BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರದಿಂದ ಪಿಎಲ್‍ಐ ಯೋಜನೆಯಡಿ 11500 ಕೋಟಿ ರೂ. ಬಿಡುಗಡೆ
  • ರಸ್ತೆಯಲ್ಲಿನ ಗುಂಡಿಗಳನ್ನ ಮುಚ್ಚುವಂತೆ ಪ್ರತಿಭಟನೆ
  • ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಿಂದ ಹೋಂ ಕೇರ್ ಸೇವೆ
  • ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರಣಿ ಅಪಘಾತಗಳು
  • ಇತಿಹಾಸ ಪ್ರಸಿದ್ದ ಗೂಳೂರು ಮಹಾ ಗಣಪತಿ ಮೂರ್ತಿ ಪ್ರಷ್ಠಾಪನೆ
  • ಕನ್ನಡ ರಾಜ್ಯೋತ್ಸವ, ಟಿಪ್ಪು ಸುಲ್ತಾನ್ ಜಯಂತಿ ಆಚರಣೆ
  • ಸಾಂಸ್ಕೃತಿಕ ಉತ್ಸವಗಳು ಒಗ್ಗಟ್ಟು ತರಲು ಸಹಕಾರಿ
  • ಒನಕೆ ಓಬವ್ವ ಸ್ತ್ರೀಯರ ಧೈರ್ಯದ ಸಂಕೇತ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಿಂದ ಹೋಂ ಕೇರ್ ಸೇವೆ
news

ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಿಂದ ಹೋಂ ಕೇರ್ ಸೇವೆ

ಮನೆ ಬಾಗಿಲಿಗೆ ಆರೋಗ್ಯ ಸೇವೆಗೆ ಶಿವಸಿದ್ಧೇಶ್ವರ ಸ್ವಾಮೀಜಿ ಶ್ಲಾಘನೆ
By News Desk BenkiyabaleUpdated:November 12, 2026 5:09 pm

