ತುಮಕೂರು: ತಿಪಟೂರು ತಾಲೂಕಿನ ಗ್ಯಾರಘಟ್ಟ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಣಕಾಸಿನ ಅಕ್ರಮಗಳು ಹಾಗೂ ವಿವಿಧ ಯೋಜನೆಗಳ ಅನುಷ್ಠಾನದಲ್ಲಿನ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಕರ್ಯಾಲಯದ ಮುಂದೆ ಯೂತ್ ಕಾಂಗ್ರೆಸ್ ಮುಖಂಡ ಸಿದ್ದು ಸೂರನಹಳ್ಳಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸಿದ್ದು ಸೂರನಹಳ್ಳಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಾಗೂ ವಿಕಲ ಚೇತನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಸರ್ಪಕವಾಗಿ ಬಳಕೆ ಮಾಡದಿರುವುದು ದಲಿತರಿಗೆ ಮಾಡಿದ ಅನ್ಯಾ. ಪಂಚಾಯತಿ ಅಧಿಕಾರಿಗಳು ದಲಿತ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
೨೦೨೧-೨೨ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು ೧,೫೨,೫೮,೦೧೩ ಪಾವತಿಯಾಗಿದ್ದು, ನಮೂನೆ ೫೩ರಲ್ಲಿ ಯೋಜನಾವಾರು ವೆಚ್ಚದ ವಿವರಗಳು ಲಭ್ಯವಿಲ್ಲದಿರುವ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ೧೪ನೇ ಮತ್ತು ೧೫ನೇ ಹಣಕಾಸು ಯೋಜನೆಗಳಡಿ ಮೀಸಲಿಟ್ಟ ಅನುದಾನದ ಬಳಕೆಯ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಗ್ರಂಥಾಲಯ ಕರ ಸೇರಿದಂತೆ ವಿವಿಧ ಉಪಕರಗಳ ವಸೂಲಿ, ಜಮಾ ಮತ್ತು ವಿನಿಯೋಗದ ವಿವರಗಳು, ಕಾಮಗಾರಿಗಳ ಮಂಜೂರಾತಿ, ಅಂದಾಜುಪಟ್ಟಿ, ಬಿಲ್ಗಳು, ಅಳತೆ ಪುಸ್ತಕಗಳು [ಎಂಬಿ] ಹಾಗೂ ಪಾವತಿ ದಾಖಲೆಗಳನ್ನು ಪರಿಶೀಲಿಸಬೇಕು. ಪಾವತಿಸಿದ ಹಣಕ್ಕೆ ಅನುಗುಣವಾಗಿ ಕಾಮಗಾರಿಗಳು ನೈಜವಾಗಿ ನಡೆದಿವೆಯೇ ಎಂಬುದನ್ನು ಸ್ಥಳ ಪರಿಶೀಲನೆ ಮೂಲಕ ಖಚಿತಪಡಿಸಿಕೊಳ್ಳಬೇಕು ಎಂದು ಸ್ಥಳದಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು.
ಸಾಮಗ್ರಿಗಳ ಖರೀದಿ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ರ್ನಾಟಕ ಸರ್ವಜನಿಕ ಸಂಗ್ರಹಣೆಗಳಲ್ಲಿ ಪಾರರ್ಶಕತೆ ಕಾಯ್ದೆ [ಕೆಐಟಿಟಿಪಿ] ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ತನಿಖೆ ಮಾಡಬೇಕು. ಪಂಚಾಯಿತಿಯ ಬ್ಯಾಂಕ್ ಖಾತೆ, ನಗದು ಪುಸ್ತಕ, ಲೆಡ್ಜರ್, ವೋಚರ್ಗಳು ಹಾಗೂ ವರ್ಷಿಕ ಲೆಕ್ಕಪತ್ರಗಳಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಬೇಕು ಎಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಮನವಿ ಮಾಡಿದರು.
ನರೇಗಾ ಯೋಜನೆಯ ಮಸ್ಟರ್ರೋಲ್ಗಳಲ್ಲಿನ ಕರ್ಮಿಕರ ಹೆಸರು, ಹಾಜರಾತಿ, ಕೆಲಸದ ದಿನಗಳು ಮತ್ತು ಕೂಲಿ ಪಾವತಿಯ ವಿವರಗಳನ್ನು ಪರಿಶೀಲಿಸಬೇಕು. ೧೪ನೇ ಮತ್ತು ೧೫ನೇ ಹಣಕಾಸು ಯೋಜನೆಗಳಡಿ ನೀರು ಸರಬರಾಜು ಹಾಗೂ ಬೀದಿದೀಪಗಳ ಸಾಮಗ್ರಿಗಳ ಖರೀದಿಯಲ್ಲಿ ಕಂಡುಬಂದ ನ್ಯೂನತೆಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕರ್ಯನರ್ವಾಹಕ ಅಧಿಕಾರಿ [ಇಒ] ಸುರ್ಶನ್ ರವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಪಾರರ್ಶಕವಾಗಿ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂರ್ಭದಲ್ಲಿ ಗ್ಯಾರಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ಯಾರಘಟ್ಟ, ಸೂರನಹಳ್ಳಿ, ಲಕ್ಕಿಹಳ್ಳಿ, ಬೋವಿಕಾಲೋನಿ, ರಟ್ಟೆನಹಳ್ಳಿ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.
(Visited 1 times, 1 visits today)





