ತುಮಕೂರು:

      ನಾನು ಸತ್ತರೂ ಬಿಜೆಪಿಗೆ ಹೋಗಲ್ಲ. ನಾನು ಇದ್ದರೂ ಜೆಡಿಎಸ್, ಸತ್ತರೂ ಜೆಡಿಎಸ್ ಪಕ್ಷದಲ್ಲೇ ಎಂದು ಶಾಸಕ ಗೌರಿಶಂಕರ್ ಸ್ಪಷ್ಟಪಡಿಸಿದರು.

      ತಾಲೂಕಿನ ಬೆಳ್ಳಾವಿಯಲ್ಲಿ ಶನಿವಾರ ನಡೆದ ಕನಕ ಜಯಂತಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರು ನಾನು ಬಿಜೆಪಿಗೆ ಹೋಗುತ್ತೇನೆಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಅದು ಸುಳ್ಳು ನನ್ನ ಆತ್ಮ ಜೆಡಿಎಸ್. ನನ್ನ ಅಂತಿಮ ಕೂಡ ಜೆಡಿಎಸ್, ನನ್ನ ಹೆಣ ಕೂಡ ಬೇರೆ ಪಕ್ಷದ ಮುಖ ನೋಡುವುದಿಲ್ಲ ಎಂದು ಖಡಕ್ ಆಗಿ ನುಡಿದರು.

      ಕೆಲ ಮಾಧ್ಯಮಗಳಿಂದಲೂ ನನ್ನ ತೇಜೋವಧೆ ಆಗುತ್ತಿದೆ. ಮಾಧ್ಯಮದವರು ಸುಳ್ಳು ಸುದ್ದಿ ಬಿತ್ತರಿಸಿ ಜನರ ನಂಬಿಕೆ ಕಳೆದುಕೊಳ್ಳಬಾರದು. ವಿಶೇಷವಾಗಿ ಮಾಧ್ಯಮದವರನ್ನು ಕೈಮುಗಿದು ಕೇಳುತ್ತೇನೆ. ಅಪಪ್ರಚಾರ ಮಾಡಬೇಡಿ. ನನ್ನ ಕೊನೆ ಉಸಿರು ಇರೋವರೆಗೂ ಕೂಡ ಕುಮಾರಣ್ಣ, ದೇವೇಗೌಡರು,ಜೆಡಿಎಸ್ ಅಷ್ಟೇ.ನನ್ನ ಹೆಣ ಕೂಡ ಇನ್ನೊಂದು ಪಕ್ಷ ಅಂತಾ ಕನಸಿನಲ್ಲಿ ಕಾಣಲ್ಲ ಎಂದರು.

(Visited 38 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp