BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ
  • ೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ
  • ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!
  • ೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ
  • ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ
  • ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ
  • ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬ ಆಚರಣೆ
  • ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ
news

೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ

ಕಾಮಗಾರಿ ಮುಗಿಯುವ ಮುನ್ನವೇ ಕಿತ್ತು ಹೋದ ಕೆಂಕೆರೆ-ಕ0ಪನಹಳ್ಳಿ ಕಾಂಕ್ರೀಟ್ ರಸ್ತೆ
By News Desk BenkiyabaleUpdated:August 27, 2026 5:50 pm

ಹುಳಿಯಾರು: ಗಣಿ ಬಾಧಿತ ಪ್ರದೇಶಗಳ ಪುನರುಜ್ಜೀವನಕ್ಕಾಗಿ ಮೀಸಲಿಟ್ಟ ಕೋಟ್ಯಂತರ ರೂಪಾಯಿ ಹಣ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಮಣ್ಣು ಪಾಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ, ಹುಳಿಯಾರು ಹೋಬಳಿಯಲ್ಲಿ ಸಿಇಪಿಎಂಐಝ್ಡ್  ಯೋಜನೆಯಡಿ ಬರೋಬ್ಬರಿ ೯ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆಂಕೆರೆ-ಗೌಡಗೆರೆ-ಕAಪನಹಳ್ಳಿ ಕಾಂಕ್ರೀಟ್ ರಸ್ತೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಆಗಲೇ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿ, ಕಳಪೆ ಕಾಮಗಾರಿಯ ನಗ್ನ ಸತ್ಯವನ್ನು ಸಾರುತ್ತಿದೆ.
ಯೋಜನೆಯ ವಿವರ ಮತ್ತು ಪ್ರಸ್ತುತ ಸ್ಥಿತಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ (ತುಮಕೂರು ಜಿಲ್ಲಾ ಪಂಚಾಯತ್) ವತಿಯಿಂದ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎನ್‌ಎಚ್-೨೩೪ ರಿಂದ ಎನ್‌ಎಚ್-೧೫೦ಎ ವರೆಗಿನ ಮಾರ್ಗ ಕಂಪನಹಳ್ಳಿ, ಗೌಡಗೆರೆ ಕೆಂಕೆರೆ ರಸ್ತೆ ಅಭಿವೃದ್ಧಿಗೆ ರೂ. ೯೦೦.೦೦ ಲಕ್ಷ (೯ ಕೋಟಿ) ಅಂದಾಜು ಮೊತ್ತ ನಿಗದಿಯಾಗಿದೆ. ಹೈದರಾಬಾದ್ ಮೂಲದ ಎಂ.ವೆAಕಟಕಿರಣ್ (ಉಷಾ ಕಿರಣ್ ಕನ್ಸ÷್ಟçಕ್ಷನ್ಸ್) ಎಂಬುವರು ಗುತ್ತಿಗೆ ಪಡೆದಿದ್ದು, ೧೬-೧೨-೨೦೨೪ ರಂದು ಕರಾರು ಆಗಿದ್ದು, ೧೧ ತಿಂಗಳ ಅವಧಿ ನೀಡಲಾಗಿದೆ. ಇಷ್ಟೊತ್ತಿಗೆ ಕಾಮಗಾರಿ ಮುಗಿಯಬೇಕಿದ್ದರೂ ಸಹ ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ವಾಸ್ತವ ಸ್ಥಿತಿ ಬೇರೆಯೇ ಇದೆ.
