BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.71.56 ಮತದಾನ
  • ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಕರವೇ ಆಗ್ರಹ
  • 5 ಲಕ್ಷ ಸಾಲಕ್ಕೆ 4 ಕೋಟಿ ಜಮೀನು ಹರಾಜು
  • ಎಸ್‌ಎಸ್‌ಐಟಿಯಲ್ಲಿ ಐಇಇಇ ದಿನಾಚರಣೆ: ನವೀನ ತಂತ್ರಜ್ಞಾನದ ಬಳಕೆಗೆ ಕರೆ
  • ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ
  • ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್
  • ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ
  • ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಎಸ್‌ಎಸ್‌ಐಟಿಯಲ್ಲಿ ಐಇಇಇ ದಿನಾಚರಣೆ: ನವೀನ ತಂತ್ರಜ್ಞಾನದ ಬಳಕೆಗೆ ಕರೆ
news

ಎಸ್‌ಎಸ್‌ಐಟಿಯಲ್ಲಿ ಐಇಇಇ ದಿನಾಚರಣೆ: ನವೀನ ತಂತ್ರಜ್ಞಾನದ ಬಳಕೆಗೆ ಕರೆ

By News Desk BenkiyabaleUpdated:October 24, 2026 5:33 pm

ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐಇಇಇ ವಿದ್ಯಾರ್ಥಿ ಘಟಕ (ಐಇಇಇ ಎಸ್‌ಎಸ್‌ಐಟಿ ಎಸ್‌ಬಿ) ಹಾಗೂ ಮಹಿಳಾ ಇಂಜಿನಿಯರ್‌ಗಳ ವಿಭಾಗದ ವತಿಯಿಂದ ಅಕ್ಟೋಬರ್ ೧೭ರಂದು ಐಇಇಇ ದಿನಾಚರಣೆ-೨೦೨೬ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. “ಉತ್ತಮ ನಾಳೆಗಾಗಿ ತಂತ್ರಜ್ಞಾನದ ಸದ್ಬಳಕೆ” ಎಂಬ ಆಶಯದೊಂದಿಗೆ ನಡೆದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮಹತ್ವವನ್ನು ಪರಿಚಯಿಸಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಪಾನ್‌ನ ಟೋಕಿಯೋ ಮೂಲದ ಡಾಮಸ್.ಕಸ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಅಕಿಹಿಕೊ ಕೆನ್ ಸುಗಿಯಾಮಾ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಸೇರಿದಂತೆ ನವೀನ ತಂತ್ರಜ್ಞಾನಗಳ ಬೆಳವಣಿಗೆ ಹಾಗೂ ಅವುಗಳ ಪರಿಣಾಮಕಾರಿ ಬಳಕೆಯನ್ನು ಮಾಡಿಕೊಳ್ಳಬೇಕಾದ ಅಗತ್ಯತೆಯನ್ನು ಒತ್ತಿ ಹೆಳಿದರು.
ತಂತ್ರಜ್ಞಾನವನ್ನು ಕಲಿಯುವುದಷ್ಟೇ ಸಾಕಾಗುವುದಿಲ್ಲ. ಅದನ್ನು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಮಾನವ ಕಲ್ಯಾಣಕ್ಕೆ ಬಳಸಬೇಕು. ಹೊಸ ಆಲೋಚನೆಗಳನ್ನು ಗುರುತಿಸುವುದು, ಸಮಸ್ಯೆಗಳಿಗೆ ವಿಭಿನ್ನ ಪರಿಹಾರಗಳನ್ನು ರೂಪಿಸುವುದು, ತಾಂತ್ರಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಬಳೆಸುವುದನ್ನು ಕಲಿತುಕೊಳ್ಳಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ತಮ್ಮದೇ ಆದ ನವೀನ ಆಲೋಚನೆಗಳಿಗೆ ರೂಪ ನೀಡಿ, ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಪ್ರಾರಂಭಿಸುವ ದಿಸೆಯಲ್ಲಿ ಚಿಂತಿಸಬೇಕು ಎಂದು ಡಾ. ಅಕಿಹಿಕೊ ಕೆನ್ ಸುಗಿಯಾಮಾ ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ. ನಾಡಕಟ್ಟಿ ಅವರು ವಹಿಸಿದ್ದರು. ಬೆಂಗಳೂರು ವಿಭಾಗದ ಮಹಿಳಾ ಇಂಜಿನಿಯರ್‌ಗಳ ವಿಭಾಗದ ಅಧ್ಯಕ್ಷರಾದ ಡಾ. ಪುಷ್ಪಾ ಸಿ. ಎನ್., ಐಇಇಇ ಬೆಂಗಳೂರು ವಿಭಾಗದ ಖಜಾಂಚಿ ಡಾ. ಅಶ್ವಿನಿ ಅಪ್ಪಾಜಿ ಹಾಗೂ ಐಇಇಇ ಸಂಕೇತ ಸಂಸ್ಕರಣಾ ವಿಭಾಗದ ಬೆಂಗಳೂರು ವಿಭಾಗದ ಅಧ್ಯಕ್ಷರಾದ ಡಾ. ಸನೀಶ್ ಕ್ಲೀಟಸ್, ಐಇಇಇ ಎಸ್‌ಎಸ್‌ಐಟಿ ಎಸ್‌ಬಿ ಘಟಕದ ಸಲಹೆಗಾರರಾದ ಡಾ. ಎಂ. ಸಿ. ಚಂದ್ರಶೇಖರ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಡಾ. ಶಾರದಾ ಗುಪ್ತಾ ,ವಿವಿಧ ಐಇಇಇ ವಿಭಾಗಗಳ ಅಧ್ಯಾಪಕ ಸಲಹೆಗಾರರು ಮತ್ತು ವಿದ್ಯಾರ್ಥಿ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಂತ್ರಿಕ ಶಿಕ್ಷಣ, ವೃತ್ತಿಪರ ಕೌಶಲ್ಯಗಳ ಅಭಿವೃದ್ಧಿ, ಸಂಶೋಧನೆ ಮತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಐಇಇಇ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ಕಾರ್ಯಕ್ರಮವು ಮತ್ತೊಮ್ಮೆ ಸಾರಿತು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಉತ್ಸಾಹದಿಂದ ಭಾಗವಹಿಸಿದ ಈ ಕಾರ್ಯಕ್ರಮವು ಜಾಗತಿಕ ತಂತ್ರಜ್ಞಾನ ಬೆಳವಣಿಗೆಗಳ ಅರಿವು ಮೂಡಿಸುವುದರ ಜೊತೆಗೆ, ಸಂಶೋಧನೆ, ನಾವೀನ್ಯತೆ ಮತ್ತು ನವೋದ್ಯಮಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಸ್ಫೂರ್ತಿಯನ್ನು ನೀಡಿತು.

