BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜಾತಿ ನಿಂದನೆ ಕಾಯಿದೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲಾಗುತ್ತಿದೆ
  • ಕಾಂಗ್ರೆಸ್ ಸರ್ಕಾರ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲ
  • ಕೈಗಾರಿಕಾ ಪ್ರದೇಶಗಳ ಸುರಕ್ಷತೆಗಾಗಿ ಅಗತ್ಯ ಕ್ರಮ
  • ೫.೬೧ ಕೋಟಿ ಮೊತ್ತದ ವಸ್ತು ಜಪ್ತಿ
  • ತುಮಕೂರು ಜಿಲ್ಲೆಗೆ ಭವ್ಯವಾದ ಸಾಹಿತ್ಯದ ಇತಿಹಾಸವಿದೆ
  • ತುರುವೇಕೆರೆ: ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ
  • ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧಾರ ಕೈಗೊಳ್ಳಲಿ
  • ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಾಮಪತ್ರ ಪರಿಶೀಲನೆ ವೇಳೆ ಮಾತಿನ ಚಕಮಕಿ
Trending

ನಾಮಪತ್ರ ಪರಿಶೀಲನೆ ವೇಳೆ ಮಾತಿನ ಚಕಮಕಿ

By News Desk BenkiyabaleUpdated:March 19, 2021 7:19 pm

ಹುಳಿಯಾರು:

     ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಯ ನಾಮಪತ್ರ ಪರಿಶೀಲನೆ ವೇಳೆ ಚುನಾವಣಾಧಿಕಾರಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ನಡೆದಿದೆ.

      3 ನೇ ವಾರ್ಡ್‍ನ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಂ.ಗಣೇಶ್ ಹಾಗೂ 5 ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿ ಪುಟ್ಟಮ್ಮ ಅವರು ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದಡಿ ಪ್ರಕರಣ ದಾಖಲಾಗಿರುವ ಕಾರಣ ನಾಮಪತ್ರಗಳನ್ನು ತಿರಸ್ಕೃತಗೊಳಿಸುವಂತೆ ಜಿಲ್ಲಾಧಿಕಾರಿಗಳು ಇ ಮೇಲೆ ಸಂದೇಶ ಕಳುಹಿಸಿದ್ದು ಈ ಮಾತಿನ ಚಕಮಕಿಗೆ ಕಾರಣವಾಗಿದೆ.

     ಜಿಲ್ಲಾಧಿಕಾರಿಗಳ ಪತ್ರದಂತೆ ಇಬ್ಬರ ನಾಮಪತ್ರವನ್ನು ತಿರಸ್ಕರಿಸುವುದಾಗಿ ಚುನಾವಣಾಧಿಕಾರಿ ಹೊನ್ನಪ್ಪ ಅವರು ಇವರಿಬ್ಬರಿಗೆ ತಿಳಿಸಿದರು. ಚುನಾಣಾಧಿಕಾರಿಗಳ ಈ ಅನಿರಿಕ್ಷಿತ ನಡೆಯಿಂದ ವಿಚಲಿತರಾದ ಗಣೇಶ್ ಮತ್ತು ಪುಟ್ಟಮ್ಮ ತಮ್ಮ ಬೆಂಬಲಿಗರೊಂದಿಗೆ ಪಪಂ ಕಛೇರಿಗೆ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳಿಂದ ಬಂದಿರುವ ಪತ್ರದಲ್ಲಿ ಸಹಿ ಮತ್ತು ಮೊಹರಿಲ್ಲ. ಅಲ್ಲದೆ ಈ ಪ್ರಕರಣದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು ತೀರ್ಪು ಬರುವವರೆವಿಗೂ ನಾವು ಅಪರಾಧಿಗಳಲ್ಲ, ಆರೋಪಿಗಳಷ್ಟೆ ಎಂದು ವಾದಿಸಿದರು. ಈ ಪ್ರಕರಣದಲ್ಲಿ ನಾವು ನಿರ್ದೊಷಿಗಳಾಗಿದ್ದು ನಮ್ಮ ನಾಮಪತ್ರ ತಿರಸ್ಕರಿಸಬೇಡಿ ಎಂದು ಕೈ ಮುಗಿದು ಮನವಿ ಮಾಡಿದರು.

      ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್ ಅವರಿಗೆ ಆಕ್ಷೇಪ ಎತ್ತಿರುವ ಬಗ್ಗೆ ತಿಳಿಸಲು ಚುನಾವಣಾಧಿಕಾರಿಗಳು ದೂರವಾಣಿ ಕರೆ ಮಾಡಿದರಾದರೂ ಅವರಿಬ್ಬರೂ ಸಂಪರ್ಕಕ್ಕೆ ಸಿಗಲಿಲ್ಲ. ತಮ್ಮ ಮೇಲಿರುವ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೆ ಅದರ ಪ್ರತಿ ಕೊಡಿ ನಾಮಪತ್ರ ಸಿಂಧು ಮಾಡುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದರು. ನಮ್ಮ ವಕೀಲರು ಕೋರ್ಟ್‍ಗೆ ಹೋಗಿದ್ದು ಕಾಲವಕಾಶ ಕೊಡಿ ಎಂದು ಕೇಳಿಕೊಂಡರು. 5 ಗಂಟೆಯವರೆವಿಗೂ ಕಾಲವಕಾಶ ನೀಡಿ ಕೊನೆಗೆ ಜಿಲ್ಲಾಧಿಕಾರಿಗಳ ಸೂಚನೆ ಉಲ್ಲಂಘಿಸಲಾಗುವುದಿಲ್ಲ. ಹಾಗಾಗಿ ನಾಮಪತ್ರ ತಿರಸ್ಕರಿಸಿ ಇದಕ್ಕೆ ಕಾರಣ ಸಹಿತ ತಮಗೆ ಹಿಂಬರಹ ನೀಡಲಾಗುವುದು. ಹಿಂಬರಹ ಪಡೆದು ಕೋರ್ಟ್ ಮೆಟ್ಟಿಲೇರಿ ಎಂದರು.

      ಇದು ಏಕಪಕ್ಷಿಯ ನಿರ್ಧಾರವಾಗಿದ್ದು ಯಾವುದೇ ಕಾರಣಕ್ಕೂ ತಿರಸ್ಕರಕ್ಕೆ ಅವಕಾಶ ಕೊಡುವುದಿಲ್ಲ. ಕಛೇರಿ ಮುಂದೆ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು. ವಿಷಯ ತಿಳಿದ ಸಿಪಿಐ ವೀಣಾ ಅವರು ಪೊಲೀಸ್ ಸಿಬ್ಬಂದಿ ಸಹಿತ ಆಗಮಿಸಿ ಚುನಾವಣಾಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಿದರು. ಅಲ್ಲದೆ ತಹಸೀಲ್ದಾರ್ ಕಛೇರಿಯ ಸಿಬ್ಬಂದಿ ಸಹ ಆಗಮಿಸಿ ನಾಮಪತ್ರ ತಿರಸ್ಕಾರಕ್ಕೆ ಸಂಬಂಧಿಸಿದ ಸೂಕ್ತ ದಾಖಲಾತಿಗಳನ್ನು ನೀಡಿದರು. ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದಡಿ ಪ್ರಕರಣ ದಾಖಲಾಗಿರುವ ಕಾರಣ 3 ವರ್ಷ ತಾವು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದೇಳಿ ಗೊಂದಲಕ್ಕೆ ತೆರೆ ಎಳೆದರು.

ಕಳೆದ ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಎಂ.ಗಣೇಶ್ ಹಾಗೂ ಪುಟ್ಟಮ್ಮ ಸೇರಿದಂತೆ ಐವರು 2015-16 ಮತ್ತು 2016-17ರ ಸಾಲಿನಲ್ಲಿ ವರ್ಗ 1 ರ ನಿಧಿಯಿಂದ ಕಾಮಗಾರಿ ನಿರ್ವಹಿಸಿದ ಬಾಬ್ತು ಹಣವನ್ನು ಕಾನೂನು ಬಾಹಿರವಾಗಿ ಅವರ ಹೆಸರಿಗೆ ಪಡೆದಿದ್ದರು. ಮಾರ್ಚ್ 20 ರಲ್ಲಿ ಈ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ಅಧಿನಿಯಮ 1999 ರ ಪ್ರಕರಣ 48(4)ರಂತೆ ಪ್ರಕರಣ ದಾಖಲಾಗಿತ್ತು. ಅಲ್ಲದೆ 20-03-2019 ರಂದು ಇವರ ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಈ ಪ್ರಕರಣದನ್ವಯ ಮುಂದಿನ 3 ವರ್ಷಗಳು ಚುನಾವಣೆಗೆ ಸ್ಪರ್ಧೆ ಮಾಡುವಂತಿರಲಿಲ್ಲ. ಆದರೆ ಗಣೇಶ್ ಹಾಗೂ ಪುಟ್ಟಮ್ಮ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹಾಗಾಗಿ ರಾಜ್ಯ ಚುನಾವಣಾ ಆಯೋಗ ಇವರ ಆದೇಶದಂತೆ ನಾಮಪತ್ರಗಳನ್ನು ತಿರಸ್ಕೃತಗೊಳಿಸಲಾಗಿದೆ.