ಕಿತ್ತು ಹೋದ ರಸ್ತೆ, ಬಯಲಾದ ಕಳಪೆತನ (ಚಿತ್ರಗಳು ಸಾಕ್ಷಿ): ಕಾಮಗಾರಿ ಮುಗಿಯುವ ಮುನ್ನವೇ ರಸ್ತೆ ಕಿತ್ತು ಹೋಗುತ್ತಿದೆ. ಕಾಂಕ್ರೀಟ್ ಹಾಕಿದ ಕೆಲವೇ ದಿನಗಳಲ್ಲಿ ರಸ್ತೆ ಮೇಲ್ಭಾಗ ಕಿತ್ತು ಹೋಗಿ, ಒಳಗಿನ ಜಲ್ಲಿಕಲ್ಲುಗಳು ಸಂಪೂರ್ಣವಾಗಿ ಹೊರಬಂದಿವೆ. ಕೆಲವೆಡೆ ಮೇಲ್ಬದರದ ಕಾಂಕ್ರಿಟ್ ಎದ್ದು ಜಲ್ಲಿಕಲ್ಲುಗಳು ಕಾಣಿಸುತ್ತಿವೆ. ಹೊಸದಾಗಿ ನಿರ್ಮಿಸಿದ ರಸ್ತೆ ಹೀಗೆ ಕಿತ್ತು ಹೋಗುತ್ತಿರುವುದು ಕಳಪೆ ಗುಣಮಟ್ಟದ ಕಾಂಕ್ರೀಟ್ ಬಳಕೆಯಾಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅಲ್ಲದೆ ರಸ್ತೆಯ ಮಧ್ಯಭಾಗದಲ್ಲಿ ರೈತರು ಪೈಪ್ ಲೈನ್ ಅಳವಡಿಸಲು ರಸ್ತೆಯನ್ನು ಅಗೆದಿದ್ದಾರೆ. ಆದರೆ, ಪೈಪ್ ಲೈನ್ ಅಳವಡಿಸಿದ ನಂತರ ಪುನಃ ಆ ಜಾಗದಲ್ಲಿ ಕಾಂಕ್ರೀಟ್ ಹಾಕಿ ರಸ್ತೆಯನ್ನು ಸಮತಟ್ಟು ಮಾಡದೆ ಕೈಬಿಟ್ಟಿದ್ದಾರೆ. ಬಹುಮುಖ್ಯವಾಗಿ ರಸ್ತೆಯ ಏಳೆಂಟುಕಡೆ ಏರ್ ಕ್ರಾಕ್ ಬಂದಿದೆ.
ದ್ವಿಚಕ್ರ ವಾಹನ ಸವಾರರ ಪ್ರಮುಖ ಸಮಸ್ಯೆಗಳು: ಕಾಂಕ್ರೀಟ್ ಮೇಲ್ಪದರ ಕಿತ್ತು ಹೋಗಿ ಜಲ್ಲಿಕಲ್ಲುಗಳು ಸಡಿಲವಾಗಿ ರಸ್ತೆಯಲ್ಲೇ ಹರಡಿಕೊಂಡಿರುವುದರಿAದ, ಬ್ರೇಕ್ ಹಾಕಿದ ತಕ್ಷಣ ಬೈಕ್ ಹಾಗೂ ಸ್ಕೂಟರ್‌ಗಳು ಸ್ಕಿಡ್ ಆಗಿ ಸವಾರರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ಪೈಪ್‌ಲೈನ್‌ಗಾಗಿ ರಸ್ತೆ ಬಗೆದು ಹಾಗೆಯೇ ಬಿಟ್ಟಿರುವ ಹಾಗೂ ಏರ್ ಕ್ರಾಕ್ ಬಂದಿರುವ ಕಡೆಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಅಥವಾ ಸೂಚನಾ ಫಲಕಗಳಿಲ್ಲ. ರಾತ್ರಿ ವೇಳೆಯಲ್ಲಿ ಈ ತಗ್ಗುಗಳು ಕಣ್ಣಿಗೆ ಕಾಣದೆ ವಾಹನಗಳು ಸೀದಾ ತಗ್ಗಿಗೆ ಬಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಹರಿತವಾದ ಕಾಂಕ್ರೀಟ್ ಚೂರುಗಳು ಮತ್ತು ಎದ್ದಿರುವ ಕಲ್ಲುಗಳಿಂದಾಗಿ ದ್ವಿಚಕ್ರ ವಾಹನಗಳ ಟೈರ್‌ಗಳು ಕಟ್ ಆಗುವುದು, ಪಂಚರ್ ಆಗುವುದು ಮತ್ತು ವೀಲ್ ರಿಮ್‌ಗಳು ಬೆಂಡ್ ಆಗುವ ಸಮಸ್ಯೆ ಎದುರಾಗಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳ ಮೌನ ಸಮ್ಮತಿ?: ಇಷ್ಟೊಂದು ಬೃಹತ್ ಮೊತ್ತದ ಕಾಮಗಾರಿ ಕಣ್ಣೆದುರೇ ಕಳಪೆಯಾಗಿ ನಡೆಯುತ್ತಿದ್ದರೂ, ಸಂಬAಧಪಟ್ಟ ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗುತ್ತಿಗೆದಾರರು ಹೈದರಾಬಾದ್ ಮೂಲದವರಾಗಿದ್ದು, ಸ್ಥಳೀಯವಾಗಿ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ರಸ್ತೆ ಕಿತ್ತು ಹೋಗಿ ತಿಂಗಳುಗಳಾಗುತ್ತಿದ್ದರೂ ಗುತ್ತಿಗೆದಾರರು ಇತ್ತ ತಿರುಗಿಯೂ ನೋಡಿಲ್ಲ. ಇನ್ನು, ಈ ಭಾಗದ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕರ ಒತ್ತಾಯ: ಗಣಿ ಬಾಧಿತ ಪ್ರದೇಶಗಳ ಜನರ ಅನುಕೂಲಕ್ಕಾಗಿ ಬಳಸಬೇಕಾದ ಹಣ ಹೀಗೆ ಪೋಲಾಗುತ್ತಿರುವುದು ಖಂಡನೀಯ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ಕಳಪೆ ರಸ್ತೆ ಕಾಮಗಾರಿಯನ್ನು ತಪಾಸಣೆ ನಡೆಸಬೇಕು. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕಿತ್ತು ಹೋಗಿರುವ ರಸ್ತೆಯನ್ನು ತಕ್ಷಣವೇ ಗುಣಮಟ್ಟದ ಕಾಂಕ್ರೀಟ್ ಬಳಸಿ ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

