BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ
  • ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ
  • ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ
  • ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ
  • ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ
  • ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ
  • ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ
  • ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರೆಟ್ರೋ ರಿಪ್ಲೆಕ್ಟಿವ್ ಟೇಪ್ ಅಳವಡಿಸಲು ಸಮಯ ನೀಡಿ
ಇತರೆ ಸುದ್ಧಿಗಳು

ರೆಟ್ರೋ ರಿಪ್ಲೆಕ್ಟಿವ್ ಟೇಪ್ ಅಳವಡಿಸಲು ಸಮಯ ನೀಡಿ

By News Desk BenkiyabaleUpdated:September 27, 2022 5:16 pm

ತುಮಕೂರು


ರಾಜ್ಯದಲ್ಲಿ ಎಲ್ಲ ವಾಣಿಜ್ಯ ವಾಹನಗಳು, ಲಾರಿ ಸೇರಿದಂತೆ ಎಲ್ಲ ಸಾರಿಗೆ ವಾಹನಗಳಿಗೆ ರೆಟ್ರೋ ರಿಪ್ಲೆಕ್ಟಿವ್ ಟೇಪ್ ಅಳವಡಿಸುವಂತೆ ಸರ್ಕಾರ ಹೊರಡಿಸಿರುವ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ, ಈ ಟೇಪ್‍ಗಳ ಅಳವಡಿಕೆಗೆ ಇನ್ನು 10 ದಿನಗಳ ಕಾಲ ಕಾಲಾವಕಾಶ ನೀಡಬೇಕು ಎಂದು ಫೆಡರೇಷನ್ ಕರ್ನಾಟಕ ಲಾರಿ ಮಾಲೀಕರ ಸಂಘ, ಗೂಡ್ಸ್ ವಾಹನ ಅಸೋಸಿಯೇಷನ್, ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಅಸೋಸಿಯೇಷನ್ ವತಿಯಿಂದ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕೋರಲಾಗಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಫೆಡರೇಷನ್ ಕರ್ನಾಟಕ ಲಾರಿ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ಕೆಲವು ದಿನಗಳಿಂದ ವಾಣಿಜ್ಯ ವಾಹನ, ಲಾರಿಗಳು ಸೇರಿದಂತೆ ಎಲ್ಲ ಸಾರಿಗೆ ವಾಹನಗಳಿಗೆ ರಿಪ್ಲೆಕ್ಟ್ ಟೇಪ್ ಅಂಟಿಸುವಂತೆ ಸರ್ಕಾರ ಆದೇಶ ಮಾಡಿದೆ. ವಾಹನಗಳಿಗೆ ಈ ಟೇಪ್ ಅಂಟಿಸಲು 12 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಈ ಟೇಪ್ ಬೆಲೆ ತುಂಬಾ ದುಬಾರಿಯಾಗಿರುವ ಕಾರಣ ಇನ್ನು ವಾಹನಗಳಿಗೆ ಅಳವಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ಇನ್ನು 10 ದಿನಗಳ ಕಾಲ ಕಾಲಾವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಈ ಟೇಪ್ ಕಳಪೆ ಗುಣಮಟ್ಟದಿಂದ ಕೂಡಿದ್ದು, ಬೆಲೆಯೂ ದುಬಾರಿಯಾಗಿದೆ. ಈ ಟೇಪ್‍ಗೆ 5 ವರ್ಷ ವಾರಂಟಿ ಎಂದು ಹೇಳುತ್ತಾರೆ. ಆದರೆ ಇದು 5 ವರ್ಷಗಳ ಕಾಲ ಬಾಳಿಕೆ ಬರುವುದಿಲ್ಲ. ಹಾಗಾಗಿ ಸರ್ಕಾರ 10 ದಿನಗಳ ಕಾಲಾವಕಾಶ ನೀಡಿದರೆ ಈ ಆದೇಶಕ್ಕೆ ನ್ಯಾಯಾಲಯದಿಂದ ತಡೆ ತರಲು ಸಹ ಪ್ರಯತ್ನಿಸಲಾಗುವುದು ಎಂದರು.
