BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರು ಜಿಲ್ಲೆಗೆ ಭವ್ಯವಾದ ಸಾಹಿತ್ಯದ ಇತಿಹಾಸವಿದೆ
  • ತುರುವೇಕೆರೆ: ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ
  • ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧಾರ ಕೈಗೊಳ್ಳಲಿ
  • ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ
  • ಲಯನ್ಸ್ ಭವನಕ್ಕೆ ೧೦ ಲಕ್ಷ ಅನುದಾನ ನೀಡುವುದಾಗಿ ಶಾಸಕ ಬರವಸೆ
  • ನೀಲಕಂಠೇಶ್ವರಸ್ವಾಮಿಯ ೧೦೬ನೇ ವೈಭವದ ಜಾತ್ರೋತ್ಸವ
  • ಕಾರ್ಯ ದಕ್ಷತೆಗೆ ತರಬೇತಿಗಳು ಅಗತ್ಯ
  • ಕೆ.ಎನ್.ರಾಜಣ್ಣರ ಅಮೃತ ಮಹೋತ್ಸವ ಯಶಸ್ಸಿಗೆ ನಿರ್ಧಾರ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ
ಇತರೆ ಸುದ್ಧಿಗಳು

ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ

By News Desk BenkiyabaleUpdated:September 06, 2022 5:05 pm

ತುಮಕೂರು:


ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಶಿಕ್ಷಕರು/ನೌಕರರ ಬೇಡಿಕೆಗಳನ್ನು ಈಡೇರಿಕೆಗಾಗಿ ರಾಷ್ಟ್ರಮಟ್ಟದಲ್ಲಿ ಸಹಿ ಸಂಗ್ರಹಣ ಅಭಿಯಾನದ ಅಂಗವಾಗಿ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ನೇತೃತ್ವದಲ್ಲಿ ಶಿಕ್ಷಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಕ್ರಮವಹಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಶಾಖೆಯ ಅಧ್ಯಕ್ಷ ಆರ್.ಪರಶಿವಮೂರ್ತಿ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಶಾಖೆಯ ಅಧ್ಯಕ್ಷ ಆರ್.ಪರಶಿವಮೂರ್ತಿ ಅವರು, ಇಡೀ ದೇಶದಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಮುಂದಾಗಿರುವ ಸರ್ಕಾರ, ಶಿಕ್ಷಕರಿಗೆ ತರಬೇತಿಯನ್ನು ನೀಡದೇ ಎನ್‍ಇಪಿ ಜಾರಿಗೊಳಿಸಲು
ಮುಂದಾಗಿರುವುದರಿಂದ ಶಿಕ್ಷಕರಿಗೆ ಒತ್ತಡ ನಿರ್ಮಾಣವಾಗಿದೆ ಎಂದರು.
ದೇಶದ ಬೇರೆ ರಾಜ್ಯಗಳಲ್ಲಿ ಎನ್‍ಇಪಿ ತುರ್ತಾಗಿ ಜಾರಿಗೊಳಿಸದೇ, ಶಿಕ್ಷಕರಿಗೆ ಸೂಕ್ತ ತರಬೇತಿಯನ್ನು ನೀಡುವ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸಲು ತಯಾರಿ ನಡೆಸಿವೆ ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಯಾವುದೇ ಮುಂಜಾಗ್ರತೆಯನ್ನು ವಹಿಸದೇ, ಶಿಕ್ಷಕರಿಗೆ ತರಬೇತಿಯನ್ನು ನೀಡದೇ ಈ ರೀತಿ ತರಾತುರಿಯಲ್ಲಿ ಜಾರಿಗೊಳಿಸದೇ ಶಿಕ್ಷಕರಿಗೆ ತರಬೇತಿಯನ್ನು ನೀಡಿ, ಎನ್‍ಇಪಿ ಅನುಷ್ಠಾನಕ್ಕೆ ಅಗತ್ಯ ತಯಾರಿ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ/ಅತಿಥಿ ಶಿಕ್ಷಕರ ನೇಮಕಾತಿಯನ್ನು ಮಾಡುವ ಬದಲಾಗಿ ನೇರ ನೇಮಕಾತಿ ಮಾಡಿಕೊಳ್ಳುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಕ್ರಮವಹಿಸಬೇಕು, ಗುತ್ತಿಗೆ ಮತ್ತು ಅತಿಥಿ ಶಿಕ್ಷಕರ ನೇಮಕದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ ಎನ್ನುವುದನ್ನು ಅರಿಯಬೇಕು ಎಂದು ಹೇಳಿದರು.
2006ರ ನಂತರ ನೇಮಕವಾಗಿರುವ ಶಿಕ್ಷಕರಿಗೆ ಹಳೇ ಪಿಂಚಣಿಯನ್ನು ನೀಡಬೇಕು, ಹೊಸ ಪಿಂಚಣಿ ವ್ಯವಸ್ಥೆಯಿಂದ ಶಿಕ್ಷಕರಿಗೆ ಭದ್ರತೆ ಇಲ್ಲದಂತೆ ಆಗಿದೆ, ಹೊಸ ಪಿಂಚಣಿ ವ್ಯವಸ್ಥೆಗೆ ಬದಲಾಗಿ ನಮ್ಮ ಹಳೇ ಪಿಂಚಣಿ ವ್ಯವಸ್ಥೆಯನ್ನು ನೀಡುವ ಮೂಲಕ ನಿವೃತ್ತ ಜೀವನದಲ್ಲಿ ನೆಮ್ಮದಿಯಿಂದ ಬದುಕುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ಶಿಕ್ಷಕರ ವರ್ಗಾವಣೆಯಲ್ಲಿ ಕನಿಷ್ಠ 7 ವರ್ಷ ಸೇವೆಯನ್ನು ಪೂರೈಸಿರಬೇಕು ಎಂಬ ನಿಯಮವನ್ನು ಸಡಿಲಿಸಿ, ಕನಿಷ್ಠ ಖಾಯಂ ಪೂರ್ಣ ಸೇವಾವಧಿಯನ್ನು ಪೂರೈಸಿದ ಅರ್ಹ ಶಿಕ್ಷಕರಿಗೆ ಯಾವುದೇ ನಿಬಂಧನೆಗಳಿಲ್ಲದೆ ಪರಸ್ಪರ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು, ಅವಧಿ ಪೂರೈಸಿರುವ ಸಿಆರ್‍ಪಿ/ಬಿಆರ್‍ಪಿ/ಇಸಿಒಗಳು ಸ್ಥಳ ಲಭ್ಯತೆ ಇಲ್ಲದೆ, ಅನಾನುಕೂಲವಾದ ಸ್ಥಳಗಳಿಗೆ ನಿಯುಕ್ತಿಗೊಳಿಸಿರುವವ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಣ್ಣ, ಜಿ.ಆರ್.ಜಯರಾಂ, ತಿಮ್ಮೇಗೌಡ, ಎನ್.ಟಿ.ಪ್ರಕಾಶ್, ಹೆಚ್.ಎಂ.ಸುರೇಶ್, ಟಿ.ಕೆ.ಪಟ್ಟಾಭಿರಾಮ, ಮಹದೇವಯ್ಯ,ಜಯಲಕ್ಷ್ಮಮ್ಮ, ನೇತಾವತಿ, ಶಮಂತ, ಎಚ್.ಸಿ.ಓಂಕಾರಮೂರ್ತಿ, ಸಿ.ಎಸ್.ನಾಗರಾಜು, ಮಂಜುಳಾ, ಮಂಜಣ್ಣ ಉಪಸ್ಥಿತರಿದ್ದರು.

