BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನಿದ್ದೆಗೆ ಜಾರಿದ ಕಂದಾಯ ಇಲಾಖೆ
  • ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು
  • ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ
  • ಕೆಪಿಟಿಸಿಎಲ್, ಬೆಸ್ಕಾಂ, ಎಸ್ಕಾಂ: ಪ್ರತಿಭಟನೆ
  • ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ
  • ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ
  •  ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ
  • ಪ.ಪಂ ಇನ್ಮುಂದೆ ಸಮಯ ಪಾಲನೆ ಕಡ್ಡಾಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಿವೇಶನಗಳು ಹಂಚಿಕೆಯಾಗಿದ್ದರೂ ಗೊಂದಲ ಸೃಷ್ಠಿ
ಇತರೆ ಸುದ್ಧಿಗಳು

ನಿವೇಶನಗಳು ಹಂಚಿಕೆಯಾಗಿದ್ದರೂ ಗೊಂದಲ ಸೃಷ್ಠಿ

By News Desk BenkiyabaleUpdated:October 22, 2022 5:27 pm

ತುಮಕೂರು


ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತುಮಕೂರು ತಾಲ್ಲೂಕಿನ ಕೋರಾ ಹೋಬಳಿ ಹಂಚಿಹಳ್ಳಿಯಲ್ಲಿ ಆಶ್ರಯ ಯೋಜನೆಯ ನಿವೇಶನಗಳು ಹಂಚಿಕೆಯಾಗಿದ್ದರೂ ಸಹ ಈ ವಿಚಾರದಲ್ಲಿ ಗೊಂದಲಗಳು ಸೃಷ್ಠಿಯಾಗಿವೆ. ಕೂಡಲೇ ಅಧಿಕಾರಿಗಳು ಗಮನ ಹರಿಸಿ ಈ ನಿವೇಶನ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕರಾದ ಡಾ. ಜಿ. ಪರಮೇಶ್ವರ್ ಸೂಚನೆ ನೀಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ತುಮಕೂರು ತಾಲ್ಲೂಕು ಕೋರಾ ಹೋಬಳಿಯ ಹಂಚಿಹಳ್ಳಿ ಗ್ರಾಮ ಮಳೆಯಿಂದಾಗಿ ಜಲಾವೃತಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿನ ಜನರಿಗೆ ಆಶ್ರಯ ಯೋಜನೆಯ ನಿವೇಶನ ಗೊಂದಲ ಸೇರಿದಂತೆ ಮೂಲಭೂತ ಸೌಕರ್ಯಗಳಿಂದಲೂ ವಂಚಿತರಾಗಿರುವುದು ಕಂಡು ಬಂದಿದೆ. ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಹಂಚಿಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಯ ನಿವೇಶನಗಳಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ತಾಕೀತು ಮಾಡಿದರು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೋರಾ ಹೋಬಳಿಯ ಹಂಚಿಹಳ್ಳಿ ಆಶ್ರಯ ಯೋಜನೆಗೆ ಸಂಬಂಧಪಟ್ಟಂತೆ ನಿವೇಶನಗಳ ಗೊಂದಲ, ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಹಂಚಿಹಳ್ಳಿಯಲ್ಲಿ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ನಿವೇಶಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಕೆಲವರು ನಂಬರ್‍ಗಳು ಗೊತ್ತಿಲ್ಲದೆ ಗೊಂದಲಗಳು ಉಂಟಾಗಿ ಬೇರೆ ಬೇರೆ ಜಾಗಗಳನ್ನು ಅತಿಕ್ರಮಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಮುಂದಾಗಬೇಕು ಎಂದರು.
