಕ್ಷರಾದ ರಾಜಸಿಂಹ,ಯಲಿಯೂರು ಗ್ರಾ.ಪಂ ಮಾಜಿ ಸದಸ್ಯ ಗೋವಿಂದಪ್ಪ, ವೈ.ಹೆಚ್.ರಂಗನಾಥ, ವಾಲ್ಮೀಕಿ ಸಮುದಾಯದ ಸಿ.ದಾಸಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಟ್ರಸ್ಟ÷್ನ ಚಂದ್ರಶೇಖರ್, ಕುಮಾರ್, ನಾಗರಾಜಪ್ಪ ಹಾಗೂ ಗ್ರಾಮದ ಮಹಿಳೆಯರು ಭಾಗವಹಿಸಿ, ತಮಗಾಗಿರುವ ನೋವು ತೊಡಿಕೊಂಡರು.

(Visited 1 times, 1 visits today)
kannada news karnataka local news tumakur tumkur ತುಮಕೂರು:
Previous Articleಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ
Next Article ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ
News Desk Benkiyabale

Related Posts

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm news

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm news

ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ

August 08, 2026 4:28 pm news
ತಾಜಾ ಸುದ್ಧಿಗಳು
news

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm
news

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm
news

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm
news

ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ

August 08, 2026 4:28 pm
news

ವಿಶೇಷ ರೋಜ್ಗಾರ್ ದಿನಾಚರಣೆಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಸಮಗ್ರ ಮಾಹಿತಿ

August 08, 2026 4:26 pm
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm
Our Youtube Channel
Our Picks

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm

ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ

August 08, 2026 4:28 pm

ವಿಶೇಷ ರೋಜ್ಗಾರ್ ದಿನಾಚರಣೆಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಸಮಗ್ರ ಮಾಹಿತಿ

August 08, 2026 4:26 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

By News Desk BenkiyabaleAugust 08, 2026 5:11 pm

ತುಮಕೂರು: ಬಹುಜನ ಸಮಾಜ ಪಕ್ಷದ ರಾಯಚೂರು ಜಿಲ್ಲಾ ಉಸ್ತುವಾರಿ ಭೂಮಾನಂದ್ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು.…

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm

ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ

August 08, 2026 4:28 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.