BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ
  • ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ
  • ಆರು ತಿಂಗಳ ಇಂಧನ ಬವಣೆಗೆ ಮುಕ್ತಿ
  • ಹುಳಿಯಾರಿನ ಐತಿಹಾಸಿಕ ಕೆಪಿಎಸ್ ಶಾಲಾ ಮೈದಾನ ಉಳಿಸಿ
  • ಮೌಲ್ಯ ಪ್ರಸಾರಕ್ಕೆ ಯಕ್ಷಗಾನ ತಾಳಮದ್ದಳೆ ಸಶಕ್ತ ಮಾಧ್ಯಮ
  • ಸರ್ಕಾರಿ ಕಟ್ಟಡಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಿಸಿ
  • ತುಮಕೂರು ಏರ್ ಪೋರ್ಟ್: ಬಿ.ಎಸ್.ವಿಜಯೇಂದ್ರರವರ ನಿಲುವಿಗೆ ಸ್ವಾಗತ
  • ಬಾಗಿಲು ತೆರೆದರೂ ಓಡದ ಶಿಬಿರಾರ್ಥಿಗಳು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು : 15ನೇ ವಾರ್ಡಿನ ಪಾಲಿಕೆ ಸದಸ್ಯರಿಂದ ಜನಸ್ಪಂದನ ಕಾರ್ಯಕ್ರಮ
ತುಮಕೂರು ಜಿಲ್ಲಾ ಸುದ್ಧಿಗಳು

ತುಮಕೂರು : 15ನೇ ವಾರ್ಡಿನ ಪಾಲಿಕೆ ಸದಸ್ಯರಿಂದ ಜನಸ್ಪಂದನ ಕಾರ್ಯಕ್ರಮ

By News Desk BenkiyabaleUpdated:December 14, 2018 5:03 pm

ತುಮಕೂರು:

      ನಗರದ 15ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಾಕುಮಾರ್ ಅವರ ಅಧ್ಯಕ್ಷತೆ ಯಲ್ಲಿ ಇಂದು ಪಾಲಿಕೆಯ ಅಧಿಕಾರಿಗಳು ಮತ್ತು ನಾಗರಿಕರ ಜನಸ್ಪಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

       ಪಾಲಿಕೆಯ ಪರವಾಗಿ ಆರೋಗ್ಯಾಧಿಕಾರಿ ಡಾ.ನಾಗೇಶ್,ಇಂಜಿನಿಯರ್‍ಗಳಾದ ಸಂದೀಪ್, ಮಧುಸೂಧನ್, ಪರಿಸರ ವಿಭಾಗದ ಕೃಷ್ಣಮೂರ್ತಿ, ಕಂದಾಯ ವಿಭಾಗದ ರುದ್ರಮೂರ್ತಿ, ಬೀದಿ ದೀಪ, ಕಸ ನಿರ್ವಹಣೆ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರೆ,ಜೈನ ಸಮಾಜದ ಸುರೇಶ್, ಧನಿಯಕುಮಾರ್,ಬೆಸ್ಟೆಕ್ ರಾಮರಾಜು,ವಿನೋದ್,ಬಾಲಚಂದ್ರ, ಸುಮಾರು ಮೂವತ್ತು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೊದಲಿಗೆ ಮಾತನಾಡಿದ ಪಾಲಿಕೆಯ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್,ನಾವು ಚುನಾವಣೆ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಹಲವು ನಾಗರಿಕರು ತಮ್ಮ ಬಡಾವಣೆಯ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿದ್ದರು. ಅವರುಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕುಡಿಯುವ ನೀರು ಮತ್ತು ಕಸ ವಿಲೇವಾರಿಯನ್ನು ಹೊರತುಪಡಿಸಿ, ಉಳಿದಂತೆ ಬೇರೆ ಸಮಸ್ಯೆಗಳು ಬಗೆಹರಿದಿಲ್ಲ.ಈ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಮತ್ತು ಜನಸಾಮಾನ್ಯರನ್ನು ಮುಖಾಮುಖಿಯಾಗಿಸಿ,ಅವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಈ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಜನರಿಂದ ಬಂದ ಸಮಸ್ಯೆಗಳನ್ನು ಗುರುತು ಮಾಡಿ ಕೊಂಡು, ಮುಂದಿನ ಸಭೆಯಲ್ಲಿ ಈ ಹಿಂದೆ ಜನರು ಹೆಸರಿಸಿದ್ದ ಸಮಸ್ಯೆಗಳು ಬಗೆಹರಿದಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು.ಜನರು ಮತ್ತು ಅಧಿಕಾರಿಗಳ ನಡುವೆ ಸೇತುವೆಯಾಗಿ ಪಾಲಿಕೆಯ ಸದಸ್ಯೆಯಾಗಿ ನಾನು ಕೆಲಸ ಮಾಡಲಿದ್ದೇನೆ ಎಂದರು.