ಕೋರಾ ಹೋಬಳಿಯಲ್ಲಿ ರಸ್ತೆಗಳು ಹಾಳಾಗಿವೆ. ಆದರೂ ಅಧಿಕಾರಿಗಳು ರಸ್ತೆಗಳ ಅಭಿವೃದ್ಧಿ ಕ್ರಮ ಕೈಗೊಳ್ಳದೆ ಏನು ಮಾಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡ ಅವರು, ಅನುದಾನ ಕೊರತೆ ಇದ್ದರೆ ಸಂಬಂಧಪಟ್ಟ ಶಾಸಕರು, ಸಚಿವರ ಗಮನಕ್ಕೆ ತಂದರೆ ಹಣ ತರುವ ವ್ಯವಸ್ಥೆ ಮಾಡಲಾಗುವುದು. ಆದರೆ ಆ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ ಎಂದು ಗರಂ ಆದರು.
ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ, ಕಸಬಾ ಹಾಗೂ ಹೊಳವನಹಳ್ಳಿ ಹೋಬಳಿಗೆ ಬಂದು ನೋಡಿ ಯಾವ ರೀತಿ ರಸ್ತೆಗಳು ಅಭಿವೃದ್ಧಿಯಾಗಿವೆ ಎಂಬುದು ತಿಳಿಯುತ್ತದೆ ಎಂದ ಅವರು, ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಯಾವುದೇ ಕೆಲಸ ಮಾಡದೆ ಕೋರಾ ಹೋಬಳಿಯನ್ನು ಅನಾಥ ಮಾಡಿದ್ದೀರಾ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಇನ್ನು ಸಣ್ಣ ನೀರಾವರಿ ಇಲಾಖೆಗಳ ಅಧಿಕಾರಿಗಳು ಸಹ ಲೋಕೋಪಯೋಗಿ ಅಧಿಕಾರಿಗಳಂತೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹೋಬಳಿಯ ಯಾವುದೇ ಪಿಕಪ್ ನಿರ್ಮಾಣ ಮಾಡುವ ಕೆಲಸ ಕೈಗೊಂಡಿಲ್ಲ. ಈಗಲಾದರೂ ಅಧಿಕಾರಿಗಳು ಬಜೆಟ್‍ನಿಂದ ಬಿಡುಗಡೆಯಾಗುತ್ತಿರುವ ಹಣವನ್ನು ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲು ಮುಂದಾಗಿ ಎಂದು ಸೂಚಿಸಿದರು.
ಕೆಸ್ತೂರು ಮಾರ್ಗದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಜಲ್ಲಿ ಹೊಡೆದು ತಿಂಗಳುಗಳೇ ಕಳೆದು ಹೋಗಿದೆ. ಆದರೆ ರಸ್ತೆ ನಿರ್ಮಾಣ ಕಾರ್ಯ ಮಾತ್ರ ಕೈಗೊಂಡಿಲ್ಲ ಎಂದು ಲೋಕೋಪಯೋಗಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಾಗ, ಮಳೆ ನಿರಂತರವಾಗಿ ಬರುತ್ತಿದೆ, ಹಾಗಾಗಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಉತ್ತರ ನೀಡಲು ಲೋಕೋಪಯೋಗಿ ಅಧಿಕಾರಿ ಮುಂದಾದಾಗ ರೀ.. ಮಳೆ ಈಗ ಬರುತ್ತಿದೆ. ಈ ಹಿಂದೆಯಲ್ಲ ಏನು ಮಾಡುತ್ತಿದ್ರಿ ಎಂದು ಪ್ರಶ್ನಿಸಿದರು.
ಕೋರಾ ಹೋಬಳಿಯ ಹಂಚಿಹಳ್ಳಿಯಲ್ಲಿ ಹೆಚ್ಚಿನ ಮಳೆಯಾಗಿ ಮನೆಗಳಿಗೆ ನೀರು ನುಗ್ಗಿ ಸುಮಾರು 30-40 ಮನೆಗಳು ಜಲಾವೃತವಾಗಿವೆ. ನಾನು ಈ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೂಡಲೇ ಅಧಿಕಾರಿಗಳು ಸಂತ್ರಸ್ತರಿಗೆ ಸೂಕ್ತ ಪರಿಹಾರದ ಜತೆಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್, ತಾ.ಪಂ. ಇಓಗೆ ಸೂಚನೆ ನೀಡಿದರು.
ಹಂಚಿಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಯಾಗಿದ್ದು, ನಿವೇಶನಗಳ ನಂಬರ್ ವಿಚಾರದಲ್ಲಿ ಗೊಂದಲ ಸೃಷ್ಠಿಯಾಗಿ ಬಹಳಷ್ಟು ಜನ ಬೇರೆ ಬೇರೆ ನಂಬರ್‍ಗಳ ನಿವೇಶನಗಳನ್ನು ಅತಿಕ್ರಮಿಸಿದ್ದಾರೆ. ಕೂಡಲೇ ಅಧಿಕಾರಿಗಳು ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಂಡು ನಿವೇಶನಗಳ ನಂಬರ್ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಿ ಅರ್ಹರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಮೋಹನ್‍ಕುಮಾರ್, ತಾ.ಪಂ. ಇಓ ಜೈಪಾಲ್, ಕೋರಾ ಹೋಬಳಿ ರಾಜಸ್ವ ನಿರೀಕ್ಷಕ ಗೋಪಿನಾಥ್, ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

