BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್
  • ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ
  • ಪಂಚಾಯತಿ ಅಧಿಕಾರಿಗಳು ದಲಿತ ವಿರೋಧಿಗಳು: ಸಿದ್ದು ಸೂರನಹಳ್ಳಿ
  • ಶಿರಾ ತಾಲ್ಲೂಕಿಗೆ ಜಿಪಂ ಸಿಇಒ ಭೇಟಿ: ಕಾಮಗಾರಿಗಳ ಪರಿಶೀಲನೆ
  • ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮಕ್ಕೆ ಸೂಚನೆ
  • ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟಗಳು ಸಹಕಾರ ಬ್ಯಾಂಕುಗಳ ಭಾಗ
  • ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ
  • ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಆರೋಗ್ಯ ಸೇವೆಗಳಿಗಾಗಿ ಅಭಾ ಕಾರ್ಡ್
ಇತರೆ ಸುದ್ಧಿಗಳು

ಆರೋಗ್ಯ ಸೇವೆಗಳಿಗಾಗಿ ಅಭಾ ಕಾರ್ಡ್

By News Desk BenkiyabaleUpdated:October 31, 2022 5:21 pm

ತುಮಕೂರು


ಆಭಾ ಕಾರ್ಡ್ ಹೊಂದಿರುವ ಯಾವುದೇ ವ್ಯಕ್ತಿ ದೇಶದ ಯಾವುದೇ ಸರ್ಕಾರಿ/ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ನಾಗರೀಕರು ಆಯುμÁ್ಮನ್ ಭಾರತ್ ಹೆಲ್ತ್ ಅಕೌಂಟ್ (ಆಭಾ) ಕಾರ್ಡುಗಳನ್ನು ಪಡೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರ ಜನಸಾಮಾನ್ಯರ ಆರೋಗ್ಯದ ಕಾಳಜಿಗಾಗಿ ಯೋಜನೆ ಜಾರಿಗೆ ತಂದಿದ್ದು ಗ್ರಾಮ ಒನ್ ಸೇರಿದಂತೆ ನಿಗಧಿತ ಸೇವಾ ಕೇಂದ್ರಗಳಲ್ಲಿ ಆಭಾ ಕಾರ್ಡ್ ಒದಗಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಡಿಸೆಂಬರ್ 5ರಿಂದ 1ರಿಂದ 15ನೇ ವಯಸ್ಸಿನ ಮಕ್ಕಳಿಗೆ ಜೆಇ ಲಸಿಕಾ ಅಭಿಯಾನ ನಡೆಯುವ ಹಿನ್ನೆಲೆಯಲ್ಲಿ ಕೋವಿಡ್ ತಡೆಗಟ್ಟಲು ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕಾಕರಣವನ್ನು ನವೆಂಬರ್ 10ರೊಳಗೆ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.
ವಿಕಲಚೇತನರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢಿಕರಿಸಲಾಗುವ ವೈದ್ಯಕೀಯ ಪ್ರಮಾಣಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿ (ಯುಡಿಐಡಿ) ಕಾರ್ಡ್‍ಗಳನ್ನು ಅರ್ಹ ವಿಕಲಚೇತನರಿಗೆ ನೀಡಬೇಕಾಗಿದ್ದು, ಬಾಕಿ ಇರುವ 350 ಅಧಿಕ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದರಲ್ಲದೇ ಕ್ಷಯರೋಗಿಗಳ ದತ್ತು ಕಾರ್ಯಕ್ರಮದಡಿ ರೋಗಿಗಳಿಗೆ ಬೇಕಾದ ಪೌಷ್ಟಿಕಾಹಾರ ಒದಗಿಸಲು ಆಸಕ್ತ ಸರ್ಕಾರಿ ಅಧಿಕಾರಿ/ ನೌಕರರು ಜಿಲ್ಲಾ ಟಿಬಿ ನಿಯಂತ್ರಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಬೆಳೆಹಾನಿ ಸರ್ವೆ ಮಾಡಿ ರೈತರ ಅಗತ್ಯ ದಾಖಲೆಗಳನ್ನು ಪರಿಹಾರ ಪೋರ್ಟಲ್‍ನಲ್ಲಿ ನಮೂದಿಸುವುದು, ಜೀವಹಾನಿ ಪ್ರಕರಣಗಳಿಗೆ ಶೀಘ್ರ ಪರಿಹಾರ, ಮನೆಹಾನಿಗೆ ಸಂಬಂಧಿಸಿದಂತೆ ಜಿಪಿಎಸ್ ಪೂರ್ಣಗೊಳಿಸಿ ಪರಿಹಾರ ನೀಡುವುದು ಹೊಸದಾಗಿ ಕಟ್ಟುತ್ತಿರುವ ಮನೆಗಳ ಜಿಪಿಎಸ್ ಕಾರ್ಯ ತ್ವರಿತಗತಿಯಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಲರ್ಟ್ ಇರಬೇಕು ಎಂದು ಆಯಾ ತಾಲ್ಲೂಕು ತಹಸಿಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳನ್ನು ಒದಗಿಸುವ ನಿಟ್ಟಿನಲ್ಲಿ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೂಕ್ತ ನಿವೇಶನ ಗುರುತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಪರ್ದಿಗೆ ವಹಿಸಬೇಕು ಎಂದರಲ್ಲದೇ, ಸರ್ಕಾರಿ/ಗ್ರಾಮ ಠಾಣ ಜಾಗದಲ್ಲಿರುವ ಸರ್ಕಾರಿ ಶಾಲೆಗಳನ್ನು ಶಿಕ್ಷಣ ಇಲಾಖೆಯ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಅವಕಾಶವಿದ್ದು ಸಂಬಂಧಿಸಿದ ಬಿಇಓ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮುಖ್ಯ ಶಿಕ್ಷಕರಿಂದ ಗ್ರಾಮ ಪಂಚಾಯತಿ ಪಿಡಿಓಗಳಿಗೆ ದಾಖಲೆಗಳನ್ನು ನೀಡಿ ಖಾತೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ನೀಡಿರುವ ನಿವೇಶನ ಸಮರ್ಪಕವಾಗಿರದಿದ್ದರೆ ಸೂಕ್ತ ಸ್ಥಳವಕಾಶ ಗುರುತಿಸಿ ನೀಡಬೇಕು. ಪಂಚಾಯತಿ ವ್ಯಾಪ್ತಿಯ ಕರೆಗಳ ಕೆರೆ ಒತ್ತುವರಿ ತೆರವುಗೊಳಿಸಿ ಪಿಡಿಓ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮಹಜರ್ ಮಾಡಿಸಿ ಕೆರೆಯ ಗಡಿ ಗುರುತಿಸಬೇಕಲ್ಲದೇ, ಸ್ಮಶಾನಗಳ ಅಳತೆ, ಹದ್ದುಬಸ್ತು ಮಾಡಿಸುವುದು ಸೇರಿದಂತೆ ಅಗತ್ಯ ಕೆಲಸಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಯಾ ತಹಸಿಲ್ದಾರ್, ಇಒಗಳು ತಮ್ಮ ಅಧೀನ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ. ಅಜಯ್, ಜಿಲ್ಲಾ ವಾರ್ತಾಧಿಕಾರಿ ಎಂ.ಆರ್. ಮಮತ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾμÁ, ಡಿಹೆಚ್‍ಓ ಡಾ|| ಮಂಜುನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ|| ವೀಣಾ, ಡಿಡಿಎಲ್‍ಆರ್ ಸುಜಯ್ ಕುಮಾರ್, ತಹಶೀಲ್ದಾರ್ ಮೋಹನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕಿ ಟಿಎಸ್‍ಎಲ್ ಪ್ರೇಮಾ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 1 times, 1 visits today)
tumkur
Previous Articleಕನ್ನಡ ರಾಜ್ಯೋತ್ಸವ : ಭುವನೇಶ್ವರಿ ದೇವಿಯ ಅದ್ದೂರಿ ಮೆರವಣಿಗೆ
Next Article ನಿವೃತ್ತ ಪೊಲೀಸರ ಗೌರವಕ್ಕೆ ಧಕ್ಕೆ ಆಗದಿರಲಿ : ಎಸ್.ಪಿ
News Desk Benkiyabale

