ತುಮಕೂರು: ೧೯೬೩ರಲ್ಲಿ ಸಣ್ಣ ರಾಕೆಟ್ನಿಂದ ಆರಂಭವಾದ ಭಾರತದ ಬಾಹ್ಯಾಕಾಶ ಪಯಣ ಇಂದು ಜಗತ್ತಿನ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದೆ. ಸುಮಾರು ೧೩,೫೦೦ ಕೋಟಿ ರೂ. ವೆಚ್ಚದ ಅತ್ಯಾಧುನಿಕ ‘ನಿಸಾರ್’ ಉಪಗ್ರಹವನ್ನು ಭಾರತ ತನ್ನದೇ ನೆಲದಿಂದ ಯಶಸ್ವಿಯಾಗಿ ಉಡಾವಣೆ ಮಾಡಲ ಸಿದ್ದತೆ ನಡೆಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರು ಹಾಗೂ ಬಾಹ್ಯಾಕಾಶ ವಿಭಾಗದ ಕಾರ್ಯದರ್ಶಿ ಡಾ. ವಿ. ನಾರಾಯಣನ್ ಹೇಳಿದರು.
ನಗರದ ಅಗಳಕೋಟೆಯ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ವಿಶ್ವವಿದ್ಯಾಲಯದ ೧೫ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡಿ, ಒಂದು ಕಾಲದಲ್ಲಿ ರಾಕೆಟ್ ಭಾಗಗಳನ್ನು ಸೈಕಲ್ನಲ್ಲಿ ಹಾಗೂ ಉಪಗ್ರಹ ಪ್ರಯೋಗಗಳನ್ನು ಎತ್ತಿನಗಾಡಿಯಲ್ಲಿ ಸಾಗಿಸುತ್ತಿದ್ದ ಭಾರತ, ಇಂದು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
೧೯೬೩ರ ನವೆಂಬರ್ ೨೧ರಂದು ಅಮೆರಿಕ ನೀಡಿದ್ದ ಸಣ್ಣ ರಾಕೆಟ್ ಅನ್ನು ಸೈಕಲ್ನಲ್ಲಿ ತಂದು, ಚರ್ಚ್ ಕಟ್ಟಡವೊಂದರಲ್ಲಿ ಜೋಡಿಸಿ ಉಡಾವಣೆ ಮಾಡಲಾಗಿತ್ತು. ಆದರೆ ಇಂದು ಸುಮಾರು ೧೩,೫೦೦ ಕೋಟಿ ರೂ. ವೆಚ್ಚದ ಅತ್ಯಾಧುನಿಕ ‘ನಿಸಾರ್’ ಉಪಗ್ರಹ ಹಾಗೂ ೬,೦೦೦ ಕೆಜಿ ತೂಕದ ವಾಣಿಜ್ಯ ಉಪಗ್ರಹಗಳನ್ನು ಭಾರತ ತನ್ನದೇ ನೆಲದಿಂದ ಯಶಸ್ವಿಯಾಗಿ ಉಡಾವಣೆ ಮಾಡುತ್ತಿದೆ ಎಂದು ಡಾ. ವಿ. ನಾರಾಯಣನ್ ಅಭಿಮಾನದಿಂದ ನುಡಿದರು.
ರಕ್ಷಣಾ ಕ್ಷೇತ್ರದಲ್ಲಿ ಡಿಆರ್ಡಿಒ ಮತ್ತು ಇಸ್ರೋ ಸಾಧನೆಗಳನ್ನು ಪ್ರಸ್ತಾಪಿಸಿದ ಅವರು, ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತದ ೨೫ ಉಪಗ್ರಹಗಳು ನಿಖರವಾಗಿ ಕಾರ್ಯನಿರ್ವಹಿಸಿ ದೇಶದ ಸುರಕ್ಷತೆಗೆ ಬಲ ತುಂಬಿದವು. ಮುಂದಿನ ದಿನಗಳಲ್ಲಿ ಕಕ್ಷೆಗೆ ಸೇರಿಸುವ ಸಾಮರ್ಥ್ಯದ ಹೊಸ ಉಡಾವಣಾ ವಾಹನಗಳು ಸಿದ್ಧವಾಗುತ್ತಿದ್ದು, ಬಾಹ್ಯಾಕಾಶ ಪ್ರವಾಸೋದ್ಯಮದತ್ತಲೂ ಹೆಜ್ಜೆ ಇಡಲಾಗುತ್ತಿದೆ ಎಂದು ಡಾ. ವಿ. ನಾರಾಯಣನ್ ತಿಳಿಸಿದರು.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಪದ್ಮಶ್ರೀ (೨೦೨೫) ಪುರಸ್ಕೃತರು ಹಾಗೂ ಖ್ಯಾತ ಜೀವಶಾಸ್ತ್ರ ವಿಜ್ಞಾನಿ ಡಾ. ಶುಭಾ ವೆಂಕಟೇಶ ಅಯ್ಯಂಗಾರ್ ಮಾತನಾಡಿ, ಮುಂದಿನ ಶಿಕ್ಷಣ ಅಥವಾ ವೃತ್ತಿ ಯಾವುದೇ ಇರಲಿ, ನಿರಂತರ ಕಲಿಕೆ, ಕಠಿಣ ಪರಿಶ್ರಮ, ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆದರೆ ಖಂಡಿತವಾಗಿಯೂ ಯಶಸ್ಸು ಲಭಿಸುತ್ತದೆ. ಹಾದಿಯಲ್ಲಿ ಕಷ್ಟಗಳು ಅಥವಾ ಸೋಲುಗಳು ಎದುರಾದರೂ ಧೃತಿಗೆಡದೆ ಆತ್ಮವಿಶ್ವಾಸದಿಂದ ಪ್ರಯತ್ನ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಅಭಿವೃದ್ಧಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಹಾಗೂ ಕಾವೇರಿ ಯೋಜನೆ ಸೇರಿದಂತೆ ವಿವಿಧ ಜನಪರ ಕಾರ್ಯಗಳ ಮೂಲಕ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಅವರ ಸೇವೆಯನ್ನು ಅವರು ಸ್ಮರಿಸಿದರು. ಡಿ.