BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು
  • ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು
  • ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ
  • ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ
  • ಭಾಷೆಯನ್ನು ಮಾತನಾಡುವುದಲ್ಲ ಅದನ್ನು ಆಸ್ವಾದಿಸಬೇಕು
  • ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು: ಡಿಸಿ
  • ತುಮಕೂರು ಜಿಲ್ಲೆಯಲ್ಲಿ 1,757 ಕರುಳುಬೇನೆ ಪ್ರಕರಣ ಪತ್ತೆ
  • ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಪಶು ಆಸ್ಪತ್ರೆಗಳ ಬಲವರ್ಧನೆಗೆ ಸಚಿವ ಪುಟ್ಟ ರಂಗಶೆಟ್ಟಿ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ
news

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

ಕನ್ನಡ ಬದುಕಿನ ಸಹಜ ಭಾಷೆಯಾಗಲಿ: ಯುವಜನರಿಗೆ ಪ್ರೊ. ಎಸ್. ಮಲ್ಲಣ್ಣ ಕರೆ
By News Desk BenkiyabaleUpdated:November 14, 2026 5:36 pm

ತುಮಕೂರು: ಕನ್ನಡ ಭಾಷೆಯ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳು ಎಂದಿಗೂ ಅಡ್ಡಿಯಾಗಿಲ್ಲ. ಪಂಪ, ರನ್ನ, ಜನ್ನ ಮೊದಲಾದವರು ಜೈನರಾಗಿದ್ದರೂ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಕನ್ನಡ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಕರ್ನಾಟಕ ಕಲಾಶ್ರೀ ಹಾಗೂ ಶಿಶುನಾಳ ಷರೀಫ್ ಪ್ರಶಸ್ತಿ ಪುರಸ್ಕöÈತ ಪ್ರೊ. ಎಸ್. ಮಲ್ಲಣ್ಣ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ನ. ೧೪ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಬದುಕಿನ ಅಸ್ಮಿತೆ, ಸಂಸ್ಕöÈತಿ ಮತ್ತು ಭಾವನೆಗಳ ಪ್ರತಿಬಿಂಬ. ಇತರ ಭಾಷೆಗಳನ್ನು ಕಲಿತು ಗೌರವಿಸುವ ನಾವು, ಕನ್ನಡವನ್ನು ಇತರರಿಗೆ ಕಲಿಸುವ ಪ್ರಯತ್ನವನ್ನೂ ಮಾಡಬೇಕು. ವಿಶೇಷವಾಗಿ ಮಕ್ಕಳಿಗೆ ಕನ್ನಡ ಕಲಿಸುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನಕಾರರು ಮತ್ತು ದಾಸರು ಮಹತ್ವದ ಸಾಮಾಜಿಕ ಬದಲಾವಣೆಗೆ ಕಾರಣರಾಗಿದ್ದಾರೆ. ಬಸವಣ್ಣನವರ ವಚನಗಳು ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದರೆ, ಅಕ್ಕಮಹಾದೇವಿಯವರ ವಚನಗಳು ಮಹಿಳಾ ಸ್ವಾತಂತ್ರ÷್ಯ ಹಾಗೂ ಸ್ವಾಭಿಮಾನದ ಧ್ವನಿಯಾಗಿವೆ. ಕನಕದಾಸರು ಮತ್ತು ಪುರಂದರದಾಸರು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಸಮಾನತೆಯ ಸಂದೇಶವನ್ನು ಸಾರಿದ್ದಾರೆ ಎಂದರು.
ಕನ್ನಡದ ಬೆಳವಣಿಗೆಗೆ ಸಾಹಿತ್ಯದಷ್ಟೇ ಸಂಗೀತ, ನಾಟಕ ಮತ್ತು ಜನಪದ ಕಲೆಗಳ ಕೊಡುಗೆಯೂ ಮಹತ್ವದ್ದಾಗಿದೆ. ಕನ್ನಡ ಕೃತಕ ಭಾಷೆಯಾಗದೆ ಜನರು ದಿನನಿತ್ಯ ಬಳಸುವ ಸಹಜ ಭಾಷೆಯಾಗಬೇಕು. ವಿಶ್ವವಿದ್ಯಾಲಯಗಳ ನಾಲ್ಕು ಗೋಡೆಗಳಿಗೆ ಕನ್ನಡವನ್ನು ಸೀಮಿತಗೊಳಿಸದೆ ಜನರ ಬದುಕಿನ ಅವಿಭಾಜ್ಯ ಭಾಗವಾಗಿಸಬೇಕು ಎಂದರು.
ತುಮಕೂರು ವಿವಿ ಎನ್‌ಎಸ್‌ಎಸ್ ಸಂಯೋಜನ ಅಧಿಕಾರಿ ಡಾ. ನಾಗಭೂಷಣ ಬಗ್ಗನಡು ಮಾತನಾಡಿ, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಇಂದಿನ ಯುವಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಕನ್ನಡ ಭಾಷೆ ಮತ್ತು ಇತಿಹಾಸದ ಬಗ್ಗೆ ಯುವಜನರು ಜಾಗೃತರಾಗಬೇಕು. ಪರರ ವಿಚಾರ ಮತ್ತು ಧರ್ಮಗಳನ್ನು ಗೌರವಿಸುವ ವಿಶಾಲ ಮನೋಭಾವ ಕನ್ನಡ ಸಂಸ್ಕöÈತಿಯ ಶಕ್ತಿಯಾಗಿದ್ದು, ಎಲ್ಲ ಸಮುದಾಯಗಳ ಕೊಡುಗೆಯಿಂದ ಕನ್ನಡ ಭಾಷೆ ಬೆಳೆದು ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ದಾಕ್ಷಾಯಣಿ ಜಿ. ಮಾತನಾಡಿ, ಕನ್ನಡಿಗರು ತಮ್ಮ ನೆಲದ ಇತಿಹಾಸ, ಬೇರು ಮತ್ತು ಅಸ್ತಿತ್ವವನ್ನು ಮರೆಯಬಾರದು. ಕನ್ನಡ ಉಳಿಸುವುದು ಸಾಹಿತ್ಯ ರಚನೆಗೆ ಮಾತ್ರ ಸೀಮಿತವಲ್ಲ. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕವೂ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬಹುದು. ವಿದ್ಯಾರ್ಥಿಗಳು ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಾಯಕ ದಿಬ್ಬೂರು ಮಂಜಣ್ಣ ಗೀತೆಗಳನ್ನು ಹಾಡಿದರು. ಸಾಂಸ್ಕöÈತಿಕ ಚಟುವಟಿಕೆಗಳ ಘಟಕದ ಸಂಚಾಲಕರಾದ ಡಾ. ಎಸ್. ಶಿವಣ್ಣ ಬೆಳವಾಡಿ ಸ್ವಾಗತಿಸಿದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷರಾದ ಸಿಬಂತಿ ಪದ್ಮನಾಭ ಕೆ.ವಿ. ಅವರು ನಿರೂಪಿಸಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸುದೀಪ್ ಕುಮಾರ್ ಆರ್., ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್. ಆರ್. ರೇಣುಕಾ, ರಾಜ್ಯಶಾಸ್ತç ವಿಭಾಗದ ಡಾ. ಶ್ರೀಪಾದ ಕುಲಕರ್ಣಿ ಹಾಗೂ ಇತಿ ಹಾಸ ವಿಭಾಗದ ಟಿ.ಎನ್. ಹರಿಪ್ರಸಾದ್ ಉಪಸ್ಥಿತರಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುಮಕೂರು:
Previous Articleತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ
Next Article ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು
News Desk Benkiyabale