     ಮೂರು ಉದ್ಯಾನವನಗಳ ಅಭಿವೃದ್ದಿ:ಜನಸಾಮಾನ್ಯರಿಗೆ ಅನುಕೂಲವಾಗುವಂತೆ ವಾರ್ಡಿನಲ್ಲಿರುವ ಸುಮಾರು 3 ಉದ್ಯಾನವನಗಳ ಅಭಿವೃದ್ದಿಗೆ ಚಿಂತನೆ ನಡೆಸಲಾಗಿದೆ. ಪ್ರತಿ ಉದ್ಯಾನವನದಲ್ಲಿ ಮಕ್ಕಳಿಗೆ ಆಟದ ಸಲಕರಣೆಗಳು,ಯುವಕರಿಗೆ ವ್ಯಾಯಾಮದ ವಸ್ತುಗಳು,ಹಿರಿಯರಿಗೆ ವಾಕಿಂಗ್ ಮಾಡಲು ಪಾಥ್ ನಿರ್ಮಿಸಲು ಚಿಂತನೆ ನಡೆದಿದೆ.ಎಸ್.ಎಸ್.ಪುರಂನ ಕನರ್ವೆನ್ಸಿಗಳಲ್ಲಿ ದ್ವಿಚಕ್ರವಾಹನಗಳ ಪಾರ್ಕಿಂಗ್‍ಗೆ ಕ್ರಮ ಕೈಗೊಳ್ಳಲಾಗುವುದು.ಅಲ್ಲದೆ ಎಲ್ಲೆಲ್ಲಿ ಕನರ್ವೆನ್ಸಿಗಳ ಒತ್ತುವರಿ ಯಾಗಿದೆ ಅದನ್ನು ತೆರೆವುಗೊಳಿಸಿ,ಜನಸಾಮಾನ್ಯರಿಗೆ ತಿರುಗಾಡಲು ಅನುಕೂಲ ಮಾಡಿಕೊಡಲಾಗುವುದು ಎಂದು ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದರು.

      ವಾರ್ಡಿನ ನಾಗರಿಕರಿಂದ ಕೋತಿ, ನಾಯಿಗಳ ಹಾವಳಿ ತಡೆ, ಎಸ್.ಎಸ್.ಪುರಂ 15 ನೇ ಕ್ರಾಸ್‍ನಲ್ಲಿ ರಸ್ತೆಗೆ ಹಂಪ್ಸ್ ಹಾಕುವುದು, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ,ಬೀದಿ ದೀಪಗಳ ಸಮರ್ಪಕ ನಿರ್ವಹಣೆ, ರೈಲ್ವೆ ನಿಲ್ದಾಣ ರಸ್ತೆಯ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು.

      ಗಾಂಧಿನಗರ ಆಸ್ಪತ್ರೆಯ ನಗರವಾಗಿ ಪರಿವರ್ತನೆಯಾಗುತ್ತಿದೆ.ಜನನಿ ಆಸ್ಪತ್ರೆಯವರು ಕನ್ಸರ್ವೆನ್ಸಿ ಒತ್ತುವರಿ ಮಾಡಿಕೊಂಡು ಯಾವುದೇ ಅನುಮತಿ ಪಡೆಯದೆ,ಮನೆಯಲ್ಲಿ ಅಕ್ರಮವಾಗಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಂಜುಂಡಸ್ವಾಮಿ ಎಂಬುವವರು ದೂರಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಸಂಬಂಧಪಟ್ಟ ದಾಖಲೆ ನೀಡಿದರೆ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

