ತುಮಕೂರು: ನಗರದ ಸೋಮೆಕಟ್ಟೆ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗ ದಳದ ೯ನೇ ವರ್ಷದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವ ಈ ತಿಂಗಳ ೨೬ರಂದು ಶನಿವಾರ ವಿಜೃಂಭಣೆಯಿAದ ನಡೆಯಲಿದೆ.
ಗಣೇಶೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಲಕ್ಷಿö್ಮÃಕಾಂತ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಈ ಬಾರಿ ನಗರದ ವಿವಿಧಗಣಪತಿ ಮಂಡಳಿಗಳ ೨೦ಕ್ಕೂ ಹೆಚ್ಚು ಗಣಪತಿಗಳು, ಆಯಾ ಸಮಿತಿ ಪದಾಧಿಕಾರಿಗಳು ಹಾಗೂ ಅಲ್ಲಿನ ಭಕ್ತ ಬಳಗವು ೨೬ರಂದು ನಡೆಯುವ ಮಹಾ ಗಣಪತಿಯ ಶೋಭಾಯಾತ್ರೆಯಲ್ಲಿ ಜೊತೆಗೂಡಲಿದ್ದು ವೈಭವದ ಸಾಮೂಹಿಕ ಗಣಪತಿ ವಿಸರ್ಜನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾ ಗಣಪತಿಯ ೧೩ ದಿನಗಳ ಕಾಲ ಪ್ರತಿದಿನ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಿತ್ಯ ನೂರಾರು ಭಕ್ತರು ಭೇಟಿ ನೀಡಿ ಭಕ್ತಿ ಸಲ್ಲಿಸುತ್ತಿದ್ದಾರೆ. ಕೊನೆಯ ದಿನವಾದ ೨೬ರಂದು ಬೆಳಿಗ್ಗೆ ೧೦.೩೦ಕ್ಕೆ ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿಯವರು ಗಣಪತಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡುವರು. ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸುವರು. ಮಂಗಳವಾದ್ಯ, ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಗಾರ್ಡನ್ ರಸ್ತೆಯ ಕೆಎನ್‌ಎಸ್ ಕಲ್ಯಾಣಿಯಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಲಾಗುವುದು ಎಂದರು.
ಹಿAದೂಗಳ ಪ್ರಮುಖ ಆಚರಣೆಗಳಲ್ಲೊಂದಾದ ಗಣೇಶೋತ್ಸವದ ಮೂಲಕ ಹಿಂದೂಗಳನ್ನು ಒಟ್ಟಾಗಿಸಬೇಕು ಎಂಬ ಆಶಯದಲ್ಲಿ ಈ ವರ್ಷ ವಿವಿಧ ಮಂಡಳಿಗಳ ಗಣೇಶಗಳನ್ನು ಒಟ್ಟಾಗಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲು ಉದ್ದೇಶಿಸಿಲಾಗಿದೆ. ಈಗಾಗಲೇ ತಮ್ಮ ಆಚರಣೆಗಳನ್ನು ಪೂರ್ಣಗೊಳಿಸಿರುವ ಗಣೇಶ ಮಂಡಳಿಯವರು ತಮ್ಮ ಗಣೆÃಶ ಮೂರ್ತಿಗಳನ್ನು ತಂದಿಟ್ಟಿದ್ದಾರೆ. ಈ ಗಣಪತಿಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ೨೬ರಂದು ಈ ಎಲ್ಲಾ ಗಣಪತಿಗಳ ಸಾಮೂಹಿಕ ವಿಸರ್ಜನೆ ಮಾಡಲಾಗುವುದು ಎಂದು ಡಾ.ಲಕ್ಷಿö್ಮÃಕಾಂತ್ ತಿಳಿಸಿದರು.
ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಮಾತನಾಡಿ, ಗಣಪತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಜಾನಪದ ಕಲಾ ತಂಡಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ. ಈ ಉತ್ಸವವನ್ನು ಊರಿನ ಹಬ್ಬವೆಂದು ತಿಳಿದು ನಗರದ ಹೆಚ್ಚು ಜನ ಭಾಗವಹಿಸಿ ಸಂಭ್ರಮಿಸಬೇಕು ಎಂದು ಮನವಿ ಮಾಡಿದರು.
ಅಲಂಕೃತ ಹೂವಿನ ಪಲ್ಲಕ್ಕಿಯಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಿ ನಗರದ ರಾಜ ಬೀದಿಯಲ್ಲಿ ನಂದಿಧ್ವಜ, ವೀರಗಾಸೆ, ಡಂಕವಾದ್ಯ, ತಮಟೆ ವಾದ್ಯ, ಆಧುನಿಕ ಡಿ.ಜೆ.ಸೆಟ್, ನಾಸಿಕ್ ಡೋಲು, ವಿದ್ಯುತ್ ದೀಪಾಲಂಕಾರ ಹಾಗೂ ಕಣ್ಮನ ತಣಿಸುವ ಬಾಣ-ಬಿರುಸುಗಳ ಮದ್ದಿನ ವೈಖರಿಯೊಂದಿಗೆ ಶೋಭಾಯಾತ್ರೆ ವಿಜೃಂಭಣೆಯಿAದ ನಡೆಯಲಿದೆ ಎಂದರು.
ಸ್ವಾಗತ ಸಮಿತಿ ಮುಖಂಡರಾದ ಜಿ.ಕೆ. ಶ್ರೀನಿವಾಸ್, ಟಿ.ಬಿ. ಹರೀಶ್, ವೆಂಕಟೇಶ ಜೋಯಿಸ್, ಸೋಮೆಕಟ್ಟೆ ಸೋಮಣ್ಣ, ಸ್ವಚ್ಛ ಮಂಜುನಾಥ್, ವೆಂಕಟೇಶಾಚಾರ್ ಮೊದಲಾದವರು ಪತ್ರಿಕಾ ಗೋಷ್ಠಿಯಲ್ಲಿದ್ದರು.
(Visited 1 times, 1 visits today)





