ತುಮಕೂರು: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯನ್ನು ಸೋಮವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿ, ತಹಶೀಲ್ದಾರ್, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ತಿಳಿಸಿದರು.
ಸೆ.೨೩ ಆಕ್ಷೇಪಣೆಗೆ ಕೊನೆ ದಿನ: ಮತದಾರರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ ೨೪ ರಿಂದ ಸೆಪ್ಟೆಂಬರ್ ೨೩ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಹೊಸ ಮತದಾರರ ನೋಂದಣಿ: ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ನಮೂನೆ-೬ರ ಮೂಲಕ ಮತದಾರರ ನೋಂದಣಾಧಿಕಾರಿಗಳು, ಬಿಎಲ್ಒ ಅಥವಾ ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ೨೦೨೬ರ ಅಕ್ಟೋಬರ್ ೧ಕ್ಕೆ ೧೮ ವರ್ಷ ತುಂಬುವ ಯುವ ಮತದಾರರೂ ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.
೨೦,೬೧,೭೮೬ ಮತದಾರರು: ಮತದಾರರ ಪಟ್ಟಿ ಪರಿಷ್ಕರಣೆಯ ನಂತರ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು ೨೦,೬೧,೭೮೬ ಮತದಾರರಿದ್ದಾರೆ. ಈ ಪೈಕಿ ೧೦,೨೨,೦೨೩ ಪುರುಷರು, ೧೦,೩೯,೭೦೯ ಮಹಿಳೆಯರು ಹಾಗೂ ೫೪ ಇತರರಿದ್ದಾರೆ ಎಂದು ತಿಳಿಸಿದರು.
ಮತಗಟ್ಟೆಗಳ ಸಂಖ್ಯೆ ಏರಿಕೆ: ಮತಗಟ್ಟೆಗಳ ದೃಢೀಕರಣ ಕಾರ್ಯದ ನಂತರ ಜಿಲ್ಲೆಯಲ್ಲಿ ೧೧೮ ಹೊಸ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಹಿಂದೆಯಿದ್ದ ಒಟ್ಟು ಮತಗಟ್ಟೆಗಳ ಸಂಖ್ಯೆ ೨೬೨೭ ರಿಂದ ೨೭೪೫ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ಪರಿಷ್ಕರಣೆಯ ಅಂಗವಾಗಿ ಮತಗಟ್ಟೆಗಳ ಪುನರ್ರಚನೆ ಪ್ರಕ್ರಿಯೆ ಪೂರ್ಣಗೊಂಡಿದೆ. ೧,೨೦೦ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳನ್ನು ವಿಭಜಿಸಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಿದೆ. ಕಟ್ಟಡಗಳ ಸ್ಥಳ ಬದಲಾವಣೆ ಹಾಗೂ ಹೆಸರು ಬದಲಾವಣೆ ಕೈಗೊಳ್ಳಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ: ಕರಡು ಮತದಾರರ ಪಟ್ಟಿ: ಜಿಲ್ಲೆಯಾದ್ಯಂತ ಒಟ್ಟು ೨೭೪೫ ಮತಗಟ್ಟೆಗಳಿದ್ದು, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ೨೭೦ ಮತಗಟ್ಟೆಗಳಿದ್ದು, ೧೦೧೫೭೩ ಪುರುಷ, ೧೦೩೫೮೨ ಮಹಿಳೆ ಮತ್ತು ೧ ಇತರೆ ಸೇರಿದಂತೆ ಒಟ್ಟು ೨೦೫೧೫೬ ಮತದಾರರಿದ್ದಾರೆ.
ತಿದ್ದುಪಡಿ ದೋಷವಿರುವ ೬೯೨೩೬ ಮತದಾರರು ಹಾಗೂ ಮ್ಯಾಪಿಂಗ್ ಆಗದ ೪೨೬೪೨ ಸೇರಿದಂತೆ ಒಟ್ಟು ೧೧೧೮೭೮ ಮತದಾರರಿಗೆ ನೋಟಿಸ್ ನೀಡಲಾಗುತ್ತಿದ್ದು, ನಿಗದಿತ ದಿನಾಂಕದAದು ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಸೂಚಿಸಲಾಗಿದೆ ಎಂದು ತಿಳಿಸಿದರು.
