ತುಮಕೂರು: ನಗರದ ಸುತ್ತಮುತ್ತಲಿನ ವರ್ತುಲ ರಸ್ತೆಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ-೪೮ರ ರಂಗಾಪುರದಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಗಳು ಕಳೆದ ನಾಲ್ಕೈದು ರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿವೆ. ಇದರಿಂದ ಪ್ರತಿದಿನ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಗಂಟೆಗಟ್ಟಲೆ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಂಬAಧಪಟ್ಟ ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಹಾಗೂ ಅಧಿಕಾರಿಗಳು ತರ್ತು ಕ್ರಮ ಕೈಗೊಳ್ಳದಿರುವುದನ್ನು ಸಿಪಿಐ(ಎಂ) ಕಟುವಾಗಿ ಟೀಕಿಸಿ ಖಂಡಿಸಿದೆ.
ಮಧುಗಿರಿ-ಪಾವಗಡ ರಸ್ತೆಯ ತರಕಾರಿ ಮಾರುಕಟ್ಟೆ ಸಮೀಪದ ರಸ್ತೆ ಗುಂಡಿಗಳಿAದ ವಾಹನ ಸವಾರರು ಹಾಗೂ ಸರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದುರವಸ್ಥೆಯಿಂದ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಹಾಗೂ ಅಂಗವೈಕಲ್ಯ ಉಂಟಾಗುವ ಅಪಾಯವಿದೆ. ಸಮರ್ಪಕ ಬೀದಿದೀಪಗಳು ಹಾಗೂ ಚರಂಡಿ ವ್ಯವ ಸ್ಥೆಯ ಕೊರತೆಯೂ ಜನರ ಸಂಕಷ್ಟವನ್ನು ಹೆಚ್ಚಿಸಿದೆ.
ಅರ್ಧಕ್ಕೆ ನಿಂತ ವೈಟ್ ಟ್ಯಾಪಿಂಗ್ ಕೆಲಸ; ತಪ್ಪದ ಜನತೆ ಕಷ್ಟ: ಕೇಂದ್ರ ಸಚಿವರು ಅಬ್ಬರದ ಪ್ರಚಾರದ ಮೂಲಕ ಆರಂಭಿಸಿದ ಮಲ್ಲಸಂದ್ರ-ಬಡವಾಡಿ ರಸ್ತೆ ಕಾಮಗಾರಿಯು ಅರ್ಧಕ್ಕೆ ನಿಂತಿರುವುದು ವಾಹನ ಸವಾರರ ಸಂಕಷ್ಟ ಹೆಚ್ಚಿಸಿದೆ. ಈ ಕೆಲಸವನ್ನು ಆರಂಭಿಸಿ ಅರ್ಧಕ್ಕೆ ನಿಲ್ಲಿಸಲಾಗಿದ್ದೇಕೆ ಎಂದು ಸಿಪಿಐ(ಎಂ) ಪ್ರಶ್ನಿಸಿದ್ದು, ಕೆಲಸವನ್ನು ತ್ವರಿತಗತಿಯಲ್ಲಿ ಮುಗಿಸಿ ಜನತೆಯ ಸಂಕಷ್ಟ ಪರಿಹರಿಸುವಂತೆ ಒತ್ತಾಯಿಸಿದೆ.
ಭಾರತ ಕಮ್ಯುನಿಸ್ಟ್ ಪಕ್ಷ ಮಾಕ್ಸವಾಧಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯು ಕಾಂ. ಬಿ. ಉಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯು ನಗರದ ಸಮಸ್ಯೆಗಳನ್ನು ಚರ್ಚಿಸಿ ತಿರ್ಮಾನಿಸಿತು. ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಂ. ಸೈಯದ್ ಮುಜೀಬ್, ಕಾಂ. ಕಮಲ, ಕಾಂ. ಲೋಕೇಶ್ ಉಪಸ್ಥಿತರಿದ್ದರು.
ಸರ್ವಜನಿಕರು ಮತ್ತು ಸಿಪಿಐ(ಎಂ) ಪಕ್ಷವು ಹಲವು ಬಾರಿ ಪ್ರತಿಭಟನೆ ಹಾಗೂ ಮನವಿಗಳ ಮೂಲಕ ಗಮನ ಸೆಳೆದಿದ್ದರೂ ಶಾಶ್ವತ ಪರಿಹಾರ ದೊರಕಿಲ್ಲ. ಸಂಬAಧಪಟ್ಟ ಕೇಂದ್ರ ಸಚಿವರು, ಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಕಾಮಗಾರಿಗಳ ವಿಳಂಬಕ್ಕೆ ಕಾರಣಗಳನ್ನು ಬಹಿರಂಗಪಡಿಸಿ ಹೊಣೆಗಾರಿಕೆ ನಿಗದಿಪಡಿಸಬೇಕು. ಉತ್ಸವಗಳ ಸೌಂದರ್ಯೀಕರಣಕ್ಕಿAತ ಜನರ ಜೀವ, ಸಂಚಾರ ಮತ್ತು ಸುರಕ್ಷತೆಗೆ ಸಂಬAಧಿಸಿದ ಮೂಲಸೌರ್ಯಗಳಿಗೆ ಆದ್ಯತೆ ನೀಡಬೇಕೆಂದು ಜಿಲ್ಲಾಡಳಿತವನ್ನು ಸಿಪಿಐ(ಎಂ) ಒತ್ತಾಯಿಸಿದೆ.
(Visited 1 times, 1 visits today)





