
ಶಿರಾ: ತುಮಕೂರು ಜಿಲ್ಲೆಯಲ್ಲಿಯೇ ಶಿರಾ ನಗರ ದಿನೇ ದಿನೆ ಅತಿ ವೇಗದಲ್ಲಿ ಬೆಳವಣಿಗೆಯಾಗುತ್ತಿದ್ದು, ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಕಸದ ಸಮಸ್ಯೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ನಾನು ಪ್ರತಿನಿಧಿಸುವ ವಾರ್ಡ್ ನಂಬರ್ ೯ಕ್ಕೆ ನನ್ನ ಸ್ವಂತ ಖರ್ಚಿನಲ್ಲಿ ಕಸ ಸಂಗ್ರಹಿಸುವ ವಾಹನವನ್ನು ಕೊಡುಗೆಯಾಗಿ ನೀಡಿದ್ದೇನೆ. ವಾರ್ಡಿನ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಗರಸಭಾ ಸದಸ್ಯ ಎಂ.ಕೃಷ್ಣಪ್ಪ ಹೇಳಿದರು.
ಅವರು ಗುರುವಾರ ನಗರದ ೯ನೇ ವಾರ್ಡಿನಲ್ಲಿ ನಗರಸಭಾ ಸದಸ್ಯ ಎಂ.ಕೃಷ್ಣಪ್ಪ ಅವರ ಸ್ವಂತ ಹಣದಿಂದ ಕೊಡುಗೆಯಾಗಿರುವ ನೀಡಿರುವ ಕಸ ಸಂಗ್ರಹಣೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿರಾ ಉತ್ತಮ ಆದಾಯ ಬರುತ್ತಿದೆ. ಪ್ರತಿ ವಾರ್ಡಿಗೆ ಕಸ ಸಂಗ್ರಹಿಸುವ ಒಂದೊ0ದು ವಾಹನ ಹಾಗೂ ೫ ಮಂದಿ ಪೌರ ಕಾರ್ಮಿಕ ಸಿಬ್ಬಂದಿಗಳು ಅವಶ್ಯಕ. ಶಿರಾ ನಗರಸಭೆಯಲ್ಲಿ ಪ್ರಸ್ತುತ ಕೇವಲ ೧೧ ಕಸ ಸಂಗ್ರಹಿಸುವ ವಾಹನಗಳಿವೆ. ಇದೇ ವಾಹನಗಳು ಮೂರು ದಿನಕ್ಕೊಮ್ಮೆ ಕಸ ಸಂಗ್ರಹಿಸಲು ವಾರ್ಡಿಗೆ ಹೋಗುತ್ತಿವೆ. ದಿನ ನಿತ್ಯ ಸಂಗ್ರಹಣೆ ಮಾಡುವುದರಿಂದ ನೈರ್ಮಲ್ಯ ಕಾಪಾಡಬಹುದು. ಜನರ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಶಿರಾ ನಗರಸಭೆ ಅಧಿಕಾರಿಳು ಕ್ರಮ ಕೈಗೊಳ್ಳಬೇಕು ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ ವಾರ್ಡ್ ನಂಬರ್ ೯ ರಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಎಂ.ಕೃಷ್ಣಪ್ಪ ಅವರು ತಮ್ಮ ಸ್ವಂತ ಹಣದಿಂದ ಕಸ ಸಂಗ್ರಹಣೆ ವಾಹನವನ್ನು ನೀಡಿ ಎಲ್ಲಾ ನಗರಸಭಾ ಸದಸ್ಯರಿಗೆ ಮಾದರಿಯಾಗಿದ್ದಾರೆ. ಅವರಿಗೆ ನಾನು ಶುಭ ಕೋರುತ್ತೇವೆ. ಅವರ ಸೇವೆ ಇನ್ನು ಮುಂದುವರೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಪ್ಪಿ ರಂಗನಾಥ್, ಹರ್ಷವಾಧನ್, ಕಾರೇಹಳ್ಳಿ ರಂಗನಾಥ್, ರಾಜಣ್ಣ, ಅಮ್ಜದ್, ಮಹಮದ್ ಇಲಿಯಾಸ್, ಹಾಜಿ, ಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.



