BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ
  • ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್
  • ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆಗಳಿಲ್ಲ
  • ನಗರದಲ್ಲಿ ಅ. ೧೧ ರಿಂದ ೨೧ರವರೆಗೆ ದಸರಾ ಉತ್ಸವ
  • ಸಾಧನೆಗೆ ಶ್ರೀಮಂತಿಕೆ, ಬಡತನ ಮುಖ್ಯವಲ್ಲ, ಗುರಿ ಸಾಧಿಸುವ ಕಿಚ್ಚು ಮುಖ್ಯ
  • ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ
  • ಕನ್ನಡ ಭವನದಲ್ಲಿ ಮೂಡಲಪಾಯ ಬಯಲಾಟದ ಕಲರವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗಣೇಶ ಚತುರ್ಥಿ ಅಂಗವಾಗಿ ಪರಿಸರ ಮಿತ್ರ ಗಣಪತಿ ರಚನೆ ಕಾರ್ಯಾಗಾರ : ಎಂ. ಎಸ್. ಶ್ರೀಧರ್ ಕಾರ್ಯಕ್ರಮಕ್ಕೆ ಚಾಲನೆ
ಇತರೆ ಸುದ್ಧಿಗಳು

ಗಣೇಶ ಚತುರ್ಥಿ ಅಂಗವಾಗಿ ಪರಿಸರ ಮಿತ್ರ ಗಣಪತಿ ರಚನೆ ಕಾರ್ಯಾಗಾರ : ಎಂ. ಎಸ್. ಶ್ರೀಧರ್ ಕಾರ್ಯಕ್ರಮಕ್ಕೆ ಚಾಲನೆ

By News Desk BenkiyabaleUpdated:August 26, 2022 5:30 pm

ತುಮಕೂರು :

ಬಾಲ ಭವನ ಸೊಸೈಟಿ, ಬೆಂಗಳೂರು ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇವರುಗಳು ಸಹಭಾಗಿತ್ವದಲ್ಲಿಂದು ಗಣೇಶ ಚತುರ್ಥಿ ಅಂಗವಾಗಿ ಪರಿಸರ ಮಿತ್ರ ಗಣಪತಿ ರಚನೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯದರ್ಶಿಗಳು ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಂ. ಎಸ್. ಶ್ರೀಧರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ವಿದ್ಯಾ ಗಣಪತಿ ಹಬ್ಬದ ಆಚರಣೆ ಮಕ್ಕಳಲ್ಲಿ ತುಂಬಾ ಸಂತೋಷ ಮತ್ತು ಆಸಕ್ತಿದಾಯಕ ಹಬ್ಬ. ಈ ಹಬ್ಬವನ್ನು ಆಚರಣೆ ಮಾಡುವಾಗ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ವಿವಿಧ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಬಳಸಿ ಸಿದ್ಧಪಡಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದರಿಂದ ಭೂಮಂಡಲದ ಇಡೀ ಜೀವರಾಶಿಗೆ ಹಾನಿಯುಂಟಾಗುತ್ತದೆ. ಆದ್ದರಿಂದ ಪರಿಸರ ಮಿತ್ರ ಗಣಪನ ಯಾವುದೇ ವಿಷಕಾರಿ ಬಣ್ಣಗಳನ್ನು ಬಳಸದೆ ತಯಾರಿಸುವುದರಿಂದ ಇಡೀ ಮಾನವ ಸಂಕುಲವನ್ನು ಅನಾರೋಗ್ಯದಿಂದ ರಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಶ್ರೀ ಗಣೇಶನ ಕುರಿತು ಕಥೆಯ ಮೂಲಕ ವಿವರವಾಗಿ ವಿವರಿಸಿದ ಅವರು, ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಗಣಪತಿ ಹಬ್ಬವನ್ನು ಆಚರಣೆ ಮಾಡುವುದರ ಮೂಲಕ ತಮ್ಮ ಶೈಕ್ಷಣಿಕ ಜೀವನದಲ್ಲಿ ಸಮಯವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜ್ಞಾನಾರ್ಜನೆಗೆ ಸಮಯ ವಿನಿಯೋಗಿಸುವಂತೆ ತಿಳಿಸಿದರು.
ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಮತೋಲಿತ ಆಹಾರ ಸೇವಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಂಡು ತಮ್ಮ ಶೈಕ್ಷಣಿಕ ಜೀವನವನ್ನು ಪೂರ್ಣಗೊಳಿಸಿಕೊಳ್ಳುವಂತೆ ತಿಳಿಸಿದರು.
ನಂತರ ಮಾತನಾಡಿದ ಪರಿಸರ ಇಲಾಖೆಯ ಉಪ ಪರಿಸರ ಅಧಿಕಾರಿ ಪಲ್ಲವಿ ಅವರು, ಶ್ರೀ ಗಣೇಶನ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಐತಿಹಾಸಿಕ ಹಿನ್ನೆಲೆಯಿದೆ ಹಾಗೂ ವೈಜ್ಞಾನಿಕ ಹಿನ್ನೆಲೆ ಇದೆ. ಈ ಮೂರು ಹಿನ್ನೆಲೆಗಳನ್ನು ಕಥೆಯ ಮೂಲಕ ಸವಿವರವಾಗಿ ವಿವರಿಸಿದರು ಹಾಗೂ ಪರಿಸರ ಗಣಪ ರಚನೆ ಕುರಿತು ಯಾವುದೇ ಅಪಾಯಕಾರಿ ರಾಸಾಯನಿಕಗಳನ್ನು ಬಳಸದೇ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ತಿಳಿಸಿದರು.
ಈ ರೀತಿ ಪರಿಸರ ಮಿತ್ರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರಿಂದ ಭೂಮಂಡಲದ ಮೇಲಿನ ಅನೇಕ ಜೀವರಾಶಿಗಳಿಗೆ ಉಪಯೋಗವಾಗಲಿದೆ ಎಂದು ತಿಳಿಸಿ, ಶ್ರೀ ವಿದ್ಯಾಗಣಪತಿ ಎಲ್ಲ ಮಕ್ಕಳಿಗೂ ವಿದ್ಯಾ ಬುದ್ಧಿ ನೀಡಲೆಂದು ಶುಭಾಶಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾ ಅಧಿಕಾರಿಗಳಾದ ಶಿವಕುಮಾರಯ್ಯ, ಶಿಕ್ಷಣ ಇಲಾಖೆಯ ಶಿವರಾಜ್, ಬಾಲಭವನ ಕಾರ್ಯಕ್ರಮ ವ್ಯವಸ್ಥಾಪಕ ಪಿ. ಜೆ. ಚೌಡಪ್ಪ, ಕಾರ್ಯಕ್ರಮ ಸಂಯೋಜಕರಾದ ಮಮತ ಪಿ. ಸೇರಿದಂತೆ ಮಕ್ಕಳು ಹಾಗೂ ಶಿಕ್ಷಕರು ಹಾಜರಿದ್ದರು.

