BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ
  • ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ
  • ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ
  • ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ
  • ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ
  • ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ
  • ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು
  • ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ, 3 ಮಕ್ಕಳು ಸೇರಿ ದಂಪತಿ ಸಾವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಿರಂತರ ಪರಿಶ್ರಮದಿಂದ ಮಾತ್ರ ನಿಗದಿತ ಗುರಿ ತಲುಪಲು ಸಾಧ್ಯ
ತುಮಕೂರು

ನಿರಂತರ ಪರಿಶ್ರಮದಿಂದ ಮಾತ್ರ ನಿಗದಿತ ಗುರಿ ತಲುಪಲು ಸಾಧ್ಯ

By News Desk BenkiyabaleUpdated:May 17, 2022 7:20 pm

ತುಮಕೂರು:
ಶಿಕ್ಷಣದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಇವುಗಳಲ್ಲಿ ಯಾವುದು ಕೀಳಲ್ಲ. ನಿರಂತರ ಪರಿಶ್ರಮದಿಂದ ನಿಗಧಿತ ಗುರಿಯನ್ನು ತಲುಪಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಲಭವನದಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಕಲಾ ವಿಭಾಗದಲ್ಲಿ ಓದುವವರು ದಡ್ಡರು, ಬಡವರು ಎಂಬ ಕೀಳಿರಿಮೆ ಬೇಡ. ಆರ್ಟ್ ವಿಷಯ ಓದಿಯೇ ಇಂದು ನ್ಯಾಯಾಧೀಶನಾಗಿದ್ದೇನೆ. ಹಾಗಾಗಿ ಯಾವುದು ಕೀಳಲ್ಲ. ಮೇಲಲ್ಲ. ಗುರಿ ತಲುಪಲು ನಾವು ಅಡ್ಡದಾರಿ ಹಿಡಿಯದೆ ಸರಿಯಾದ ದಾರಿಯಲ್ಲಿ ಮುನ್ನೆಡೆದರೆ ಮಾತ್ರ ಸಾಧನೆಯ ಶಿಖರ ಹೇರಲು ಸಾಧ್ಯ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಬಡತನ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಇಂದು ಸರಕಾರದ ಜೊತೆಗೆ, ಶ್ರೀರಾಮ್ ಫೈನಾನ್ಸ್ ನಂತಹ ಹಲವಾರು ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಉತ್ತೇಜನ ನೀಡಲು ಕೈಜೋಡಿವೆ. ನಾವುಗಳು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುನ್ನೆಡೆಯಬೇಕು.ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ರಾಘವೇಂದ್ರಶೆಟ್ಟಿಗಾರ್ ಸಲಹೆ ನೀಡಿದರು.
ಚಾಲನ ಹುದ್ದೆ ನಾನು ಹೆಚ್ಚು ಗೌರವ ಕೊಡುವಂತಹ ಕೆಲಸ. ನನ್ನಂತಹ ಹತ್ತಾರು ಜನರು ಅವರ ಮೇಲೆ ನಂಬಿಕೆ ಇಟ್ಟು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ವಾಹನ ಹತ್ತಿರುತ್ತೇವೆ. ಚಾಲಕ ತನ್ನ ಕರ್ತವ್ಯವನ್ನು ನಿರ್ವಹಿಸಿದರೆ ಸಾಕು. ಹಾಗೆಯೇ ಬೇರೆಯವರು ಸಹ ತಮ್ಮ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ಮಾಡಿದರೆ, ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.ಹಾಗಾಗಿ ಯುವಜನರು ಹಕ್ಕುಗಳ ಜೊತೆಗೆ, ಕರ್ತವ್ಯದ ಜವಾಬ್ದಾರಿಯನ್ನು ಅರಿತು ದೇಶ ಮುನ್ನೆಡೆಸುವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದರು.
