ಕೊರಟಗೆರೆ: ವಿಧಾನ ಸಭಾ ಕ್ಷೇತ್ರದ ಎಲ್ಲಾ ನಾಗರೀಕರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಿ, ಮಾಹಿತಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳುವಂತೆ ವಿನಂತಿಸಲಾಗಿದ್ದು, ಕ್ಷೇತ್ರದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ ೧೨ ಜನ ಹೆಚ್ಚುವರಿ ಸಹಾಯಕ ಮತದಾರರ ನೋದಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಚುನಾವಣಾ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಸಹಾಯಕ ಮತದಾರರ ನೋದಣಾಧಿಕಾರಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧೦,೫೫೯ ಮತದಾರರ ಪತ್ತೆಗಾಗಿ ಸಹಾಯಕ ಮತದಾರರ ನೋದಣಾಧಿಕಾರಿಗಳನ್ನ ನೇಮಿಸಿದ್ದು, ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ನೋಟಿಸ್ ನೀಡುವಿಕೆ ಹಾಗೂ ವಿಲೇವಾರಿ ಪ್ರಕ್ರಿಯೆ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೈ ಬಿಟ್ಟಿದ್ದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ನಿಗದಿತ ಅವಧಿಯೊಳಗೆ ಭರ್ತಿ ಮಾಡಿದ ಎನ್ಯೂಮರೇಷನ್ ನಮೂನೆಯನ್ನು ಸಲ್ಲಿಸಲು ಸಾಧ್ಯವಾಗದ ಮತದಾರರು ಆ. ೨೪ ರಿಂದ ಸೆ.೨೩ ರವರೆಗೆ ಹಕ್ಕು/ ಆಕ್ಷೇಪಣೆಗಳ ಅವಧಿಯಲ್ಲಿ ನಿಗದಿತ ಘೋಷಣಾ ಪತ್ರದೊಂದಿಗೆ ನಮೂನೆ-೬ ಅನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಬಹುದು ಎಂದರು.
ತಹಸೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಯಾವುದೇ ವ್ಯಕ್ತಿಯ ಹೆಸರು ಕರಡು ಮತದಾರರ ಪಟ್ಟಿಯಲ್ಲಿದ್ದು ವಿಚಾರಣೆ ನಂತರ ಮತದಾರರ ಪಟ್ಟಿಯಿಂದ ಕೈ ಬಿಟ್ಟಲ್ಲಿ, ಮತದಾರ ನೋಂದಣಾಧಿಕಾರಿಯ ಆದೇಶದ ದಿನಾಂಕದಿAದ ೧೫ ಸಂಬAಧಿತ ಜಿಲ್ಲಾ ದಂಡಾಧಿಕಾರಿಗಳು/ ಜಿಲ್ಲಾಧಿಕಾರಿಗಳ ಮುಂದೆ ಮೊದಲ ಮೇಲ್ಮನವಿಯನ್ನು ಸಲ್ಲಿಸಬಹುದು. ಮೊದಲ ಮೇಲ್ಮನವಿಯ ಆದೇಶದ ದಿನಾಂಕದಿAದ ೩೦ ದಿನಗಳೊಳಗೆ, ಮುಖ್ಯ ಚುನಾವಣಾಧಿಕಾರಿಯವರ ಮುಂದೆ ಎರಡನೇ ಮೇಲ್ಮನವಿಯನ್ನು ಸಲ್ಲಿಸಬಹುದು ಎಂದು ತಿಳಿಸಿದರು.
ನಮೂನೆ ೬- ಹೊಸ ಮತದಾರರಾಗಿ ನೋದಾಯಿಸಲು, ನಮೂನೆ ೬ಎ ಹೊಸ ಸಾಗರೋತ್ತರ ಮತದಾರರಾಗಿ ನೋಂದಾಯಿಸಲು, ನಮೂನೆ ೭ ಹೆಸರು ತೆಗೆದು ಹಾಕುವಿಕೆ, ನಮೂನೆ ೮-ನಿವಾಸ ಸ್ಥಳ ಬದಲಾವಣೆ/ ನಮೂದುಗಳ ತಿದ್ದುಪಡಿ/ ಎಪಿಕ್ ಬದಲಾವಣೆ/ ಪಿಡಬ್ಲ್ಯೂಡಿ ಗುರುತು ದಾಖಲಿಸುವುದು ಎಂದು ಹೇಳಿದರು.
