BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರಕ್ಷಣೆಗಾಗಿ ವಕೀಲರ ಸರಪಳಿ ಪ್ರತಿಭಟನೆ
  • ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಒತ್ತಾಯ
  • ಡಿಸೆಂಬರ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆದು, ವಿದ್ಯುದ್ದೀಕರಣಗೊಳಿಸಿ ಹಸ್ತಾಂತರಿಸಲು ಸೂಚನೆ
  • ಕನ್ನಡ ಭಾಷೆ ಉಳಿವಿಗಾಗಿ ಬೈಕ್‍ನಲ್ಲಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ
  • ನೀನಾಸಂ ಮೂಲದ ಸದುಭಿರುಚಿ ನಾಟಕಗಳು
  • ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ: ಕ್ರಮಕ್ಕೆ ಒತ್ತಾಯ
  • ಸೋಶಿಯಲ್ ಮೀಡಿಯಾ ಅಬ್ಬರದ ನಡುವೆ ಜೀವಂತವಾಗಿರುವ ದೇಸಿ ಕಲೆ
  • ನ.11ರಂದು ವೀರ ವನಿತೆ ಒನಕೆ ಓಬವ್ವ ಜಯಂತಿ: ಪೂರ್ವಭಾವಿ ಸಭೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶಿರಾ – ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ
Trending

ಶಿರಾ – ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ

By News Desk BenkiyabaleUpdated:October 21, 2020 7:21 pm

ತುಮಕೂರು : 

     ಸಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

      ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳಿಗೆ ನ.3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅತ್ಯಂತ ಬಹುತದಿಂದ ಜಯಶೀಲರಾಗಿ ಈ ಎರಡೂ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪರ್ವವನ್ನೇ ಸೃಷ್ಠಿಸಲಿದ್ದಾರೆ ಎಂದರು.

      ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿ ಮಾತನಾಡಿದ ಅವರು, ಈ ಉಪಚುನಾವಣೆಯಲ್ಲಿ ಅಭಿವೃದ್ಧಿಯತ್ತ ಜನರ ಒಲವಿದೆ. ಇನ್ನು ಎರಡು ಮುಕ್ಕಾಲು ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸಲಿದ್ದು, ಜನರಿಗೆ ಅಗತ್ಯ ಸವಲತ್ತು, ಸೌಲಭ್ಯಗಳನ್ನು ಪೂರೈಸುವ ಕೆಲಸ ಪ್ರಾಮಾಣಿಕವಾಗಿ ಆಗಲಿದೆ ಎಂದರು.

      ಸಿರಾ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಉಪಚುನಾವಣೆ ಎದುರಾಗಿದೆ. ಶಾಸಕ ಬಿ. ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಉಪಚುನಾವಣೆ ನಡೆಯುತ್ತಿದ್ದು, ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ತನ್ನ ಖಾತೆ ತೆರೆಯಲಿದೆ ಎಂದರು.

      ಪ್ರಸ್ತುತ ದೇಶದಲ್ಲಿ ಕೊರೊನಾ, ನೆರೆ, ಪ್ರವಾಹದಂತಹ ಸಂದಿಗ್ದ ಪರಿಸ್ಥಿತಿ ಉಂಟಾಗಿದೆ. ಇಂದಿನ ಸಂದಿಗ್ದ ಸಮಸ್ಯೆಗಳಿಗೆ ಮಾರ್ಗೋಪಾಯ ಮತ್ತು ಪರಿಹಾರ ಒದಗಿಸುವ ಕೆಲಸನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ತಮ್ಮ ವಯಸ್ಸನ್ನು ಲೆಕ್ಕಿಸದೆ ರಾಜ್ಯದಲ್ಲಿ ಕೊರೊನಾವನ್ನು ಬುದ್ಧಿವಂತಿಕೆಯಿಂದ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.  ಹಾಗೆಯೇ ಇದೇ ತಿಂಗಳ 28 ರಂದು ನಡೆಯಲಿರುವ ಕೋಲಾರ, ಚಿಕ್ಕಬಳ್ಳಾರು, ತುಮಕೂರು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಿದಾನಂದ ಗೌಡ ಅವರ ಗೆಲುವು ನಿಶ್ಚಿತ ಎಂದರು.

      ಭಾರತೀಯ ಜನತಾ ಪಕ್ಷ ಸಾಮಾನ್ಯ ಜನರ ನೋವನ್ನು ಅರಿತು ಅವರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುವಂತಹ ಪಕ್ಷ. ಈ ಬಗ್ಗೆ ಜನರಿಲ್ಲೂ ನಂಬಿಕೆ ಇದೆ. ಚಿದಾನಂದಗೌಡ ಅವರಿಗೆ ಶಿಕ್ಷಕರು ಹಾಗೂ ಪದವೀಧರರ ಸಮಸ್ಯೆಗಳ ಅರಿವಿದೆ. ಹಾಗಾಗಿ ಪದವೀಧರರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಲಿದ್ದಾರೆ. ಈ ಬಾರಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

      ಉತ್ತರ ಪ್ರದೇಶದಲ್ಲಿ ಅನಿರೀಕ್ಷಿತವಾಗಿ ನೆರೆ, ಪ್ರವಾಹ ಉಂಟಾಗಿದೆ. ಈಗಾಗಲೇ ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ನೆರೆ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದು, ನೆರೆಯಿಂದ ಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರ ನೆರವಿಗೆ ಸರ್ಕಾರ ಸದಾ ಸಿದ್ದವಿದೆ ಎಂದರು.