ತುಮಕೂರು: ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಲ್ಲಿ ರೋಟರಿ ಬೆಂಗಳೂರು ಉದ್ಯೋಗ್, ರೋಟರಿಜಿಲ್ಲೆ 3192ರ ಸಹಯೋಗದೊಂದಿಗೆ ನೂತನ ಫಿಸಿಯೋಥೆರಪಿ ಸೌಲಭ್ಯ ಹಾಗೂ ಹೋಂ ಕೇರ್ (ಮನೆಬಾಗಿಲಿಗೆ ಆರೋಗ್ಯ ಸೇವೆ) ಸೌಲಭ್ಯಗಳನ್ನು ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸ್ವಾಮೀಜಿ, ಆರೋಗ್ಯ ಎಲ್ಲರ ಆದ್ಯತೆಯಾಗಬೇಕು. ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲಾ ಭಾಗ್ಯಕ್ಕಿಂಥಾ ಆರೋಗ್ಯ ಭಾಗ್ಯ ಮುಖ್ಯ ಎನ್ನುವಂತಾಗಿದೆ.ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಎಚ್ಚರಿಕೆ ವಹಿಸಬೇಕು. ರೋಟರಿಯಂತಹ ಸೇವಾ ಸಂಸ್ಥೆಗಳು ಆರೋಗ್ಯ ಸೇವೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.
ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರವು ರೋಟರಿ ಸಂಸ್ಥೆ ಸಹಯೋಗದೊಂದಿಗೆ ನೂತನ ಫಿಸಿಯೋಥೆರಪಿ ಸೌಲಭ್ಯ ಹಾಗೂ ಮನೆಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಯೋಜನೆ ಆರಂಭಿಸಿರುವುದು ಉತ್ತಮ ಸೇವೆ. ವಯೋವೃದ್ಧರಿಗೆ, ಒಬ್ಬಂಟಿ ಇರುವವರಿಗೆ, ಅಸಹಾಯಕರಿಗೆ ಅವರ ಮನೆಗೆ ಹೋಗಿ ಆರೋಗ್ಯ ಸೇವೆ ಒದಗಿಸುವ ಕಾರ್ಯ ಉತ್ತಮವಾದದ್ದು, ಸಂಸ್ಥೆಗಳು ಇಂತಹ ಮತ್ತಷ್ಟು ಸೇವೆಗಳನ್ನು ಮಾಡಲಿ ಎಂದು ಸ್ವಾಮೀಜಿ ಆಶಿಸಿದರು.
ಈ ಯೋಜನೆಯ ನೇತೃತ್ವ ವಹಿಸಿರುವ ರೋಟರಿ ಜಿಲ್ಲೆ 3192ರ ಜಿಲ್ಲಾ ನಿಯೋಜಿತ ಗವರ್ನರ್ ರೊಟೇರಿಯನ್ ರೇಣುಕೇಶ್ವರಸ್ವಾಮಿ ಎಸ್.ಆರ್.ಅವರು ಮಾತನಾಡಿ, ರೋಟರಿಯ ಸೇವೆ ಕೇವಲ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಸೀಮಿತವಾಗಿರದೆ, ಅಗತ್ಯವಿರುವವರ ಬದುಕಿನಲ್ಲಿ ಭರವಸೆ, ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸುವುದಾಗಿದೆ. ನಿರಾಮ್ ಕೇಂದ್ರದೊಂದಿಗೆ ಕೈಜೋಡಿಸಿರುವ ಈ ಯೋಜನೆಯು ಸಮಾಜಕ್ಕೆ ದೀರ್ಘಕಾಲದ ಪ್ರಯೋಜನ ನೀಡಲಿದೆ ಎಂದು ತಿಳಿಸಿದರು.
ಕ್ವೆಸ್‍ಕಾರ್ಪ್ ಸಂಸ್ಥಾಪಕ ಅಧ್ಯಕ್ಷ ಅಜಿತ್ ಐಸಾಕ್ ಅತಿಥಿಯಾಗಿ ಭಾಗವಹಿಸಿದ್ದರು. ಈ ಯೋಜನೆಯಡಿ ಸ್ಥಾಪಿಸಲಾಗಿರುವ ಫಿಸಿಯೋಥೆರಪಿ ಘಟಕವು ಶಸ್ತ್ರಚಿಕಿತ್ಸೆ, ಅಪಘಾತ, ಪಾಶ್ರ್ವವಾಯು ಹಾಗೂ ವಿವಿಧ ಕಾಯಿಲೆಗಳಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಪುನರ್ವಸತಿ, ನೋವು ನಿವಾರಣೆ, ದೈಹಿಕ ಚಲನಶೀಲತೆ ಮತ್ತು ಹಿರಿಯ ನಾಗರಿಕರ ಆರೋಗ್ಯ ಸುಧಾರಣೆಗೆ ಅಗತ್ಯವಾದ ಚಿಕಿತ್ಸಾ ಸೇವೆಗಳನ್ನು ಒದಗಿಸಲಿದೆ. ಇದರೊಂದಿಗೆ, ಮನೆಗೆ ತೆರಳಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ವಿಶೇಷ ವಾಹನವನ್ನು ನಿರಾಮ್ ಕೇಂದ್ರಕ್ಕೆ ಈ ವೇಳೆ ಹಸ್ತಾಂತರಿಸಲಾಯಿತು. ಈ ಸೌಲಭ್ಯದ ಮೂಲಕ ವಯೋವೃದ್ಧರು, ಹಾಸಿಗೆ ಹಿಡಿದಿರುವ ರೋಗಿಗಳು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಆಸ್ಪತ್ರೆಗೆ ಪ್ರಯಾಣಿಸಲು ಸಾಧ್ಯವಾಗದವರಿಗೆ ಮನೆ ಬಾಗಿಲಲ್ಲೇ ನಸಿರ್ಂಗ್ ಸೇವೆ, ಪ್ಯಾಲಿಯೇಟಿವ್ ಕೇರ್, ಫಿಸಿಯೋಥೆರಪಿ ಮತ್ತು ಅಗತ್ಯ ವೈದ್ಯಕೀಯ ನೆರವು ದೊರೆಯಲಿದೆ.
ರೋಟರಿ ಬೆಂಗಳೂರು ಉದ್ಯೋಗ್‍ನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದೊಂದಿಗೆ ರೂಪುಗೊಂಡಿರುವ ಈ ಯೋಜನೆಯು ರೋಗಿಗಳಿಗೆ ಉತ್ತಮ ಆರೈಕೆ, ಕುಟುಂಬ ಸದಸ್ಯರಿಗೆ ಮಾನಸಿಕ ನೆಮ್ಮದಿ ಮತ್ತು ಸಮಾಜದ ದುರ್ಬಲ ವರ್ಗದವರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ರೋಟರಿ ಸದಸ್ಯರು, ವೈದ್ಯಕೀಯ ತಜ್ಞರು, ನಿರಾಮ್ ಕೇಂದ್ರದ ಸಿಬ್ಬಂದಿ, ಹಲವು ಗಣ್ಯರು ಭಾಗವಹಿಸಿದ್ದರು.

