BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ
  • ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ
  • ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ
  • ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ
  • ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು
  • ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ
  • ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!
  • ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಾರ್ವಜನಿಕ ಆಸ್ತಿ ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧ
ಇತರೆ ಸುದ್ಧಿಗಳು

ಸಾರ್ವಜನಿಕ ಆಸ್ತಿ ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧ

By News Desk BenkiyabaleUpdated:March 31, 2023 5:00 pm

ತುಮಕೂರು


ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ಗೈರು ಮತ(ವಿಕಲಚೇತನರು ಮತ್ತು 80 ವರ್ಷ ಮೇಲ್ಪಟ್ಟವರು)ದಾರರು ಅಂಚೆ ಮೂಲಕ ಮತದಾನ ಮಾಡಲು ಹೊಸದಾಗಿ ಪರಿಚಯಿಸಲಾಗಿರುವ ನಮೂನೆ 12ಡಿಯನ್ನು ಭರ್ತಿ ಮಾಡಿ ಹಿಂದಿರುಗಿಸಲು ಏಪ್ರಿಲ್ 18ರವರೆಗೂ ಅವಕಾಶ ನೀಡಬೇಕೆಂದು ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ಸಂಜೆ ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮತಗಟ್ಟೆವಾರು ಗೈರು ಮತದಾರರ ಪಟ್ಟಿ ತಯಾರಿಸಿ ಅದಕ್ಕನುಗುಣವಾಗಿ ಎಲ್ಲ ಗೈರು ಮತದಾರರಿಗೂ ನಮೂನೆ 12ಡಿಯನ್ನು ವಿತರಣೆ ಮಾಡಲು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಚುನಾವಣಾಧಿಕಾರಿಗಳಿಗೆ ಸೂಚಿಸಿದರಲ್ಲದೆ ಚುನಾವಣೆಗೆ ಸಂಬಂಧಿಸಿದಂತೆ ರಚಿಸಿರುವ ವಾಟ್ಸಪ್ ಗ್ರೂಪ್ ಅನ್ನು ಅಧಿಕಾರಿಗಳು ತಪ್ಪದೇ ಗಮನಿಸಿ ಯಾವುದೇ ಸಬೂಬು ಹೇಳದೆ ಜಿಲ್ಲಾ ಚುನಾವಾಣಾಧಿಕಾರಿಗಳು ನೀಡುವ ನಿರ್ದೇಶನವನ್ನು ಪಾಲಿಸಬೇಕು ಎಂದು ತಿಳಿಸಿದರು.
ನಮೂನೆ 12ಡಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು ಗೈರು ಮತದಾರರ ಮನೆಗೆ ಭೇಟಿ ನೀಡಿ ತಲುಪಿಸಬೇಕು. ಭರ್ತಿ ಮಾಡಿದ ನಮೂನೆಯನ್ನು ಏಪ್ರಿಲ್ 18ರೊಳಗೆ ಹಿಂಪಡೆಯಬೇಕು. ಏಪ್ರಿಲ್ 18ರ ನಂತರ ಸಲ್ಲಿಸಿದ ನಮೂನೆಗಳು ತಿರಸ್ಕøತಗೊಳ್ಳುತ್ತದೆ ಎಂದು ಮತದಾರರಿಗೆ ಮಾಹಿತಿ ನಿಡಬೇಕು. ನಮೂನೆ 12ಡಿ ವಿತರಿಸುವ ಹಾಗೂ ಅರ್ಹ ಗೈರು ಮತದಾರರಿಂದ ಭರ್ತಿ ಮಾಡಿದ ನಮೂನೆಯನ್ನು ಹಿಂಪಡೆಯುವ ಪ್ರಕ್ರಿಯೆ ಕುರಿತು ಬಿಎಲ್‍ಒಗಳಿಗೆ ತರಬೇತಿ ನೀಡಬೇಕೆಂದು ನಿರ್ದೇಶನ ನೀಡಿದರು.
