BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಹಬ್ಬದ ಸಂಭ್ರಮ
  • ಅರ್ಥಪೂರ್ಣವಾಗಿ ರಕ್ಷಾ ಬಂಧನ ಆಚರಣೆ
  • ಶಿರಾ ಕ್ಯಾಂಪಸ್‌ನಲ್ಲಿ ಶೀಘ್ರ ಪಿಯುವರೆಗೆ ವಸತಿ ಸಹಿತ ಉಚಿತ ಶಿಕ್ಷಣ
  • ಜಾಬ್‌ಕಾರ್ಡ್ ಮೇಳದಲ್ಲಿ ಕಾಮಗಾರಿ ಆದೇಶ ವಿತರಣೆ
  • ಸ್ವಸಹಾಯ ಗುಂಪಿನ ಸದಸ್ಯರಿಂದ ಕೃಷಿ ಹೊಂಡಗಳಿಗೆ ಮೀನು ಮರಿಗಳ ಬಿಡುಗಡೆ
  • ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸಿಇಓ ಭೇಟಿ: ಕಾಮಗಾರಿಗಳ ಪರಿಶೀಲನೆ
  • ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ
  • ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಳ್ಳಾರಿಯಿಂದ ತುಮಕೂರಿಗೆ ಬಂದ ಸೈಕಲ್ ಜಾಥಾ
ಇತರೆ ಸುದ್ಧಿಗಳು

