ತುಮಕೂರು: ಕಲ್ಪತರು ಹವಮಾನ ಕ್ರಿಯಾ ಸಮಿತಿಯ ಒಕ್ಕೂಟವು ರೈತರ ಪರ ನಿಂತು ರೈತರ ಜೀವನದ ಸುಧಾರಣೆಗೆ ಅಡಿಪಾಯ ಹಾಕಿದೆ ಹಾಗೂ ಒಕ್ಕೂಟದ ಸುಸ್ಥಿರತೆಗೆ ರೈತರೇ ಆಧಾರವೆಂದು ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ಅಸರ್ ಸಂಸ್ಥೆಯ ಕರ್ನಾಟಕದ ಕಾರ್ಯ ವ್ಯವಸ್ಥಾಪಕರಾದ ಸುದೀಪ್ ರವರು ಅಭಿಪ್ರಾಯಪಟ್ಟರು.
ಅಸರ್ ಹಾಗೂ ಗ್ರಾಮ ವಿಕಾಸ ಸಂಸ್ಥೆಯ ಮಾರ್ಗದರ್ಶನದಲ್ಲಿ ಹವಾಮಾನ ಕ್ರಿಯಾ ಆಂದೋಲನ ಕರ್ನಾಟಕ ದ ವತಿಯಿಂದ ರಚಿಸಲಾಗಿರುವ ಕಲ್ಪತರು ಹವಾಮಾನ ಕ್ರಿಯಾ ಸಮಿತಿಗಳ ಒಕ್ಕೂಟ ದ ವತಿಯಿಂದ ಸೋಂಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹವಾಮಾನ ಕ್ರಿಯೆಯಲ್ಲಿ ಮಣ್ಣು ಸಂರಕ್ಷಣೆ ಹಾಗೂ ಸಮಗ್ರ ಕೃಷಿ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಹಾಗೂ ಕೃಷಿಯ ಜೀವಾಳವಾದ ಮಣ್ಣು ಮುಂದಿನ ಪೀಳಿಗೆಗೂ ಅಗತ್ಯವಿದೆ. ಮಣ್ಣಿನ ಸಂರಕ್ಷಣೆ ಕೃಷಿ ಯ ಉಳಿವಿಗೆ ಅತ್ಯಗತ್ಯವಾಗಿದೆ ಎಂದು ತಿಳಿಸುತ . ನಮ್ಮ ಮುಂದಿನ ಪೀಳಿಗೆಗಾಗಿ ನಮ್ಮ ಹಳ್ಳಿಗಳನ್ನು ಉಳಿಸಲು ಮುಂದಾಗಬೇಕು ಈ ನಿಟ್ಟಿನಲ್ಲಿ ನಮ್ಮ ಗುರಿ ಸ್ಪಷ್ಟವಾಗಿದೆ ಎಂದು ಸಭೆಯಲ್ಲಿ ತಮ್ಮ ನುಡಿಗಳನ್ನು ಹಂಚಿಕೊAಡರು.
ಸಮಗ್ರ ಕೃಷಿ ಮತ್ತು ವೈಜ್ಞಾನಿಕ ಕೃಷಿ ಹಾಗೂ ಬೀಜಾಮೃತ ಇವೆಲ್ಲವೂ ಸಹ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಒಂದು ಭಾಗವಾಗಿ ಕೆಲಸ ನಿರ್ವಹಿಸುತ್ತವೆ ಇವೆಲ್ಲವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವ ರೈತನ ಕುಟುಂಬವು ತನ್ನ ಕುಟುಂಬವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವುದಲ್ಲದೆ ಇಡೀ ದೇಶದ ಆರೋಗ್ಯವನ್ನು ಕಾಪಾಡಿಕೊಳ್ಳಬಲ್ಲ ಎಂದು ಹಾಜರಿದ್ದ ನಿವೃತ್ತ ಕೃಷಿ ಅಧಿಕಾರಿಗಳಾದ ರಾಜಶೇಖರ್ ರವರು ತಮ್ಮನುಡಿಯನ್ನು ಹಂಚಿಕೊAಡರು.