(Visited 1 times, 1 visits today)
Chikkanayakanahalli kannada news karnataka local news tumakur tumkur ಚಿಕ್ಕನಾಯಕನಹಳ್ಳಿ ಹುಳಿಯಾರು
Previous Articleತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!
Next Article ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ
News Desk Benkiyabale

Related Posts

ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ

August 27, 2026 5:52 pm news

ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!

August 27, 2026 5:48 pm news

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm news
ತಾಜಾ ಸುದ್ಧಿಗಳು
news

ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ

August 27, 2026 5:52 pm
news

೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ

August 27, 2026 5:50 pm
news

ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!

August 27, 2026 5:48 pm
news

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm
news

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm
news

ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ

August 26, 2026 4:11 pm
Our Youtube Channel
Our Picks

ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ

August 27, 2026 5:52 pm

೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ

August 27, 2026 5:50 pm

ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!

August 27, 2026 5:48 pm

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆಯುವಂತೆ ಸಿಇಒ ಅಶ್ವಿಜ ಮನವಿ

By News Desk BenkiyabaleAugust 27, 2026 5:52 pm

ತುಮಕೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ.ಬಿ.ವಿ ಅವರು ಜಿಲ್ಲಾ ಪಂಚಾಯತಿಯಲ್ಲಿAದು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್…

೯ ಕೋಟಿ ಗಣಿ ಹಣ ನೀರಿನಲ್ಲಿ ಹೋಮ

August 27, 2026 5:50 pm

ತಾಲೂಕಿನಲ್ಲಿ ಈ ವರ್ಷ ಭೀಕರ ಬರದ ಛಾಯೆ ನಿಶ್ಚಿತ!

August 27, 2026 5:48 pm

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.