
ತುಮಕೂರು: ಸೌಹಾರ್ದ ಕರ್ನಾಟಕ ತುಮಕೂರು ಇವರ ವತಿಯಿಂದ ೨೦೨೬ ಜನವರಿ ೧೫ ರ ಗುರುವಾರ ಸಂಜೆ ೦೪:೦೦ ಗಂಟೆಗೆ ತುಮಕೂರು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಸೌಹಾರ್ದ ಸಂಕ್ರಾ0ತಿ ಹಬ್ಬವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಪ್ರಗತಿಪರ ಚಿಂತಕರಾದ0ತಹ ಪ್ರೊಫೆಸರ್ ಕೆ ದೊರೆರಾಜ್.ರವರು ಭಗವಹಿಸಿ ಮಕರ ಸಂಕ್ರಾ0ತಿ ಭಾರತದಲ್ಲಿ ಸಂತೋಷ ಮತ್ತು ಸಂಭ್ರಮದಿ0ದ ಆಚರಿಸುವ ಪ್ರಮುಖ ಸುಗ್ಗಿಯ ಹಬ್ಬವಾಗಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಚಳಿಗಾಲ ನಿಧಾನವಾಗಿ ಮುಕ್ತಾಯಗೊಂಡು ಹೊಸ ಕೃಷಿ ಋತು ಆರಂಭವಾಗುವುದನ್ನು ಈ ಹಬ್ಬ ಸೂಚಿಸುತ್ತದೆ. ೨೦೨೬ ರಲ್ಲಿ ಮಕರ ಸಂಕ್ರಾ0ತಿ ಜನವರಿ ೧೪ರಂದು ಆಚರಿಸಲಾಗುತ್ತದೆ. ಈ ದಿನವು ಹೊಸ ಆರಂಭ, ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ ಎಂದು ತಿಳಿಸಿದರು.
ರಂಗಭೂಮಿ ಕಲಾವಿದರಾದಂತಹ ಡಾ.ಲಕ್ಷ್ಮಣ್‌ದಾಸ್ ರವರು ಹಿಂದೂ, ಮುಸ್ಲಿಂ, ಕ್ರೈಸ್ತ ಭಾವೈಕ್ಯತೆಯನ್ನ ಮತ್ತು ಸಾಮರಸ್ಯದ ಸಂದೇಶವನ್ನು ಸಾರುವ ಈ ಸೌಹಾರ್ದ ಸಂಕ್ರಾ0ತಿಯನ್ನು ಸಂತೋಷ ಮತ್ತು ಸಂಭ್ರಮದಿ0ದ ಸ್ವಾಗತಿಸೋಣ ಎಂದರು. ಸಾಹಿತಿಗಳಾದಂತ ಗೋವಿಂದರಾಜು, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕರು ಎ ನರಸಿಂಹಮೂರ್ತಿ ಸಾಮಾಜಿಕ ಹೋರಾಟಗಾರರಾದಂತಹ ಅಸಾದುಲ ಖಾನ್, ತಾಜುದ್ದೀನ್, ಅಫ್ಸರ್, ಜವಾರ್, ಉಪನ್ಯಾಸಕರಾದಂತಹ ರಾಮಚಂದ್ರಪ್ಪ ಎ, ಅಶ್ವಥ್ ನಾರಾಯಣ ಗುಟ್ಟೆ, ನಾಗೇಂದ್ರಪ್ಪ, ಅನಂತ್ ಮೂರ್ತಿ, ಕಾರ್ಮಿಕ ಸಂಘಟನೆಗಳ ಮುಂಖಡರು ಸಯ್ಯದ್ ಮುಜೀಬ್, ಕಂಬೇಗೌಡ್ರು, ಬಿ.ಉಮೇಶ್, ಎ ಲೋಕೇಶ್, ತುಮಕೂರು ವಿಜ್ಞಾನಕೇಂದ್ರ ಅಧ್ಯಕ್ಷರು ಅಕ್ಕಮ, ಸಿಪಿಐಎಂ ಕಾರ್ಯದರ್ಶಿ ಎನ್ ಕೆ ಸುಬ್ರಹ್ಮಣ್ಯ, ರಾಘವೇಂದ್ರ, ಇಂತಿಯಾಜ್ ಪಾಷಾ, ಸಾವಿತ್ರಿಬಾಯಿ ಪೋಲೆ ಜಿಲ್ಲಾ ಸಂಚಾಲಕಿ ಅನುಪಮ, ಮತ್ತು ಕಲ್ಪನಾ_ಟಿ_ಆರ್ ಭಾಗವಹಿಸಿದರು
ಅರಂಭದಲ್ಲಿ ಸುಜಿತ್ ನಾಯಕ ಸ್ವಾಗತಕೋರಿದರೆ, ವಸೀಂ ಅಕ್ರಮ್ ವಂದನಾರ್ಪಣೆ ತಿಳಿಸಿದರು.