ಬಳ್ಳಾರಿಯಿಂದ ತುಮಕೂರಿಗೆ ಬಂದ ಸೈಕಲ್ ಜಾಥಾ

By News Desk BenkiyabaleUpdated:November 21, 2022 4:58 pm

ತುಮಕೂರು


ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೆ ಸರ್ಕಾರ ನೀಡಿರುವ ಭರವಸೆಯಂತೆ ಸರ್ಕಾರಿ ನೌಕರರಂತೆ ಸಮಾನ ವೇತನ, ವೇತನ ಆಯೋಗದ ಮಾದರಿಯಲ್ಲಿ ನೀಡುವುದು ಸೇರಿದಂತೆ ಇತರೆ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಬಳ್ಳಾರಿಯಿಂದ ಹಮ್ಮಿಕೊಂಡಿರುವ ಸೈಕಲ್ ಜಾಥಾ ನಗರಕ್ಕೆ ಆಗಮಿಸಿತು.
ನಗರದ ಟೌನ್‍ಹಾಲ್ ವೃತ್ತಕ್ಕೆ ಆಗಮಿಸಿದ ಸಾರಿಗೆ ನೌಕರರ ಕೂಟದ ಸೈಕಲ್ ಜಾಥಾದಲ್ಲಿ ಸಾರಿಗೆ ಸಂಸ್ಥೆಯ ತುಮಕೂರು ಜಿಲ್ಲೆಯ ನೌಕರರು ಮತ್ತು ಕುಟುಂಬದವರು ಪಾಲ್ಗೊಂಡು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ನಂತರ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಸೈಕಲ್ ಜಾಥಾದಲ್ಲಿ ತೆರಳಿದ ನೌಕರರು ಮತ್ತು ಕುಟುಂಬ ವರ್ಗದವರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ತಮ್ಮ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್. ಚಂದ್ರಶೇಖರ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲೂ 1 ಲಕ್ಷದ 7 ಸಾವಿರ ಜನರು ಕರ್ತವ್ಯ ನಿರ್ವಹಿಸುತ್ತಿದ್ದು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ನೀಡುವ ಸವಲತ್ತುಗಳನ್ನು ನೀಡುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಿತ್ತು. ಸರ್ಕಾರಿ ನೌಕರರಿಗೆ ಸಮಾನವಾಗಿ ವೇತನ ನೀಡುವಂತೆ ನಾವು ಬೇಡಿಕೆ ಮುಂದಿಟ್ಟಿದ್ದೆವು. ಆದರೆ ಈ ಬೇಡಿಕೆ ಇದುವರೆಗೂ
ಈಡೇರಿಲ್ಲ. ಬದಲಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಗದಾಪ್ರಹಾರ ನಡೆಸಿ ಶಿಕ್ಷಿಸಲಾಯಿತು. ಕೆಲವರನ್ನು ಸೇವೆಯಿಂದ ವಜಾ ಮಾಡಲಾಯಿತು ಎಂದು ಹೇಳಿದರು.
ಇದುವರೆಗೂ ನಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಿಲ್ಲ. ಕೊಟ್ಟ ಭರವಸೆಯಂತೆ ಸರ್ಕಾರಿ ನೌಕರರಿಗೆ ಸರಿ ಸಮಾನವಾಗಿ ವೇತನವನ್ನೂ ನೀಡಿಲ್ಲ. ಹೀಗಾಗಿ ನಾಲ್ಕು ನಿಗಮಗಳ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳೆದ ಅಕ್ಟೋಬರ್ 10 ರಿಂದ ಬಳ್ಳಾರಿಯಿಂದ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಈಗಾಗಲೇ 17 ಜಿಲ್ಲೆಗಳನ್ನು ಕ್ರಮಿಸಿ, ತುಮಕೂರಿಗೆ ಆಗಮಿಸಿ ಸೈಕಲ್ ಜಾಥಾ ನಡೆಸಲಾಗುತ್ತಿದೆ ಎಂದರು.
ಸಾರಿಗೆ ಸಂಸ್ಥೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವುದು ಹಾಗೂ ಇತರೆ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದನ್ನು ಕೈ ಬಿಡುವ ಮೂಲಕ ಸಾರಿಗೆ ಸಂಸ್ಥೆ ಖಾಸಗೀಕರಣವನ್ನು ಕೈ ಬಿಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಕೆಲವು ಮಾರ್ಗಗಳನ್ನು ಖಾಸಗಿ ವಹಾನಗಳ ಚಾಲನೆಗೆ ಅನುಮತಿ ನೀಡಿ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣದ ಮೂಲಕ ರಾಜ್ಯದ ಯುವಕರಿಗೆ ಮತ್ತಷ್ಟು ನಿರುದ್ಯೋಗ ಸಮಸ್ಯೆಯನ್ನು ಸೃಷ್ಠಿ ಮಾಡುವ ಯೋಜನೆಯನ್ನು ಈ ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ನಮ್ಮ ಈ ಸೈಕಲ್ ಜಾಥಾವು ತುಮಕೂರಿನಿಂದ ಕೋಲಾರಕ್ಕೆ ತೆರಳುತ್ತಿದ್ದು, ನ. 25 ರಂದು ಕೋಲಾರದಲ್ಲಿ ಸೈಕಲ್ ಜಾಥಾದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸೈಕಲ್ ಜಾಥಾದಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ತುಮಕೂರು ಜಿಲ್ಲಾಧ್ಯಕ್ಷ ಕೆ.ವಿ. ಪುಟ್ಟಯ್ಯ, ವಿಭಾಗೀಯ ಉಸ್ತುವಾರಿ ಜಿ.ಬಿ. ನಾಗೇಶ್, ಪ್ರಧಾನ ಕಾರ್ಯದರ್ಶಿ ಕರಿಯಣ್ಣ, ಉಪಾಧ್ಯಕ್ಷರು ಸೈಯದ್ ಸಾಧಿಕ್, ಮಹಿಳಾ ಅಧ್ಯಕ್ಷೆ ಕಲಾವತಿ, ಮಹಿಳಾ ಉಪಾಧ್ಯಕ್ಷೆ ನೇತ್ರಾವತಿ ಪಾಲ್ಗೊಂಡಿದ್ದರು.

(Visited 22 times, 1 visits today)
tumkur
Previous Articleಪೊಲೀಸ್ ಕ್ರೀಡಾಕೂಟದಲ್ಲಿ ಸಮಾನತೆ ಮೆರೆದ ಎಸ್‍ಪಿ ರಾಹುಲ್‍ಕುಮಾರ್ ಶಹಪೂರ್‍ವಾಡ್
Next Article ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ, ಲೇಖನ ಸಾಮಗ್ರಿಗಳ ವಿತರಣೆ
News Desk Benkiyabale