ವಿ. ಗುಂಡಪ್ಪ (ಡಿವಿಜಿ) ಅವರ ‘ಮಂಕುತಿಮ್ಮನ ಕಗ್ಗ’ವನ್ನು ಉಲ್ಲೇಖಿಸಿದ ಅವರು, ಕಷ್ಟಗಳ ನಡುವೆಯೂ ಸಮಚಿತ್ತ ಮತ್ತು ಸಮಾಜಮುಖಿ ಮನೋಭಾವ ಬೆಳೆಸಿಕೊಳ್ಳುವ ಮಹತ್ವವನ್ನು ವಿವರಿಸಿದರು.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ, ಉಪಮುಖ್ಯಮಂತ್ರಿ ಹಾಗೂ ಸಾಹೇ ಕುಲಾಧಿಪತಿ ಡಾ. ಜಿ. ಪರಮೇಶ್ವರ ಅವರೊಂದಿಗಿನ ತಮ್ಮ ಸಂಬAಧ ರಾಜಕಾರಣ ಮೀರಿದ್ದು, ಅವರು ರಾಜಕಾರಣಿಯಾಗುವ ಮುಂಚಿನಿAದಲೇ ವಿಶೇಷ ಬಾಂಧವ್ಯವಿದೆ ಎಂದು ತಿಳಿಸಿದರು.
ಪದವಿ ಪ್ರದಾನ: ಘಟಿಕೋತ್ಸವದಲ್ಲಿ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಸಾಹೇ ವಿಶ್ವವಿದ್ಯಾಲಯದ ೧೫ನೇ ಘಟಿಕೋತ್ಸವದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿAಗ್ ೧೩೪೭ ವಿದ್ಯಾರ್ಥಿಗಳಿಗೆ ಪದವಿ ಮತ್ತು ೧೮ ಮಂದಿಗೆ ಚಿನ್ನದ ಪದಕ ಪ್ರದಾನ ಮಾಡಿದರು. ವೈದ್ಯಕೀಯ- ೦೪ ದಂತ ವೈದ್ಯಕೀಯ-೦೨ ಎಂಜಿನಿಯರಿAಗ್-೧೦ ಎಂಸಿಎ, ಎಂಬಿಎ-೦೨ ಸೇರಿದಂತೆ ೧೮ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಇದೆ ವೇಳೆ ೧೮ ಪಿಎಚ್ಡಿ ಪದವಿ, ಫೆಲೋಶಿಪ್-೦೮ ಪದಕಗಳನ್ನು ವಿದ್ಯಾರ್ಥಿಗಳು ಗಣ್ಯರಿಂದ ಪಡೆದರು.
ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಕೆ ಬಿ ಲಿಂಗೇಗೌಡ, ಅವರು ಸಾಹೇ ವಿಶ್ವವಿದ್ಯಾನಿಲಯ ವಾರ್ಷಿಕ ಪ್ರಗತಿನೋಟದ ವರದಿಯನ್ನು ಮಂಡಿಸಿದರು. ಈ ಬಾರಿಯ ಹೊರಾಂಗಣ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುಮಾರು ೫ಸಾವಿರ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆಸನ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಸಮಾರಂಭದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರಿ, ಡಾ.ಜಿ.ಎಸ್.ಆನಂದ್, ಸಾಹೇ ವಿ.ವಿ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವರಾದ ಡಾ. ಅಶೋಕ್ ಮೆಹತಾ, ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ.ಸುನೀಲ್.ಕೆ, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ಉಪ ಕುಲಸಚಿವ ಡಾ.ಸುದೀಪ್ ಕುಮಾರ್, ಟಿ.ಬೇಗೂರಿನ ಸಿದ್ದಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಡಾ. ದಿವಾಕರ್, ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ.ನಡಕಟ್ಟಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ಗೋಪಾಲ್, ನಿವೃತ್ತ ಪ್ರಾಂಶುಪಾಲರಾದ ಡಾ ಎಂ ಕೆ ವೀರಯ್ಯ, ಡಾ ರವಿಪ್ರಕಾಶ್ ಸೇರಿದಂತೆ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು ಇತರರಿದ್ದರು.
(Visited 1 times, 1 visits today)