      ಬೀದಿ ನಾಯಿ ಮತ್ತು ಕೋತಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಉತ್ತರಿಸಿದ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್,ಈಗಾಗಲೇ 3 ಬಾರಿ ಕಾರ್ಯಾಚರಣೆ ನಡೆಸಿದ ನಾಯಿಗಳನ್ನು ಹಿಡಿದು,ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಅಯಾಯ ಸ್ಥಳಗಳಿಗೆ ಬಿಡುಗಡೆ ಮಾಡಲಾಗಿದೆ.ಇದಕ್ಕಾಗಿ ಸೋರೆಕುಂಟೆ ಗೇಟ್ ಬಳಿ ಶಸ್ತ್ರಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಕೋತಿ ಹಿಡಿಯಲು ವಿಶಾಖಪಟ್ಟಂನಿಂದ ಆಳುಗಲನ್ನು ಕರೆಯಿಸಬೇಕಾಗಿದೆ.ಈ ಕೆಲಸವನ್ನು ಟೆಂಡರ್ ಕರೆಯಲಾಗಿದೆ ಎಂದರು.

(Visited 21 times, 1 visits today)
Previous Articleತುಮುಲ್ ಅಧ್ಯಕ್ಷರಾಗಿ ತುರುವೇಕೆರೆ ಮಹಾಲಿಂಗಪ್ಪ ಆಯ್ಕೆ
Next Article ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ
News Desk Benkiyabale

Related Posts

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

July 20, 2026 5:26 pm news

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ

July 20, 2026 5:23 pm news

ಆರು ತಿಂಗಳ ಇಂಧನ ಬವಣೆಗೆ ಮುಕ್ತಿ

July 20, 2026 5:21 pm news
ತಾಜಾ ಸುದ್ಧಿಗಳು
news

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

July 20, 2026 5:26 pm
news

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ

July 20, 2026 5:23 pm
news

ಆರು ತಿಂಗಳ ಇಂಧನ ಬವಣೆಗೆ ಮುಕ್ತಿ

July 20, 2026 5:21 pm
news

ಹುಳಿಯಾರಿನ ಐತಿಹಾಸಿಕ ಕೆಪಿಎಸ್ ಶಾಲಾ ಮೈದಾನ ಉಳಿಸಿ

July 20, 2026 5:11 pm
news

ಮೌಲ್ಯ ಪ್ರಸಾರಕ್ಕೆ ಯಕ್ಷಗಾನ ತಾಳಮದ್ದಳೆ ಸಶಕ್ತ ಮಾಧ್ಯಮ

July 20, 2026 5:09 pm
news

ಸರ್ಕಾರಿ ಕಟ್ಟಡಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಿಸಿ

July 20, 2026 5:13 pm
Our Youtube Channel
Our Picks

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

July 20, 2026 5:26 pm

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ

July 20, 2026 5:23 pm

ಆರು ತಿಂಗಳ ಇಂಧನ ಬವಣೆಗೆ ಮುಕ್ತಿ

July 20, 2026 5:21 pm

ಹುಳಿಯಾರಿನ ಐತಿಹಾಸಿಕ ಕೆಪಿಎಸ್ ಶಾಲಾ ಮೈದಾನ ಉಳಿಸಿ

July 20, 2026 5:11 pm

ಮೌಲ್ಯ ಪ್ರಸಾರಕ್ಕೆ ಯಕ್ಷಗಾನ ತಾಳಮದ್ದಳೆ ಸಶಕ್ತ ಮಾಧ್ಯಮ

July 20, 2026 5:09 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

By News Desk BenkiyabaleJuly 20, 2026 5:26 pm

ಹುಳಿಯಾರು: ಸಮಾಜಮುಖಿ ಕಾರ್ಯಗಳಿಗೆ ಹಣಕ್ಕಿಂಥ ದೊಡ್ಡ ಮನಸ್ಸು ಬೇಕು ಎಂಬುದನ್ನು ಹುಳಿಯಾರಿನ ಸವಿತಾ ಸಮಾಜದ ತಂದೆ ಮತ್ತು ಇಬ್ಬರು ಮಕ್ಕಳು…

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ

July 20, 2026 5:23 pm

ಆರು ತಿಂಗಳ ಇಂಧನ ಬವಣೆಗೆ ಮುಕ್ತಿ

July 20, 2026 5:21 pm

ಹುಳಿಯಾರಿನ ಐತಿಹಾಸಿಕ ಕೆಪಿಎಸ್ ಶಾಲಾ ಮೈದಾನ ಉಳಿಸಿ

July 20, 2026 5:11 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.