ವಾಹನಗಳಿಗೆ ಈ ರಿಪ್ಲೆಕ್ಟ್ ಟೇಪ್ ಅಳವಡಿಸುವುದರಿಂದ ಅಪಘಾತಗಳನ್ನು ತಡೆಯಬಹುದಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಬೆಲೆ ದುಬಾರಿಯಾಗಿರುವುದರಿಂದ ಸದ್ಯಕ್ಕೆ ಕಷ್ಟ ಸಾಧ್ಯವಾಗುತ್ತಿದ್ದು, ಗುಣಮಟ್ಟದ ಟೇಪ್‍ನ್ನು ಕಡಿಮೆ ಬೆಲೆಗೆ ನೀಡಿದರೆ ಖರೀದಿಸಿ ಅಳವಡಿಸಬಹುದಾಗಿದೆ. ಆದ್ದರಿಂದ ನಮಗೆ ಇನ್ನು 10 ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಆರ್‍ಟಿಓ ಹೇಳಿಕೆ
ಮನವಿ ಸ್ವೀಕರಿಸಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರು, ಸರ್ಕಾರ ವಾಹನಗಳಿಗೆ ರಿಪ್ವೆಕ್ಟ್ ಟೇಪ್ ಅಳವಡಿಸುವಂತೆ ಆದೇಶ ಮಾಡಿದೆ. ಆದರೆ ಈ ಟೇಪ್ ಅಳವಡಿಕೆ ಸಂಬಂಧ ಲಾರಿ, ಗೂಡ್ಸ್ ವಾಹನ ಅಸೋಸಿಯೇಷನ್, ಟ್ಯಾಕ್ಸಿ, ಆಟೋ ಅಸೋಸಿಯೇಷನ್‍ನವರು ಇನ್ನು ಕೆಲ ದಿನಗಳು ಕಾಲಾವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಮೇಲಾಧಿಕಾರಿಗಳೊಂದಿಗೂ ಚರ್ಚೆ ನಡೆಸಿದ್ದು, ಅವರು ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿದ್ದು, ಕಾನೂನು ಪ್ರಕಾರ ಟೇಪ್ ಅಳವಡಿಸಲೇಬೇಕಾಗಿದೆ ಎಂದು ತಿಳಿಸಿದ್ದಾರೆ. ಮೇಲಾಧಿಕಾರಿಗಳು ಮಾತನ್ನು ಸಹ ವಾಹನಗಳ ಅಸೋಸಿಯೇಷನ್‍ವರಿಗೆ ತಿಳಿಸಿದ್ದೇವೆ ಎಂದು ಹೇಳಿದರು.

(Visited 1 times, 1 visits today)
Previous Articleಹೆಚ್ಚುತ್ತಿರುವ ಬ್ರಷ್ಟಾಚಾರ : ಲೋಕಾಯುಕ್ತಕ್ಕೆ ದೂರು
Next Article ಮಡಿವಾಳ ಸಮಾಜವನ್ನು ಪ.ಜಾ ಸೇರಿಸಲು ಮಂತ್ರಿಗಳಲ್ಲಿ ಗೊಂದಲ
News Desk Benkiyabale

Related Posts

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm news

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm news

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm news
ತಾಜಾ ಸುದ್ಧಿಗಳು
news

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm
news

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm
news

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm
news

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm
news

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ

August 12, 2026 5:28 pm
news

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm
Our Youtube Channel
Our Picks

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ

August 12, 2026 5:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

By News Desk BenkiyabaleAugust 12, 2026 5:37 pm

ತುಮಕೂರು: ವಾಲ್ಮೀಕಿ ಸಮಾಜದ ನಾಯಕರು, ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ…

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.