BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ
  • ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)
  • ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ
  • ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ
  • ಸ್ಲಂ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
  • ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ
  • ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಪ್ರಜಾಸೇವಾ ಅಭಿಯಾನದ ಉದ್ದೇಶ
  • ಗಣಿತಕ್ಕೆ ತಂತ್ರಜ್ಞಾನದ ಸ್ಪರ್ಶ; ಸಂಕೀರ್ಣ ಸಮಸ್ಯೆಗಳಿಗೂ ಸುಲಭ ಪರಿಹಾರ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ
news

ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ

By News Desk BenkiyabaleUpdated:September 24, 2026 6:18 pm

ಚಿಕ್ಕನಾಯಕನಹಳ್ಳಿ: ಸ್ವಾತಂತ್ರ÷್ಯ ಬಂದು ಏಳು ದಶಕಗಳು ಕಳೆದರೂ ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿದ್ದ ಅಲೆಮಾರಿ ದಕ್ಕಲಿಗ ಸಮುದಾಯದ ೯ ಬಡ ಕುಟುಂಬಗಳ ಮನೆಗಳಿಗೆ ಇದೀಗ ವಿದ್ಯುತ್ ಬೆಳಕು ತಲುಪಿದೆ.
ತಿಪಟೂರು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನರಸಿಂಹಮೂರ್ತಿ ಅವರು ಮಾನವೀಯತೆಯ ದೃಷ್ಟಿಯಿಂದ ವೈಯಕ್ತಿಕವಾಗಿ ನೆರವು ನೀಡುವ ಮೂಲಕ ಈ ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯವಾದ ವಿದ್ಯುತ್ ಸಾಮಗ್ರಿಗಳನ್ನು ಒದಗಿಸಿದ್ದಾರೆ.
ರಾಮಕ್ಕ, ದಿವಂಗತ ರಾಮಯ್ಯಕರ ಎಲ್ಲಮ್ಮ, ದಿವಂಗತ ನಾಗೇಂದ್ರಪ್ಪ, ಸುಜಾತ, ದಿವಂಗತ ಕುಮಾರ್, ಹನುಮಂತ, ದಿವಂಗತ ನಿಂಗಪ್ಪ, ನಿರ್ಮಲಾ (W/o ಶಾಂತರಾಜ್) ಹಾಗೂ ಜಾನಕಮ್ಮ (W/o ಗುರು) ಸೇರಿದಂತೆ ೯ ಕುಟುಂಬಗಳಿಗೆ ತಲಾ ವಿದ್ಯುತ್ ದೀಪಗಳು ಹಾಗೂ ಅಗತ್ಯ ಪೈಪ್‌ಗಳು, ಒಂದು ಡಿಪಿ, ಒಂದು ಮೀಟರ್ ಬೋರ್ಡ್ ಸೇರಿದಂತೆ ಸುಮಾರು ೧೦,೦೦೦ ಮೌಲ್ಯದ ವಿದ್ಯುತ್ ಸಾಮಗ್ರಿಗಳನ್ನು ಒದಗಿಸಲಾಗಿದೆ.
ಅಲೆಮಾರಿ ಸಮುದಾಯಗಳ ಪರಿಶಿಷ್ಟ ಒಕ್ಕೂಟ, ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ (ರಿ.) ಹಾಗೂ ಬಾಬು ಜಗಜೀವನ್ ರಾಮ್ ಸಂಸ್ಥೆ ವತಿಯಿಂದ ಈ ಕುಟುಂಬಗಳಿಗೆ ವಿದ್ಯುತ್ ಬೆಳಕು ಒದಗಿಸುವಂತೆ ಮನವಿ ಮಾಡಲಾಗಿತ್ತು. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಈ ಕುಟುಂಬಗಳು ಹಲವು ವರ್ಷಗಳಿಂದ ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದವು.
ಮನವಿಯನ್ನು ಪರಿಗಣಿಸಿದ ನರಸಿಂಹಮೂರ್ತಿ ಅವರು ಕುಟುಂಬಗಳ ಬಡತನ ಹಾಗೂ ಸಂಕಷ್ಟವನ್ನು ಸ್ವತಃ ಅರಿತು, ಮಾನವೀಯ ನೆಲೆಯಲ್ಲಿ ನೆರವು ನೀಡಲು ಮುಂದಾಗಿದ್ದಾರೆ. ಇದರಿಂದ ಇಷ್ಟು ವರ್ಷಗಳ ಕಾಲ ಸೂರ್ಯ-ಚಂದ್ರನ ಬೆಳಕಿನಲ್ಲೇ ಜೀವನ ನಡೆಸುತ್ತಿದ್ದ ಕುಟುಂಬಗಳು ಇದೀಗ ಆಧುನಿಕ ವಿದ್ಯುತ್ ಬೆಳಕಿನ ಜಗತ್ತಿಗೆ ಕಾಲಿಟ್ಟಂತಾಗಿದೆ.
ವಿಶೇಷವಾಗಿ, ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಸುಜಾತ ಅವರು ತಮ್ಮ ತಂಗಿ ಹಾಗೂ ತಮ್ಮನನ್ನು ಓದಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು, ಚೌಟರಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಕುಟುಂಬವನ್ನು ಮುನ್ನಡೆಸುತ್ತಿದ್ದ ಅವರಿಗೆ ವಿದ್ಯುತ್ ಸಂಪರ್ಕ ದೊರೆತಿರುವುದು ಸಂತಸ ತಂದಿದೆ.
ಈ ಕುರಿತು ಮಾತನಾಡಿದ ಕುಟುಂಬಸ್ಥರು, ನಮ್ಮ ಮನೆಗಳಿಗೆ ಬೆಳಕು ಬರುವುದು ಕನಸಿನಂತಾಗಿತ್ತು. ಇಷ್ಟು ವರ್ಷಗಳ ನಂತರ ನಮ್ಮ ಮನೆಗಳಲ್ಲಿ ವಿದ್ಯುತ್ ದೀಪ ಬೆಳಗಿರುವುದು ಕಣ್ಣಿಲ್ಲದವರಿಗೆ ಕಣ್ಣು ಬಂದAತಾಗಿದೆ. ನಮ್ಮ ಕಷ್ಟವನ್ನು ಅರ್ಥಮಾಡಿಕೊಂಡು ಸಹಾಯ ಮಾಡಿದ ನರಸಿಂಹಮೂರ್ತಿ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಸಂತಸ ವ್ಯಕ್ತಪಡಿಸಿದರು.
ಈ ನೆರವು ದೊರಕಲು ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ತೇಜಾ ಡಿ.ಎಸ್., ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಲೆಮಾರಿ ಡಿ. ಶಾಂತರಾಜು, ಸದಸ್ಯರಾದ ಗುರುಮೂರ್ತಿ, ಚಿದಾನಂದಮೂರ್ತಿ, ಚನ್ನಕೇಶವ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಕೆಂಚಪ್ಪ ಅವರು ಸಹಕರಿಸಿದ್ದಾರೆ.
ಅಲೆಮಾರಿ ದಕ್ಕಲಿಗ ಸಮುದಾಯದ ಕುಟುಂಬಗಳಿಗೆ ಬೆಳಕು ಒದಗಿಸುವ ಕಾರ್ಯದಲ್ಲಿ ಮಾನವೀಯತೆ ಮೆರೆದ ನರಸಿಂಹಮೂರ್ತಿ ಅವರಿಗೆ ದೇವರು ಉತ್ತಮ ಆರೋಗ್ಯ, ಐಶ್ವರ್ಯ ಮತ್ತು ಕೀರ್ತಿ ನೀಡಲಿ. ಇಂತಹ ಮಾನವೀಯ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಲಿ ಎಂದು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರು ಹಾರೈಸಿದರು.