ಅAತಿಮ ಘಟ್ಟದಲ್ಲಿ ರೈತನು ದೇವರ ಸಮಾನವೆಂದು ಆತನಿಗೆ ಆ ಸ್ಥಾನ ಮಾನ ಸೂಕ್ತವೆಂದು ಮತ್ತು ನಾವು ನೀವೆಲ್ಲರೂ ಆ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಆರೋಗ್ಯ ತ ಸಮಾಜ ಕಟ್ಟಬೇಕೆಂದರೆ ನಮ್ಮ ಮಕ್ಕಳ ಮುಂದಿನ ಭವಿಷ್ಯವೂ ಉಳಿಸಬೇಕೆಂದರೆ ನಾವು ಇಂದಿನಿAದಲೇ ಸಾವಯವ ಕೃಷಿಯನ್ನು ಬೆಂಬಲಿಸಬೇಕಾಗಿದೆ ಹಾಗೂ ಈ ಕ್ರಿಯ ಬಕ್ಕೂಟವು ಅದರ ಪ್ರಮುಖ ಪಾತ್ರವನ್ನು ನಿರ್ವಹಿಸಲಿದೆ ಎಂದು ಕಲ್ಪತರು ಹವಮಾನ ಕ್ರಿಯಾ ಸಮಿತಿ ಒಕ್ಕೂಟದ ಅಧ್ಯಕ್ಷರಾದ ಚನ್ನವೀರ ಆರಾಧ್ಯರು ಮಾತನಾಡಿದರು. ಹಾಗೂ ಇದೇ ಸಂದರ್ಭದಲ್ಲಿ ಅಧಿಕೃತವಾಗಿ ಕಲ್ಪತರು ಒಕ್ಕೂಟದ ಉಪಾಧ್ಯಕ್ಷರಾಗಿ ಬಾಲಸುಬ್ರಹ್ಮಣ್ಯ ರೆಡ್ಡಿ, ಮಾಲಾಶ್ರೀ, ಲಕ್ಷಿ÷್ಮÃ ನರಸಿಂಹಮೂರ್ತಿ, ಅಶೋಕ್ ಕುಮಾರ್, ವೆಂಕಟೇಶ್, ಹೇಮಲತಾ, ಚಂದ್ರಶೇಖರ್ ರವರನ್ನು ಮತ್ತು ಕಾರ್ಯದರ್ಶಿಗಳಾಗಿ ಗೋವಿಂದರಾಜು, ತಿಮ್ಮ ರೆಡ್ಡಿ, ಬಾಲಕೃಷ್ಣ, ನಾಗರಾಜು, ಕೆಂಪಣ್ಣ, ಗಿರಿಯಮ್ಮ ರವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು.
ಹವಾಮಾನ ಕ್ರಿಯಾ ಆಂದೋಲನದ ತುಮಕೂರು ಜಿಲ್ಲಾ ಸಂಯೋಜಕ ರಾದ ರವಿಕುಮಾರ್ ಕೆ ಎನ್ರವರು ಕೊರಟಗೆರೆ ತಾಲೂಕು ಕಲ್ಪತರು ಹವಾಮಾನ ಕ್ರಿಯಾ ಸಮಿತಿಯ ಪದಾಧಿಕಾರಿಗಳು, ಕೊರಟಗೆರೆ ತಾಲೂಕಿನ ಕಲ್ಪತರು ಹವಮಾನ ಕ್ರಿಯಾ ಸಮಿತಿಯ ಒಕ್ಕೂಟದ ಜಂಟಿ ಕಾರ್ಯದರ್ಶಿಗಳಾದ ಶಿಲ್ಪಾ, ಲಕ್ಷಿ÷್ಮ, ಅಲುವೇಲಮ್ಮ, ಮಂಜುಳಾ, ಶಾಂತಮ್ಮ, ರಾಮಕ್ಕ, ಜಯಲಕ್ಷಿ÷್ಮ, ಅನಿತಾ, ನಾಗಲಕ್ಷಿ÷್ಮ ಮತ್ತು ರೈತ ಸಂಘದ ಅಧ್ಯಕ್ಷರಾದ ಕೆಂಪರಾಜು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ೮೦ ಕ್ಕೂ ಹೆಚ್ಚಿನ ಕ್ರಿಯಾ ಸಮಿತಿಯ ಸದಸ್ಯರುಗಳಾದ ರೈತರು ಯುವಕರು ಹಾಗೂ ಮಹಿಳೆಯರು ಭಾಗವಹಿಸಿದರು.
(Visited 1 times, 1 visits today)