(Visited 6 times, 1 visits today)
Previous Articleನಾಲ್ಕು ತಾಲ್ಲೂಕುಗಳಲ್ಲಿ ದೂರ ತರಂಗ ಶಿಕ್ಷಣ ಹಾಗೂ ಕೌಶಲ್ಯ ನೈಪುಣ್ಯ ಯೋಜನೆ
Next Article ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಇನ್ಫೋಸಿಸ್‍ನ ಧ್ಯೇಯ
News Desk Benkiyabale

Related Posts

ಜಾತಿ ನಿಂದನೆ ಕಾಯಿದೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲಾಗುತ್ತಿದೆ

June 18, 2025 4:30 pm ತುಮಕೂರು

ಕಾಂಗ್ರೆಸ್ ಸರ್ಕಾರ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲ

June 18, 2025 4:28 pm ತುಮಕೂರು

ಕೈಗಾರಿಕಾ ಪ್ರದೇಶಗಳ ಸುರಕ್ಷತೆಗಾಗಿ ಅಗತ್ಯ ಕ್ರಮ

June 18, 2025 4:26 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಜಾತಿ ನಿಂದನೆ ಕಾಯಿದೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲಾಗುತ್ತಿದೆ

June 18, 2025 4:30 pm
ತುಮಕೂರು

ಕಾಂಗ್ರೆಸ್ ಸರ್ಕಾರ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲ

June 18, 2025 4:28 pm
ತುಮಕೂರು

ಕೈಗಾರಿಕಾ ಪ್ರದೇಶಗಳ ಸುರಕ್ಷತೆಗಾಗಿ ಅಗತ್ಯ ಕ್ರಮ

June 18, 2025 4:26 pm
ತುಮಕೂರು

೫.೬೧ ಕೋಟಿ ಮೊತ್ತದ ವಸ್ತು ಜಪ್ತಿ

June 18, 2025 4:25 pm
ತುಮಕೂರು

ತುಮಕೂರು ಜಿಲ್ಲೆಗೆ ಭವ್ಯವಾದ ಸಾಹಿತ್ಯದ ಇತಿಹಾಸವಿದೆ

June 16, 2025 3:18 pm
ತುಮಕೂರು

ತುರುವೇಕೆರೆ: ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 3:00 pm
Our Youtube Channel
Our Picks

ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 2:21 pm

ಶೋಷಿತರಲ್ಲಿ ಹೋರಾಟದ ಕಿಚ್ಚು ಹತ್ತಿಸಿದವರು ಪ್ರೊ.ಬಿ.ಕೃಷ್ಣಪ್ಪ

June 16, 2025 1:56 pm

ಸಾರ್ವಜನಿಕರು ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ

June 05, 2025 2:29 pm

ನಗರದಲ್ಲಿ ಪ್ರಾದೇಶಿಕ ತೆಂಗು ಅಭಿವೃದ್ಧಿ ಮಂಡಳಿ ಕಚೇರಿ ತೆರೆಯಿರಿ

May 31, 2025 3:29 pm

ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ

May 29, 2025 4:18 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಜಾತಿ ನಿಂದನೆ ಕಾಯಿದೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲಾಗುತ್ತಿದೆ

By News Desk BenkiyabaleJune 18, 2025 4:30 pm

ತುರುವೇಕೆರೆ: ಜಾತಿ ನಿಂದನೆ ಕಾಯಿದೆಯನ್ನು ತಾಲೂಕಿನ. ಕೆಲವು ದಲಿತ ಮುಖಂಡರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು…

ಕಾಂಗ್ರೆಸ್ ಸರ್ಕಾರ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲ

June 18, 2025 4:28 pm

ಕೈಗಾರಿಕಾ ಪ್ರದೇಶಗಳ ಸುರಕ್ಷತೆಗಾಗಿ ಅಗತ್ಯ ಕ್ರಮ

June 18, 2025 4:26 pm

೫.೬೧ ಕೋಟಿ ಮೊತ್ತದ ವಸ್ತು ಜಪ್ತಿ

June 18, 2025 4:25 pm
News by Date
June 2025
M T W T F S S
 1
2345678
9101112131415
16171819202122
23242526272829
30  
« May    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.