(Visited 1 times, 1 visits today)
kannada news karnataka local news tumakur tumkur tumkur news ತುಮಕೂರು:
Previous Articleವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ
Next Article 5 ಲಕ್ಷ ಸಾಲಕ್ಕೆ 4 ಕೋಟಿ ಜಮೀನು ಹರಾಜು
News Desk Benkiyabale

Related Posts

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.71.56 ಮತದಾನ

October 24, 2026 6:13 pm news

ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಕರವೇ ಆಗ್ರಹ

October 24, 2026 6:12 pm news

5 ಲಕ್ಷ ಸಾಲಕ್ಕೆ 4 ಕೋಟಿ ಜಮೀನು ಹರಾಜು

October 24, 2026 6:10 pm news
ತಾಜಾ ಸುದ್ಧಿಗಳು
news

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.71.56 ಮತದಾನ

October 24, 2026 6:13 pm
news

ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಕರವೇ ಆಗ್ರಹ

October 24, 2026 6:12 pm
news

5 ಲಕ್ಷ ಸಾಲಕ್ಕೆ 4 ಕೋಟಿ ಜಮೀನು ಹರಾಜು

October 24, 2026 6:10 pm
news

ಎಸ್‌ಎಸ್‌ಐಟಿಯಲ್ಲಿ ಐಇಇಇ ದಿನಾಚರಣೆ: ನವೀನ ತಂತ್ರಜ್ಞಾನದ ಬಳಕೆಗೆ ಕರೆ

October 24, 2026 5:33 pm
news

ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ

October 23, 2026 6:10 pm
news

ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್

October 23, 2026 6:08 pm
Our Youtube Channel
Our Picks

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.71.56 ಮತದಾನ

October 24, 2026 6:13 pm

ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಕರವೇ ಆಗ್ರಹ

October 24, 2026 6:12 pm

5 ಲಕ್ಷ ಸಾಲಕ್ಕೆ 4 ಕೋಟಿ ಜಮೀನು ಹರಾಜು

October 24, 2026 6:10 pm

ಎಸ್‌ಎಸ್‌ಐಟಿಯಲ್ಲಿ ಐಇಇಇ ದಿನಾಚರಣೆ: ನವೀನ ತಂತ್ರಜ್ಞಾನದ ಬಳಕೆಗೆ ಕರೆ

October 24, 2026 5:33 pm

ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ

October 23, 2026 6:10 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.71.56 ಮತದಾನ

By News Desk BenkiyabaleOctober 24, 2026 6:13 pm

ತುಮಕೂರು: ಜಿಲ್ಲೆಯಲ್ಲಿ ಇಂದು ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ಶೇ.71.56ರಷ್ಟು ಮತದಾನವಾಗಿದೆ…

ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಕರವೇ ಆಗ್ರಹ

October 24, 2026 6:12 pm

5 ಲಕ್ಷ ಸಾಲಕ್ಕೆ 4 ಕೋಟಿ ಜಮೀನು ಹರಾಜು

October 24, 2026 6:10 pm

ಎಸ್‌ಎಸ್‌ಐಟಿಯಲ್ಲಿ ಐಇಇಇ ದಿನಾಚರಣೆ: ನವೀನ ತಂತ್ರಜ್ಞಾನದ ಬಳಕೆಗೆ ಕರೆ

October 24, 2026 5:33 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.