BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್
  • ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು
  • ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ
  • ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ
  • ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ
  • ಎನ್‌ಡಿಎ ಪಕ್ಷದ ಹೋರಾಟದ ಪಲವಾಗಿ ಜಿಲ್ಲೆಗೆ ಹೇಮಾವತಿ ನೀರು
  • ಸಣ್ಣ ಸಮುದಾಯಗಳು ಮುಂದೆ ಬರಬೇಕೆಂದರೆ  ಅವಕಾಶಗಳನ್ನು ಬಳಸಿಕೊಂಡಾಗ ಮಾತ್ರ ಸಾಧ್ಯ
  • ಚನ್ನಬಸವ ರಾಜೇಂದ್ರ ಸ್ವಾಮಿಗಳ ಮಾಸಿಕ ಪುಣ್ಯಸ್ಮರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ
news

ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ

ಬಡ ಗೂಡಂಗಡಿಗಳಷ್ಟೇ ಗುರಿ, ಸಾರ್ವಜನಿಕರು, ವಿವಿಧ ಸಂಘಟನೆಗಳಿ0ದ ತೀವ್ರ ವಿರೋಧ
By News Desk BenkiyabaleUpdated:August 18, 2026 3:33 pm

ಹುಳಿಯಾರು: ಪಟ್ಟಣದ ಬಸ್ ನಿಲ್ದಾಣದ ಸಮೀಪದ ಕೆರೆ ಅಂಗಳದಲ್ಲಿ ಒತ್ತುವರಿ ಮಾಡಿಕೊಂಡು ಇಡಲಾಗಿದ್ದ ಸುಮಾರು ೫೦ ಕ್ಕೂ ಹೆಚ್ಚು ಗೂಡಂಗಡಿಗಳನ್ನು ಸಣ್ಣ ನೀರಾವರಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.
ಉಚ್ಚ ನ್ಯಾಯಾಲಯದ ಆದೇಶ ಹಾಗೂ ಇತ್ತೀಚೆಗೆ ಕೆರೆಗೆ ಔಷಧೀಯ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಪತ್ರಿಕಾ ವರದಿ ಆಧರಿಸಿ ಉಪಲೋಕಾಯುಕ್ತರು ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಹಾಗೂ ನೀರಾವರಿ ಇಲಾಖೆಗೆ ನೋಟಿಸ್ ನೀಡಲಾಗಿದ್ದು, ಇಂದಿನ ತೆರವು ಕಾರ್ಯಾಚರಣೆ ಕೈಗೊಳ್ಳಲು ಕಾರಣ ಎನ್ನಲಾಗಿದೆ.
ಸೋಮವಾರ ಬೆಳಿಗ್ಗೆ ನೀರಾವರಿ ಇಲಾಖೆಯ ಎಇಇ ಗಂಗಾಧರಯ್ಯ, ಎಇ ಚಿತ್ತಯ್ಯ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಅವರ ನೇತೃತ್ವದಲ್ಲಿ ಜೆಸಿಬಿ ಹಾಗೂ ಪೌರಕಾರ್ಮಿಕರೊಂದಿಗೆ ಕಾರ್ಯಾಚರಣೆ ಆರಂಭಿಸಲಾಯಿತು. ತೆರವು ಕಾರ್ಯಾಚರಣೆಯ ವೇಳೆಯಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಮೋಹನ್ ಕುಮಾರ್ ರೈ, ಕಾಮನಬಿಲ್ಲು ಫೌಂಡೇಶನ್‌ನ ಚೆನ್ನಕೇಶವ ಹಾಗೂ ಆರ್.ಟಿ.ಓ. ರಾಜಣ್ಣ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಅಧಿಕಾರಿಗಳ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಯಾವುದೇ ಖಚಿತ ಸರ್ವೆ ವರದಿ ತರದೆ, ಕೇವಲ ಬಡವರ ಗೂಡಂಗಡಿಗಳನ್ನು ಮಾತ್ರ ತೆರವುಗೊಳಿಸುತ್ತಿರುವುದು ಲೋಕಾಯುಕ್ತಕ್ಕೆ ಕಣ್ಣೊರೆಸುವ ತಂತ್ರ. ಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಬೃಹತ್ ಮನೆಗಳು, ಶಂಕರಪುರದ ಭಾಗದ ಕಟ್ಟಡಗಳು, ಇಟ್ಟಿಗೆ ಫ್ಯಾಕ್ಟರಿಗಳು ಹಾಗೂ ತೋಟಗಳನ್ನು ಮೊದಲು ತೆರವುಗೊಳಿಸಿ. ದೊಡ್ಡ ಒತ್ತುವರಿದಾರರ ತಂಟೆಗೆ ಹೋಗದೆ ಕೇವಲ ಸಣ್ಣ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ? ಪೂರ್ಣ ಪ್ರಮಾಣದ ಸರ್ವೆ ಮುಗಿಸಿ, ಎಲ್ಲ ಒತ್ತುವರಿಯನ್ನೂ ಏಕಕಾಲಕ್ಕೆ ತೆರವುಗೊಳಿಸಿ ಎಂದು ಪಟ್ಟು ಹಿಡಿದರು.
ಕೆರೆ ಅಂಗಳಕ್ಕೆ ಸೇರಿದ ಜಾಗದಲ್ಲಿ ಫುಟ್‌ಪಾತ್ ಕರ (ಟ್ಯಾಕ್ಸ್) ಅನ್ನು ಇಷ್ಟು ದಿನ ಪಟ್ಟಣ ಪಂಚಾಯಿತಿಯಿAದ ಹೇಗೆ ವಸೂಲಿ ಮಾಡುತ್ತಿದ್ದೀರಿ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾಗಾಗಿ ಕೆರೆ ಅಂಗಳದಿAದ ತೆರವು ಮಾಡಿಸಿದರೆ ಬದಲಿ ಸ್ಥಳ ಗುರುತಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಒಟ್ಟು ೩೮ ಕೆರೆಗಳ ಸರ್ವೆ ಕಾರ್ಯ ನಡೆಯಬೇಕಿದೆ. ಹಿರಿಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಆದಷ್ಟು ಬೇಗ ಕೆರೆ ಗಡಿ ಗುರುತಿಸಲಾಗುವುದು. ಕೋರ್ಟ್ ಆದೇಶದಂತೆ ನಾವು ಯಾವುದೇ ಒತ್ತುವರಿಯನ್ನೂ ಬಿಡುವುದಿಲ್ಲ. ಸರ್ವೆ ವರದಿ ಬಂದ ತಕ್ಷಣ ಎಲ್ಲಾ ಒತ್ತುವರಿ ತೆರವುಗೊಳಿಸಿ ಚೈನ್ ಲಿಂಕ್ ಬೇಲಿ ಹಾಕಲಾಗುವುದು ಎಂದು ಎಇಇ ಗಂಗಾಧರಯ್ಯ ಉತ್ತರಿಸಿ ತೆರವು ಕಾರ್ಯ ಪೂರ್ಣಗೊಳಿಸಿದರು.

