ತುಮಕೂರು: ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬು ಕಾಯ್ದೆಯ ವಿರುದ್ದ ದಿಟ್ಟತನದಿಂದ ಹೋರಾಡಿ, ಸೆರೆವಾಸದಲ್ಲಿ ರುವಾಗಲೇ ವೀರ ಮರಣವನ್ನಪ್ಪಿದ ಕಿತ್ತೂರು ರಾಣಿ ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಅವರ ೨೦೨ನೇ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ತನ್ನ ಗಂಡ ಮಲ್ಲಸರ್ಜ ದೇಸಾಯಿಯ ಮರಣದ ನಂತರ ಕಿತ್ತೂರಿನ ರಾಜ್ಯಭಾರ ವಹಿಸಿಕೊಂಡ ಚನ್ನಮ್ಮ,ಬ್ರಿಟಿಷರು ಕಿತ್ತೂರು ಸೇರಿದಂತೆ ಭಾರತದ ಉಳಿದ ಸಂಸ್ಥಾನಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿ ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆಯ ವಿರುದ್ದ ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ ಧೈರ್ಯ,ಶೌರ್ಯವಂತ ಮಹಿಳೆ ಎಂದರು.
ಭಾರತಕ್ಕೆ ತನ್ನದೇ ಆದ ಇತಿಹಾಸ, ಸಂಸ್ಕöÈತಿ, ಪರಂಪರೆ, ಸಮಾಜ ಎಲ್ಲವೂ ಇದೆ. ಸಿಂಧೂ ಕಣಿಮೆಯ ನಾಗರಿಕತೆಯಿಂದ ಹಿಡಿದು ಇಂದಿನವರೆಗೆ ಅನೇಕ ಜನ ಮಹಿಳೆಯರು ನೆಲ, ಜಲ, ದೇಶಕ್ಕಾಗಿ ಹೋರಾಟ ನಡೆಸಿದ್ದು, ಅಂತಹವರ ಸಾಲಿನಲ್ಲಿ ಅಗ್ರಗಣ್ಯರು ಕಿತ್ತೂರು ರಾಣಿ ಚನ್ನಮ್ಮ, ಕಾರ್ನವಾಲಿಸನ ಚಾರ್ಟರ್ ಪದ್ದತಿ, ಡಾಲ್ಹೌಸಿಯ ದತ್ತು ಮಕ್ಕಳಿಗೆ ಹಕ್ಕಿಲ್ಲ ಇವುಗಳ ವಿರುದ್ದ ದ್ವನಿ ಎತ್ತಿನ ಚನ್ನಮ್ಮ ತನ್ನ ಸಹೋದರ ಸಂಬAಧಿಯ ಮಗ ಶಿವಲಿಂಗ ಸರ್ಜಾನನ್ನು ದತ್ತು ಪಡೆದು, ಕಿತ್ತೂರು ಸಿಂಹಾಸನದ ಮೇಲೆ ಕೂರಿಸುವ ಮೂಲಕ ಬ್ರಿಟಿಷರ್ ಕಾಯ್ದೆಗೆ ಶೆಡ್ಡು ಹೊಡದವರು.ಕಿತ್ತೂರಿನ ರಕ್ಷಣೆಗಾಗಿ ತನ್ನ ಪಾಳೆಪಟ್ಟಿನಲ್ಲಿದ್ದ ಮಹಿಳೆಯರು, ಯುವಜನರಿಗೆ ಕತ್ತಿವರಸೆ, ಕುದುರೆಸವಾರಿ ಮತ್ತಿತರರ ಯುದ್ದ ಕಲೆಗಳನ್ನು ಕಲಿಸಿ, ಅವರ ಮೂಲಕ ಸಾಮ್ರಾಜ್ಯದ ರಕ್ಷಣೆಗೆ ಮುಂದಾದವರು.