ನಗರಠಾಣೆಯ ಪಿ.ಎಸ್.ಐ ನವೀನ್ ಹೆಚ್.ಎಸ್.ಮಾತನಾಡಿ,ವಿದ್ಯಾರ್ಥಿ ಜೀವನವೆಂಬುದು ಒಂದು ಅಮೂಲ್ಯ. ಸಾಧನೆಗೆ ಅಡ್ಡದಾರಿ ಹಿಡಿಯುವ ಬದಲು ಯಾವುದರಲ್ಲಿಯೂ ಕೀಳಿರಿಮೆ ಬೆಳೆಸಿಕೊಳ್ಳದೆ ಮುನ್ನೆಡೆದರೆ ಒಂದಿಲೊಂದು ಗೌರವಾನ್ವಿತ ಹುದ್ದೆಗಳನ್ನು ಪಡೆಯಬಹುದು.ನಾವು ಮಾಡುವ ತಪ್ಪುಗಳನ್ನು ಹಣೆಬರಹದ ಮೇಲೆ ಹಾಕದೆ,ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳುವಂಹತ ಸ್ಥಿತಿಗೆ ತಲುಪುವಂತಾಗಬೇಕು.ಪ್ರತಿಷ್ಠಿತ ಶಾಲೆಯಲ್ಲಿ ಓದಿದರೆ ಮಾತ್ರ ಬುದ್ದಿವಂತರು ಎಂಬುದು ತಪ್ಪು ಅಭಿಪ್ರಾಯ.ಶಿಕ್ಷಣಕ್ಕಾಗಿ ಸರಕಾರವು ಹಲವಾರು ಸವಲತ್ತುಗಳನ್ನು ನೀಡಿದೆ.ಅದೇ ರೀತಿ ಶ್ರೀರಾಮ ಫೈನಾನ್ಸ್‍ನಂತಹ ಹಲವಾರು ಸಂಸ್ಥೆಗಳು ಸಹ ಸಹಾಯ ಹಸ್ತ ಚಾಚಿವೆ.ಇವುಗಳ ಸದುಪಯೋಗ ಪಡಿಸಿಕೊಳ್ಳಿ, ವಿದ್ಯಾರ್ಥಿ ಜೀವನದಲ್ಲಿ ಎಂದಿಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬೇಡಿ.ಇದು ನಿಮ್ಮ ಜೀವನವನ್ನೇ ನಾಶಗೊಳಿಸುತ್ತದೆ. ಜೀವನ ಪರ್ಯಂತ ನಿಮ್ಮ ತಂದೆತಾಯಿಗಳಿಗೆ ಹೊರೆಯಾಗಿ ಬದುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಇಓ ಹನುಮಾನಾಯ್ಕ್ ಮಾತನಾಡಿ,ವಿದ್ಯಾಭ್ಯಾಸಕ್ಕೆ ಬಡತನ ಎಂದಿಗೂ ಅಡ್ಡಿಬರುವುದಿಲ್ಲ. ಸರಕಾರ ಹಲವು ಸವಲತ್ತುಗಳನ್ನು ಉಚಿತವಾಗಿ ನೀಡುತ್ತಿದೆ.ಇವುಗಳನ್ನು ಬಳಸಿಕೊಂಡು ಉನ್ನತವಾದುದ್ದನ್ನು ಸಾಧಿಸಲು ಮುಂದಾಗಬೇಕು.ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸೊಣ ಎಂದು ಸಲಹೆ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ದೇವರಾಜು ಮಾತನಾಡಿ,ಪೋಷಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಚಿಕ್ಕವಯಸ್ಸಿನ ಮಕ್ಕಳ ಕೈಗೆ ವಾಹನಗಳನ್ನು ನೀಡುತ್ತಾರೆ.ಇದು ಅಪರಾಧ ಒಂದು ವೇಳೆ ಅಪಘಾತವಾದರೆ ಪೋಷಕರ ವಿರುದ್ದ ಕೇಸು ಮತ್ತು ದಂಡ ಹಾಕಲಾಗುತ್ತದೆ.ಶಾಲೆಗೆ ಹೋಗುವ ಮಕ್ಕಳು ನಿಗಧಿತ ಸಮಯಕ್ಕಿಂತ ಅರ್ಧಗಂಟೆ ಮುಂಚಿತವಾಗಿ ಮನೆ ಬಿಡಿ, ಇದರಿಂದ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗೀಯ ಬಿಸಿನೆಸ್ ಹೆಡ್ ಶ್ರೀಧರ್ ಮಠಮ್, 1974 ಆರಂಭವಾದ ಶ್ರೀರಾಮ್ ಫೈನಾನ್ಸ್ ಕಂಪನಿ ಇಂದು 2.10 ಕೋಟಿ ಗ್ರಾಹಕರನ್ನು ಹೊಂದಿದೆ.ಲಾರಿ ಚಾಲಕರು, ಮಾಲೀಕರಾಗಬೇಕೆಂಬ ಉದ್ದೇಶ ಕಂಪನಿಯದ್ದು,ಟ್ರಕ್ ಚಾಲಕರು ಹತ್ತಾರು ದಿನಗಳ ಕಾಲ ಮನೆ ಬಿಟ್ಟು ಹೊರಗಡೆಯೇ ಇರುವುದರಿಂದ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕೆಂಬ ಆಸೆಯಿಂದ 2013ರಲ್ಲಿ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಜಾರಿಗೆ ತರಲಾಯಿತು.ಪ್ರತಿವರ್ಷ ದೇಶದಲ್ಲಿ 25-30 ಸಾವಿರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.ಇದರ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಶ್ರೀರಾಮ ಟ್ರಾನ್ಸ್‍ಪೋರ್ಟ್‍ನ ರಾಜ್ಯ ಬಿಸಿನೆಸ್ ಹೆಡ್ ಹೆಚ್.ಚನ್ನೇಗೌಡ, ಡಿಫಾಸಿಟ್ ಹೆಡ್ ವಿಜಯ ಕುಮಾರ್,ರೀಜಿನಲ್ ಬಿಸಿನೆಸ್ ಹೆಡ್ ರಾಘವೇಂದ್ರ, ಸ್ಥಳೀಯ ಮ್ಯಾನೇಜರ್ ಪ್ರಸನ್ನಕುಮಾರ್, ಯಧುಕುಮಾರ್, ಹುಸೇನಪ್ಪ, ಶಿವಕುಮಾರ್, ದಯಾನಂದ ಮತ್ತಿತರರು ಉಪಸ್ಥಿತರಿದ್ದರು.

