BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು
  • ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು
  • ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ
  • ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ
  • ಭಾಷೆಯನ್ನು ಮಾತನಾಡುವುದಲ್ಲ ಅದನ್ನು ಆಸ್ವಾದಿಸಬೇಕು
  • ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು: ಡಿಸಿ
  • ತುಮಕೂರು ಜಿಲ್ಲೆಯಲ್ಲಿ 1,757 ಕರುಳುಬೇನೆ ಪ್ರಕರಣ ಪತ್ತೆ
  • ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಪಶು ಆಸ್ಪತ್ರೆಗಳ ಬಲವರ್ಧನೆಗೆ ಸಚಿವ ಪುಟ್ಟ ರಂಗಶೆಟ್ಟಿ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು
news

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

By News Desk BenkiyabaleUpdated:November 14, 2026 5:39 pm

ತುಮಕೂರು: ನ್ಯಾಯವು ಕೇವಲ ಆರ್ಥಿಕವಾಗಿ ಸಬಲರಾದವರಿಗೆ ಮಾತ್ರ ಸೀಮಿತವಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಹಾಗೂ ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಇರಬಾರದು ಎಂಬುದು ಕಾನೂನು ಸೇವಾ ಪ್ರಾಧಿಕಾರದ ಆಶಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಅಧ್ಯಕ್ಷ ಹಾಗೂ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಹಮ್ಮದ್ ಅಶ್ರಫ್ ಆರಿಸ್ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಸೆಂಟರ್ ಹಾಗೂ ರೋಟರಿ ಪ್ರೇರಣ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಮಾದಕ ದ್ರವ್ಯ ಜಾಗೃತಿ ಮತ್ತು ಕ್ಷೇಮ ಸಂಚಾರ-ಡ್ರಗ್ ಮುಕ್ತ ಭಾರತಕ್ಕಾಗಿ ಅಭಿಯಾನ ಕುರಿತು ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟಿçÃಯ ಮಟ್ಟದಿಂದ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದವರೆಗೆ ರೂಪಿಸಿರುವ ಕಾನೂನು ಸೇವಾ ಪ್ರಾಧಿಕಾರಗಳ ವ್ಯವಸ್ಥೆಯ ಸದುಪಯೋಗವನ್ನು ಪ್ರತಿಯೊಬ್ಬ ಅರ್ಹ ನಾಗರಿಕರು ಪಡೆದುಕೊಳ್ಳಬೇಕು. ಕಾನೂನು ಅರಿವು ಹೊಂದಿರುವ ಸಮಾಜವೇ ನ್ಯಾಯಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಬಲ್ಲದು ಎಂದರು.
ರಾಷ್ಟಿçÃಯ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲಕ ಬಡವರು, ಮಹಿಳೆಯರು, ಮಕ್ಕಳು ಹಾಗೂ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ನೆರವಿನ ಮೂಲಕ ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನ ನ್ಯಾಯ ಮತ್ತು ಕಾನೂನಿನ ಮುಂದೆ ಸಮಾನತೆಯ ಹಕ್ಕನ್ನು ನೀಡಿದೆ. ಆರ್ಥಿಕ ಅಥವಾ ಸಾಮಾಜಿಕ ಪರಿಸ್ಥಿತಿಗಳ ಕಾರಣದಿಂದ ಯಾವುದೇ ವ್ಯಕ್ತಿ ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ದೇಶದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಪ್ರತಿ ರಾಜ್ಯದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ರಾಷ್ಟಿçÃಯ ಪ್ರಾಧಿಕಾರದ ಮಾರ್ಗಸೂಚಿಗಳಂತೆ ಕಾನೂನು ನೆರವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾನೂನು ಅರಿವು ಶಿಬಿರಗಳು, ಉಚಿತ ಕಾನೂನು ಸಲಹೆ, ಲೋಕ ಅದಾಲತ್‌ಗಳು ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಿಗೆ ನ್ಯಾಯಾಂಗ ವ್ಯವಸ್ಥೆಯ ಕುರಿತು ಅರಿವು ಮೂಡಿಸುತ್ತದೆ ಎಂದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಾರ್ವಜನಿಕರಿಗೆ ನೇರವಾಗಿ ಕಾನೂನು ನೆರವು ಒದಗಿಸುವ ಪ್ರಮುಖ ಸಂಪರ್ಕ ಕೇಂದ್ರವಾಗಿದೆ. ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಕಾರ್ಯನಿರ್ವಹಿಸುವ ಈ ಪ್ರಾಧಿಕಾರವು ಅರ್ಹರಿಗೆ ಉಚಿತ ವಕೀಲರ ನೆರವು, ಕಾನೂನು ಸಲಹೆ ಮತ್ತು ಪ್ರಕರಣಗಳ ಪರಿಹಾರಕ್ಕೆ ಮಾರ್ಗದರ್ಶನ ನೀಡುತ್ತದೆ. ತಾಲ್ಲೂಕು ಮಟ್ಟದಲ್ಲಿಯೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಮೂಲಕ ಜನರಿಗೆ ಸೇವೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯ ಸೆಕ್ಷನ್ ೧೨ರ ಪ್ರಕಾರ ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರು, ಮಾನವ ಕಳ್ಳಸಾಗಣೆ ಅಥವಾ ಭಿಕ್ಷಾಟನೆಗೆ ಒಳಗಾದವರು, ವಿಕಲಚೇತನರು, ಕೈಗಾರಿಕಾ ಕಾರ್ಮಿಕರು, ವಿಪತ್ತು ಅಥವಾ ಸಾಮೂಹಿಕ ಹಿಂಸಾಚಾರಕ್ಕೆ ತುತ್ತಾದವರು, ಬಂಧನದಲ್ಲಿರುವವರು ಹಾಗೂ ನಿಗದಿತ ಆದಾಯ ಮಿತಿಗಿಂತ ಕಡಿಮೆ ಆದಾಯ ಹೊಂದಿರುವ ಅರ್ಹ ವ್ಯಕ್ತಿಗಳು ಉಚಿತ ಕಾನೂನು ಸೇವೆ ಪಡೆಯಬಹುದಾಗಿ ಎಂದರು.
ಈ ಸೇವೆಯಲ್ಲಿ ವಕೀಲರ ನೇಮಕ, ನ್ಯಾಯಾಲಯದ ಪ್ರಕ್ರಿಯೆಗಳಿಗೆ ಅಗತ್ಯವಾದ ಕಾನೂನು ನೆರವು, ದಾಖಲೆಗಳ ಸಿದ್ಧತೆ ಹಾಗೂ ಪ್ರಕರಣಕ್ಕೆ ಸಂಬAಧಿಸಿದ ಇತರ ಅರ್ಹ ನೆರವುಗಳು ಸೇರಿವೆ ಎಂದು ಹೇಳಿದರು.
ಕಾನೂನು ಸೇವೆಗಳ ಪ್ರಾಧಿಕಾರಗಳ ಮತ್ತೊಂದು ಪ್ರಮುಖ ಕಾರ್ಯ ಲೋಕ ಅದಾಲತ್‌ಗಳ ಆಯೋಜನೆ. ಲೋಕ ಅದಾಲತ್‌ನಲ್ಲಿ ಉಭಯ ಪಕ್ಷಗಳ ಒಪ್ಪಿಗೆಯೊಂದಿಗೆ ನೀಡುವ ತೀರ್ಪು ನ್ಯಾಯಾಲಯದ ಡಿಕ್ರಿಯಂತೆ ಜಾರಿಗೊಳ್ಳುತ್ತದೆ. ಸಾಮಾನ್ಯವಾಗಿ ಲೋಕ ಅದಾಲತ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ಇರುವುದಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲೋಕೇಶ್ ಧನಪಾಲ ಹವಲೆ ಮಾತನಾಡಿ, ಮಾದಕ ದ್ರವ್ಯ ವ್ಯಸನವು ಯುವಜನತೆಯ ಭವಿಷ್ಯವನ್ನು ಹಾಳು ಮಾಡುವುದಲ್ಲದೆ, ಸಮಾಜ ಮತ್ತು ದೇಶದ ಅಭಿವೃದ್ಧಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಯುವಕರು ಮಾದಕ ವಸ್ತುಗಳ ಆಕರ್ಷಣೆ ಮತ್ತು ದುಶ್ಚಟಗಳಿಂದ ದೂರವಿದ್ದು, ಉತ್ತಮ ಸ್ನೇಹಿತರ ಸಹವಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಸಮಾಜದ ವಿವಿಧ ವರ್ಗಗಳಿಗೆ ಕಾನೂನು ನೆರವು ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ನಿರ್ವಹಿಸುತ್ತಿವೆ ಎಂದರು. ಮಾದಕ ವಸ್ತುಗಳ ಮಾರಾಟವು ಇಂದು ಸಂಘಟಿತ ಅಪರಾಧದ ಸ್ವರೂಪ ಪಡೆದುಕೊಂಡಿದೆ. ಲಾಭದ ಉದ್ದೇಶದಿಂದ ಕೆಲವು ಜಾಲಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರನ್ನು ಗುರಿಯಾಗಿಸಿಕೊಂಡು ಉಚಿತವಾಗಿ ಮಾದಕ ವಸ್ತುಗಳನ್ನು ನೀಡಿ ವ್ಯಸನಕ್ಕೆ ದೂಡುತ್ತಿವೆ. ಆರಂಭದಲ್ಲಿ ಉಚಿತವಾಗಿ ನೀಡುವುದು ಅವರ ವ್ಯಾಪಾರ ವಿಸ್ತರಣೆಯ ತಂತ್ರವಾಗಿದೆ. ಒಮ್ಮೆ ವ್ಯಸನಕ್ಕೆ ಒಳಗಾದ ನಂತರ ಅದನ್ನೇ ಬಂಡವಾಳ ಮಾಡಿಕೊಂಡು ಹಣ ಸಂಪಾದಿಸುತ್ತಾರೆ ಎಂದು ವಿವರಿಸಿದರು.
ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ. ಸಿದ್ದರಾಮಣ್ಣ, ಸರ್ಕಾರಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸೌಮ್ಯ, ಜೂನಿಯರ್ ಕಾಲೇಜಿನ ಪ್ರಾಂಶುಪಾಲರ ರಾಜಕುಮಾರ್, ಕೃಷ್ಣಕುಮಾರ್, ರಘು, ಗಣೇಶಪ್ರಸಾದ್, ಬೆಳ್ಳಿ ಲೋಕೇಶ್, ಡಾ. ಲೋಕೇಶ್‌ಬಾಬು, ಬಿಳಿಗೆರೆ ಶಿವಕುಮಾರ್, ವೆಂಕಟೇಶ್.  ಡಾ. ದಯಾನಂದ್. ಅಜಯ್‌ಕುಮಾರ್, ಡಾ. ಮುದ್ದುವೀರಪ್ಪ, ರಹಮತ್ ಉಲ್ಲಾ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾ ನ್ಯಾಯಾಲಯದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ-ಟೌನ್‌ಹಾಲ್ ವೃತ್ತ ಮಾರ್ಗ, ಬಿ.ಹೆಚ್. ರಸ್ತೆ ಮುಖೇನ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದ ವರೆಗೆ ಜಾಥಾ ನಡೆಸಲಾಯಿತು.