Related Posts

ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಹಬ್ಬದ ಸಂಭ್ರಮ

August 29, 2026 5:38 pm news

ಅರ್ಥಪೂರ್ಣವಾಗಿ ರಕ್ಷಾ ಬಂಧನ ಆಚರಣೆ

August 29, 2026 5:36 pm news

ಶಿರಾ ಕ್ಯಾಂಪಸ್‌ನಲ್ಲಿ ಶೀಘ್ರ ಪಿಯುವರೆಗೆ ವಸತಿ ಸಹಿತ ಉಚಿತ ಶಿಕ್ಷಣ

August 29, 2026 5:34 pm news
ತಾಜಾ ಸುದ್ಧಿಗಳು
news

ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಹಬ್ಬದ ಸಂಭ್ರಮ

August 29, 2026 5:38 pm
news

ಅರ್ಥಪೂರ್ಣವಾಗಿ ರಕ್ಷಾ ಬಂಧನ ಆಚರಣೆ

August 29, 2026 5:36 pm
news

ಶಿರಾ ಕ್ಯಾಂಪಸ್‌ನಲ್ಲಿ ಶೀಘ್ರ ಪಿಯುವರೆಗೆ ವಸತಿ ಸಹಿತ ಉಚಿತ ಶಿಕ್ಷಣ

August 29, 2026 5:34 pm
news

ಜಾಬ್‌ಕಾರ್ಡ್ ಮೇಳದಲ್ಲಿ ಕಾಮಗಾರಿ ಆದೇಶ ವಿತರಣೆ

August 29, 2026 5:33 pm
news

ಸ್ವಸಹಾಯ ಗುಂಪಿನ ಸದಸ್ಯರಿಂದ ಕೃಷಿ ಹೊಂಡಗಳಿಗೆ ಮೀನು ಮರಿಗಳ ಬಿಡುಗಡೆ

August 29, 2026 5:31 pm
news

ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸಿಇಓ ಭೇಟಿ: ಕಾಮಗಾರಿಗಳ ಪರಿಶೀಲನೆ

August 29, 2026 5:30 pm
Our Youtube Channel
Our Picks

ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಹಬ್ಬದ ಸಂಭ್ರಮ

August 29, 2026 5:38 pm

ಅರ್ಥಪೂರ್ಣವಾಗಿ ರಕ್ಷಾ ಬಂಧನ ಆಚರಣೆ

August 29, 2026 5:36 pm

ಶಿರಾ ಕ್ಯಾಂಪಸ್‌ನಲ್ಲಿ ಶೀಘ್ರ ಪಿಯುವರೆಗೆ ವಸತಿ ಸಹಿತ ಉಚಿತ ಶಿಕ್ಷಣ

August 29, 2026 5:34 pm

ಜಾಬ್‌ಕಾರ್ಡ್ ಮೇಳದಲ್ಲಿ ಕಾಮಗಾರಿ ಆದೇಶ ವಿತರಣೆ

August 29, 2026 5:33 pm

ಸ್ವಸಹಾಯ ಗುಂಪಿನ ಸದಸ್ಯರಿಂದ ಕೃಷಿ ಹೊಂಡಗಳಿಗೆ ಮೀನು ಮರಿಗಳ ಬಿಡುಗಡೆ

August 29, 2026 5:31 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಹಬ್ಬದ ಸಂಭ್ರಮ

By News Desk BenkiyabaleAugust 29, 2026 5:38 pm

ತುಮಕೂರು: ಸೋದರತ್ವದ ಸಾರುವ, ಬಾಂಧವ್ಯ ಬೆಸೆಯುವ, ಭ್ರಾತೃತ್ವದ ಮಹತ್ವ ತಿಳಿಸುವ ರಕ್ಷಾ ಬಂಧನ ಹಬ್ಬವನ್ನು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು…

ಅರ್ಥಪೂರ್ಣವಾಗಿ ರಕ್ಷಾ ಬಂಧನ ಆಚರಣೆ

August 29, 2026 5:36 pm

ಶಿರಾ ಕ್ಯಾಂಪಸ್‌ನಲ್ಲಿ ಶೀಘ್ರ ಪಿಯುವರೆಗೆ ವಸತಿ ಸಹಿತ ಉಚಿತ ಶಿಕ್ಷಣ

August 29, 2026 5:34 pm

ಜಾಬ್‌ಕಾರ್ಡ್ ಮೇಳದಲ್ಲಿ ಕಾಮಗಾರಿ ಆದೇಶ ವಿತರಣೆ

August 29, 2026 5:33 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.