(Visited 1 times, 1 visits today)
Chikkanayakanahalli kannada news karnataka local news tumakur tumkur Tumkur mahanagara palike tumkur news ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ
Next Article ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ
News Desk Benkiyabale

Related Posts

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

November 09, 2026 5:48 pm news

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm news

ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ

November 09, 2026 5:45 pm news
ತಾಜಾ ಸುದ್ಧಿಗಳು
news

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

November 09, 2026 5:48 pm
news

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm
news

ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ

November 09, 2026 5:45 pm
news

ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ

November 09, 2026 5:43 pm
news

ಸ್ಲಂ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

November 09, 2026 5:42 pm
news

ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ

November 07, 2026 5:44 pm
Our Youtube Channel
Our Picks

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

November 09, 2026 5:48 pm

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm

ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ

November 09, 2026 5:45 pm

ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ

November 09, 2026 5:43 pm

ಸ್ಲಂ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

November 09, 2026 5:42 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

By News Desk BenkiyabaleNovember 09, 2026 5:48 pm

ಹುಳಿಯಾರು: ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದಾದ್ಯಂತ ಭಾನುವಾರ ಮತ್ತು ಸೋಮವಾರ ಅಮಾವಾಸ್ಯೆಯ ಪ್ರಯುಕ್ತ ಲಕ್ಷ್ಮಿ ಪೂಜೆಯನ್ನು ಅತ್ಯಂತ ಸಡಗರ ಹಾಗೂ…

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm

ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ

November 09, 2026 5:45 pm

ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ

November 09, 2026 5:43 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.