oplus_6291456

ಕೊರಟಗೆರೆ: ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿ ಎಂಬ ಸದಾಶಯದೊಂದಿಗೆ, ಸರ್ವಧರ್ಮ ಗುರುಗಳ ನೇತೃತ್ವದಲ್ಲಿ ಭಾನುವಾರ ಪಟ್ಟಣದ ಗಿರಿನಗರದಲ್ಲಿರುವ ಸ್ಲಂ ಬೋರ್ಡ್ ಸಮುದಾಯ ಭವನದಲ್ಲಿ ಸಾಮೂಹಿಕ ಪ್ರಾರ್ಥನಾ ಸಭೆಯನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು.
ಪ.ಪಂ ಮಾಜಿ ಉಪಾಧ್ಯಕ್ಷ ನಯಾಜ್ ಅಹಮದ್, ಮಾಜಿ ಸದಸ್ಯೆ ನೂರ್ ಜಾನ್ ಸೈಯದ್ ದಾವುದ್ ಹಾಗೂ ಸಮಾಜ ಸೇವಕ ಸದಾನಂದ ಎಸ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಧರ್ಮಾತೀತತೆ, ಸೌಹಾರ್ದತೆ ಮತ್ತು ಶಾಂತಿಯ ಸಂದೇಶವನ್ನು ಸಾರಲಾಯಿತು.
ಕಾರ್ಯಕ್ರಮದಲ್ಲಿ ಕ್ರೈಸ್ತ ಧರ್ಮ ಗುರುಗಳಾದ ಸುರೇಶ್ ಪಾದ್ರಿ, ಜಾಮಿಯಾ ಮಸೀದಿಯ ಮುತ್ತುವಲ್ಲಿ ಇದಾಯಿತ್ ಉಲ್ಲಾ ಶರೀಫ್, ಫಯಾಜ್ ಅಹಮದ್ ಸೇರಿದಂತೆ ವಿವಿಧ ಧರ್ಮಗಳ ಗುರುಗಳು ಭಾಗವಹಿಸಿ, ಡಾ. ಜಿ. ಪರಮೇಶ್ವರವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ರಾಜ್ಯಕ್ಕೆ ಸಮರ್ಪಿತ ಸೇವೆ ಮಾಡುವ ಶಕ್ತಿ ದೊರೆಯಲೆಂದು ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ.ಪಂ ಮಾಜಿ ಉಪಾಧ್ಯಕ್ಷ ನಯಾಜ್ ಅಹಮದ್,ಡಾ. ಜಿ. ಪರಮೇಶ್ವರವರು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಂವಿಧಾನಾತ್ಮಕ ಮೌಲ್ಯಗಳಿಗೆ ಬದ್ಧರಾಗಿರುವ ನಾಯಕ. ಅವರು ಮುಖ್ಯಮಂತ್ರಿ ಆಗುವುದರಿಂದ ರಾಜ್ಯದಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಜನಪರ ಆಡಳಿತಕ್ಕೆ ಹೊಸ ದಿಕ್ಕು ಸಿಗಲಿದೆ. ಸರ್ವಧರ್ಮಗಳ ಏಕತೆಯೇ ಭಾರತದ ಶಕ್ತಿ ಎಂಬುದನ್ನು ಈ ಕಾರ್ಯಕ್ರಮ ಸ್ಪಷ್ಟಪಡಿಸುತ್ತದೆ ಎಂದರು.
ಸಾಮಾಜಿಕ ಹೋರಾಟಗಾರ ಟೈಗರ್ ಮಾತನಾಡಿ,“ಧರ್ಮ, ಜಾತಿ, ಭಾಷೆ ಎನ್ನುವ ಬೇಧಭಾವವಿಲ್ಲದೆ ಜನರ ಪರವಾಗಿ ನಿಲ್ಲುವ ಅಪರೂಪದ ನಾಯಕ ಡಾ. ಪರಮೇಶ್ವರವರು ಅವರ ನಾಯಕತ್ವ ರಾಜ್ಯಕ್ಕೆ ಅಗತ್ಯವಾಗಿದೆ. ಇಂತಹ ಸಾಮೂಹಿಕ ಪ್ರಾ ರ್ಥನೆಗಳು ಸಮಾಜದಲ್ಲಿ ಒಗ್ಗಟ್ಟು ಮತ್ತು ಪರಸ್ಪರ ಗೌರವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ೨೦೦೦ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಕಾರ್ಯಕರ್ತರಿಗೆ ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಉಚಿತ ಆರೋಗ್ಯ ಶಿಬಿರ ರಕ್ತದಾನ ಶಿಬಿರ ಏರ್ಪಡಿಸಿ ಅವರೆಲ್ಲರಿಗೂ ಬಿರಿಯಾನಿ ಹಾಗೂ ಹೊಬ್ಬಟ್ಟಿನ ವಿಶೇಷ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ರೈಲ್ವೇ ಸರ್ಕಾರದ ನಾಮಿನಿ ನಿರ್ದೇಶಕ ಜಿ ಎಂ ಕಾಮರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕುರುಡುಗಾನಹಳ್ಳಿ ರಂಗಣ್ಣ, ಮೆಡಿಕಲ್ ಪ್ರಸನ್ನ ಕುಮಾರ್, ರುದ್ರೇಶ್, ವೀರೇಂದ್ರಪ್ರಸಾದ್, ಅಣ್ಣಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ವಿ.ಕೆ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ಸೇರಿದಂತೆ ಸ್ಥಳೀಯ ನಾಗರಿಕರು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಹಂಚಿಕೊAಡರು.

(Visited 1 times, 1 visits today)