ತುಮಕೂರು: ಮಳೆ ಚಳಿ ಎನ್ನದೇ ಮಕ್ಕಳೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಆಶಾ ತಾಯಂದಿರ ಹೋರಾಟವನ್ನು ಬೆಂಬಲಿಸಿ, ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಗೂ ಜೂನಿಯರ್ ಕಾಲೇಜು ಮೈದಾನ ಸೇರಿದಂತೆ ವಿವಿಧ ಕಡೆ ವಿದ್ಯಾರ್ಥಿಗಳ ಆಗ್ರಹ ದಿನವನ್ನ ನಡೆಸಲಾಯಿತು.
ಈ ಸಂಧರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಎರಡು ವರ್ಷಗಳ ಹಿಂದೆ ೧೦,೦೦೦ರೂ ಗೌರವಧನದ ನೀಡುತ್ತೇವೆ ಎಂದು ಭರವಸೆ ನೀಡಿದ್ದು ಅಷ್ಟೆ ಅಲ್ಲದೆ, ಕಾಂಗ್ರೇಸ್ ಪಕ್ಷದ ಜಾಲತಾಣಗಳಲ್ಲಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ಪ್ರಚಾರ ತೆಗೆದುಕೊಂಡಿತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ಇವರಿಗೆ ಮೋಸ ಮಾಡಿದೆ. ಆದ್ದರಿಂದ, ಆಶಾ ಕಾರ್ಯಕರ್ತೆಯರ ಸರ್ಕಾರದ ಸುಳ್ಳು ಭರವಸೆಯನ್ನು ಲೆಕ್ಕಿಸದೆ ಸರ್ಕಾರದ ಆದೇಶಕ್ಕಾಗಿ ಪಟ್ಟು ಹಿಡಿದಿರುವುದನ್ನು ಎಐಡಿಎಸ್ಓ ಶ್ಲಾಘಿಸುತ್ತದೆ ಎಂದರು.
ಮುಂದುವರಿದು ಮಾತನಾಡಿದ ಅವರು ಬೆಂಗಳೂರಿನ ಟರ್ನಲ್ ರೋಡ್ ಪ್ರಾಜೆಕ್ಟ್ ಗೆ ೨೦,೦೦೦ ಕೋಟಿ, ಕಾರ್ಪೊರೇಟ್ ಕಂಪನಿಗಳಿಗೆ ಸಾವಿರಾರು ಕೋಟಿ ತೆರಿಗೆ ವಿನಾಯಿತಿ, ರಾಜ್ಯ ಸರ್ಕಾರದ ಜಾಹೀರಾತುಗಳಿಗೆ ೫೦೦ ಕೋಟಿ ಮುಂತಾದವುಗಳನ್ನು ಸೇರಿದಂತೆ ಈ ರೀತಿ ರಾಜ್ಯ ಸರ್ಕಾರವು ಅನುಪಯುಕ್ತವಾಗಿ ದುಂದು ವೆಚ್ಚ ಮಾಡುತ್ತಿದೆ ಆದರೆ ಆಶಾ ಕಾರ್ಯಕರ್ತೆಯರ ಗೌರವಧನ ಕೇಳಿದಾಗ “ಕೇಳಿದಾಗಲೆಲ್ಲ, ಕಂಠಿಹಾರ ಕೊಡಲು ಸಾಧ್ಯವಿಲ್ಲ” ಎಂದು ಸರ್ಕಾರದ ಮಂತ್ರಿಗಳೊಬ್ಬರು ಹಗುರವಾಗಿ ಮಾತನಾಡಿದ್ದಾರೆ. ಸಚಿವರ ಮಾತಿಗೆ ಎಐಡಿಎಸ್ಓ ಆಕ್ಷೇಪ ವ್ಯಕ್ತಪಡಿಸುತ್ತದೆ. ಹಗಲು-ರಾತ್ರಿಯೇನ್ನದೆಯೇ, ದಿನವೂ ಕಿಲೋ ಮೀಟರ್ ಗಟ್ಟಲೆ ನಡೆದು ಮನೆ-ಮನೆಗೆ ಆರೋಗ್ಯದ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಗೋಳನ್ನು ಕೇಳದ ಸರ್ಕಾರದ ನಡೆಯನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
(Visited 1 times, 1 visits today)





