BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರು ಜಿಲ್ಲೆಯಲ್ಲಿ 1,757 ಕರುಳುಬೇನೆ ಪ್ರಕರಣ ಪತ್ತೆ
  • ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಪಶು ಆಸ್ಪತ್ರೆಗಳ ಬಲವರ್ಧನೆಗೆ ಸಚಿವ ಪುಟ್ಟ ರಂಗಶೆಟ್ಟಿ ಸೂಚನೆ
  • ಬದುಕಿಗೆ ಆಳವಾದ ಅರ್ಥವನ್ನು ಕೊಡುವುದೇ ತತ್ವಪದಗಳ ಲಕ್ಷ್ಯ
  • ಸಂಪನ್ನಗೊಂಡ ನಾಟಕಮನೆಯ ಗುರು-ಶಿಷ್ಯರು ಹಾಸ್ಯ ನಾಟಕ
  • ಭದ್ರಾ ಮೇಲ್ದಂಡೆ ಯೋಜನೆ: ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸೂಚನೆ
  • ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರದಿಂದ ಪಿಎಲ್‍ಐ ಯೋಜನೆಯಡಿ 11500 ಕೋಟಿ ರೂ. ಬಿಡುಗಡೆ
  • ರಸ್ತೆಯಲ್ಲಿನ ಗುಂಡಿಗಳನ್ನ ಮುಚ್ಚುವಂತೆ ಪ್ರತಿಭಟನೆ
  • ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಿಂದ ಹೋಂ ಕೇರ್ ಸೇವೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬದುಕಿಗೆ ಆಳವಾದ ಅರ್ಥವನ್ನು ಕೊಡುವುದೇ ತತ್ವಪದಗಳ ಲಕ್ಷ್ಯ
news

