BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ
  • ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧಿ ಇಲ್ಲ: ಸ್ಪಷ್ಟನೆ
  • ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವ್ಯಾಪಕ ವಿರೋಧ
  • ೧೧ ಕೆ.ವಿ ಮಾರ್ಗಗಳ ಸಮಗ್ರ ನಿರ್ವಹಣೆ
  • ಗ್ರಾಮಗಳ ಅಭಿವೃದ್ಧಿಗಾಗಿ ೧೭ಕೋಟಿ ೮೪ಲಕ್ಷ ವೆಚ್ಚ
  • ಸಿದ್ದರಾಮಯ್ಯ ಬಜೆಟ್‌ನಲ್ಲಿ ನಾಟಕಕ್ಕೆ ೧ ಕೋಟಿ
  • ಕಾನೂನಿನಡಿಯಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರವಿದೆ
  • ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಸಾಧನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಇಂಟಿಗ್ರೆಟೆಡ್ ಕಮಾಂಡಿಂಗ್ ಕೇಂದ್ರಕ್ಕೆ ಸಂಸದ ಬಸವರಾಜು ಚಾಲನೆ!
Trending

ಇಂಟಿಗ್ರೆಟೆಡ್ ಕಮಾಂಡಿಂಗ್ ಕೇಂದ್ರಕ್ಕೆ ಸಂಸದ ಬಸವರಾಜು ಚಾಲನೆ!

By News Desk BenkiyabaleUpdated:August 15, 2019 6:18 pm

ತುಮಕೂರು:

      ಸಿಗ್ನಲ್ ಜಂಪ್ ಮಾಡುವುದು ಸೇರಿದಂತೆ ತುಮಕೂರು ನಗರದಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನಗಳನ್ನು ಪತ್ತೆ ಹಚ್ಚುವುದು ಸೇರಿದಂತೆ ವಿವಿಧ 7 ಅತ್ಯಾಧುನಿಕ ಕೆಲಸಗಳನ್ನು ನಿರ್ವಹಿಸುವ ಇಂಟಿಗ್ರೆಟೆಡ್ ಸಿಟಿ ಕಮಾಂಡಿಂಗ್ ಅಂಡ್ ಕಂಟ್ರೋಲಿಂಗ್ ಕೇಂದ್ರವು ಮಹಾನಗರ ಪಾಲಿಕೆ ಆವರಣದಲ್ಲಿ ಇಂದಿನಿಂದ (ಗುರುವಾರ) ಕಾರ್ಯಾರಂಭ ಮಾಡಿದೆ.

      ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಈ ಕೇಂದ್ರವನ್ನು ಸಂಸದರಾದ ಜಿ.ಎಸ್. ಬಸವರಾಜು ಅವರು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು, ಈ ಕೇಂದ್ರದ ಮೂಲಕ ತುಮಕೂರು ನಗರದ 8 ಜಂಕ್ಷನ್‍ಗಳಲ್ಲಿ ರಸ್ತೆ ನಿಯಮ ಉಲ್ಲಂಘಿಸುವ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇದರಿಂದಾಗಿ ಶಿಸ್ತುಬದ್ಧ ಸಾರಿಗೆ ವ್ಯವಸ್ಥೆ ನಗರದಲ್ಲಿ ಅನುಷ್ಟಾನಗೊಳ್ಳಲಿದೆ. ಈ ಯೋಜನೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿದೆ. ಇಂದು ಈ ಕೇಂದ್ರವನ್ನು ಆರಂಭಿಸಿದ್ದು, ಈ ಬಗ್ಗೆ ನಗರದ ಜನತೆಗೆ ವ್ಯಾಪಕ ಅರಿವು ಮೂಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ನಂತರ ಸಂಚಾರ ಉಲ್ಲಂಘನೆಗೆ ಈ ಕೇಂದ್ರದ ಮೂಲಕ ನೋಟೀಸ್ ಜಾರಿ ಮಾಡಿ ದಂಡವನ್ನು ಸಂಗ್ರಹಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದರು.

      ಇದೇ ಸಂದರ್ಭದಲ್ಲಿ ಮಾತನಾಡಿ, ಶಾಸಕ ಜ್ಯೋತಿಗಣೇಶ್ ಅವರು ನಗರದ ಕ್ಯಾತ್ಸಂದ್ರ, ಬಟವಾಡಿ, ಟೌನ್‍ಹಾಲ್ ಸರ್ಕಲ್, ಶಿವಕುಮಾರ ಸ್ವಾಮೀಜಿ ಸರ್ಕಲ್ ಸೇರಿದಂತೆ 8 ಜಂಕ್ಷನ್‍ಗಳಲ್ಲಿ ರೆಡ್‍ಲೈಟ್ ವೈಲೇಷನ್, ಡಿಟೀಕ್ಷನ್ ಕ್ಯಾಮೆರಾ, ಆಟೋಮ್ಯಾಟಿಕ್ ನಂಬರ್‍ಪ್ಲೇಟ್, ರೆಕಗ್ನಿಷನ್ ಕ್ಯಾಮೆರಾ ಸೇರಿದಂತೆ ವಿವಿಧ ರೀತಿಯ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಕ್ಯಾಮೆರಾಗಳು ರಸ್ತೆ ಉಲ್ಲಂಘನೆ ಮಾಡುವ ವಾಹನಗಳ ನಂಬರ್ ಪ್ಲೇಟ್‍ಗಳನ್ನು ಸೆರೆಹಿಡಿಯಲಿವೆ. ನಂತರ ಸಂಬಂಧಿಸಿದ ವಾಹನ ಮಾಲೀಕರಿಗೆ ದಂಡ ವಿಧಿಸಲು ನೋಟೀಸ್‍ನ್ನು ಈ ಕೇಂದ್ರದ ಮೂಲಕ ಜನರೇಟ್ ಮಾಡಿ ಪೊಲೀಸ್ ಇಲಾಖೆ ಜಾರಿ ಮಾಡಲಿದೆ. ಕೇಂದ್ರಿಕೃತ ವ್ಯವಸ್ಥೆಯಿಂದ ನಗರದಲ್ಲಿ ಕಳ್ಳತನ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಯ ಮೇಲೂ ನಿಗಾವಹಿಸಬಹುದಾಗಿದೆ ಎಂದರು.

      ಈ ಕೇಂದ್ರವು ತಾತ್ಕಾಲಿಕವಾಗಿ ಪಾಲಿಕೆ ಆವರಣದಲ್ಲಿ ಪ್ರಾರಂಭವಾಗಿದ್ದು, ತದನಂತರ ನಗರದ ಜಿಲ್ಲಾ ಎಸ್‍ಪಿ ಕಛೇರಿ ಆವರಣಕ್ಕೆ ಶಾಶ್ವತವಾಗಿ ಸ್ಥಳಾಂತರಗೊಳ್ಳಲಿದೆ. ಬೀದಿ ದೀಪಗಳ ನಿರ್ವಹಣೆ, ಜಿಪಿಎಸ್ ಆಧಾರಿತ ಆಸ್ತಿಗಳ ನೋಂದಣಿ ಸೇರಿದಂತೆ ವಿವಿಧ ಅತ್ಯಾಧುನಿಕ ಸೌಲಭ್ಯಗಳನ್ನು ಈ ಕೇಂದ್ರ ನಿರ್ವಹಿಸಲಿದೆ. ಎಫ್ಕಾನ್ ಇಂಡಿಯಾ ಸಂಸ್ಥೆಯು 5 ವರ್ಷಗಳ ಕಾಲ ಈ ಕೇಂದ್ರವನ್ನು ನಿರ್ವಹಿಸಿ ಪಾಲಿಕೆ ಹಸ್ತಾಂತರಿಸಲಿದೆ ಎಂದು ಅವರು ತಿಳಿಸಿದರು.