ಕೊರಟಗೆರೆ ವಿಧಾಸಭಾ ಕ್ಷೇತ್ರಕ್ಕೆ ಒಟ್ಟು ೧೨ ಜನ ಹೆಚ್ಚುವರಿ ಸಹಾಯಕ ಮತದಾರರ ನೋದಣಾಧಿಕಾರಿಗಳನ್ನ ನೇಮಕ ಮಾಡಿದ್ದು, ಇಒ ಅಪೂರ್ವ ಅನಂತರಾಮು ಹೊಳವನಹಳ್ಳಿ, ಕ್ಯಾಮೇನಹಳ್ಳಿ, ಅಕ್ಕಿರಾಂಪುರ, ಮಾವತ್ತುರು, ತಾಪಂ ಯೋಜನಾಧಿಕಾರಿ ಅರಸಾಪುರ, ದೊಡ್ಡಸಾಗ್ಗೆರೆ, ಬೋಮ್ಮಲದೇವಿಪುರ, ಬೈಚಾಪುರ, ಕೃಷಿ ಅಧಿಕಾರಿ ಕಲ್ಲೇಶ್ ಪ್ರಸಾದ್, ವಡ್ಡಗೆರೆ, ತುಂಬಾಡಿ, ಹಂಚಿಹಳ್ಳಿ, ಬಿ,ಆರ್ಸಿ ರುದ್ರೇಶ್, ಪುರಸಭೆ ಕಾರ್ಯಲಯ, ಪಶು ಅಧಿಕಾರಿ ಸುಧಾಕರ್, ಎಲೆರಾಂಪುರ, ನೀಲಗೊಂಡನಹಳ್ಳಿ, ವಜ್ಜನಕುರಿಕೆ, ತೀತಾ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಅನಂತರಾಜು, ಪಾತಗಾನಹಳ್ಳಿ, ಚಿನ್ನಹಳ್ಳಿ, ಕೋಳಾಲ, ಸಿಡಿಪಿಒ ಗಂಗಾಧರ್, ಭೆಳದರ, ಓಬಳಪುರ, ಚಿಕ್ಕ ತೋಟ್ಲುಕೆರೆ, ಪಿಡಬ್ಯೂ÷್ಲಡಿ ಎಇಇ ದೀಪಕ್, ಕೋರಾ, ದೇವಲಾಪುರ, ಕೆಸ್ತೂರು, ರೇಷ್ಮೆ ಇಲಾಖೆಯ ರಾಜಣ್ಣ, ಬ್ಯಾಲ್ಯ, ಗೊಂದಿಹಳ್ಳಿ, ಕೊಡಗದಾಲ, ಜಿಪಂ ಎಇಇ ದಯಾನಂದ್, ಕೊಡ್ಲಾಪುರ, ಕೊಂಡವಾಡಿ, ಪುರವಾರ, ಸಮಾಜ ಕಲ್ಯಾಣಾಧಿಕಾರಿ ಯಮುನಾ ಥರಟಿ, ಬುಕ್ಕಪಟ್ಟಣ, ಕರಂಕೋಟೆ, ತೋವಿನಕೆರೆ, ತಾಪಂ ಲೆಕ್ಕಾಧಿಕಾರಿ ಶ್ರೀಧರ್ ತೋವಿನಕೆರೆ, ಬೂದಗವಿ ಗ್ರಾಪಂ ಗಳಲ್ಲಿ ಇವರುಗಳು ಬೆ.೧೦ ರಿಂದ ಸಂಜೆ ೪ ಗಂಟೆವರೆಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಸಮಿತಿಯ ಅಧ್ಯಕ್ಷ ವೆಂಕಟೇಶ್, ಅರವಿಂದ್, ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಲಕ್ಷö್ಮಣ್, ರಂಗಣ್ಣ, ಚುನಾವಣಾ ಶಿರಸ್ತೆದಾರ್ ಮಂಜುನಾಥ್, ಅರುಣ್ ಕುಮಾರ್ ಸೇರಿದಂತೆ ತಾಲೂಕು ಮಟ್ಟದ ೧೨ ಅಧಿಕಾರಿಗಳು ಇದ್ದರು.
(Visited 1 times, 1 visits today)