 

 

(Visited 1 times, 1 visits today)
tumkur
Previous Articleಕರ್ನಾಟಕಕ್ಕೆ 50ನೇ ವರ್ಷದ ಸವಿನೆನಪು
Next Article ವಿದ್ಯಾರ್ಥಿಗಳಿಗೆ ತೆಂಗಿನ ಚಿಪ್ಪಿನಲ್ಲಿ ಊಟಬಡಿಸಿದ ಭಟ್ಟರು
News Desk Benkiyabale

Related Posts

ನಿದ್ದೆಗೆ ಜಾರಿದ ಕಂದಾಯ ಇಲಾಖೆ

June 18, 2026 4:44 pm news

ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು

June 18, 2026 1:49 pm news

ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ

June 18, 2026 1:46 pm news
ತಾಜಾ ಸುದ್ಧಿಗಳು

ನಿದ್ದೆಗೆ ಜಾರಿದ ಕಂದಾಯ ಇಲಾಖೆ

June 18, 2026 4:44 pm

ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು

June 18, 2026 1:49 pm

ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ

June 18, 2026 1:46 pm

ಕೆಪಿಟಿಸಿಎಲ್, ಬೆಸ್ಕಾಂ, ಎಸ್ಕಾಂ: ಪ್ರತಿಭಟನೆ

June 18, 2026 1:42 pm

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

June 17, 2026 5:31 pm

ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ

June 17, 2026 5:29 pm
Our Youtube Channel
Our Picks

ನಿದ್ದೆಗೆ ಜಾರಿದ ಕಂದಾಯ ಇಲಾಖೆ

June 18, 2026 4:44 pm

ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು

June 18, 2026 1:49 pm

ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ

June 18, 2026 1:46 pm

ಕೆಪಿಟಿಸಿಎಲ್, ಬೆಸ್ಕಾಂ, ಎಸ್ಕಾಂ: ಪ್ರತಿಭಟನೆ

June 18, 2026 1:42 pm

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

June 17, 2026 5:31 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ನಿದ್ದೆಗೆ ಜಾರಿದ ಕಂದಾಯ ಇಲಾಖೆ

By News Desk BenkiyabaleJune 18, 2026 4:44 pm

ತುಮಕೂರು: ತುಮಕೂರು ತಾಲ್ಲೂಕು ಕೋರ ಹೋಬಳಿ ಬೆಳಧರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ…

ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು

June 18, 2026 1:49 pm

ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ

June 18, 2026 1:46 pm

ಕೆಪಿಟಿಸಿಎಲ್, ಬೆಸ್ಕಾಂ, ಎಸ್ಕಾಂ: ಪ್ರತಿಭಟನೆ

June 18, 2026 1:42 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.