(Visited 10 times, 1 visits today)
tumkur
Previous Articleಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ
Next Article ತುಮಕೂರು ನಗರದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಗಳನ್ನು ತೆರವುಗೊಳಿಸಿದ ಪೊಲೀಸರು
News Desk Benkiyabale

Related Posts

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

October 08, 2026 6:05 pm news

ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್

October 08, 2026 6:03 pm news

ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ

October 08, 2026 6:02 pm news
ತಾಜಾ ಸುದ್ಧಿಗಳು
news

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

October 08, 2026 6:05 pm
news

ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್

October 08, 2026 6:03 pm
news

ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ

October 08, 2026 6:02 pm
news

ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆಗಳಿಲ್ಲ

October 08, 2026 6:01 pm
news

ನಗರದಲ್ಲಿ ಅ. ೧೧ ರಿಂದ ೨೧ರವರೆಗೆ ದಸರಾ ಉತ್ಸವ

October 08, 2026 5:59 pm
news

ಸಾಧನೆಗೆ ಶ್ರೀಮಂತಿಕೆ, ಬಡತನ ಮುಖ್ಯವಲ್ಲ, ಗುರಿ ಸಾಧಿಸುವ ಕಿಚ್ಚು ಮುಖ್ಯ

October 07, 2026 5:33 pm
Our Youtube Channel
Our Picks

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

October 08, 2026 6:05 pm

ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್

October 08, 2026 6:03 pm

ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ

October 08, 2026 6:02 pm

ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆಗಳಿಲ್ಲ

October 08, 2026 6:01 pm

ನಗರದಲ್ಲಿ ಅ. ೧೧ ರಿಂದ ೨೧ರವರೆಗೆ ದಸರಾ ಉತ್ಸವ

October 08, 2026 5:59 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

By News Desk BenkiyabaleOctober 08, 2026 6:05 pm

ಪಾವಗಡ: ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆಹಾರ ಕಲಬೆರಕೆ ತಡೆಗಟ್ಟುವ ನಿಟ್ಟಿನಲ್ಲಿ ತಹಸೀಲ್ದಾರ್ ವೈ. ರವಿ ನೇತೃತ್ವದ ಅಧಿಕಾರಿಗಳ…

ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್

October 08, 2026 6:03 pm

ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ

October 08, 2026 6:02 pm

ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆಗಳಿಲ್ಲ

October 08, 2026 6:01 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.