ಇವರ ಹೆಸರಿನಲ್ಲಿ ರಾಜ್ಯ ಸರಕಾರ ವಾರಗಳ ಕಾಲ ಕಿತ್ತೂರು ಉತ್ಸವ ನಡೆಸುವ ಮೂಲಕ ಅವರ ನೆನಪನ್ನು ಮಾಡುತ್ತಿದೆ. ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ನಾವು ಇಂದು ಸರಳವಾಗಿ ಆಚರಿಸುತ್ತಿದ್ದೇವೆ ಎಂದು ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಇಂದು ಅನೇಕ ಕಾನೂನು ಕಟ್ಟಲೆಗಳಿದ್ದಾಗ್ಯೂ ಮಹಿಳೆಯರ ಸಂಕಷ್ಟಕ್ಕೆ ಒಳಗಾಗಲೇ ಇದ್ದಾರೆ.ಆದರೆ ಇಂತಹ ಯಾವ ಸೌಲಭ್ಯಗಳು ಇಲ್ಲದ ಸಮಯದಲ್ಲಿಯೂ ತಮ್ಮ ಹಕ್ಕುಗಳಿಗಾಗಿ,ತನ್ನ ಪಾಳೆಪಟ್ಟಿನ ಜನಸಾಮಾನ್ಯರ ಹಕ್ಕುಗಳಾಗಿ ಹೋರಾಟ ಮಾಡಿ, ಬ್ರಿಟಿಷರಿಂದ ಬಂಧಿಸಲ್ಪಟ್ಟು, ಜೈಲಿನಲ್ಲಿಯೇ ವೀರ ಮರಣ ಹೊಂದುವ ಮೂಲಕ ತನ್ನ ಕೊನೆಯ ಉಸಿರು ಇರುವವರೆಗೂ ಬ್ರಿಟಿಷರ ವಿರುದ್ದ ಹೋರಾಡಿದ ಮಹಿಳೆ. ಅವರ ಆತ್ಮಗೌರವ, ತ್ಯಾಗ ಬಲಿದಾನಗಳು ಇಂದಿನ ಮಹಿಳೆಯರಿಗೆ ಆದರ್ಶ ಎಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.
ಮಹಿಳಾ ಹೋರಾಟಗಾರರಾದ ಡಾ.ಶೈಲಾ ನಾಗರಾಜು ಮಾತನಾಡಿ, ಭಾರತದ ಮೊಟ್ಟ ಮೊದಲ ಸ್ವಾತಂತ್ರ ಹೋರಾಟಗಾರತಿ ಕಿತ್ತೂರು ರಾಣಿ ಚನ್ನಮ್ಮ, ಅವರ ಆತ್ಮವಿಶ್ವಾಸ, ಧೈರ್ಯ, ಶೌರ್ಯ, ಸಾಹಸ ಮಹಿಳೆಯರಿಗೆ ಮಾದರಿಯಾಗಿದೆ.ಅವರಿಂದ ದೇಶ ನಿಷ್ಠೆ, ದೇಶಭಕ್ತಿ, ಹೋರಾಟದ ಮನೋಭಾವನೆಯನ್ನು ನಾವೆಲ್ಲರೂ ಕಲಿಯಬೇಕಾಗಿದೆ.ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾಯ್ದೆಯ ವಿರುದ್ದ ಏಕಾಂಗಿಯಾಗಿ ಹೋರಾಡಿದ ಧೀರ ಮಹಿಳೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು ಮರ್ಜಿ, ಮೇಲ್ವಿಚಾರಕರಾದ ಸುರೇಶಕುಮಾರ್,ಚುನಾವಣಾ ತಹಶೀಲ್ದಾರ್ ವೀಣಾ,ಪಿಯು ಡಿಡಿ ತ್ರಿವೇಣಿ, ಮುಖಂಡರಾದ ಲಲಿತ ಮಲ್ಲಪ್ಪ, ತಹೇರಾ ಕುಲ್ಸುಮ್, ಮಂಜುಳ, ದೊಂಬರನಹಳ್ಳಿ ನಾಗರಾಜು ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
(Visited 1 times, 1 visits today)