(Visited 1 times, 1 visits today)
kannada news karnataka local news Mla jyothiganesh tumakur tumkur tumkur news ತುಮಕೂರು:
Previous Articleಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರಣಿ ಅಪಘಾತಗಳು
Next Article ರಸ್ತೆಯಲ್ಲಿನ ಗುಂಡಿಗಳನ್ನ ಮುಚ್ಚುವಂತೆ ಪ್ರತಿಭಟನೆ
News Desk Benkiyabale

Related Posts

ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರದಿಂದ ಪಿಎಲ್‍ಐ ಯೋಜನೆಯಡಿ 11500 ಕೋಟಿ ರೂ. ಬಿಡುಗಡೆ

November 12, 2026 5:16 pm news

ರಸ್ತೆಯಲ್ಲಿನ ಗುಂಡಿಗಳನ್ನ ಮುಚ್ಚುವಂತೆ ಪ್ರತಿಭಟನೆ

November 12, 2026 5:13 pm news

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರಣಿ ಅಪಘಾತಗಳು

November 11, 2026 4:46 pm news
ತಾಜಾ ಸುದ್ಧಿಗಳು
news

ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರದಿಂದ ಪಿಎಲ್‍ಐ ಯೋಜನೆಯಡಿ 11500 ಕೋಟಿ ರೂ. ಬಿಡುಗಡೆ

November 12, 2026 5:16 pm
news

ರಸ್ತೆಯಲ್ಲಿನ ಗುಂಡಿಗಳನ್ನ ಮುಚ್ಚುವಂತೆ ಪ್ರತಿಭಟನೆ

November 12, 2026 5:13 pm
news

ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಿಂದ ಹೋಂ ಕೇರ್ ಸೇವೆ

November 12, 2026 5:09 pm
news

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರಣಿ ಅಪಘಾತಗಳು

November 11, 2026 4:46 pm
news

ಇತಿಹಾಸ ಪ್ರಸಿದ್ದ ಗೂಳೂರು ಮಹಾ ಗಣಪತಿ ಮೂರ್ತಿ ಪ್ರಷ್ಠಾಪನೆ

November 11, 2026 4:44 pm
news

ಕನ್ನಡ ರಾಜ್ಯೋತ್ಸವ, ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

November 11, 2026 4:42 pm
Our Youtube Channel
Our Picks

ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರದಿಂದ ಪಿಎಲ್‍ಐ ಯೋಜನೆಯಡಿ 11500 ಕೋಟಿ ರೂ. ಬಿಡುಗಡೆ

November 12, 2026 5:16 pm

ರಸ್ತೆಯಲ್ಲಿನ ಗುಂಡಿಗಳನ್ನ ಮುಚ್ಚುವಂತೆ ಪ್ರತಿಭಟನೆ

November 12, 2026 5:13 pm

ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಿಂದ ಹೋಂ ಕೇರ್ ಸೇವೆ

November 12, 2026 5:09 pm

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರಣಿ ಅಪಘಾತಗಳು

November 11, 2026 4:46 pm

ಇತಿಹಾಸ ಪ್ರಸಿದ್ದ ಗೂಳೂರು ಮಹಾ ಗಣಪತಿ ಮೂರ್ತಿ ಪ್ರಷ್ಠಾಪನೆ

November 11, 2026 4:44 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರದಿಂದ ಪಿಎಲ್‍ಐ ಯೋಜನೆಯಡಿ 11500 ಕೋಟಿ ರೂ. ಬಿಡುಗಡೆ

By News Desk BenkiyabaleNovember 12, 2026 5:16 pm

ತುಮಕೂರು: ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾದ ಪೆÇ್ರಡೆಕ್ಷನ್ ಲಿಂಕ್ಡ್ ಇನ್‍ಸೆಂಟೀವ್ ಯೋಜನೆಯಡಿ 11500 ಕೋಟಿ ರೂ.ಗಳನ್ನು…

ರಸ್ತೆಯಲ್ಲಿನ ಗುಂಡಿಗಳನ್ನ ಮುಚ್ಚುವಂತೆ ಪ್ರತಿಭಟನೆ

November 12, 2026 5:13 pm

ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಿಂದ ಹೋಂ ಕೇರ್ ಸೇವೆ

November 12, 2026 5:09 pm

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರಣಿ ಅಪಘಾತಗಳು

November 11, 2026 4:46 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.