Related Posts

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

November 14, 2026 5:39 pm news

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm news

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm news
ತಾಜಾ ಸುದ್ಧಿಗಳು
news

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

November 14, 2026 5:39 pm
news

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm
news

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm
news

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm
news

ಭಾಷೆಯನ್ನು ಮಾತನಾಡುವುದಲ್ಲ ಅದನ್ನು ಆಸ್ವಾದಿಸಬೇಕು

November 14, 2026 5:34 pm
news

ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು: ಡಿಸಿ

November 13, 2026 5:09 pm
Our Youtube Channel
Our Picks

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

November 14, 2026 5:39 pm

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm

ಭಾಷೆಯನ್ನು ಮಾತನಾಡುವುದಲ್ಲ ಅದನ್ನು ಆಸ್ವಾದಿಸಬೇಕು

November 14, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

By News Desk BenkiyabaleNovember 14, 2026 5:39 pm

ತುಮಕೂರು: ನ್ಯಾಯವು ಕೇವಲ ಆರ್ಥಿಕವಾಗಿ ಸಬಲರಾದವರಿಗೆ ಮಾತ್ರ ಸೀಮಿತವಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಹಾಗೂ ನ್ಯಾಯ ಪಡೆಯಲು ಹಣಕಾಸಿನ…

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.