(Visited 6 times, 1 visits today)
tumkur
Previous Articleಬೊಮ್ಮೇನಹಳ್ಳಿ ಗ್ರಾಮ ಜಲಾವೃತ
Next Article ಕೆರೆಗಳ ಸರಹದ್ದನ್ನು ಗುರುತಿಸಿ ಸಂರಕ್ಷಿಸಿ ಕೆರೆ ಒತ್ತುವರಿ ತೆರವು : 768 ಕೆರೆಗಳ ಸರ್ವೇಕಾರ್ಯ ಪೂರ್ಣ : ಡಿಸಿ
News Desk Benkiyabale

Related Posts

ತುಮಕೂರು ಜಿಲ್ಲೆಗೆ ಭವ್ಯವಾದ ಸಾಹಿತ್ಯದ ಇತಿಹಾಸವಿದೆ

June 16, 2025 3:18 pm ತುಮಕೂರು

ತುರುವೇಕೆರೆ: ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 3:00 pm ತುಮಕೂರು

ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧಾರ ಕೈಗೊಳ್ಳಲಿ

June 16, 2025 2:50 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ತುಮಕೂರು ಜಿಲ್ಲೆಗೆ ಭವ್ಯವಾದ ಸಾಹಿತ್ಯದ ಇತಿಹಾಸವಿದೆ

June 16, 2025 3:18 pm
ತುಮಕೂರು

ತುರುವೇಕೆರೆ: ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 3:00 pm
ತುಮಕೂರು

ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧಾರ ಕೈಗೊಳ್ಳಲಿ

June 16, 2025 2:50 pm

ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 2:21 pm
ತುಮಕೂರು

ಲಯನ್ಸ್ ಭವನಕ್ಕೆ ೧೦ ಲಕ್ಷ ಅನುದಾನ ನೀಡುವುದಾಗಿ ಶಾಸಕ ಬರವಸೆ

June 16, 2025 2:16 pm
ತುಮಕೂರು

ನೀಲಕಂಠೇಶ್ವರಸ್ವಾಮಿಯ ೧೦೬ನೇ ವೈಭವದ ಜಾತ್ರೋತ್ಸವ

June 16, 2025 2:07 pm
Our Youtube Channel
Our Picks

ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 2:21 pm

ಶೋಷಿತರಲ್ಲಿ ಹೋರಾಟದ ಕಿಚ್ಚು ಹತ್ತಿಸಿದವರು ಪ್ರೊ.ಬಿ.ಕೃಷ್ಣಪ್ಪ

June 16, 2025 1:56 pm

ಸಾರ್ವಜನಿಕರು ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ

June 05, 2025 2:29 pm

ನಗರದಲ್ಲಿ ಪ್ರಾದೇಶಿಕ ತೆಂಗು ಅಭಿವೃದ್ಧಿ ಮಂಡಳಿ ಕಚೇರಿ ತೆರೆಯಿರಿ

May 31, 2025 3:29 pm

ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ

May 29, 2025 4:18 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ತುಮಕೂರು ಜಿಲ್ಲೆಗೆ ಭವ್ಯವಾದ ಸಾಹಿತ್ಯದ ಇತಿಹಾಸವಿದೆ

By News Desk BenkiyabaleJune 16, 2025 3:18 pm

ತುಮಕೂರು: ಜಿಲ್ಲೆಯು ಪ್ರಾಚೀನ ಇತಿಹಾಸ ಮತ್ತು ಸಾಹಿತ್ಯಿಕ ಇತಿಹಾಸದಿಂದಲೂ ತುಂಬಾ ಪ್ರಸಿದ್ಧವಾಗಿದೆ. ಕೈದಾಳದಲ್ಲಿರುವ ಶಾಸನ ವಿಭಿನ್ನ ಧರ್ಮದ ಸೌಹಾರ್ಧತೆಯನ್ನು ಬಿಂಬಿಸುವAತಿದೆ.…

ತುರುವೇಕೆರೆ: ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 3:00 pm

ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧಾರ ಕೈಗೊಳ್ಳಲಿ

June 16, 2025 2:50 pm

ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 2:21 pm
News by Date
June 2025
M T W T F S S
 1
2345678
9101112131415
16171819202122
23242526272829
30  
« May    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.