      ಇದೇ ಸಂದರ್ಭದಲ್ಲಿ ಆಸ್ತಿ ತೆರಿಗೆ ಪಾವತಿ, ನೀರು ಬಿಲ್ಲು, ಸಕಾಲ ಮತ್ತಿತರ ಸೌಲಭ್ಯಗಳನ್ನು ಪಡೆಯಲು ನಗರದ ಜನರಿಗೆ ಅನುಕೂಲವಾಗುವ “ಸ್ಮಾರ್ಟ್ ತುಮಕೂರು” ಆ್ಯಪ್‍ಗೆ ಸಂಸದರು ಹಾಗೂ ಶಾಸಕರು ಚಾಲನೆ ನೀಡಿದರು.

      ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್, ಎಸ್‍ಪಿ ಡಾ: ಕೋನ ವಂಶಿಕೃಷ್ಣ, ಪಾಲಿಕೆ ಆಯುಕ್ತ ಭೂಬಾಲನ್ ಸೇರಿದಂತೆ ಹಲವರು ಹಾಜರಿದ್ದರು.

(Visited 23 times, 1 visits today)
Previous Articleರೈಲ್ವೆ ಮಾರ್ಗ ನಿರ್ಮಾಣ : ಭೂಮಿ ಕಳೆದುಕೊಳ್ಳುವವರಿಗೆ ಉತ್ತಮ ಬೆಲೆ-ಸಂಸದ
Next Article ಕರ್ತವ್ಯ ಲೋಪ : ಶಿಕ್ಷಕನ ಅಮಾನತ್ತು!
News Desk Benkiyabale

Related Posts

ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ

June 11, 2026 5:15 pm ಇತರೆ ಸುದ್ಧಿಗಳು

ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧಿ ಇಲ್ಲ: ಸ್ಪಷ್ಟನೆ

June 11, 2026 5:05 pm news

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವ್ಯಾಪಕ ವಿರೋಧ

June 11, 2026 4:50 pm news
ತಾಜಾ ಸುದ್ಧಿಗಳು

ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ

June 11, 2026 5:15 pm

ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧಿ ಇಲ್ಲ: ಸ್ಪಷ್ಟನೆ

June 11, 2026 5:05 pm

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವ್ಯಾಪಕ ವಿರೋಧ

June 11, 2026 4:50 pm

೧೧ ಕೆ.ವಿ ಮಾರ್ಗಗಳ ಸಮಗ್ರ ನಿರ್ವಹಣೆ

June 09, 2026 3:14 pm

ಗ್ರಾಮಗಳ ಅಭಿವೃದ್ಧಿಗಾಗಿ ೧೭ಕೋಟಿ ೮೪ಲಕ್ಷ ವೆಚ್ಚ

June 09, 2026 3:09 pm

ಸಿದ್ದರಾಮಯ್ಯ ಬಜೆಟ್‌ನಲ್ಲಿ ನಾಟಕಕ್ಕೆ ೧ ಕೋಟಿ

June 09, 2026 3:03 pm
Our Youtube Channel
Our Picks

ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ

June 11, 2026 5:15 pm

ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧಿ ಇಲ್ಲ: ಸ್ಪಷ್ಟನೆ

June 11, 2026 5:05 pm

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವ್ಯಾಪಕ ವಿರೋಧ

June 11, 2026 4:50 pm

೧೧ ಕೆ.ವಿ ಮಾರ್ಗಗಳ ಸಮಗ್ರ ನಿರ್ವಹಣೆ

June 09, 2026 3:14 pm

ಗ್ರಾಮಗಳ ಅಭಿವೃದ್ಧಿಗಾಗಿ ೧೭ಕೋಟಿ ೮೪ಲಕ್ಷ ವೆಚ್ಚ

June 09, 2026 3:09 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss

ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ

By News Desk BenkiyabaleJune 11, 2026 5:15 pm

ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ತುಮಕೂರು ಹಾಗೂ ನಿಟ್ಟೂರು…

ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧಿ ಇಲ್ಲ: ಸ್ಪಷ್ಟನೆ

June 11, 2026 5:05 pm

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವ್ಯಾಪಕ ವಿರೋಧ

June 11, 2026 4:50 pm

೧೧ ಕೆ.ವಿ ಮಾರ್ಗಗಳ ಸಮಗ್ರ ನಿರ್ವಹಣೆ

June 09, 2026 3:14 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.