(Visited 1 times, 1 visits today)
Chikkanayakanahalli kannada news karnataka local news tumakur tumkur tumkur news ಜಿಲ್ಲಾಡಳಿತ ತುಮಕೂರು:
Previous Articleಎನ್‌ಡಿಎ ಪಕ್ಷದ ಹೋರಾಟದ ಪಲವಾಗಿ ಜಿಲ್ಲೆಗೆ ಹೇಮಾವತಿ ನೀರು
Next Article ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ
News Desk Benkiyabale

Related Posts

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

August 18, 2026 5:00 pm news

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm news

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm news
ತಾಜಾ ಸುದ್ಧಿಗಳು
news

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

August 18, 2026 5:00 pm
news

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm
news

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm
news

ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ

August 18, 2026 4:54 pm
news

ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ

August 18, 2026 3:33 pm
news

ಎನ್‌ಡಿಎ ಪಕ್ಷದ ಹೋರಾಟದ ಪಲವಾಗಿ ಜಿಲ್ಲೆಗೆ ಹೇಮಾವತಿ ನೀರು

August 17, 2026 5:14 pm
Our Youtube Channel
Our Picks

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

August 18, 2026 5:00 pm

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm

ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ

August 18, 2026 4:54 pm

ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ

August 18, 2026 3:33 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

By News Desk BenkiyabaleAugust 18, 2026 5:00 pm

ಕೊರಟಗೆರೆ: ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು…

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm

ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ

August 18, 2026 4:54 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.