BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ
  • ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ
  • ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್
  • ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ
  • ಕೇಂದ್ರದ ವಿಳಂಬ ನೀತಿಗೆ ಪ್ರತಿಭಟನೆ ಅನಿವಾರ್ಯ
  • ತೆಂಗು ಬೆಳೆ: ಜಾಗೃತಿ ಮೂಡಿಸುವ ಕಾರ್ಯಕ್ರಮದ ವಾಹನಕ್ಕೆ ಶಾಸಕರಿಂದ ಹಸಿರು ನಿಶಾನೆ
  • ಡಾ.ಶಿವಕುಮಾರ ಶ್ರೀಗಳ ಪುಣ್ಯಸಂಸ್ಮರಣೆ: ದಾಸೋಹದಿನ ಆಚರಣೆ
  • ರೇಷ್ಮೆ ಕೃಷಿ ಬೆಳಗಾರರ ಗುಂಪು ಸಭೆ ಕಾರ್ಯಕ್ರಮ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸ್ವಯಂ ರಕ್ಷಣೆಯ ಕಲೆ ಕರಾಟೆ : ಪ್ರೋತ್ಸಾಹಿಸಿ
ಇತರೆ ಸುದ್ಧಿಗಳು

ಸ್ವಯಂ ರಕ್ಷಣೆಯ ಕಲೆ ಕರಾಟೆ : ಪ್ರೋತ್ಸಾಹಿಸಿ

By News Desk BenkiyabaleUpdated:December 05, 2022 4:11 pm

ತುಮಕೂರು


ಸ್ವಯಂ ರಕ್ಷಣೆಯ ಕಲೆಯಾಗಿರುವ ಕರಾಟೆ ಕ್ರೀಡೆಯಲ್ಲಿ ನಮ್ಮ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕ್ರೀಡಾ ಪ್ರೋತ್ಸಾಹಕರ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಚಂಗಪ್ಪ ತಿಳಿಸಿದ್ದಾರೆ.
ನಗರದ ತುಮಕೂರು ವಿವಿಯ ಡಾ.ಶ್ರೀಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಲಯನ್ಸ್ ಮಾರ್ಷಲ್ ಆರ್ಟ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ 6ನೇ ರಾಷ್ಟ್ರೀಯ ಮುಕ್ತ ಅಹ್ವಾನಿತ ಕರಾಟೆ ಚಾಂಪಿಯನ್ ಶಿಫ್-2022 ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ತುಮಕೂರು ಕರಾಟೆ ಅಸೋಸಿಯೇಷನ್ ಅಧ್ಯಕ್ಷರು ಆಗಿರುವ ಸಿ.ಜಿ.ಪ್ರಕಾಶ್ ಅವರು ನಿರಂತರವಾಗಿ ಹಲವು ವರ್ಷಗಳಿಂದ ಇಂತಹ ಟೂರ್ನಿಗಳನ್ನು ನಡೆಸಿಕೊಂಡು ಬರುತಿದ್ದಾರೆ. ಇಂತಹವರಿಗೆ ಕ್ರೀಡಾಭಿಮಾನಿಗಳು ಪ್ರೋತ್ಸಾಹ ನೀಡಿದರೆ ಇನ್ನೂ ಹೆಚ್ಚಿನ ಕ್ರೀಡಾಕೂಟಗಳನ್ನು ಆಯೋಜಿಸ ಬಹುದಾಗಿದೆ ಎಂದರು.
ಕ್ರೀಡಾ ಪ್ರೋತ್ಸಾಹಕ ಮತ್ತು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ,ಲಯನ್ಸ್ ಮಾರ್ಷಲ್ ಆರ್ಟ್ ಕರಾಟೆ ಅಸೋಸಿಯೇಷನ್‍ನ ಪ್ರಕಾಶ್ ನಿರಂತರವಾಗಿ ತುಮಕೂರು ನಗರದಲ್ಲಿ ರಾಷ್ಟ್ರಮಟ್ಟದ ಕರಾಟೆ ಟೂರ್ನಮೆಂಟ್ ಆಯೋಜಿಸುತ್ತಾ ಬಂದಿದ್ದಾರೆ.ಇವರ ಬಳಿ ಸುಮಾರು 3500-4000 ವಿದ್ಯಾರ್ಥಿಗಳು ಕರಾಟೆ ಕಲೆ ಕಲಿಯುತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರಾಟೆ ಕ್ರೀಡೆಯಾಗಿಯೂ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ.ಆದರೆ ಮಕ್ಕಳಿಗೆ ನಿರಂತರ ಅಭ್ಯಾಸ ಮಾಡಲು ಸೂಕ್ತ ಸ್ಥಳವಿಲ್ಲ.ಬಾಡಿಗೆ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿದ್ದು,ಜಿಲ್ಲಾಡಳಿತ,ಶಾಸಕರು ಹಾಗೂ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ನೂತನವಾಗಿ ನಿರ್ಮಾಣಗೊಂಡಿರುವ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಒಂದು ಕೊಠಡಿಯನ್ನು ನೀಡಿದರೆ,ಇನ್ನೂ ಹೆಚ್ಚಿನ ಮಕ್ಕಳಿಗೆ ತರಬೇತಿ ನೀಡಿ,ಅವರನ್ನು ರಾಷ್ಟ್ರೀಯ,ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.ಹಾಗಾಗಿ ಜಿಲ್ಲಾಡಳಿತ ಈ
ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.
ಹಿರಿಯ ಕರಾಟೆ ಪಟು,ಬ್ಲಾಕ್ ಬೆಲ್ಟ್ ವಿಜೇತ,ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ,ಕರಾಟೆ ಭಾರತೀಯರ ಪುರಾತನ ಕಲೆ.ಇದು ಮನುಷ್ಯನ ಸ್ವಯಂ ರಕ್ಷಣೆಯ ಜೊತೆಗೆ,ಆತ್ಮಸ್ಥೈರ್ಯವನ್ನು ಒದಗಿಸುತ್ತದೆ.ಇಂತಹ ಕ್ರೀಡೆ ಇತರೆ ಆಟೋಟಗಳಂತೆ ಮುನ್ನೆಲೆಗೆ ಬರಬೇಕಾದರೆ ಪ್ರೋತ್ಸಾಹಕರ ಬೆಂಬಲ ಅಗತ್ಯವಾಗಿದೆ. ತುಮಕೂರಿನಂತಹ ನಗರದಲ್ಲಿಯೂ ರಾಷ್ಟ್ರೀಯ ಮಟ್ಟದ ಚಾಂಪಿಯನ್‍ಶಿಫ್ ಆಯೋಜಿಸುತ್ತಿರುವುದು ಸಂತೋಷದ ವಿಚಾರ ಎಂದರು.
ಕರಾಟೆ ಆತ್ಮರಕ್ಷಣೆಯ ಕಲೆಯ ಜೊತೆಗೆ, ಕ್ರೀಡೆ ಎಂದು ಗುರುತಿಸಲ್ಪಟ್ಟ ನಂತರ ರಾಷ್ಟ್ರೀಯ ಮಟ್ಟದಲ್ಲಿ ಬ್ಲಾಕ್‍ಬೆಲ್ಟ್ ಗಳಿಸಿದವರೆಗೆ ರಕ್ಷಣಾ ಇಲಾಖೆ,ರೈಲ್ವೆ ಇಲಾಖೆ, ಪೊಲೀಸ್ ಇಲಾಖೆಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ.ಇನ್ನೂ ಹೆಚ್ಚಿನ ಪ್ರೋತ್ಸಾಹ ಸರಕಾರದಿಂದ ದೊರೆತರೆ ಮತಷ್ಟು ಸಧೃಡ ದೇಹ ಮತ್ತು ಮನಸ್ಸು ಉಳ್ಳ ಯುವಕರನ್ನು ರಕ್ಷಣಾ ಇಲಾಖೆಗೆ ಸೆಳೆಯಲು ಅವಕಾಶವಿದೆ. ಈ ನಿಟ್ಟಿನಲ್ಲಿ ಯುವಜನರು ಈ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಿ.ಜಿ.ಪ್ರಕಾಶ್ ಸಲಹೆ ನೀಡಿದರು.
ಇದೇ ವೇಳೆ ಆರು ವರ್ಷದ ಕೆಳಗಿನ ಮಕ್ಕಳ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಟ್ರೋಫಿ, ಪದಕ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ಟೂರ್ನಿಯ ಮುಖ್ಯ ತೀರ್ಪುಗಾರರಾದ ಕೆ.ಬಿ.ರಾಜ್,ಲಯನ್ಸ್ ಮಾರ್ಷಲ್ ಆಟ್ರ್ಸ ಅಸೋಸಿಯೇಷನ್‍ನ ಸುಮುಖ್,ರವಿತೇಜ್,ಕಾರ್ತಿಕ್,ವಿಜಯ್,ದರ್ಶನ್,ಗ್ರಿತೇಯ,ಸಿದ್ದಾರ್ಥ,ಸಂಸ್ಥೆಯ ವ್ಯವಸ್ಥಾಪಕ ರಾದ ಕಲ್ಪನ.ಹೆಚ್.ಎನ್.ಹಾಗೂ ಎಲ್ಲಾ ಅಧಿಕಾರಿಗಳು ಪಾಲ್ಗೊಂಡಿದ್ದರು.

