ಗುಬ್ಬಿ

ರೈತರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ರೀತಿಯ ಸೌಲಭ್ಯವುಳ್ಳ ನೂತನ ಕಟ್ಟಡ ನಿರ್ಮಾಣವಾಗುತ್ತಿರುವುದು ಈ ಭಾಗದ ರೈತರಿಗೆ ಸಂತೋಷ ತಂದಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಕಡಬ ಗ್ರಾಮದಲ್ಲಿ ನೂತನ ಕೃಷಿ ಕಚೇರಿ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಡಬ ಸುತ್ತ ಮುತ್ತನೂರಾರು ಗ್ರಾಮಗಳಿದ್ದು ಸಾವಿರಾರು ರೈತರು ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ ನಮ್ಮ ಭಾಗದಲ್ಲಿ ರೈತ ಕಚೇರಿ ಆಧುನಿಕವಾಗಿ ನಿರ್ಮಾಣವಾಗುವುದರಿಂದ ರೈತರಿಗೆ ಸಹಾಯವಾಗುತ್ತದೆ ರೈತರಿಗೆ ಅನುಕೂಲವಾಗುವ ಯಾವುದೇ ಕೆಲಸವನ್ನು ಮಾಡಲು ಗುಬ್ಬಿ ನಗರಕ್ಕೆ ಹೋಗುವ ಸಮಸ್ಯೆ ತಪ್ಪುತ್ತದೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಡಬದ ಕೃಷಿ ಅಧಿಕಾರಿ ದರ್ಶನ್ ಮಾತನಾಡಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವುದರಿಂದ ರೈತರಿಗೆ ಅನುಕೂಲವಾಗುವ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳು ಇಲ್ಲಿ ಸಿಗುತ್ತವೆ ಮತ್ತು ರೈತರಿಗೆ ಅವಶ್ಯಕತೆ ಇರುವ ಎಲ್ಲಾ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ನೀಡಲು ಸಹ ಸ್ಥಳ ಅವಕಾಶ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟರಂಗಯ್ಯ, ಸದಸ್ಯರಾದ ಪುರುμÉೂೀತ್ತಮ್, ಉಮೇಶ್, ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜು ರೈತ ಮುಖಂಡರಾದ ನಟರಾಜ್, ಚನ್ನಿಗರಾಮಯ್ಯ, ಯತೀಶ್, ತ್ರಿನೇಶ್, ನಟರಾಜು, ಕಿರಣ್, ಸೇರಿದಂತೆ ಇನ್ನಿತರರು ಹಾಜರಿದ್ದರು.





