BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ
  •  ಜು.೨೯ರವರೆಗೆ ಮನೆ-ಮನೆ ಭೇಟಿ
  • ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ
  • ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ
  • ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಬಿಎಲ್‌ಓಗಳಿಂದ ಮನೆ-ಮನೆ ಭೇಟಿ
  • ಇ-ಪೌತಿ ಖಾತಾ ಆಂದೋಲನ-೨ ಜಿಲ್ಲಾಧಿಕಾರಿಗಳಿಂದ ಅರ್ಜಿ ಸ್ವೀಕಾರ
  • ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ: ಪಿ.ರಘು
  • ಹುಳಿಯಾರಿನ ಏಕೈಕ ಶತಮಾನದ ಇತಿಹಾಸದ ಹೆಮ್ಮೆಯ ಕುರುಹು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅಮೃತ ಮಹೋತ್ಸವಕ್ಕೆ ಜಿಲ್ಲೆಯಿಂದ ಒಗ್ಗಟ್ಟು ಪ್ರದರ್ಶನ: ಆರ್.ರಾಜೇಂದ್ರ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಇತರೆ ಸುದ್ಧಿಗಳು

ಅಮೃತ ಮಹೋತ್ಸವಕ್ಕೆ ಜಿಲ್ಲೆಯಿಂದ ಒಗ್ಗಟ್ಟು ಪ್ರದರ್ಶನ: ಆರ್.ರಾಜೇಂದ್ರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

By News Desk BenkiyabaleUpdated:July 25, 2022 5:22 pm

ತುಮಕೂರು:


ಮುಂದಿನ ಆಗಸ್ಟ್ 03 ರಂದು ದಾವಣಗೆರೆಯಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಹಿಂದುಳಿದ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಇಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಎಂ.ಎಲ್.ಸಿ. ಆರ್.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಪೂರ್ವಭಾವಿ ಸಭೆಯಲ್ಲಿ ಕುರುಬ, ಮಡಿವಾಳ, ಕುಂಬಾರ, ನೇಕಾರ, ಸವಿತಾ, ವಾಲ್ಮೀಕಿ, ಗೊಲ್ಲ ಸಮುದಾಯದ ಮುಖಂಡರು ಸೇರಿದಂತೆ ಓಬಿಸಿ ಸಮುದಾಯಕ್ಕೆ ಸೇರಿದ ಹಲವು ಮುಖಂಡರು ಭಾಗವಹಿಸಿ, ಜಿಲ್ಲೆಯಿಂದ ಹೆಚ್ಚು ಜನರನ್ನು ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು.
ಕಾರ್ಯಕ್ರಮ ಕುರಿತು ಮಾತನಾಡಿದ ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್, ದಿವಂಗತ ದೇವರಾಜ ಅರಸು ನಂತರ ಹಿಂದುಳಿದ ವರ್ಗಗಳ ಕುಂದು ಕೊರತೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ ಮುಖ್ಯಮಂತ್ರಿಗಳಿದ್ದರೆ ಅದು ಸಿದ್ದರಾಮಯ್ಯ ಮಾತ್ರ. ಹಾಗಾಗಿ ದಾವಣಗೆರೆಯಲ್ಲಿ ನಡೆಯುವ ಅವರ 75ನೇ ಹುಟ್ಟು ಹಬ್ಬದಲ್ಲಿ ಜಿಲ್ಲೆಯಿಂದ ಹೆಚ್ಚು ಜನರು ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕಿದೆ.
ಅರಸು ಅವರನ್ನು ಹೊರತು ಪಡಿಸಿದರೆ ಐದು ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳ್ಳಿಕೆ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.ಇದು ಎಲ್ಲಾ ಹಿಂದುಳಿದ ವರ್ಗದವರು ಹೆಮ್ಮೆ ಪಡುವ ವಿಚಾರ ಎಂದರು.
ಹಿಂದುಳಿದ ವರ್ಗಗಳ ಮುಖಂಡ ಹೆಬ್ಬೂರು ಶ್ರೀನಿವಾಸಮೂರ್ತಿ ಮಾತನಾಡಿ, ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಕಾರ್ಯಕ್ರಮ ನಮ್ಮೆಲ್ಲರ ಮನೆಯ ಹಬ್ಬವಿದ್ದಂತೆ, ಹಾಗಾಗಿ ನಾವೆಲ್ಲರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕಾಗಿದೆ. ಒಂದು ವೇಳೆ ಭಾಗವಹಿಸಲು ಇಚ್ಚಿಸುವವರು ವಾಹನದ ವ್ಯವಸ್ಥೆ ಬೇಕಾದಲ್ಲಿ ಪ್ರವರ್ಗ 1ರ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರಾಜೇಶ್ ದೊಡ್ಮನೆ (ದೂ.9844549430) ಅವರಿಗೆ ಮಾಹಿತಿ ನೀಡಿದರೆ, ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಹೆಬ್ಬೂರು ಚಿಕ್ಕಣ್ಣನ ಹಟ್ಟಿಯ ದೇವಾಲಯದ ಪ್ರಧಾನ ಆರ್ಚಕ ಪಾಪಣ್ಣ ಮಾತನಾಡಿ, ಹಿಂದುಳಿದ ಜನಾಂಗದವರು ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ತೋರಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ. ಹಾಗಾಗಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಈ ಕಾರ್ಯಕರ್ಮದಲ್ಲಿ ಪಾಲ್ಗೊಳ್ಳುವ ಮೂಲಕ ಸಿದ್ದರಾಮಯ್ಯ ಅವರ ಕೈ ಬಲಪಡಿಸುವ ಕೆಲಸ ಮಾಡೋಣ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಂ.ಎಲ್.ಸಿ. ಆರ್.ರಾಜೇಂದ್ರ ಮಾತನಾಡಿ, ಸಿದ್ದರಾಮಯ್ಯ ಅವರ 75ನೇ ಹುಟ್ಟು ಹಬ್ಬದ ಹೆಸರಿನಲ್ಲಿ ಹರಿದು ಹಂಚಿ ಹೋಗಿರುವ ಓಬಿಸಿಗಳು ವಯುಕ್ತಿಕವಾಗಿ ಮತ್ತು ಸಮುದಾಯದ ಹಂತದಲ್ಲಿ ಒಗ್ಗೂಡಲು ವೇದಿಕೆಯಾಗಿದೆ.
ಅವರು ಆಡಳಿತ ನಡೆಸಿದ 2013-18ರವರೆಗಿನ ಕಾಲ ಹಿಂದುಳಿದ ವರ್ಗ, ದಲಿತರಿಗೆ ಸುವರ್ಣ ಕಾಲ, ಸಂವಿಧಾನ ಬದ್ದವಾಗಿ ಈ ಸಮುದಾಯಗಳಿಗೆ ದೊರೆಯಬೇಕಾದ ಎಲ್ಲಾ ಸವಲತ್ತುಗಳನ್ನು ಪಕ್ಷಭೇಧ ಮರೆತು ನೀಡಿದ್ದಾರೆ. ಅವರ ಹಿತೈಷಿಗಳು ಮತ್ತು ಗೆಳೆಯರು ಮಾಡುತ್ತಿರುವ 75ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಕನಿಷ್ಠ 50 ಸಾವಿರ ಭಾಗವಹಿಸುವ ಮೂಲಕ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರ ಒಗ್ಗಟ್ಟಿನ ಆನಾವರಣ ಮಾಡಬೇಕಾಗಿದೆ.
ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲು ನಾವು ಸಿದ್ದ. ಆಯಾಯ ಸಮುದಾಯಗಳು ತಮ್ಮ ಸಮುದಾಯದ ಬ್ಯಾನರ್ ಅಡಿಯಲ್ಲಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಾವೆಲ್ಲರೂ ಒಂದೇ ಎಂಬುದನ್ನು ಸಾರೋಣ. ಆ ಮೂಲಕ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ಕೆ.ಎನ್.ರಾಜಣ್ಣ ಅವರಿಗೆ ಶಕ್ತಿ ತುಂಬೋಣ ಎಂದರು.
ಸಭೆಯಲ್ಲಿ ಮಡಿವಾಳ ಸಮಾಜದ ಶಾಂತಕುಮಾರ್, ಕುಂಬಾರ ಸಮಾಜದ ಉಪಾಧ್ಯಕ್ಷ ಗುರುಮೂರ್ತಿ, ವಾಲ್ಮೀಕಿ ಸಮುದಾಯದ ಪುರುಷೋತ್ತಮ್, ರಂಗನಾಥ್, ಕನ್ನಡ ಸ್ವಾಭಿಮಾನ ಸಂಘಟನೆಯ ರಂಗನಾಥ್, ಪ್ರವರ್ಗ 1ರ ಮೀಸಲಾತಿ ಹೋರಾಟ ಸಮಿತಿಯ ರೇಣುಕಯ್ಯ, ಸುರೇಶ್, ರಾಜೇಶ್ ದೊಡ್ಡಮನೆ ಉಪಸ್ಥಿತರಿದ್ದರು.

