BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ
  • ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ
  • ನಿಯಮ ಮೀರಿದರೆ ಕ್ರಮ: ತಹಶೀಲ್ದಾರ್ ವೈ.ರವಿ
  • “ಭಾರತ್ ಜೋಡೋ’ ಕಾರ್ಯಕ್ರಮದ ಲೋಗೋ ಅನಾವರಣ
  • ನಾಲ್ಕನೇ ಶ್ರಾವಣ ಶನಿವಾರ: ಬಯಲು ಆಂಜನೇಯ, ಶನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ
  • ಪ್ರಬುದ್ಧ ಮನಸುಗಳ ನಿರ್ಮಾಣವೇ ಶಿಕ್ಷಕರ ಜವಾಬ್ದಾರಿ
  • ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ
  • ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home »  ತುಮಕೂರು : ಹಲವು ವೈಶಿಷ್ಟಗಳ ಪಾರ್ಕು ಜನರಿಗೆ ಮುಕ್ತ!!
Trending

 ತುಮಕೂರು : ಹಲವು ವೈಶಿಷ್ಟಗಳ ಪಾರ್ಕು ಜನರಿಗೆ ಮುಕ್ತ!!

By News Desk BenkiyabaleUpdated:December 16, 2021 5:36 pm

 ತುಮಕೂರು:

      ಸಾರ್ವಜನಿಕರು,ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ನಗರದ ಹೊಸಬಡಾವಣೆ ಪೊಲೀಸ್ ಠಾಣೆಯ ಹಿಂಭಾಗದಲ್ಲಿದ್ದ ವೀರಸಾರ್ವಕರ್ ಉದ್ಯಾನವನ್ನು ಸ್ಮಾರ್ಟ್‍ಸಿಟಿ ವತಿಯಿಂದ ಅತ್ಯಂತ ವ್ಯವಸ್ಥಿತವಾಗಿ ಅಭಿವೃದ್ದಿ ಪಡಿಸಲಾಗಿದ್ದು, ನಾಗರಿಕರು, ಶುಚಿತ್ವ ಕಾಪಾಡುವ ಮೂಲಕ ಪಾರ್ಕಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು 15ನೇ ವಾರ್ಡಿನ ಕಾರ್ಪೋರೇಟರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಮನವಿ ಮಾಡಿದ್ದಾರೆ.

      ಸ್ಮಾರ್ಟ್‍ಸಿಟಿ ವತಿಯಿಂದ ಆಭಿವೃದ್ದಿಪಡಿಸಲಾದ ವೀರ ಸಾರ್ವಕರ್ ಉದ್ಯಾನವನವನ್ನು ಜನರ ಉಪಯೋಗಕ್ಕೆ ಮುಕ್ತಗೊಳಿಸಿ ಮಾತನಾಡಿದ ಅವರು, ಇಡೀ ಪಾರ್ಕ್‍ನ್ನು ಅತ್ಯಂತ ವ್ಯವಸ್ಥಿತವಾಗಿ ಅತ್ಯಾಧುನಿಕವಾಗಿ ಅಭಿವೃದ್ದಿ ಪಡಿಸಲಾಗಿದೆ. ಇದರ ನಿರ್ವಹಣೆಯನ್ನು ಪಾರ್ಕಿನ ಪಕ್ಕದಲ್ಲಿಯೇ ಇರುವ ಅಕ್ಷರ ಐ ಪೌಂಢೇಷನ್ ನವರು ವಹಿಸಿಕೊಂಡಿದ್ದು, ಸೆಕ್ಯೂರಿಟಿಯವರನ್ನು ಇಟ್ಟು, ಬೆಳಗ್ಗೆ ಮತ್ತು ಸಂಜೆ ಪಾರ್ಕಿನ ಬಾಗಿಲು ತೆಗೆಯಲಿದ್ದಾರೆ. ಮಧ್ಯಾಹ್ನ ಯಾವುದೇ ಚಟುವಟಿಕೆಗಳು ಇರುವುದಿಲ್ಲ ಎಂದರು.