(Visited 2 times, 1 visits today)
tumkur
Previous Articleಗರಿಷ್ಠ ಪ್ರಮಾಣದಲ್ಲಿ ಆಯುಷ್ಮಾನ್ ಕಾರ್ಡ್ ನೀಡಲು ಜಿಲ್ಲಾಧಿಕಾರಿ ಸೂಚನೆ
Next Article ಮಕ್ಕಳ ಸಹಾಯವಾಣಿ 1098 ದಿನಾಚರಣೆ: ಜಾಗೃತಿ ಜಾಥಾ
News Desk Benkiyabale

Related Posts

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm news

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm news

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm news
ತಾಜಾ ಸುದ್ಧಿಗಳು
news

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm
news

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm
news

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm
news

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm
news

ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ

August 03, 2026 4:48 pm
news

ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ

August 01, 2026 2:41 pm
Our Youtube Channel
Our Picks

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm

ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ

August 03, 2026 4:48 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

By News Desk BenkiyabaleAugust 03, 2026 4:58 pm

ತುಮಕೂರು: ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ ೨ಎ ಮೀಸಲಾತಿ ದೊರೆಯುತ್ತಿದ್ದು, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ೨ಎ ಮೀಸಲಾತಿ ದೊರೆಯು ಬೇಕೆಂಬುದು…

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.