ತುಮಕೂರು: ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ಸರ್ಕಾರ ಹಣ ನೀಡಬೇಕು, ಬೆಂಗಳೂರಿನಲ್ಲಿ ನಾರಾಯಣ ಗುರುಗಳ ಪ್ರತಿಮೆ ಸ್ಥಾಪನೆ ಮಾಡಬೇಕು, ಕಲ್ಯಾಣ ಕರ್ನಾಟಕದ ಈಡಿಗರ ಜೀವನ ಮಾರ್ಗವಾಗಿದ್ದ ಸೇಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಚಿತ್ತಾಪುರ ತಾಲ್ಲೂಕು ಕರದಾಳ್ನ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.
ರಾಷ್ಟಿçÃಯ ಈಡಿಗ ಮಹಾಮಂಡಳಿ ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಸರ್ಕಾರ ಸೇಂದಿ ನಿಷೇಧ ಮಾಡಿ೨ ೪ ವರ್ಷವಾದರೂ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಸಮುದಾಯಕ್ಕೆ ಕಲ್ಪಿಸಿಕೊಡಲಿಲ್ಲ. ಕೇರಳ, ತೆಲಂಗಾಣ, ಆಂಧ್ರ, ಗೋವಾ, ಮಂಗಳೂರು-ಉಡುಪಿ ಯಲ್ಲಿ ಸೇಂದಿ ಇದೆ. ಉಳಿದ ೨೯ ಜಿಲ್ಲೆಗಳಲ್ಲಿ ನಮ್ಮ ಕುಲ ಕಸುಬನ್ನೇ ಬಂದ್ ಮಾಡಿದರು.ಆದರೆ ಪರ್ಯಾಯ ಕೊಡಲಿಲ್ಲ ಎಂದು ಆರೋಪಿಸಿದರು.
ಕಳೆದ ೬ ವರ್ಷದಿಂದ ತಾವು ರಾಜ್ಯಾದ್ಯಂತ ಮಾತ್ರವಲ್ಲ, ದೇಶದಲ್ಲಿ ೧೧ ರಾಜ್ಯಗಳಲ್ಲಿ ಪ್ರವಾಸ ಮಾಡಿ ಸಮುದಾಯ ಸಂಘಟನೆ ಮಾಡುತ್ತಿದ್ದು, ರಾಜ್ಯದಲ್ಲಿ ೨೧ ಜಿಲ್ಲೆಗಳಲ್ಲಿ ಈಡಿಗ ಸಮುದಾಯ ತನ್ನದೇ ಆದ ಶಕ್ತಿ ಹೊಂದಿದೆ. ಇದುವರೆಗೆ ೩ ಪಾದಯಾತ್ರೆಗಳನ್ನು ಮಾಡಿ, ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟು, ೨-೩ ಬೇಡಿಕೆಗಳನ್ನು ಈಡೇರಿಸಿದೆ ಎಂದು ಹೇಳಿದರು.
ಸಂಕಷ್ಟ ಸ್ಥಿತಿಯಲ್ಲಿ ಸಮುದಾಯ: ಕರ್ನಾಟಕದಲ್ಲಿ ೨೫ ರಿಂದ ೩೦ ಲಕ್ಷಜನಸಂಖ್ಯೆ ಹೊಂದಿರುವ ಈಡಿಗ ಸಮುದಾಯ ಇದೆ. ತುಮಕೂರು ಜಿಲ್ಲೆಯಲ್ಲಿ ಸುಮಾರು ೨೦ ಸಾವಿರ ಜನ ಇದ್ದಾರೆ. ಸಿರಾ, ಚಿಕ್ಕನಾಯಕನಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆ ಇದೆ. ಸಮುದಾಯದಲ್ಲಿ ಕೇವಲ ಶೇಕಡ೪-೫ರಷ್ಟು ಜನ ಮಾತ್ರ ಶ್ರೀಮಂತರು. ಉಳಿದವರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಮುದಾಯದ ೬ ಜನಪ್ರತಿನಿಧಿಗಳು, ೪ ಜನ ಶಾಸಕರು, ಅದರಲ್ಲಿಒಬ್ಬ ಮಂತ್ರಿ ಇದ್ದರೂ ಸಮಾಜದ ಬೇಡಿಕೆಗಳು ಈಡೇರಿಲ್ಲ. ಕೆಪಿಸಿಸಿ ಅಧ್ಯಕ್ಷರು ಕೂಡ ಈ ಸಮುದಾಯದಿಂದ ಬಂದವರು. ಆದರೂ ಸಮುದಾಯದ ಬೇಡಿಕೆಗಳನ್ನು ವಿಧಾನಸೌಧದಲ್ಲಿ, ಮುಖ್ಯಮಂತ್ರಿ ಹತಿರತೆಗೆದುಕೊಂಡು ಹೋಗಿ ನ್ಯಾಯ ಕೊಡಿಸುವಲ್ಲಿ ರಾಜಕಾರಣಿಗಳು ವಿಫಲರಾಗಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.
ಚಿಂತನ ಶಿಬಿರ: ಇದೇ ತಿಂಗಳು ೨೮ನೇ ತಾರೀಕು ಚಿಕ್ಕನಾಯಕನಹಳ್ಳಿಯಲ್ಲಿ ಜಿಲ್ಲಾಚಿಂತನ ಶಿಬಿರ ನಡೆಸಲಾಗುವುದು. ೩೦೦ ರಿಂದ ೫೦೦ ಆಯ್ದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ೧೨ನೇ ಶತಮಾನದ ಅನುಭವ ಮಂಟಪದಲ್ಲಿ ಬಸವಣ್ಣನವರ ಜೊತೆ ಇದ್ದ ೭೭೦ ಶರಣರಲ್ಲಿ ಈಡಿಗ ಸಮುದಾಯದ ಶರಣ ಹೆಂಡದ ಮಾರಯ್ಯ ಮತ್ತು ಶಿವಶರಣೆ ಈಡಿಗರ ಅಕ್ಕಮ್ಮ ಇದ್ದರು. ಅಕ್ಕಮ್ಮ ೧೫೪ ವಚನ, ಮಾರಯ್ಯ ೧೨ ವಚನ ಬರೆದಿದ್ದಾರೆ.ಅವರ ವಚನಗಳನ್ನು ಪ್ರಕಟಿಸಿ ಪ್ರಚಾರ ಮಾಡುವ ಕಾರ್ಯವನ್ನು ಆರ್ಯ ಈಡಿಗ ಮಹಾಮಂಡಳಿ ಮಾಡಲಿದೆ ಎಂದು ತಿಳಿಸಿದರು.
ರಾಷ್ಟಿçÃಯ ಈಡಿಗರ ಮಹಾಮಂಡಳಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತರಾಜು, ಜಿಲ್ಲಾಧ್ಯಕ್ಷ ಎ. ಸುರೇಶ್, ಮುಖಂಡರಾದ ವಿಜಯ ಕುಮಾರ್, ಪರಮೇಶ್, ವಿರೂಪಾಕ್ಷ, ರಮೇಶ್ ಅಜ್ಜೇನಹಳ್ಳಿ, ರಾಜಣ್ಣ, ಶ್ರೀನಿವಾಸ್, ಹನುಮೇಶ್, ರವಿ, ಬ್ರಹ್ಮಶ್ರೀ ನಾರಾಯಣಗುರು ಸಮಾಜಂ ಟ್ರಸ್ಟ್ ಅಧ್ಯಕ್ಷ ರಾಜನ್, ಕಾರ್ಯದರ್ಶಿ ಸಂತೋಷ್ ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)