(Visited 11 times, 1 visits today)
mlc r.rajendra tumkur
Previous Article‘ಭೂ ಹಗರಣದ ರೂವಾರಿ ನೀವೆ ಅಲ್ಲವೇ?’: ಶಾಸಕ ಶ್ರೀನಿವಾಸ್‍ರನ್ನು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ
Next Article ಜನಸಂಖ್ಯೆ ನಿಯಂತ್ರಣ ಕುರಿತು ಜನಜಾಗೃತಿ ಜಾಥಾ
News Desk Benkiyabale

Related Posts

ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ

July 01, 2026 5:13 pm news

 ಜು.೨೯ರವರೆಗೆ ಮನೆ-ಮನೆ ಭೇಟಿ

July 01, 2026 5:10 pm news

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:07 pm news
ತಾಜಾ ಸುದ್ಧಿಗಳು

ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ

July 01, 2026 5:13 pm

 ಜು.೨೯ರವರೆಗೆ ಮನೆ-ಮನೆ ಭೇಟಿ

July 01, 2026 5:10 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:07 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:04 pm

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಬಿಎಲ್‌ಓಗಳಿಂದ ಮನೆ-ಮನೆ ಭೇಟಿ

July 01, 2026 5:01 pm

ಇ-ಪೌತಿ ಖಾತಾ ಆಂದೋಲನ-೨ ಜಿಲ್ಲಾಧಿಕಾರಿಗಳಿಂದ ಅರ್ಜಿ ಸ್ವೀಕಾರ

June 30, 2026 5:10 pm
Our Youtube Channel
Our Picks

ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ

July 01, 2026 5:13 pm

 ಜು.೨೯ರವರೆಗೆ ಮನೆ-ಮನೆ ಭೇಟಿ

July 01, 2026 5:10 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:07 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:04 pm

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಬಿಎಲ್‌ಓಗಳಿಂದ ಮನೆ-ಮನೆ ಭೇಟಿ

July 01, 2026 5:01 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ

By News Desk BenkiyabaleJuly 01, 2026 5:13 pm

ತುಮಕೂರು : ಇಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕದಿಂದ ನಗರದ ಕನ್ನಡ…

 ಜು.೨೯ರವರೆಗೆ ಮನೆ-ಮನೆ ಭೇಟಿ

July 01, 2026 5:10 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:07 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:04 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.