BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ
  • ೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ
  • ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!
  • ೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ
  • ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ
  • ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ
  • ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬ ಆಚರಣೆ
  • ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!
news

ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬಾರದ ಮಳೆ, ಬಿತ್ತನೆ ಕುಂಠಿತ
By News Desk BenkiyabaleUpdated:August 27, 2026 5:48 pm

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತ ಲುಪಿವೆ. ಆರಂಭದಲ್ಲಿ ಪೂರ್ವ ಮುಂಗಾರು ಬಾರದೆ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು ಮತ್ತು ಅಲಸಂದೆ ಬಿತ್ತನೆ ಮಾಡಲಾಗದೆ ರೈತರು ಕೈಚೆಲ್ಲಿದ್ದರು. ಈಗ ಮುಂಗಾರು ಕೂಡ ಕೈಕೊಟ್ಟಿದ್ದು, ಬಿದ್ದ ಅಲ್ಪಸ್ವಲ್ಪ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಪ್ರಮಾಣ ತೀವ್ರ ಕುಸಿತ ಕಂಡಿದ್ದು, ತಾಲೂಕಿನಲ್ಲಿ ಭೀಕರ ಬರದ ಛಾಯೆ ಆವರಿಸಿದೆ.
ಮಳೆ ಪ್ರಮಾಣ: ತಾಲೂಕಿನ ವಾಡಿಕೆ ಮಳೆ ೩೮೨.೩ ಮಿ.ಮೀ. ಆಗಿದ್ದು ಚಿಕ್ಕನಾಯಕನಹಳ್ಳಿ ತಾಲೂಕಿನ ವಾಡಿಕೆ ಮಳೆ ೩೮೨.೩ ಮಿಮೀ ಆಗಿದ್ದು ೨೦೨೪ ನೇ ಸಾಲಿನಲ್ಲಿ ಆಗಸ್ಟ್ ಮಾಹೆಯವರೆವಿಗೆ ೬೯೩.೯ ಮಿ.ಮೀ ಮಳೆಯಾಗಿತ್ತು. ೨೦೨೫ ರಲ್ಲಿ ೫೧೬ ಮಿ.ಮೀ ಮಳೆಯಾಗಿತ್ತು. ಆದರೆ ೨೦೨೬ ರಲ್ಲಿ ಕೇವಲ ೨೫೩.೧೧ ಮಿ.ಮೀ ಮಳೆಯಾಗುವ ಮೂಲಕ ವಾಡಿಕೆಗಿಂತಲೂ ತೀವ್ರ ಕೊರತೆ ಎದ್ದು ಕಾಣುತ್ತಿದೆ.
ಬೀಜ ವಿತರಣೆಯಲ್ಲಿ ಭಾರೀ ಕುಸಿತ: ೨೦೨೪ ರಲ್ಲಿ ೧೪೯೨.೬ ಕ್ವಿಂಟಲ್ ಹಾಗೂ ೨೦೨೫ ರಲ್ಲಿ ೯೪೪.೯೫ ಕ್ವಿಂಟಲ್ ರಾಗಿ ಬಿತ್ತನೆ ಬೀಜ ವಿತರಿಸಲಾಗಿತ್ತು. ಆದರೆ ಪ್ರಸಕ್ತ ೨೦೨೬ ರ ಸಾಲಿನಲ್ಲಿ ಕೇವಲ ೩೧೮.೧೦ ಕ್ವಿಂಟಲ್ ಬಿತ್ತನೆ ಬೀಜ ಮಾತ್ರ ವಿತರಣೆಯಾಗಿದ್ದು, ವಾಡಿಕೆಗಿಂತ ೬೦೦ ರಿಂದ ೯೦೦ ಕ್ವಿಂಟಲ್‌ನಷ್ಟು ಇಳಿಕೆಯಾಗಿದೆ.
ಬಿತ್ತನೆ ವಿಸ್ತೀರ್ಣ ಪಾತಾಳಕ್ಕೆ: ೨೦೨೪ ರಲ್ಲಿ ೩೦,೬೯೨.೦೫ ಹೆಕ್ಟೇರ್ ಹಾಗೂ ೨೦೨೫ ರಲ್ಲಿ ೩೭,೧೪೦.೪೯ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿತ್ತು. ಆದರೆ ಈ ವರ್ಷ ಕೇವಲ ೪,೯೩೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಕಳೆದ ವರ್ಷಗಳಿಗೆ ಹೋಲಿಸಿದರೆ ಸುಮಾರು ೩೦ ಸಾವಿರ ಹೆಕ್ಟೇರ್ ಬಿತ್ತನೆ ಪ್ರಮಾಣ ಕುಸಿದಿದೆ.
ಮುಂದಿದೆ ಕುಡಿಯುವ ನೀರು, ಮೇವಿನ ಅಭಾವ!: ತಾಲೂಕಿನ ಕೃಷಿ ಮತ್ತು ಮಳೆ ಅಂಕಿ-ಅAಶಗಳನ್ನು ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. ಈ ಅಂಶಗಳು ತಾಲೂಕನ್ನು ಆವರಿಸುತ್ತಿರುವ ಭೀಕರ ಅಭಾವ ಪರಿಸ್ಥಿತಿಗೆ ಕನ್ನಡಿ ಹಿಡಿದಿವೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವುದು ಖಚಿತವಾಗಿದೆ.
ಅಷ್ಟೇ ಅಲ್ಲದೆ, ಜಾನುವಾರುಗಳಿಗೆ ಮೇವಿನ ತೀವ್ರ ಅಭಾವ ಎದುರಾಗಲಿದ್ದು, ಕೃಷಿ ಉಪಕಸುಬುಗಳಾದ ಹೈನುಗಾರಿಕೆ ಮತ್ತು ಕುರಿ ಸಾ ಸಾಕಣೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ರೈತ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ತಾಲೂಕನ್ನು ಬರ ಪೀಡಿತ ಎಂದು ಘೋಷಿಸಿ, ಅಗತ್ಯ ಪರಿಹಾರ ಮತ್ತು ಮೇವಿನ ಬ್ಯಾಂಕ್‌ಗಳನ್ನು ತೆರೆಯಬೇಕಿದೆ.

(Visited 1 times, 1 visits today)
Chikkanayakanahalli kannada news karnataka local news tumakur tumkur ಚಿಕ್ಕನಾಯಕನಹಳ್ಳಿ ಹುಳಿಯಾರು
Previous Article೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ
Next Article ೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ
News Desk Benkiyabale

Related Posts

ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ

August 27, 2026 5:52 pm news

೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ

August 27, 2026 5:50 pm news

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm news
ತಾಜಾ ಸುದ್ಧಿಗಳು
news

ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ

August 27, 2026 5:52 pm
news

೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ

August 27, 2026 5:50 pm
news

ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!

August 27, 2026 5:48 pm
news

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm
news

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm
news

ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ

August 26, 2026 4:11 pm
Our Youtube Channel
Our Picks

ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ

August 27, 2026 5:52 pm

೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ

August 27, 2026 5:50 pm

ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!

August 27, 2026 5:48 pm

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ

By News Desk BenkiyabaleAugust 27, 2026 5:52 pm

ತುಮಕೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ.ಬಿ.ವಿ ಅವರು ಜಿಲ್ಲಾ ಪಂಚಾಯತಿಯಲ್ಲಿAದು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್…

೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ

August 27, 2026 5:50 pm

ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!

August 27, 2026 5:48 pm

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.