೨೩೭೦೯೩ ಎಎಸ್ಡಿಡಿಒ ಮತದಾರರು: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬAಧಿಸಿದAತೆ ಜಿಲ್ಲೆಯ ೧೧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಮನೆ-ಮನೆ ಸಮೀಕ್ಷೆ ಹಾಗೂ ಪರಿಶೀಲನೆ ಕಾರ್ಯದಲ್ಲಿ ಗೈರು ಹಾಜರಿರುವವರು, ಶಾಶ್ವತವಾಗಿ ಸ್ಥಳಾಂತರಗೊAಡವರು, ಮೃತಪಟ್ಟವರು, ಈಗಾಗಲೇ ನೋಂದಾಯಿಸಿಕೊAಡಿರುವ(ಡುಪ್ಲಿಕೇಟ್) ಹಾಗೂ ಇತರೆ ವರ್ಗಗಳಿಗೆ ಸೇರಿದ ಒಟ್ಟು ೨೩೭೦೯೩ ಎಎಸ್ಡಿಡಿಒ ಮತದಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು ೨೩೭೦೯೩ ಎಎಸ್ಡಿಡಿಒ ಮತದಾರರು: ಜಿಲ್ಲೆಯಾದ್ಯಂತ ಒಟ್ಟು ೩೩೦೨೧ ಮತದಾರರು ಗೈರು ಹಾಜರಿದ್ದು, ೧೩೪೨೬೪ ಮಂದಿ ಶಾಶ್ವತವಾಗಿ ಸ್ಥಳಾಂತರಗೊAಡಿದ್ದಾರೆ. ೪೯೦೮೪ ಮಂದಿ ಮೃತಪಟ್ಟಿದ್ದು, ೧೮೮೨೯ ಡುಪ್ಲಿಕೇಟ್ ಹಾಗೂ ೧೮೯೫ ಇತರೆ ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ೨೩೭೦೯೩ ಎಎಸ್ಡಿಡಿಒ ಮತದಾರರನ್ನು ಗುರುತಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಕ್ಷೇತ್ರಾವಾರು ಮತದಾರರ ಲೆಕ್ಕಾಚಾರ
ತಿಪಟೂರು: ೨೩೨ ಮತಗಟ್ಟೆಗಳಿದ್ದು, ೮೨೭೨೯ ಪುರುಷ, ೮೭೯೯೦ ಮಹಿಳೆ ಮತ್ತು ೨ ಇತರೆ ಸೇರಿದಂತೆ ಒಟ್ಟು ೧೭೦೭೨೧ ಮತದಾರರಿದ್ದಾರೆ.
ತುರುವೇಕೆರೆ: ೨೨೯ ಮತಗಟ್ಟೆಗಳಿದ್ದು, ೮೪೫೪೮ ಪುರುಷ, ೮೬೧೪೨ ಮಹಿಳೆ ಸೇರಿದಂತೆ ಒಟ್ಟು ೧೭೦೬೯೦ ಮತದಾರರಿದ್ದಾರೆ.
ಕುಣಿಗಲ್: ೨೭೦ ಮತಗಟ್ಟೆಗಳಿದ್ದು, ೯೩೫೯೯ ಪುರುಷ, ೯೩೬೩೧ ಮಹಿಳೆ ಸೇರಿದಂತೆ ಒಟ್ಟು ೧೮೭೨೩೦ ಮತದಾರರಿದ್ದಾರೆ.
ತುಮಕೂರು ನಗರ: ೨೪೭ ಮತಗಟ್ಟೆಗಳಿದ್ದು, ೯೫೯೮೦ ಪುರುಷ, ೧೦೩೧೯೩ ಮಹಿಳೆ ಮತ್ತು ೧೪ ಇತರೆ ಸೇರಿದಂತೆ ಒಟ್ಟು ೧೯೯೧೮೭ ಮತದಾರರಿದ್ದಾರೆ.
ತುಮಕೂರು ಗ್ರಾಮಾಂತರ: ೨೩೮ ಮತಗಟ್ಟೆಗಳಿದ್ದು, ೯೪೯೧೯ ಪುರುಷ, ೯೭೫೮೮ ಮಹಿಳೆ ಮತ್ತು ೫ ಇತರೆ ಸೇರಿದಂತೆ ಒಟ್ಟು ೧೯೨೫೧೨ ಮತದಾರರಿದ್ದಾರೆ.
ಕೊರಟಗೆರೆ: ೨೫೬ ಮತಗಟ್ಟೆಗಳಿದ್ದು, ೧೦೩೩೦೩ ಪುರುಷ, ೧೦೬೧೮೫ ಮಹಿಳೆ ಮತ್ತು ೭ ಇತರೆ ಸೇರಿದಂತೆ ಒಟ್ಟು ೨೦೯೪೯೫ ಮತದಾರರಿದ್ದಾರೆ.
ಗುಬ್ಬಿ: ೨೨೨ ಮತಗಟ್ಟೆಗಳಿದ್ದು, ೮೫೦೨೨ ಪುರುಷ, ೮೬೬೯೦ ಮಹಿಳೆ ಮತ್ತು ೬ ಇತರೆ ಸೇರಿದಂತೆ ಒಟ್ಟು ೧೭೧೭೧೮ ಮತದಾರರಿದ್ದಾರೆ.
ಶಿರಾ: ೨೮೨ ಮತಗಟ್ಟೆಗಳಿದ್ದು, ೧೦೫೯೩೧ ಪುರುಷ, ೧೦೫೪೩೬ ಮಹಿಳೆ ಮತ್ತು ೭ ಇತರೆ ಸೇರಿದಂತೆ ಒಟ್ಟು ೨೧೧೩೭೪ ಮತದಾರರಿದ್ದಾರೆ.
ಪಾವಗಡ: ೨೫೧ ಮತಗಟ್ಟೆಗಳಿದ್ದು, ೯೩೩೩೫ ಪುರುಷ, ೮೯೯೬೯ ಮಹಿಳೆ ಮತ್ತು ೮ ಇತರೆ ಸೇರಿದಂತೆ ಒಟ್ಟು ೧೮೩೩೧೨ ಮತದಾರರಿದ್ದಾರೆ.
ಮಧುಗಿರಿ: ೨೪೮ ಮತಗಟ್ಟೆಗಳಿದ್ದು, ೮೮೮೦೭ ಪುರುಷ, ೮೮೩೨೬ ಮಹಿಳೆ ಮತ್ತು ೫ ಇತರೆ ಸೇರಿದಂತೆ ಒಟ್ಟು ೧೭೭೧೩೮ ಮತದಾರರಿದ್ದಾರೆ.





