BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಾಂಸ್ಕೃತಿಕ ಉತ್ಸವಗಳು ಒಗ್ಗಟ್ಟು ತರಲು ಸಹಕಾರಿ
  • ಒನಕೆ ಓಬವ್ವ ಸ್ತ್ರೀಯರ ಧೈರ್ಯದ ಸಂಕೇತ
  • ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ
  • ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)
  • ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ
  • ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ
  • ಸ್ಲಂ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
  • ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಒನಕೆ ಓಬವ್ವ ಸ್ತ್ರೀಯರ ಧೈರ್ಯದ ಸಂಕೇತ
news

ಒನಕೆ ಓಬವ್ವ ಸ್ತ್ರೀಯರ ಧೈರ್ಯದ ಸಂಕೇತ

ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ
By News Desk BenkiyabaleUpdated:November 11, 2026 4:39 pm

ತುಮಕೂರು: ವೀರ ವನಿತೆ ಒನಕೆ ಓಬವ್ವ ಅವರು ಧೈರ್ಯ ಮತ್ತು ಸಾಹಸದ ಪ್ರತೀಕವಾಗಿದ್ದು, ಸ್ತ್ರೀಯರ ಧೈರ್ಯದ ಸಂಕೇತ. ಮಹಿಳೆಯರು ಸೀಮಿತ ಮನೋಭಾವದಿಂದ ಹೊರಬಂದು ಧೈರ್ಯದಿಂದ ಮುನ್ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಒನಕೆ ಓಬವ್ವ ಅವರ ಸ್ವಾಮಿ ನಿಷ್ಠೆ, ಸಮಯ ಪ್ರಜ್ಞೆ, ಧೈರ್ಯ ಇಂದಿನ ಮಹಿಳೆಯರಿಗೆ ಮಾದರಿ ಎಂದು ತಿಳಿಸಿದರು.
ಒನಕೆ ಓಬವ್ವ ಕೆಳವರ್ಗದ ಮಹಿಳೆಯೊಬ್ಬರು ತೋರಿದ ಅಪ್ರತಿಮ ಧೈರ್ಯ ಮತ್ತು ಸಾಹಸಕ್ಕೆ ಸಾಕ್ಷಿಯಾಗಿದ್ದಾರೆ. ಕೋಟೆಯನ್ನು ಕಾಯುವುದು ಅಂದಿನ ಕಾಲದಲ್ಲಿ ದೇಶವನ್ನು ಕಾಯುವμÉ್ಟೀ ಮಹತ್ವದ ಕೆಲಸವಾಗಿತ್ತು. ಅಂತಹ ಸಂದರ್ಭದಲ್ಲಿ ಕೈಗೆ ಸಿಕ್ಕ ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಶತ್ರುಗಳನ್ನು ಎದುರಿಸಿದ ಓಬವ್ವನ ಧೈರ್ಯ ಎಲ್ಲರಿಗೂ ಪ್ರೇರಣೆಯಾಗಬೇಕು. ಧೈರ್ಯವಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹರಿಕಥಾ ವಿದ್ವಾನ್ ಲಕ್ಷ್ಮಣ್‍ದಾಸ್ ಮಾತನಾಡುತ್ತಾ, ‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ಮಾತಿನಂತೆ ಧೈರ್ಯ ಮತ್ತು ಶೌರ್ಯದ ಪ್ರತಿರೂಪವೇ ಒನಕೆ ಓಬವ್ವ. ಶತ್ರುಗಳ ದಾಳಿಯನ್ನು ಎದುರಿಸಲು ಕೈಗೆ ಸಿಕ್ಕ ಒನಕೆಯನ್ನೇ ಬಳಸಿಕೊಂಡು ಅಸಾಧಾರಣ ಸಾಹಸ ಮೆರೆದವರು. ಓಬವ್ವನ ಸಾಹಸಗಾಥೆಯನ್ನು ಕವಿಗಳು ತಮ್ಮ ಬರಹಗಳ ಮೂಲಕ ಜನರಿಗೆ ಪರಿಚಯಿಸಿದ್ದಾರೆ. ಅವರ ಜೀವನದ ಕುರಿತು ಇನ್ನಷ್ಟು ಐತಿಹಾಸಿಕ ಅಧ್ಯಯನ ನಡೆಯಬೇಕಿದೆ. ಚಿತ್ರಗಳಲ್ಲಿ ತೋರಿಸಿರುವ ಕೆಲವು ಘಟನೆಗಳ ಬಗ್ಗೆ ಐತಿಹಾಸಿಕ ಸತ್ಯಾಸತ್ಯತೆ ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಮಂದಿಗೆ ಸನ್ಮಾನಿಸಲಾಯಿತು. ಅಲ್ಲದೆ, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಟೌನ್‍ಹಾಲ್ ವೃತ್ತದಿಂದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಒನಕೆ ಓಬವ್ವನ ಭಾವಚಿತ್ರ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಾ: ಸಿದ್ದರಾಮಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ
Next Article ಸಾಂಸ್ಕೃತಿಕ ಉತ್ಸವಗಳು ಒಗ್ಗಟ್ಟು ತರಲು ಸಹಕಾರಿ
News Desk Benkiyabale

Related Posts

ಸಾಂಸ್ಕೃತಿಕ ಉತ್ಸವಗಳು ಒಗ್ಗಟ್ಟು ತರಲು ಸಹಕಾರಿ

November 11, 2026 4:41 pm news

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

November 09, 2026 5:48 pm news

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm news
ತಾಜಾ ಸುದ್ಧಿಗಳು
news

ಸಾಂಸ್ಕೃತಿಕ ಉತ್ಸವಗಳು ಒಗ್ಗಟ್ಟು ತರಲು ಸಹಕಾರಿ

November 11, 2026 4:41 pm
news

ಒನಕೆ ಓಬವ್ವ ಸ್ತ್ರೀಯರ ಧೈರ್ಯದ ಸಂಕೇತ

November 11, 2026 4:39 pm
news

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

November 09, 2026 5:48 pm
news

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm
news

ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ

November 09, 2026 5:45 pm
news

ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ

November 09, 2026 5:43 pm
Our Youtube Channel
Our Picks

ಸಾಂಸ್ಕೃತಿಕ ಉತ್ಸವಗಳು ಒಗ್ಗಟ್ಟು ತರಲು ಸಹಕಾರಿ

November 11, 2026 4:41 pm

ಒನಕೆ ಓಬವ್ವ ಸ್ತ್ರೀಯರ ಧೈರ್ಯದ ಸಂಕೇತ

November 11, 2026 4:39 pm

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

November 09, 2026 5:48 pm

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm

ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ

November 09, 2026 5:45 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಾಂಸ್ಕೃತಿಕ ಉತ್ಸವಗಳು ಒಗ್ಗಟ್ಟು ತರಲು ಸಹಕಾರಿ

By News Desk BenkiyabaleNovember 11, 2026 4:41 pm

ತುಮಕೂರು: ನಾಟಕ, ಸಾಂಸ್ಕೃತಿಕ ಉತ್ಸವಗಳು ಗ್ರಾಮದಲ್ಲಿ ಒಗ್ಗಟ್ಟು ತರಲು ಸಹಕಾರಿಯಾಗಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ…

ಒನಕೆ ಓಬವ್ವ ಸ್ತ್ರೀಯರ ಧೈರ್ಯದ ಸಂಕೇತ

November 11, 2026 4:39 pm

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

November 09, 2026 5:48 pm

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.