BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ
  • ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ
  • ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ
  • ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ
  • ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ
  • ಖಾಲಿಯಿರುವ ಪೌರಕಾರ್ಮಿಕರ ನೇಮಕಾತಿ ವಿಳಂಬ
  • ವಿಕಲಚೇತನರು ಸ್ವಾವಲಂಬಿಗಲು ಅವಕಾಶ ಕಲ್ಪಿಸಿ
  • ಕುಡಿಯುವ ನೀರಿನ ಯೋಜನೆ ಅಸಮರ್ಪಕ: ಆರೋಪ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮಾತೃ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ : ಸಚಿವ
ಇತರೆ ಸುದ್ಧಿಗಳು

ಮಾತೃ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ : ಸಚಿವ

By News Desk BenkiyabaleUpdated:November 01, 2022 5:48 pm

ತುಮಕೂರು


ಮಾತೃ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ,
ಇಂಜಿನಿಯರಿಂಗ್ ಶಿಕ್ಷಣ, ಜ್ಞಾನ-ವಿಜ್ಞಾನಗಳನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಚಿಂತಿಸುತ್ತಿದೆ. ಈ ಮಟ್ಟಕ್ಕೆ ಕನ್ನಡ ಭಾಷೆಯನ್ನು ಬೆಳೆಸುವ, ಪರಿವರ್ತಿಸುವ ಕೆಲಸ ಭಾಷಾ ತಜ್ಞರಿಂದ ಆಗಬೇಕಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಇಂದು ಏರ್ಪಡಿಸಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ, ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರುನಾಡು ಒಟ್ಟಾಗಿ ‘ಕರ್ನಾಟಕ’ ರಾಜ್ಯ ಆದಂತಹ ಈ ಸಂದರ್ಭವನ್ನು ಕನ್ನಡ ಹಬ್ಬವನ್ನಾಗಿ ನಾಡಿನ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಉದಯವಾಗಿ 67 ವರ್ಷಗಳು ಸಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್, ಹೈದರಾಬಾದ್, ಮುಂಬೈ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ನೆಲ, ಜಲ ಒಗ್ಗೂಡಿದಂತಹ ಹೆಮ್ಮೆಯ ದಿನ. ಸುಮಾರು 2000 ವರ್ಷಗಳ ಇತಿಹಾಸವಿರುವ ಕನ್ನಡ ನಾಡಿನಲ್ಲಿ ಇಲ್ಲಿಯ ರಾಜರು ಮಹಾರಾಜರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ನಾಡು ಕಟ್ಟುವಂತಹ ಭಾಷೆ ಕಟ್ಟುವಂತಹ ಕೆಲಸ ಮಾಡಿದ್ದಾರೆ. ವಿಶೇಷ ಸಾಂಸ್ಕøತಿಕ ಕಲೆಗಳಾದ ಶಿಲ್ಪಕಲೆ, ಸಂಗೀತ, ನೃತ್ಯಗಳ ಮೂಲಕ ಹಿರಿಮೆಯನ್ನು ಸಾರಿದ್ದಾರೆ ಎಂದು ತಿಳಿಸಿದರು.
ನಮ್ಮ ಸಾಹಿತಿಗಳು, ಕಲಾವಿದರು ಇವರೆಲ್ಲರೂ ಸಹ ನಾವೆಲ್ಲ ಹೆಮ್ಮೆ ಪಡುವ ರೀತಿಯಲ್ಲಿ ಕನ್ನಡವನ್ನು ಕಟ್ಟುವಂತಹ ಕೆಲಸದಲ್ಲಿ ತಮ್ಮನ್ನು ಅನೇಕ ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಅನೇಕ ರಾಜ ಮಹಾರಾಜರುಗಳ ಶೌರ್ಯ, ಹೋರಾಟ ಇವುಗಳನ್ನು ಸಹ ನಾವು ನೆನಪು ಮಾಡಿಕೊಳ್ಳಬೇಕಿದೆ ಎಂದರು.
ಭಾಷೆ ಕೇವಲ ಒಂದು ಪ್ರಾಂತ್ಯಕ್ಕಲ್ಲ. ಭಾಷೆ ಜನರನ್ನು ಸಧೃಡಪಡಿಸಬೇಕಾಗುತ್ತದೆ. ಭಾಷೆ ನಮ್ಮನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕನ್ನಡವನ್ನು ಕಟ್ಟುವಂತಹ ಕನ್ನಡವನ್ನು ಬೆಳೆಸುವಂತಹ ಕೆಲಸ ಸರ್ಕಾರದ ಕಡೆಯಿಂದ ಆಗುತ್ತಿದೆ. ಅದೇ ರೀತಿ ಕನ್ನಡ ಕೇವಲ ಭಾವನೆಯ ಭಾಷೆಯಲ್ಲ. ನವೆಂಬರ್ ತಿಂಗಳಲ್ಲಿ ಮಾತ್ರ ನಾವು ಭಾವುಕರಾಗುವ ಅವಶ್ಯಕತೆ ಇಲ್ಲ. ಒಂದು ಭೂ ಭಾಗದಲ್ಲಿ ಬದುಕುವ ಜನರ ಬದುಕನ್ನು ಅಲ್ಲಿನ ಭಾಷೆ ಕಟ್ಟಿ ಕೊಡುತ್ತದೆ ಎಂದು ತಿಳಿಸಿದರು.
ಆಂಗ್ಲರು ತಾವು ಹೋದಡೆಯಲ್ಲೆಲ್ಲ ತಮ್ಮ ಭಾಷೆಯನ್ನು ಸಹ ಕೊಂಡೊಯ್ದು ಅದನ್ನು ವಿಶ್ವದೆಲ್ಲೆಡೆ ಪ್ರಸರಿಸಿದ್ದಾರೆ. ಇಂಗ್ಲೀಷರು ಭಾರತ ಬಿಟ್ಟು 75 ವರ್ಷಗಳಾದರು ಸಹ ಅವರ ಭಾಷೆಗೆ ನಾವುಗಳು ದಾಸರಾಗಿದ್ದೇವೆ. ಇಡೀ ಜಗತ್ತಿನ ಜನಸಮುದಾಯವನ್ನು ತನ್ನ ಭಾಷೆಯ ದಾಸರನ್ನಾಗಿ ಮಾಡಿರುವುದು ಕೇವಲ 3 ಕೋಟಿ ಜನಸಂಖ್ಯೆ ಇರುವಂತಹ ಆಂಗ್ಲರು ಎಂಬುದನ್ನು ನಾವು ಮರೆಯಬಾರದು ಎಂದು ಸಚಿವರು ನುಡಿದರು.
ನಾಡು ನುಡಿಗಾಗಿ ಶ್ರಮಿಸಿದಂತಹ ಈ ಜಿಲ್ಲೆಯ 41 ಸಾಧಕರನ್ನು ಗೌರವಿಸುವ ಕೆಲಸ ಆಗಿದೆ. ತುಮಕೂರು ಅತ್ಯಂತ ಒಳ್ಳೆಯ ಜಿಲ್ಲೆ, ಕನ್ನಡಕ್ಕೆ ಬಹಳ ದೊಡ್ಡ ಕಾಣಿಕೆ ಕೊಟ್ಟಿರುವ ಜಿಲ್ಲೆ. ಈ ಜಿಲ್ಲೆಗೆ ಉಸ್ತುವಾರಿ ಸಚಿವನಾಗಿರುವುದು ನನಗೆ ಹೆಮ್ಮೆ ತರುವಂತಹ ವಿಷಯವಾಗಿದೆ ಎಂದರು.
ಸಮಾರಂಭದಲ್ಲಿ ಶಾಸಕರುಗಳಾದ ಜಿ.ಬಿ. ಜ್ಯೋತಿ ಗಣೇಶ್, ಆರ್. ರಾಜೇಂದ್ರ, ಮಹಾನಗರಪಾಲಿಕೆ ಮಹಾ ಪೌರರಾದ ಎಂ. ಪ್ರಭಾವತಿ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಪೂರ್‍ವಾಡ್, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ವಿ. ಅಜಯ್, ವಾರ್ತಾಧಿಕಾರಿ ಎಂ.ಆರ್. ಮಮತ, ಡಿಡಿಪಿಐ ನಂಜಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