      ಪಾರ್ಕಿನ ಅಂದ ಹೆಚ್ಚಿಸಲು 16 ಸಣ್ಣ ಮತ್ತು 18 ದೊಡ್ಡ ಲೈಟುಗಳನ್ನು ಹಾಕಲಾಗಿದೆ. ಅಲ್ಲದೆ 12 ಸಿಸಿ ಟಿ.ವಿ.ಕ್ಯಾಮರಗಳನ್ನು ಅಳವಡಿಸಲಾಗಿದೆ. ಇದರಿಂದ ಪಾರ್ಕಿನಲ್ಲಿ ಕಿಡಿಗೇಡಿಗಳು ನಡೆಸುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದಾಗಿದೆ. ಅಲ್ಲದೆ ಟಿ.ಎಲ್. ಸ್ಮಾರ್ಟ್ ಬೆಂಜ್ ಎಂಬ ಹೊಸ ಬೆಂಚ್‍ನ್ನು ಅಳವಡಿಸಿದ್ದು, ವಾಯುವಿಹಾರಕ್ಕೆ ಬರುವವರು ಸ್ಮಾರ್ಟ್‍ಬೆಂಜ್ ನಲ್ಲಿರುವ ವಿದ್ಯುತ್‍ನಿಂದ ತಮ್ಮ ಮೊಬೈಲ್, ಲ್ಯಾಪ್‍ಟಾಪ್‍ಗಳನ್ನು ರೀಚಾರ್ಜ್ ಮಾಡಿಕೊಳ್ಳಬಹುದು.ಅಲ್ಲದೆ, ವೈ.ಫೈ ಸಂಪರ್ಕ ಪಡೆಯಬಹುದು.ಸ್ಮಾರ್ಟ್‍ಸಿಟಿಯವರು ಅತ್ಯಂತ ವ್ಯವಸ್ಥಿತವಾಗಿ ಪಾರ್ಕು ಅಭಿವೃದ್ದಿ ಪಡಿಸಿದ್ದಾರೆ.ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಹಾಗೆಯೆ ಇದಕ್ಕೆ ಸಂಪೂರ್ಣ ಸಹಕಾರ ನೀಡಿದ ನಗರಪಾಲಿಕೆಯ ಆಡಳಿತ ಮಂಡಳಿ ಮತ್ತು ಶಾಸಕರಾದ ಜೋತಿಗಣೇಶ್ ಅವರಿಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದರು.

      ಸ್ಮಾರ್ಟ್‍ಸಿಟಿ ಎಂ.ಡಿ.ರಂಗಸ್ವಾಮಿ ಮಾತನಾಡಿ,ಇಡೀ ಪಾರ್ಕಿಗೆ ಜಿಯೋ ಪೆನ್ಸಿಂಗ್ ಮಾಡಲಾಗಿದೆ. ಇದರಿಂದ ಬೆಳಗ್ಗೆ ಮತ್ತು ಸಂಜೆ ಹೊರತು ಪಡಿಸಿ, ಯಾರಾದರೂ ಕಿಡಿಗೇಡಿಗಳು ಪಾರ್ಕಿನ ಬೆಲಿ ಹಾರಿ ಒಳಬಂದಲ್ಲಿ ಕೂಡಲೇ ಸೈರನ್ ಮೊಳಗುತ್ತದೆ. ಇದರಿಂದ ಸೆಕ್ಯೂರಿಟಿ ಅವರು ತಕ್ಷಣವೇ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಪಾರ್ಕಿನ ಒಳಗೆ ಸೆಕ್ಯೂರಿಟಿಗಳು ಇರಲು ಸೆಕ್ಯೂರಿಟಿ ಕೊಠಡಿಯನ್ನು ನಿರ್ಮಿಸಲಾಗಿದೆ.ಈ ಭಾಗದ ನಾಗರಿಕರು ಮತ್ತು ಜನಪ್ರತಿನಿಧಿಗಳ ಆಶಯದಂತೆ ವ್ಯವಸ್ಥಿತವಾಗಿ ರೂಪಿಸಿರುವ ಪಾರ್ಕನ್ನು ಜನರು ಹಾಳು ಮಾಡದೆ, ಶುಚಿತ್ವ ಕಾಪಾಡಿಕೊಂಡು, ನಿರ್ವಹಣೆಯವರು ನೀಡುವ ಸೂಚನೆಗಳನ್ನು ಪಾಲಿಸಿದರೆ ಹೆಚ್ಚಿನ ಅನುಕೂಲವಾಗಲಿದೆ.ಅಲ್ಲದೆ ಒಂದು ಉತ್ತಮ ವಾಯುವಿಹಾರ ಕೇಂದ್ರವಾಗಿ ಮಾರ್ಪಾಡಾಗಲಿದೆ.ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ವೇಳೆ ಪಾಲಿಕೆಯ ಇಂಜಿನಿಯರ್ ಸ್ಮಿತಾ, ಅಕ್ಷರ ಐ ಪೌಂಢೇಷನ್‍ನ ಡಾ.ಶ್ರೀನಿವಾಸ್, ವಾರ್ಡಿನ ನಾಗರಿಕರಾದ ಸುರಭಿ ಫಣೀಂದ್ರ,ಧನಿಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