Related Posts

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm news

ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ

October 15, 2026 6:02 pm news

ಪಂಚಾಯತಿ ಅಧಿಕಾರಿಗಳು ದಲಿತ ವಿರೋಧಿಗಳು: ಸಿದ್ದು ಸೂರನಹಳ್ಳಿ

October 15, 2026 6:01 pm news
ತಾಜಾ ಸುದ್ಧಿಗಳು
news

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm
news

ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ

October 15, 2026 6:02 pm
news

ಪಂಚಾಯತಿ ಅಧಿಕಾರಿಗಳು ದಲಿತ ವಿರೋಧಿಗಳು: ಸಿದ್ದು ಸೂರನಹಳ್ಳಿ

October 15, 2026 6:01 pm
news

ಶಿರಾ ತಾಲ್ಲೂಕಿಗೆ ಜಿಪಂ ಸಿಇಒ ಭೇಟಿ: ಕಾಮಗಾರಿಗಳ ಪರಿಶೀಲನೆ

October 15, 2026 5:59 pm
news

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮಕ್ಕೆ ಸೂಚನೆ

October 15, 2026 5:57 pm
news

ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟಗಳು ಸಹಕಾರ ಬ್ಯಾಂಕುಗಳ ಭಾಗ

October 14, 2026 6:07 pm
Our Youtube Channel
Our Picks

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm

ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ

October 15, 2026 6:02 pm

ಪಂಚಾಯತಿ ಅಧಿಕಾರಿಗಳು ದಲಿತ ವಿರೋಧಿಗಳು: ಸಿದ್ದು ಸೂರನಹಳ್ಳಿ

October 15, 2026 6:01 pm

ಶಿರಾ ತಾಲ್ಲೂಕಿಗೆ ಜಿಪಂ ಸಿಇಒ ಭೇಟಿ: ಕಾಮಗಾರಿಗಳ ಪರಿಶೀಲನೆ

October 15, 2026 5:59 pm

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮಕ್ಕೆ ಸೂಚನೆ

October 15, 2026 5:57 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

By News Desk BenkiyabaleOctober 15, 2026 6:04 pm

ತುಮಕೂರು: ಕಲ್ಪತರು ಹವಮಾನ ಕ್ರಿಯಾ ಸಮಿತಿಯ ಒಕ್ಕೂಟವು ರೈತರ ಪರ ನಿಂತು ರೈತರ ಜೀವನದ ಸುಧಾರಣೆಗೆ ಅಡಿಪಾಯ ಹಾಕಿದೆ ಹಾಗೂ…

ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ

October 15, 2026 6:02 pm

ಪಂಚಾಯತಿ ಅಧಿಕಾರಿಗಳು ದಲಿತ ವಿರೋಧಿಗಳು: ಸಿದ್ದು ಸೂರನಹಳ್ಳಿ

October 15, 2026 6:01 pm

ಶಿರಾ ತಾಲ್ಲೂಕಿಗೆ ಜಿಪಂ ಸಿಇಒ ಭೇಟಿ: ಕಾಮಗಾರಿಗಳ ಪರಿಶೀಲನೆ

October 15, 2026 5:59 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.