ಬದುಕಿಗೆ ಆಳವಾದ ಅರ್ಥವನ್ನು ಕೊಡುವುದೇ ತತ್ವಪದಗಳ ಲಕ್ಷ್ಯ

By News Desk BenkiyabaleUpdated:November 13, 2026 4:07 pm

ತುಮಕೂರು: ನಶ್ವರವಾದ ಈ ಜಗತ್ತಿನಲ್ಲಿ ಎಲ್ಲವೂ ಬದಲಾಗುತ್ತಲೇ ಇರುತ್ತವೆ. ಆದರೆ, ಈ ಬದಲಾವಣೆಯ ನಡುವೆಯೂ ಶಾಶ್ವತವಾಗಿ ಉಳಿಯುವಂತದ್ದೇ ಪಂಚತತ್ವ. ತತ್ವಪದಗಳನ್ನು ಕೇವಲ ಶೈಕ್ಷಣಿಕ ಅಧ್ಯಯನದ ದೃಷ್ಟಿಯಿಂದ ಮಾತ್ರ ನೋಡದೆ, ನಿತ್ಯ ಜೀವನಕ್ಕೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಓದಬೇಕು.ಬದುಕಿಗೆ ಆಳವಾದ ಅರ್ಥವನ್ನು ಕೊಡುವುದೇ ತತ್ವಪದಗಳ ಲಕ್ಷ್ಯ ಎಂದು ಹಿರಿಯ ವಿದ್ವಾಂಸ ಹಾಗೂ ಕವಿ ಎಚ್.ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ವತಿಯಿಂದ ನ.13 ರಂದು ಶುಕ್ರವಾರದಂದು ಆಯೋಜಿಸಿದ್ದ ಸಂತ ಶಿಶುನಾಳ ಶರೀಫ ಮತ್ತು ತತ್ವಪದಕಾರರು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಚನಕಾರರದ್ದು ಒಂದು ಪಂಥ, ಹರಿದಾಸರದ್ದು ಮತ್ತೊಂದು ಪಂಥ, ಆದರೆ ತತ್ವಪದಕಾರರಿಗೆ ಯಾವುದೇ ನಿರ್ದಿಷ್ಟ ಪಂಥವಿಲ್ಲ. ಜಾತಿ ನಿವಾರಣೆಯಲ್ಲಿ ತತ್ವಪದಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅನೇಕತೆಯಲ್ಲಿ ಏಕತೆಯನ್ನು ಸಾರುವ ಕೆಲಸವನ್ನು ಅವು ಮಾಡಿವೆ. ಬದುಕಿಗೆ ಆಳವಾದ ಅರ್ಥವನ್ನು ಕಲ್ಪಿಸುವುದೇ ತತ್ವಪದಗಳ ಮೂಲ ಲಕ್ಷ್ಯವಾಗಿದೆ ಎಂದರು.
ತತ್ವಪದಗಳ ಪರಿಭಾಷೆಯಲ್ಲಿ ಸ್ವರ ಎಂದರೆ ಸದಾ ಉಸಿರು ಎಂದರ್ಥ. ಅನುಭವದ ಅನೇಕ ಸಂಗತಿಗಳನ್ನು ವಾಕ್ ರೂಪದಲ್ಲಿ ನಮಗೆ ತಲುಪಿಸುವುದೇ ಅನುಭಾವ. ಸತ್ಸಂಗವೇ ತತ್ವಪದಗಳ ನಿಜವಾದ ಸಂದರ್ಭ. ಯಾವುದು ಸ್ಮರಣೆಯ ಹಂಗಿಲ್ಲದೆ ಇರುತ್ತದೆಯೋ ಅದೇ ನಮ್ಮ ಅನುಭವವನ್ನು ನಿಯಂತ್ರಿಸುತ್ತದೆ. ಪುಸ್ತಕ ಪರಂಪರೆ ನಿಂತ ನೀರಾಗಿದ್ದರೆ, ವಾಕ್ ಪರಂಪರೆ ನಿರಂತರವಾದ ಪ್ರಕ್ರಿಯೆ ಎಂದರು.
ಬುದ್ಧ ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದರೆ, ತತ್ವಪದಗಳು ಆನಂದ ಹಾಗೂ ಕ್ಷಣಿಕತೆಯೇ ದುಃಖಕ್ಕೆ ಮೂಲ ಎಂಬ ಸತ್ಯವನ್ನು ಸಾರಿವೆ. ಇಂದಿನ ಆಧುನಿಕತೆಗೆ ತಕ್ಕಂತೆ ದೇವಾಲಯಗಳ ಆವರಣದ ಆಕಾರಗಳು 5 ಸ್ಟಾರ್, 7 ಸ್ಟಾರ್ ಹೋಟೆಲ್‍ಗಳಂತೆ ಬದಲಾಗಿವೆ. ಆದರೆ, ಹಿಂದೆ ಇದ್ದ ದೇವಾಲಯಗಳ ಆಧ್ಯಾತ್ಮಿಕ ವಾತಾವರಣ ಮತ್ತು ಭಕ್ತಿಯ ಭಾವ ಇಂದು ಮರೆಯಾಗುತ್ತಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಎಚ್.ಎಸ್. ಮೋಹನ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಸಾಹತುಶಾಹಿ ಪ್ರಭಾವಗಳು ಪ್ರವೇಶಿಸಿದ ಸಂದರ್ಭದಲ್ಲಿ ಅವುಗಳನ್ನು ಅಳವಡಿಸಿಕೊಂಡು ಮುನ್ನಡೆಯುವಲ್ಲಿ ತತ್ವಪದಕಾರರು ವಿಫಲರಾದರು. ಇದರ ಪರಿಣಾಮವಾಗಿ ತತ್ವಪದಗಳ ಕುರಿತ ಚರ್ಚೆಗಳು ಕ್ರಮೇಣ ನಿಧಾನಗತಿಗೆ ತಲುಪಿ, ಅವು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು
ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ನಿರ್ದೇಶಕ ಪೆÇ್ರ. ಎಚ್.ಎಸ್. ಗುಂಡೂರ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ. ಎಸ್. ಎನ್. ಕಿರಣ್ ವಂದಿಸಿದರು.

(Visited 1 times, 1 visits today)
kannada news karnataka local news tumakur tumkur tumkur news ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುಮಕೂರು:
Previous Articleಸಂಪನ್ನಗೊಂಡ ನಾಟಕಮನೆಯ ಗುರು-ಶಿಷ್ಯರು ಹಾಸ್ಯ ನಾಟಕ
Next Article ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಪಶು ಆಸ್ಪತ್ರೆಗಳ ಬಲವರ್ಧನೆಗೆ ಸಚಿವ ಪುಟ್ಟ ರಂಗಶೆಟ್ಟಿ ಸೂಚನೆ
News Desk Benkiyabale

Related Posts

ತುಮಕೂರು ಜಿಲ್ಲೆಯಲ್ಲಿ 1,757 ಕರುಳುಬೇನೆ ಪ್ರಕರಣ ಪತ್ತೆ

November 13, 2026 4:11 pm news

ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಪಶು ಆಸ್ಪತ್ರೆಗಳ ಬಲವರ್ಧನೆಗೆ ಸಚಿವ ಪುಟ್ಟ ರಂಗಶೆಟ್ಟಿ ಸೂಚನೆ