(Visited 1 times, 1 visits today)
kannada news karnataka local news tumakur tumkur tumkur news ತುಮಕೂರು:
Previous Articleದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು
News Desk Benkiyabale

Related Posts

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm news

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm news

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm news
ತಾಜಾ ಸುದ್ಧಿಗಳು
news

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

November 14, 2026 5:39 pm
news

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm
news

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm
news

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm
news

ಭಾಷೆಯನ್ನು ಮಾತನಾಡುವುದಲ್ಲ ಅದನ್ನು ಆಸ್ವಾದಿಸಬೇಕು

November 14, 2026 5:34 pm
news

ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು: ಡಿಸಿ

November 13, 2026 5:09 pm
Our Youtube Channel
Our Picks

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

November 14, 2026 5:39 pm

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm

ಭಾಷೆಯನ್ನು ಮಾತನಾಡುವುದಲ್ಲ ಅದನ್ನು ಆಸ್ವಾದಿಸಬೇಕು

November 14, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

By News Desk BenkiyabaleNovember 14, 2026 5:39 pm

ತುಮಕೂರು: ನ್ಯಾಯವು ಕೇವಲ ಆರ್ಥಿಕವಾಗಿ ಸಬಲರಾದವರಿಗೆ ಮಾತ್ರ ಸೀಮಿತವಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಹಾಗೂ ನ್ಯಾಯ ಪಡೆಯಲು ಹಣಕಾಸಿನ…

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.