(Visited 14 times, 1 visits today)
Previous Articleಶ್ರೀ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ ಅಸ್ತಂಗತ
Next Article ತುಮಕೂರು : ಜಿಲ್ಲಾಧಿಕಾರಿಗಳಿಂದ ಗ್ರಾಮ ವಾಸ್ತವ್ಯ
News Desk Benkiyabale

Related Posts

ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ

September 05, 2026 4:13 pm news

ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ

September 05, 2026 3:54 pm news

ನಿಯಮ ಮೀರಿದರೆ ಕ್ರಮ: ತಹಶೀಲ್ದಾರ್ ವೈ.ರವಿ

September 05, 2026 3:53 pm news
ತಾಜಾ ಸುದ್ಧಿಗಳು
news

ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ

September 05, 2026 4:13 pm
news

ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ

September 05, 2026 3:54 pm
news

ನಿಯಮ ಮೀರಿದರೆ ಕ್ರಮ: ತಹಶೀಲ್ದಾರ್ ವೈ.ರವಿ

September 05, 2026 3:53 pm
news

“ಭಾರತ್ ಜೋಡೋ’ ಕಾರ್ಯಕ್ರಮದ ಲೋಗೋ ಅನಾವರಣ

September 05, 2026 3:51 pm
news

ನಾಲ್ಕನೇ ಶ್ರಾವಣ ಶನಿವಾರ: ಬಯಲು ಆಂಜನೇಯ, ಶನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ

September 05, 2026 3:49 pm
news

ಪ್ರಬುದ್ಧ ಮನಸುಗಳ ನಿರ್ಮಾಣವೇ ಶಿಕ್ಷಕರ ಜವಾಬ್ದಾರಿ

September 05, 2026 3:48 pm
Our Youtube Channel
Our Picks

ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ

September 05, 2026 4:13 pm

ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ

September 05, 2026 3:54 pm

ನಿಯಮ ಮೀರಿದರೆ ಕ್ರಮ: ತಹಶೀಲ್ದಾರ್ ವೈ.ರವಿ

September 05, 2026 3:53 pm

“ಭಾರತ್ ಜೋಡೋ’ ಕಾರ್ಯಕ್ರಮದ ಲೋಗೋ ಅನಾವರಣ

September 05, 2026 3:51 pm

ನಾಲ್ಕನೇ ಶ್ರಾವಣ ಶನಿವಾರ: ಬಯಲು ಆಂಜನೇಯ, ಶನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ

September 05, 2026 3:49 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ

By News Desk BenkiyabaleSeptember 05, 2026 4:13 pm

ತುಮಕೂರು: ಸರ್ಕಾರದ ಆಡಳಿತ ವ್ಯವಸ್ಥಿತವಾಗಿ ನಡೆಯಬೇಕು. ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕೆಲಸ…

ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ

September 05, 2026 3:54 pm

ನಿಯಮ ಮೀರಿದರೆ ಕ್ರಮ: ತಹಶೀಲ್ದಾರ್ ವೈ.ರವಿ

September 05, 2026 3:53 pm

“ಭಾರತ್ ಜೋಡೋ’ ಕಾರ್ಯಕ್ರಮದ ಲೋಗೋ ಅನಾವರಣ

September 05, 2026 3:51 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.