ಬಿಎಲ್‍ಒಗಳು ನಮೂನೆ 12ಡಿಯನ್ನು ಮತದಾರರಿಗೆ ನೀಡುವ ಸಂದರ್ಭದಲ್ಲಿ ಅವರ ಸಹಿ ಪಡೆದು ಮೊಬೈಲ್ ನಂಬರ್‍ಗಳನ್ನು ವಹಿಯಲ್ಲಿ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರಲ್ಲದೆ ಮತದಾನ ದಿನದಂದು ಮತಗಟ್ಟೆಗೆ ಭೇಟಿ ನೀಡಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಗೈರು ಮತದಾರರಿಗೆ ಉತ್ತೇಜನ ನೀಡಬೇಕು. ಮತಗಟ್ಟೆಗೆ ಭೇಟಿ ನೀಡಲು ಸಾಧ್ಯವಿಲ್ಲದಿರುವವರಿಗೆ ನಮೂನೆ 12ಡಿಯನ್ನು ನೀಡಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಛೆ ಪಟ್ಟವರಿಗೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಬೇಕು. ಒಮ್ಮೆ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ಮತಗಟ್ಟೆಗೆ ಭೇಟಿ ನೀಡಿ ಮತದಾನ ಮಾಡಲು ಅವಕಾಶ ಇರುವುದಿಲ್ಲವೆಂದು ಮನವರಿಕೆ ಮಾಡಬೇಕು ಎಂದರು.
ಭೂದಾಖಲೆಗಳ ಉಪನಿರ್ದೇಶಕ ಸುಜಯ್‍ಕುಮಾರ್ ಮಾತನಾಡಿ ಜಿಲ್ಲೆಯಲ್ಲಿರುವ 29720 ವಿಕಲಚೇತನ ಹಾಗೂ 80 ವರ್ಷ ಮೇಲ್ಪಟ್ಟ 55827 ಗೈರು ಮತದಾರರಿಗೆ ನಮೂನೆ 12ಡಿಯನ್ನು ವಿತರಣೆ ಮಾಡಲಾಗುವುದು. ನಮೂನೆ ವಿತರಣೆ ಮಾಡುವುದು, ಹಿಂಪಡೆಯುವುದು, ಮತದಾನದ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದರಲ್ಲದೆ ಮತದಾನದ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ವೀಡಿಯೋಗ್ರಫಿ ಮಾಡಿಸಬೇಕು. ಗೈರು ಮತದಾರರು ಮತದಾನ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಂಬಂಧಿಸದವರು ಇರಬಾರದು. ಆದರೆ ಮತದಾರನು ದೈಹಿಕ ದುರ್ಬಲತೆ ಇದ್ದು, ಸ್ವತಃ ಮತದಾನ ಮಾಡಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಮಾತ್ರ ವಯಸ್ಕ ವ್ಯಕ್ತಿಯ ಸಹಾಯ ಪಡೆಯಲು ಅವಕಾಶವಿದೆ. ಮತದಾನವನ್ನು ಬಹಿರಂಗ ಪಡಿಸದೆ ಗೌಪ್ಯವಾಗಿಡುವುದು ಕಡ್ಡಾಯ ಎಂದು ತಿಳಿಸಿದರಲ್ಲದೆ, ಚುನಾವಣಾ ಅಭ್ಯರ್ಥಿಗಳ ಎಜೆಂಟ್‍ಗಳು ದೂರದಿಂದ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್, ಉಪವಿಭಾಗಾಧಿಕಾರಿ ಹೆಚ್. ಶಿವಪ್ಪ, ತಹಶೀಲ್ದಾರ್ ಸಿದ್ಧೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

(Visited 1 times, 1 visits today)
tumkur Tumkur dc yspatil
Previous Articleಕಲ್ಪತರುನಾಡಲ್ಲಿ ಕಳೆಗಟ್ಟಿದ ಶ್ರೀರಾವನವಮಿ ಆಚರಣೆ
Next Article ರೈತರ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ
News Desk Benkiyabale

Related Posts

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm news

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm news

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm news
ತಾಜಾ ಸುದ್ಧಿಗಳು

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm
Our Youtube Channel
Our Picks

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

By News Desk BenkiyabaleJune 22, 2026 5:23 pm

ತುಮಕೂರು: ರೈಲ್ವೆ ಇಲಾಖೆಯ ಕನ್ನಡ ಕಡೆಗಣನೆ ಮುಂದುವರೆದಿದೆ. ಈ ತಿಂಗಳ ೨೫ರಂದು ಕರ್ನಾಟಕದಲ್ಲಿಯೇ ನಡೆಯುವ ನೈರುತ್ಯ ರೈಲ್ವೆಯ ಗೂಡ್ಸ್ ಟ್ರೇನ್…

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.