(Visited 1 times, 1 visits today)
tumkur
Previous Articleನಗರದಲ್ಲಿ ಹನುಮಜಯಂತಿ ಸಂಭ್ರಮ
Next Article ವಿಕಲಚೇತನರು ಕೌಶಲ್ಯಯುತರಾಗಬೇಕು : ಸಿಇಓ
News Desk Benkiyabale

Related Posts

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

January 27, 2026 4:05 pm ಇತರೆ ಸುದ್ಧಿಗಳು

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm ಇತರೆ ಸುದ್ಧಿಗಳು

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

January 27, 2026 4:05 pm
ಇತರೆ ಸುದ್ಧಿಗಳು

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm
ಇತರೆ ಸುದ್ಧಿಗಳು

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm
ಇತರೆ ಸುದ್ಧಿಗಳು

ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ

January 27, 2026 3:57 pm
ಇತರೆ ಸುದ್ಧಿಗಳು

ಕೇಂದ್ರದ ವಿಳಂಬ ನೀತಿಗೆ ಪ್ರತಿಭಟನೆ ಅನಿವಾರ್ಯ

January 27, 2026 3:55 pm
ಇತರೆ ಸುದ್ಧಿಗಳು

ತೆಂಗು ಬೆಳೆ: ಜಾಗೃತಿ ಮೂಡಿಸುವ ಕಾರ್ಯಕ್ರಮದ ವಾಹನಕ್ಕೆ ಶಾಸಕರಿಂದ ಹಸಿರು ನಿಶಾನೆ

January 22, 2026 4:20 pm
Our Youtube Channel
Our Picks

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

January 27, 2026 4:05 pm

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm

ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ

January 27, 2026 3:57 pm

ಕೇಂದ್ರದ ವಿಳಂಬ ನೀತಿಗೆ ಪ್ರತಿಭಟನೆ ಅನಿವಾರ್ಯ

January 27, 2026 3:55 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

By News Desk BenkiyabaleJanuary 27, 2026 4:05 pm

ತುಮಕೂರು: ಜಿಲ್ಲೆಯಾದ್ಯಂತ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಸಂದರ್ಭದಲ್ಲಿ ಗ್ರಾಮೀಣಭಾಗದ ಕಾರ್ಯ ನಿರತ ಪತ್ರಕರ್ತರನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ…

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm

ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ

January 27, 2026 3:57 pm
News by Date
February 2026
M T W T F S S
 1
2345678
9101112131415
16171819202122
232425262728  
« Jan    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.