      ಭ್ರಷ್ಟಾಚಾರದ ಹಣದಿಂದ ಬಿಜೆಪಿ ಸರ್ಕಾರ ಉಪಚುನಾವಣೆ ನಡೆಸುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ, ಕೆಪಿಸಿಸಿ ಅಧ್ಯಕ್ಷರಿಗೆ ಒಳ್ಳೆಯದಾಗಲಿ, ಅವರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದು ಸೋಮಣ್ಣ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

     ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ನಿನ್ನೆಯೇ ಏನು ಹೇಳಬೇಕೋ ಅದನ್ನೆಲ್ಲಾ ಹೇಳಿದ್ದೇವೆ. ಯಡಿಯೂರಪ್ಪನವರು ನಮ್ಮ ಪ್ರಶ್ನಾತೀತ ನಾಯಕರು. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿಯೇ ಇಲ್ಲ. ಅದು ಭರ್ತಿಯಾಗಿದೆ ಎಂದರು.

      ಈ ಸಂದರ್ಭದಲ್ಲಿ ಸಂಸದೆ ಶೋಭಾಕರಂದ್ಲಾಜೆ, ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಎಂ.ಬಿ. ನಂದೀಶ್, ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಚಿದಾನಂದಗೌಡ, ಕೊಪ್ಪಲ್ ನಾಗರಾಜು, ರವಿಶಂಕರ್ ಹೆಬ್ಬಾಕ, ಟಿ.ಆರ್. ಸದಾಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು. 

(Visited 8 times, 1 visits today)
Previous Articleಹುಳಿಯಾರು : ಸೀಗೆಬಾಗಿಯಲ್ಲಿ ಚಿರತೆ ದಾಳಿಗೆ ಕರು ಬಲಿ
Next Article ಟೋಟಲ್ ಟರ್ನ್ ಕೀ ಆಧಾರದಲ್ಲಿ ಬೆಸ್ಕಾಂನಲ್ಲಿ ಬಹುಕೋಟಿಯ ಟೆಂಡರ್
News Desk Benkiyabale

Related Posts

ರಕ್ಷಣೆಗಾಗಿ ವಕೀಲರ ಸರಪಳಿ ಪ್ರತಿಭಟನೆ

November 04, 2026 5:32 pm news

ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಒತ್ತಾಯ

November 04, 2026 5:29 pm news

ಡಿಸೆಂಬರ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆದು, ವಿದ್ಯುದ್ದೀಕರಣಗೊಳಿಸಿ ಹಸ್ತಾಂತರಿಸಲು ಸೂಚನೆ

November 04, 2026 5:28 pm news
ತಾಜಾ ಸುದ್ಧಿಗಳು
news

ರಕ್ಷಣೆಗಾಗಿ ವಕೀಲರ ಸರಪಳಿ ಪ್ರತಿಭಟನೆ

November 04, 2026 5:32 pm
news

ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಒತ್ತಾಯ

November 04, 2026 5:29 pm
news

ಡಿಸೆಂಬರ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆದು, ವಿದ್ಯುದ್ದೀಕರಣಗೊಳಿಸಿ ಹಸ್ತಾಂತರಿಸಲು ಸೂಚನೆ

November 04, 2026 5:28 pm
news

ಕನ್ನಡ ಭಾಷೆ ಉಳಿವಿಗಾಗಿ ಬೈಕ್‍ನಲ್ಲಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ

November 04, 2026 5:27 pm
news

ನೀನಾಸಂ ಮೂಲದ ಸದುಭಿರುಚಿ ನಾಟಕಗಳು

November 04, 2026 5:25 pm
news

ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ: ಕ್ರಮಕ್ಕೆ ಒತ್ತಾಯ

November 03, 2026 4:38 pm
Our Youtube Channel
Our Picks

ರಕ್ಷಣೆಗಾಗಿ ವಕೀಲರ ಸರಪಳಿ ಪ್ರತಿಭಟನೆ

November 04, 2026 5:32 pm

ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಒತ್ತಾಯ

November 04, 2026 5:29 pm

ಡಿಸೆಂಬರ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆದು, ವಿದ್ಯುದ್ದೀಕರಣಗೊಳಿಸಿ ಹಸ್ತಾಂತರಿಸಲು ಸೂಚನೆ

November 04, 2026 5:28 pm

ಕನ್ನಡ ಭಾಷೆ ಉಳಿವಿಗಾಗಿ ಬೈಕ್‍ನಲ್ಲಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ

November 04, 2026 5:27 pm

ನೀನಾಸಂ ಮೂಲದ ಸದುಭಿರುಚಿ ನಾಟಕಗಳು

November 04, 2026 5:25 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ರಕ್ಷಣೆಗಾಗಿ ವಕೀಲರ ಸರಪಳಿ ಪ್ರತಿಭಟನೆ

By News Desk BenkiyabaleNovember 04, 2026 5:32 pm

ಕೊರಟಗೆರೆ: ಕರ್ನಾಟಕದಲ್ಲಿ ವಕೀಲರ ಮೇಲಿನ ಹಲ್ಲೆ ಮತ್ತು ಕೊಲೆ ಪ್ರಕರಣಗಳನ್ನು ಖಂಡಿಸಿ ಹಾಗೂ ವಕೀಲರ ಸುರಕ್ಷತಾ ಕಾಯ್ದೆ ಜಾರಿಗೆ ಹೊತ್ತಾಯಿಸಿ…

ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಒತ್ತಾಯ

November 04, 2026 5:29 pm

ಡಿಸೆಂಬರ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆದು, ವಿದ್ಯುದ್ದೀಕರಣಗೊಳಿಸಿ ಹಸ್ತಾಂತರಿಸಲು ಸೂಚನೆ

November 04, 2026 5:28 pm

ಕನ್ನಡ ಭಾಷೆ ಉಳಿವಿಗಾಗಿ ಬೈಕ್‍ನಲ್ಲಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ

November 04, 2026 5:27 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.