(Visited 10 times, 1 visits today)
tumkur
Previous Articleಹೊಸಕೆರೆಯಲ್ಲಿ ಬೃಹತ್ ಸಮ್ಮೇಳನ
Next Article ತಂಬಾಕು ಸೇವನೆ ವಿರುದ್ದ ಕಠಿಣ ಕ್ರಮಕ್ಕೆ ಸೂಚನೆ
News Desk Benkiyabale

Related Posts

ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ

March 03, 2026 2:58 pm ಇತರೆ ಸುದ್ಧಿಗಳು

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm ಇತರೆ ಸುದ್ಧಿಗಳು

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ

March 03, 2026 2:58 pm
ಇತರೆ ಸುದ್ಧಿಗಳು

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm
ಇತರೆ ಸುದ್ಧಿಗಳು

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm
ಇತರೆ ಸುದ್ಧಿಗಳು

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm
ಇತರೆ ಸುದ್ಧಿಗಳು

ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ

March 03, 2026 2:52 pm
ಇತರೆ ಸುದ್ಧಿಗಳು

ಖಾಲಿಯಿರುವ ಪೌರಕಾರ್ಮಿಕರ ನೇಮಕಾತಿ ವಿಳಂಬ

March 03, 2026 2:50 pm
Our Youtube Channel
Our Picks

ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ

March 03, 2026 2:58 pm

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm

ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ

March 03, 2026 2:52 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ

By News Desk BenkiyabaleMarch 03, 2026 2:58 pm

ತುರುವೇಕೆರೆ: ಪಟ್ಟಣದ ಇತಿಹಾಸ ಪ್ರಸಿದ್ದ ಬೇಟರಾಯ ಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿ0ದ ಸೋಮವಾರ…

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm
News by Date
March 2026
M T W T F S S
 1
2345678
9101112131415
16171819202122
23242526272829
3031  
« Feb    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.