ತುಮಕೂರು: ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ, ದೇಶಕ್ಕಾಗಿ ತನ್ನೆಲ್ಲಾ ಆಸ್ತಿಯನ್ನು ದಾನ ಮಾಡಿ, ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ನೆಹರು, ದೇಶ ಕಂಡ ಅಪರೂಪದ ನಾಯಕರಲ್ಲಿ ಒಬ್ಬರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪಂಡಿತ ಜವಹರ್ ಲಾಲ್ ನೆಹರು ಅವರ ೧೩೭ನೇ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,ಕಾರ್ಯಕ್ರಮದ ಅಂಗವಾಗಿ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದ ಅವರು, ವಿದೇಶದಲ್ಲಿ ಓದಿ, ಅಪಾರ ಪಾಂಡಿತ್ಯ ಪಡೆದಿದ್ದರೂ ಸಹ, ಮಹಾತ್ಮಗಾಂಧಿ ಅವರ ಕರೆಗೆ ಓಗೊಟ್ಟು,ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿ,ಸೈಮನ್ ಕಮಿಷನ್ ವರದಿಯನ್ನು ಧಿಕ್ಕರಿಸಿ, ಪ್ರತಿಭಟನೆ ಇಳಿದು ಲಾಠಿ ಏಟು ತಿಂದು ಜೈಲುವಾಸ ಅನುಭವಿಸಿ, ಜೈಲಿನಿಂದಲೇ ತಮ್ಮ ಮಗಳಿಗೆ ಬರೆದ ಡಿಸ್ಕವರಿ ಅಫ್ ಇಂಡಿಯಾ ಇಂದಿಗೂ ಜನಪ್ರಿಯ ಪುಸ್ತಕಗಳಲ್ಲಿ ಒಂದು. ಒಂದು ಗುಂಡು ಸೂಜಿಗೂ ವಿದೇಶಗಳ ಮೇಲೆ ಅವಲಂಭಿತವಾಗಿದ್ದ ಕಾಲದಲ್ಲಿ ದೇಶವನ್ನು ಅರ್ಥಿಕವಾಗಿ, ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಮುಂದೆ ತರಲು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು, ಆವುಗಳ ಮೂಲಕ ಹಂತ ಹಂತವಾಗಿ ದೇಶದ ಅಭಿವೃದ್ದಿಪಥದತ್ತ ಸಾಗಲು ಕಾರಣರಾದ ನೆಹರು ನವಭಾರತದ ನಿಮಾತೃಗಳಲ್ಲಿ ಒಬ್ಬರು ಎಂದರು.
ರಾಜ್ಯ ಸರಕಾರ ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಗಳ ಸಲಹೆಯಂತೆ ನಿಗಮ ಮಂಡಳಿಗಳಿಗೆ ನಿರ್ದೇಶಕರುಗಳನ್ನು ನೇಮಕ ಮಾಡಿದೆ.ಈ ಪಟ್ಟಿಯಲ್ಲಿ ಜಿಲ್ಲಾ ಅಧ್ಯಕ್ಷರ ಯಾವುದೇ ಪಟ್ಟಿ ಇಲ್ಲ.ಮುಂದೆ ಮತ್ತೆರಡು ಪಟ್ಟಿಗಳು ಬಿಡುಗಡೆಯಾಗಲಿವೆ ಎಂಬ ನಿರೀಕ್ಷೆ ಇದೆ. ಒಂದು ವೇಳೆ ನನಗೆ ಅವಕಾಶ ನೀಡಿದರೆ, ಪಕ್ಷಕ್ಕಾಗಿ ಹಗಲಿರುಳು ದುಡಿವ, ಪ್ರತಿಭಟನೆಗಳಲ್ಲಿ ಭಾಗವಹಿಸುವ, ಪಕ್ಷದೊಂದಿಗೆ ಸದಾ ಗುರುತಿಸಿಕೊಳ್ಳುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವ ಭರವಸೆಯನ್ನು ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ ವ್ಯಕ್ತಪಡಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ ಘೋಷಿಸಿದ ಸಂದರ್ಭದಲ್ಲಿ ಇದ್ದ ೩೩ ಕೋಟಿ ಜನಸಂಖ್ಯೆಗೆ ಆಹಾರ ಒದಗಿಸುವುದು ಕಷ್ಟದ ಕೆಲಸವಾಗಿತ್ತು.ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪ್ರಧಾನಿಯಾದ ನೆಹರು,ದೇಶದಲ್ಲಿ ಕೃಷಿ, ಕೈಗಾರಿಕೆಗಳು, ಹೈನುಗಾರಿಕೆ,ವಿಜ್ಞಾನಗಳಿಗೆ ಒತ್ತು ನೀಡಿ, ಶೈಕ್ಷಣಿಕವಾಗಿ ಭಾರತವನ್ನು ಬೆಳೆಸಲು ಪಣತೊಟ್ಟರು. ಇದರ ಫಲವಾಗಿ ಐಐಎಸ್ಸಿ, ಎಐಎಂಎಸ್,ಇಸ್ರೋ,ಐಐಟಿ ಯಂತಹ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿ ಇಂದು ದೇಶದ ವಿದ್ಯಾವಂತರು ಪ್ರಪಂಚದೆಲ್ಲೆಡೆ ದೊರೆಯುವಂತಾಗಿದ್ದಾರೆ. ಇದರ ಹಿಂದಿನ ಶಕ್ತಿ ನೆಹರು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ,ಭಾರತವನ್ನು ಅಭಿವೃದ್ದಿ ಶೀಲ ರಾಷ್ಟçವನ್ನಾಗಿ ಕಟ್ಟಿದ್ದು ನೆಹರು.ಆದರೆ ಇಂದಿನ ಪ್ರಧಾನಿ ನೆಹರು ಯೋಜನೆಗಳ ಹೆಸರುಗಳನ್ನಷ್ಟೇ ಬದಲಾವಣೆ ಮಾಡಿ, ಪ್ರಚಾರ ಪಡೆಯುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ೧೭ ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶವನ್ನು ಎಲ್ಲ ರೀತಿಯಿಂದಲು ಮುನ್ನೆಡೆಸಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮ ಕುರಿತು ಮುಖಂಡರಾದ ಷಣ್ಮುಗಪ್ಪ, ನಟರಾಜಶೆಟ್ಟಿ, ಪಿ.ಶಿವಾಜಿ,ಇರ್ಫಾನ್ ಅಹಮದ್,ಸುರೇಶ್ ರಾಜು, ಲಿಂಗರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಸಂಜೀವ್ಕುಮಾರ್,ವಕೀಲರಾದ ಕೆ.ಎನ್.ಹರೀಶ್, ಮಂಜುನಾಥ್, ಕೈದಾಳ ರಮೇಶ್, ಅತೀಕ್ ಅಹಮದ್, ಕೆಂಪಣ್ಣ, ಸೈಯದ್ ದಾದಾಪೀರ್, ಅಂಬರೀಷ್, ಶಮಾ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)