November 13, 2026 4:09 pm news

ಸಂಪನ್ನಗೊಂಡ ನಾಟಕಮನೆಯ ಗುರು-ಶಿಷ್ಯರು ಹಾಸ್ಯ ನಾಟಕ

November 13, 2026 4:06 pm news
ತಾಜಾ ಸುದ್ಧಿಗಳು
news

ತುಮಕೂರು ಜಿಲ್ಲೆಯಲ್ಲಿ 1,757 ಕರುಳುಬೇನೆ ಪ್ರಕರಣ ಪತ್ತೆ

November 13, 2026 4:11 pm
news

ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಪಶು ಆಸ್ಪತ್ರೆಗಳ ಬಲವರ್ಧನೆಗೆ ಸಚಿವ ಪುಟ್ಟ ರಂಗಶೆಟ್ಟಿ ಸೂಚನೆ

November 13, 2026 4:09 pm
news

ಬದುಕಿಗೆ ಆಳವಾದ ಅರ್ಥವನ್ನು ಕೊಡುವುದೇ ತತ್ವಪದಗಳ ಲಕ್ಷ್ಯ

November 13, 2026 4:07 pm
news

ಸಂಪನ್ನಗೊಂಡ ನಾಟಕಮನೆಯ ಗುರು-ಶಿಷ್ಯರು ಹಾಸ್ಯ ನಾಟಕ

November 13, 2026 4:06 pm
news

ಭದ್ರಾ ಮೇಲ್ದಂಡೆ ಯೋಜನೆ: ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸೂಚನೆ

November 12, 2026 5:34 pm
news

ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರದಿಂದ ಪಿಎಲ್‍ಐ ಯೋಜನೆಯಡಿ 11500 ಕೋಟಿ ರೂ. ಬಿಡುಗಡೆ

November 12, 2026 5:16 pm
Our Youtube Channel
Our Picks

ತುಮಕೂರು ಜಿಲ್ಲೆಯಲ್ಲಿ 1,757 ಕರುಳುಬೇನೆ ಪ್ರಕರಣ ಪತ್ತೆ

November 13, 2026 4:11 pm

ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಪಶು ಆಸ್ಪತ್ರೆಗಳ ಬಲವರ್ಧನೆಗೆ ಸಚಿವ ಪುಟ್ಟ ರಂಗಶೆಟ್ಟಿ ಸೂಚನೆ

November 13, 2026 4:09 pm

ಬದುಕಿಗೆ ಆಳವಾದ ಅರ್ಥವನ್ನು ಕೊಡುವುದೇ ತತ್ವಪದಗಳ ಲಕ್ಷ್ಯ

November 13, 2026 4:07 pm

ಸಂಪನ್ನಗೊಂಡ ನಾಟಕಮನೆಯ ಗುರು-ಶಿಷ್ಯರು ಹಾಸ್ಯ ನಾಟಕ

November 13, 2026 4:06 pm

ಭದ್ರಾ ಮೇಲ್ದಂಡೆ ಯೋಜನೆ: ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸೂಚನೆ

November 12, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ತುಮಕೂರು ಜಿಲ್ಲೆಯಲ್ಲಿ 1,757 ಕರುಳುಬೇನೆ ಪ್ರಕರಣ ಪತ್ತೆ

By News Desk BenkiyabaleNovember 13, 2026 4:11 pm

ತುಮಕೂರು: ಜಿಲ್ಲೆಯಲ್ಲಿ 2026ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ ಒಟ್ಟು 1,757 ಕರುಳುಬೇನೆ ಪ್ರಕರಣಗಳು ವರದಿಯಾಗಿದ್ದು, ಯಾವುದೇ ಮರಣ ಪ್ರಕರಣ ಸಂಭವಿಸಿಲ್ಲ…

ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಪಶು ಆಸ್ಪತ್ರೆಗಳ ಬಲವರ್ಧನೆಗೆ ಸಚಿವ ಪುಟ್ಟ ರಂಗಶೆಟ್ಟಿ ಸೂಚನೆ

November 13, 2026 4:09 pm

ಬದುಕಿಗೆ ಆಳವಾದ ಅರ್ಥವನ್ನು ಕೊಡುವುದೇ ತತ್ವಪದಗಳ ಲಕ್ಷ್ಯ

November 13, 2026 4:07 pm

ಸಂಪನ್ನಗೊಂಡ ನಾಟಕಮನೆಯ ಗುರು-ಶಿಷ್ಯರು ಹಾಸ್ಯ ನಾಟಕ

November 13, 2026 4:06 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.