ಹುಳಿಯಾರು: ಹುಳಿಯಾರು ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿರುವ ರಾಷ್ಟಿçÃಯ ಹೆದ್ದಾರಿಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ವಾಹನ ಸವಾರರು ಪ್ರತಿದಿನ ನರಕಯಾತನೆ ಅನುಬವಿಸುವಂತಾಗಿದೆ. ಹೆದ್ದಾರಿಯ ಡಾಂಬರು ಕಿತ್ತುಬಂದು, ಬಟ್ಟೆ ಸುತ್ತಿಕೊಂಡAತೆ ಸುಕ್ಕುಗಟ್ಟಿದ್ದು, ಈ ಮಾರ್ಗದಲ್ಲಿ ಸಂಚರಿಸುವುದು ಅಕ್ಷರಶಃ ಸಾವಿನೊಂದಿಗೆ ಆಟವಾಡಿದಂತಾಗಿದೆ.
ರಾಷ್ಟಿçÃಯ ಹೆದ್ದಾರಿಗಳಲ್ಲಿ ವಾಹನಗಳು ವೇಗವಾಗಿ ಸಂಚರಿಸಲು ಅವಕಾಶವಿರುತ್ತದೆ. ಆದರೆ, ಹುಳಿಯಾರು ಎಪಿಎಂಸಿ ಗೇಟ್ ಬಳಿ ರಸ್ತೆಯ ಮೇಲ್ಮೆöÊ ಸಂಪೂರ್ಣವಾಗಿ ಏರಿಳಿತಗಳಿಂದ ಕೂಡಿದ್ದು, ಅಲೆಯೋಪಾದಿಯಲ್ಲಿ ಸುಕ್ಕುಗಟ್ಟಿದೆ. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವಾಗ ನಿಯಂತ್ರಣ ಕಳೆದುಕೊಂಡು ಬಿದ್ದು ಗಾಯಗೊಳ್ಳುವುದು ಖಚಿತ ಎಂದು ಸ್ಥಳೀಯರು ಹಾಗೂ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಬೈಕ್ನಲ್ಲಿ ಬರುವುದು ಎಂದರೆ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಿದ ಹಾಗೆ. ರಸ್ತೆಯ ಈ ಸುಕ್ಕುಗಟ್ಟಿದ ಅವ್ಯವಸ್ಥೆಯಿಂದಾಗಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳು ಮತ್ತು ಆಟೋಗಳು ನಿಯಂತ್ರಣ ತಪ್ಪಿ ಬೀಳುತ್ತಿವೆ. ದೊಡ್ಡಮಟ್ಟದ ದುರ್ಘಟನೆ ಸಂಭವಿಸುವ ಮುನ್ನ ಸಂಬAಧಪಟ್ಟವರು ಎಚ್ಚೆತ್ತುಕೊಳ್ಳಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ. ಕೋಟಿಗಟ್ಟಲೆ ಅನುದಾನ ಬಳಸಿ ನಿರ್ಮಿಸಲಾಗುವ ರಾಷ್ಟಿçÃಯ ಹೆದ್ದಾರಿಗಳು ಕೇವಲ ಕೆಲವೇ ತಿಂಗಳುಗಳಲ್ಲಿ ಈ ರೀತಿ ಹದೆಗೆಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ÷್ಯವೇ ಈ ದುಸ್ಥಿತಿಗೆ ನೇರ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರತಿದಿನ ನೂರಾರು ಶಾಲಾ ವಾಹನಗಳು, ಸರಕು ಸಾಗಣೆ ಲಾರಿಗಳು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುವ ಈ ಪ್ರಮುಖ ರಸ್ತೆಯನ್ನು ದುರಸ್ಥಿಪಡಿಸುವಲ್ಲಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.
ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಈ ರಾಷ್ಟಿçÃಯ ಹೆದ್ದಾರಿಯ ಅವ್ಯವಸ್ಥೆಯನ್ನು ಕೂಡಲೇ ಸಂಬAಧಪಟ್ಟ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನಹರಿಸಿ, ವೈಜ್ಞಾನಿಕವಾಗಿ ರಸ್ತೆಯನ್ನು ದುರಸ್ಥಿಪಡಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
(Visited 1 times, 1 visits today)





